Close Menu
    What's Hot

    ಪತ್ನಿಗೆ ಹಲ್ಲೆ ಆರೋಪ ವಿಚಾರಿಸಲು ಹೋದ ಪೊಲೀಸರಿಗೇ ಹಲ್ಲೆ: ಪುತ್ತೂರಿನಲ್ಲಿ ಪ್ರಕರಣ ದಾಖಲು

    September 6, 2026

    ಜೈಲಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಮೂಲಸೌಕರ್ಯಕ್ಕಾಗಿ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಕೈದಿ

    September 5, 2026

    ಪತ್ನಿಯ ಪ್ರಿಯಕರನಿಗೆ ಎಣ್ಣೆ ಪಾರ್ಟಿ ನೆಪದಲ್ಲಿ ಕರೆ: ಕತ್ತು ಹಿಸುಕಿ ಕೊಂದು ಸಂಪ್‌ಗೆ ಹಾಕಿದ ಪತಿ

    September 5, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»Uncategorized»ನಂದಿಬೆಟ್ಟದ ಹೋಮ್‌ಸ್ಟೇ ಪ್ರಕರಣ: ಯುವತಿ ಸಾವು, ಯುವಕ ಆಸ್ಪತ್ರೆಗೆ ದಾಖಲು
    Uncategorized

    ನಂದಿಬೆಟ್ಟದ ಹೋಮ್‌ಸ್ಟೇ ಪ್ರಕರಣ: ಯುವತಿ ಸಾವು, ಯುವಕ ಆಸ್ಪತ್ರೆಗೆ ದಾಖಲು

    adminBy adminJune 29, 2026No Comments2 Mins Read

    ಚಿಕ್ಕಬಳ್ಳಾಪುರ: ನಂದಿಬೆಟ್ಟದ ಸಮೀಪದ ಹೋಮ್‌ಸ್ಟೇ ಒಂದರಲ್ಲಿ ಯುವತಿಯೊಬ್ಬರ ಶವ ಪತ್ತೆಯಾಗಿರುವ ಘಟನೆ ಭಾನುವಾರ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯೊಂದಿಗೆ ಹೋಮ್‌ಸ್ಟೇಯಲ್ಲಿ ತಂಗಿದ್ದ ಕೇರಳ ಮೂಲದ ಸಂಜಿತ್ ಅಲಿ ಎಂಬಾತ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಯುವತಿಯ ಸಾವಿನ ಕುರಿತು ಹಲವು ಅನುಮಾನಗಳು ವ್ಯಕ್ತವಾಗಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

    ಮಾಹಿತಿಯಂತೆ, ಬೆಂಗಳೂರು ಮೂಲದ ಸಾಯಿ ಸುರಭಿ ಹಾಗೂ ಕೇರಳದ ಕೋಝಿಕ್ಕೋಡ್ ನಿವಾಸಿ ಮತ್ತು ಕ್ಯಾಬ್ ಚಾಲಕರಾಗಿರುವ ಸಂಜಿತ್ ಅಲಿ ಕಳೆದ ಶನಿವಾರ ಮುದ್ದೇನಹಳ್ಳಿ ಸಮೀಪದ ಹೋಮ್‌ಸ್ಟೇಗೆ ಬಂದಿದ್ದರು. ಭಾನುವಾರ ಚೆಕ್‌ಔಟ್ ಸಮಯ ಕಳೆದರೂ ಕೊಠಡಿಯ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಯುವತಿ ಮೃತಪಟ್ಟಿರುವುದು ಪತ್ತೆಯಾಗಿದೆ.

    ಯುವತಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದು, ಸ್ಥಳದಲ್ಲಿ ಕೆಲವು ಮಾತ್ರೆಗಳೂ ಪತ್ತೆಯಾಗಿವೆ. ವಿಷ ಸೇವಿಸಿರುವ ಸಾಧ್ಯತೆಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಕೊಠಡಿಯಿಂದ ಡೈರಿಯೊಂದನ್ನು ವಶಪಡಿಸಿಕೊಂಡಿದ್ದು, ಅದರಲ್ಲಿ ದಾಖಲಿಸಿರುವ ಮಾಹಿತಿಯನ್ನು ತನಿಖೆಯ ಭಾಗವಾಗಿ ಪರಿಶೀಲಿಸಲಾಗುತ್ತಿದೆ.

    ಇನ್ನೊಂದೆಡೆ, ಮೃತ ಸಾಯಿ ಸುರಭಿಯ ತಾಯಿ ಟಿ.ಆರ್. ಗೀತಾ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ತಮ್ಮ ಮಗಳ ಸಾವಿನ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇದು “ಲವ್ ಜಿಹಾದ್” ಪ್ರಕರಣ ಎಂದು ಅವರು ಆರೋಪಿಸಿದ್ದು, ಸಂಜಿತ್ ಅಲಿ ತಮ್ಮ ಮಗಳಿಗೆ ಡ್ರಗ್ಸ್ ವ್ಯಸನ ಉಂಟುಮಾಡಿ ಕಿರುಕುಳ ನೀಡುತ್ತಿದ್ದ ಎಂದು ದೂರಿದ್ದಾರೆ. ಈ ಸಂಬಂಧ ಈ ಹಿಂದೆ ಕುಮಾರಸ್ವಾಮಿ ಲೇಔಟ್ ಹಾಗೂ ಬನಶಂಕರಿ ಪೊಲೀಸ್ ಠಾಣೆಗಳಲ್ಲಿ ದೂರು ನೀಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

    ತಮ್ಮ ಪುತ್ರಿ ದಯಾನಂದ ಸಾಗರ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ ಸ್ನೇಹಿತರ ಮೂಲಕ ಸಂಜಿತ್ ಪರಿಚಯವಾಗಿದ್ದು, ಬಳಿಕ ಆತ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎಂದು ಗೀತಾ ಆರೋಪಿಸಿದ್ದಾರೆ. ಚಿಕಿತ್ಸೆ ನೀಡಿದ ಬಳಿಕ ಮಗಳು ಚೇತರಿಸಿಕೊಂಡು ಮುದ್ದೇನಹಳ್ಳಿಯಲ್ಲಿ ಫಿಸಿಯೋಥೆರಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದಳು. ಶನಿವಾರ ಸತ್ಸಂಗಕ್ಕೆ ಹೋಗುತ್ತಿರುವುದಾಗಿ ತಿಳಿಸಿದ್ದಳು ಎಂದು ಅವರು ಹೇಳಿದ್ದಾರೆ. ಸಂಜಿತ್ ವಿರುದ್ಧ ಈ ಹಿಂದೆಯೂ ಪ್ರಕರಣಗಳಿವೆ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಯುವತಿಯ ಸಾವಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಎಂದು ತಿಳಿಸಿದ್ದಾರೆ. ಮೇಲ್ನೋಟಕ್ಕೆ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬಳಸಿದ್ದ ಹಗ್ಗವನ್ನು ಕತ್ತರಿಸಲಾಗಿದೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ.

    ಸಂಜಿತ್ ಅಲಿ ಇನ್ನೂ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದರಿಂದ, ಆತ ಚೇತರಿಸಿಕೊಂಡ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ. ಇಬ್ಬರೂ ಶನಿವಾರ ಹೋಮ್‌ಸ್ಟೇನಲ್ಲಿ ತಂಗಿದ್ದು, ಭಾನುವಾರ ಕೇರ್‌ಟೇಕರ್ ಚೆಕ್‌ಔಟ್‌ಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಪ್ರಕರಣವನ್ನು ನಂದಿಗಿರಿಧಾಮ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದು, ಕಳೆದ ಆರು ತಿಂಗಳ ಹಿಂದೆ ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ಯುವತಿಗೆ ಸಂಬಂಧಿಸಿದ ಮಿಸ್ಸಿಂಗ್ ಪ್ರಕರಣವೂ ದಾಖಲಾಗಿತ್ತು ಎಂದು ಎಸ್‌ಪಿ ತಿಳಿಸಿದ್ದಾರೆ.




    #karnataka
    Previous Articleವಿದ್ಯುತ್ ಕಂಬ ಸಮೇತ ಕಾರಿನ ಮೇಲೆ ಬಿದ್ದ ಬೃಹತ್ ಮರ, ಪವಾಡಸದೃಶವಾಗಿ ಪಾರಾದ ದಂಪತಿ
    Next Article ರಾಜ್ಯಸಭಾ ಸದಸ್ಯರಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧಿಕಾರ ಸ್ವೀಕಾರ

    Related Posts

    ಜೈಲಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಮೂಲಸೌಕರ್ಯಕ್ಕಾಗಿ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಕೈದಿ

    September 5, 2026

    ಪತ್ನಿಯ ಪ್ರಿಯಕರನಿಗೆ ಎಣ್ಣೆ ಪಾರ್ಟಿ ನೆಪದಲ್ಲಿ ಕರೆ: ಕತ್ತು ಹಿಸುಕಿ ಕೊಂದು ಸಂಪ್‌ಗೆ ಹಾಕಿದ ಪತಿ

    September 5, 2026

    ಅವೈಜ್ಞಾನಿಕ ರಸ್ತೆಗೆ ಮತ್ತೊಂದು ಬಲಿ: ಬೈಕ್‌ನಿಂದ ಬಿದ್ದ ಮಹಿಳೆ ಕಾಲಿನ ಮೇಲೆ ಹರಿದ ಟಿಪ್ಪರ್

    September 5, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಪತ್ನಿಗೆ ಹಲ್ಲೆ ಆರೋಪ ವಿಚಾರಿಸಲು ಹೋದ ಪೊಲೀಸರಿಗೇ ಹಲ್ಲೆ: ಪುತ್ತೂರಿನಲ್ಲಿ ಪ್ರಕರಣ ದಾಖಲು

    September 6, 2026

    ಜೈಲಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಮೂಲಸೌಕರ್ಯಕ್ಕಾಗಿ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಕೈದಿ

    September 5, 2026

    ಪತ್ನಿಯ ಪ್ರಿಯಕರನಿಗೆ ಎಣ್ಣೆ ಪಾರ್ಟಿ ನೆಪದಲ್ಲಿ ಕರೆ: ಕತ್ತು ಹಿಸುಕಿ ಕೊಂದು ಸಂಪ್‌ಗೆ ಹಾಕಿದ ಪತಿ

    September 5, 2026

    ಮೂವರು ಮಕ್ಕಳ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್: ತೀರ್ಪು ನೀಡಲು ಜ್ಯೂರಿ ವಿಫಲ

    September 5, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಜೈಲಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಮೂಲಸೌಕರ್ಯಕ್ಕಾಗಿ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಕೈದಿ

    September 5, 2026

    ಪತ್ನಿಯ ಪ್ರಿಯಕರನಿಗೆ ಎಣ್ಣೆ ಪಾರ್ಟಿ ನೆಪದಲ್ಲಿ ಕರೆ: ಕತ್ತು ಹಿಸುಕಿ ಕೊಂದು ಸಂಪ್‌ಗೆ ಹಾಕಿದ ಪತಿ

    September 5, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.