ವಾಷಿಂಗ್ಟನ್: ದಕ್ಷಿಣ ಕ್ಯಾಲಿಫೋರ್ನಿಯಾದ ಕರಾವಳಿಯಲ್ಲಿ ಭೂಕಂಪ ಸಂಭವಿಸಿದ್ದು, ದೇಶದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾದ ಲಾಸ್ ಏಂಜಲೀಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಸಹ ಇದರ ಬಿಸಿ ತಟ್ಟಿದೆ. ಭೂಕಂಪನದ ವೇಳೆ ಡೆಲ್ಟಾ ಏರ್ ಲೈನ್ಸ್ ವಿಮಾನ ಲ್ಯಾಂಡ್ ಆಗಲು ಸಜ್ಜಾಗಿದ್ದು, ಭೂಕಂಪನದ ಮಾಹಿತಿ ತಿಳಿಯುತ್ತಿದ್ದಂತೆ ಮತ್ತೆ ಪೈಲಟ್ ವಿಮಾನವನ್ನು ಮೇಲೆ ಕೊಂಡೊಯ್ದಿದ್ದಾರೆ.
ವಿಮಾನ ಲ್ಯಾಂಡ್ ಆಗಲು ರನ್ವೇಗೆ ಸಮೀಪಿಸಿರುವುದು, ಈ ವೇಳೆ ಭೂಕಂಪನದಿಂದ ವಿಮಾನ ನಿಲ್ದಾಣ ಕಂಪಿಸಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಮಾನ ರನ್ವೇಗೆ ಸಮೀಪಿಸುತ್ತಿದ್ದಂತೆ 5.2 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ವೇಳೆ ವಾಯು ಸಂಚಾರ ನಿಯಂತ್ರಕರು, ಲ್ಯಾಂಡಿಂಗ್ಗೆ ಸಜ್ಜಾಗಿದ್ದ ವಿಮಾನಕ್ಕೆ ಈ ಮಾಹಿತಿ ರವಾನಿಸಿದ್ದಾರೆ. ಕೂಡಲೇ ಪೈಲಟ್ ಲ್ಯಾಂಡಿಗ್ನ್ನು ಸ್ಥಗಿತಗೊಳಿಸಿದ್ದಾರೆ.
DL1972 ವಿಮಾನ ಕಾನ್ಸಾಸ್ ಸಿಟಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಾಸ್ ಏಂಜಲೀಸ್ಗೆ ಬಂದಿತ್ತು. ಶನಿವಾರ ಬೆಳಿಗ್ಗೆ 8:08 ಕ್ಕೆ ಕಾನ್ಸಾಸ್ ನಗರದಿಂದ ಹೊರಟು ಸುಮಾರು ನಾಲ್ಕು ಗಂಟೆಗಳ ಕಾಲ ಪ್ರಯಾಣಿಸಿತ್ತು. ಭೂಕಂಪ ಸಂಭವಿಸುವ ವೇಳೆ ವಿಮಾನ ಲಾಸ್ ಏಂಜಲೀಸ್ ಸಮೀಪಿಸಿತ್ತು. ಸೆರೆಯಾದ ವಿಡಿಯೋ ಒಂದರಲ್ಲಿ ಅಧಿಕಾರಿಗಳು ʻಭೂಕಂಪ ಸಂಭವಿಸುತ್ತಿದೆ, ನೀವು ಹೋಗಿʼ ಎಂದು ಪೈಲಟ್ಗೆ ಹೇಳುವ ಧ್ವನಿ ರೆಕಾರ್ಡ್ ಆಗಿದೆ.








