Close Menu
    What's Hot

    ಹಳೇ ವೈಷಮ್ಯಕ್ಕೆ ನಡುರಸ್ತೆಯಲ್ಲೇ ತಲ್ವಾರ್ ಝಳಪಿಸಿದ ಯುವಕರು: ನಾಲ್ವರು ಗಂಭೀರ ಗಾಯ

    September 7, 2026

    ಅತ್ಯಾಚಾರಕ್ಕೆ ಯತ್ನಿಸಿ ಮಹಿಳೆ ಮೇಲೆ ಮಚ್ಚಿನಿಂದ ಹಲ್ಲೆ ಆರೋಪ: ಚಿಕಿತ್ಸೆ ಫಲಿಸದೆ ಸಾವು, ಐವರ ವಿರುದ್ಧ ಕೇಸ್

    September 7, 2026

    ಸಹೋದರನ ಬಗ್ಗೆ ವ್ಯಂಗ್ಯವಾಡಿದ್ದಕ್ಕೆ ಅತ್ತಿಗೆ ಕೊಲೆ: ಶವವನ್ನು ನೀರಿನ ಟ್ಯಾಂಕ್‌ಗೆ ಎಸೆದ ನಾದಿನಿ

    September 7, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಕಾರಾಗೃಹದೊಳಗೆ ಮಾದಕ ವಸ್ತು ಎಸೆದ ಆರೋಪಿ ಕೆಎಸ್‌ಐಎಸ್‌ಎಫ್ ಬಲೆಗೆ
    ಅಪರಾಧ

    ಕಾರಾಗೃಹದೊಳಗೆ ಮಾದಕ ವಸ್ತು ಎಸೆದ ಆರೋಪಿ ಕೆಎಸ್‌ಐಎಸ್‌ಎಫ್ ಬಲೆಗೆ

    adminBy adminJuly 3, 2026No Comments1 Min Read

    ಮಂಗಳೂರು: ನಗರದ ಜಿಲ್ಲಾ ಕಾರಾಗೃಹದ ಆವರಣದೊಳಗೆ ಗಾಂಜಾ ಎಸೆದ ಆರೋಪಿಯನ್ನು ಕೆಎಸ್‌ಐಎಸ್‌ಎಫ್ ಸಿಬ್ಬಂದಿ ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿದಿರುವ ಘಟನೆ ಬೆಳಕಿಗೆ ಬಂದಿದೆ. ಬಂಧಿತ ಮೂಲತಃ ಬಂಟ್ವಾಳ ತಾಲೂಕಿನ ಕೊಳತ್ತಮಜಲು ಕೋಳಕೇರಿ ನಿವಾಸಿಯಾಗಿದ್ದು, ಪ್ರಸ್ತುತ ಉರ್ವದಲ್ಲಿ ವಾಸವಾಗಿರುವ ತಿಲಕ್‌ರಾಜ್ ಎಂದು ಗುರುತಿಸಲಾಗಿದೆ.

    ಜುಲೈ 2ರಂದು ಮುಂಜಾನೆ ಸುಮಾರು 4.20ರ ವೇಳೆಗೆ ಆರೋಪಿ ಕಾರಾಗೃಹದ ಒಳಭಾಗದಲ್ಲಿರುವ ಅಡುಗೆಮನೆ ಪ್ರದೇಶದತ್ತ ಅನುಮಾನಾಸ್ಪದ ಪಾರ್ಸೆಲ್‌ನ್ನು ಎಸೆದಿದ್ದಾನೆ. ಈ ಕೃತ್ಯವನ್ನು ಕರ್ತವ್ಯದಲ್ಲಿದ್ದ ಕೆಎಸ್‌ಐಎಸ್‌ಎಫ್ ಆರ್‌ಪಿಸಿ ಕಿರಣ್ ಗಮನಿಸಿದ್ದು, ತಕ್ಷಣವೇ ಎಎಸ್‌ಐ ಕಿರಣ್ ಅಂಬಿಗ ಅವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸಿಬ್ಬಂದಿ ಸುಮಾರು 500 ಮೀಟರ್ ದೂರ ಆರೋಪಿಯನ್ನು ಬೆನ್ನಟ್ಟಿ ಹಿಡಿದು ವಶಕ್ಕೆ ಪಡೆದಿದ್ದಾರೆ. ನಂತರ ಉಸ್ತುವಾರಿ ಅಧಿಕಾರಿ ಪೊಲೀಸ್ ನಿರೀಕ್ಷಕ ಸುಭಾಷ್ ಅವರಿಗೆ ಮಾಹಿತಿ ನೀಡಲಾಗಿದ್ದು, ಅವರ ಸಮ್ಮುಖದಲ್ಲಿ ನಡೆದ ವಿಚಾರಣೆಯಲ್ಲಿ ಆರೋಪಿ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.

    ಪ್ರಾಥಮಿಕ ತನಿಖೆಯ ಪ್ರಕಾರ, ಮೂಡುಶೆಡ್ಡೆ ನಿವಾಸಿ ಕಿರಣ್ ಎಂಬಾತ ಆರೋಪಿಗೆ ಗಾಂಜಾ, ಲೈಟರ್ ಹಾಗೂ ಗಾಂಜಾ ಸೇವನೆಗೆ ಬಳಸುವ ಪೇಪರ್‌ಗಳನ್ನು ನೀಡಿ, ಅವುಗಳನ್ನು ಕಾರಾಗೃಹದೊಳಗೆ ಎಸೆಯುವಂತೆ ಸೂಚಿಸಿದ್ದಾನೆ. ಇದಕ್ಕಾಗಿ ಆರೋಪಿಗೆ ರೂ. 2,000 ಹಣವನ್ನೂ ನೀಡಲಾಗಿತ್ತು ಎನ್ನಲಾಗಿದೆ. ಇದಲ್ಲದೆ, ಕಾರಾಗೃಹದಲ್ಲಿರುವ ಲಾಯ್ ವೇಗಸ್ ಎಂಬ ಬಂಧಿತನ ಮೊಬೈಲ್ ಸಂಖ್ಯೆಯನ್ನು ನೀಡಿ, ಆತನ ಸೂಚನೆಯಂತೆ ನಿಗದಿತ ಸ್ಥಳಕ್ಕೆ ಮಾದಕ ವಸ್ತುಗಳನ್ನು ಎಸೆಯಲಾಗಿದೆ ಎಂದು ಆರೋಪಿ ಬರ್ಕೆ ಪೊಲೀಸರ ವಿಚಾರಣೆ ವೇಳೆ ತಿಳಿಸಿದ್ದಾನೆ. ಈ ಸಂಬಂಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣದ ಹಿಂದಿರುವ ಜಾಲದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

    #crime #dakshinakannada
    Previous Articleಕಲ್ಯಾಣ ಮಂಟಪದಲ್ಲಿ ಎಸ್‌ಐಆರ್ ಪ್ರಕ್ರಿಯೆ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಚುನಾವಣಾ ಆಯೋಗದ ಸೂಚನೆ
    Next Article 11 ವರ್ಷದ ಬಾಲಕನ ಚಾಲನೆ ದುರಂತ: 9 ಬೌದ್ಧ ಸನ್ಯಾಸಿಗಳು ಮೃತ್ಯು!

    Related Posts

    ಹಳೇ ವೈಷಮ್ಯಕ್ಕೆ ನಡುರಸ್ತೆಯಲ್ಲೇ ತಲ್ವಾರ್ ಝಳಪಿಸಿದ ಯುವಕರು: ನಾಲ್ವರು ಗಂಭೀರ ಗಾಯ

    September 7, 2026

    ಅತ್ಯಾಚಾರಕ್ಕೆ ಯತ್ನಿಸಿ ಮಹಿಳೆ ಮೇಲೆ ಮಚ್ಚಿನಿಂದ ಹಲ್ಲೆ ಆರೋಪ: ಚಿಕಿತ್ಸೆ ಫಲಿಸದೆ ಸಾವು, ಐವರ ವಿರುದ್ಧ ಕೇಸ್

    September 7, 2026

    ಸಹೋದರನ ಬಗ್ಗೆ ವ್ಯಂಗ್ಯವಾಡಿದ್ದಕ್ಕೆ ಅತ್ತಿಗೆ ಕೊಲೆ: ಶವವನ್ನು ನೀರಿನ ಟ್ಯಾಂಕ್‌ಗೆ ಎಸೆದ ನಾದಿನಿ

    September 7, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಹಳೇ ವೈಷಮ್ಯಕ್ಕೆ ನಡುರಸ್ತೆಯಲ್ಲೇ ತಲ್ವಾರ್ ಝಳಪಿಸಿದ ಯುವಕರು: ನಾಲ್ವರು ಗಂಭೀರ ಗಾಯ

    September 7, 2026

    ಅತ್ಯಾಚಾರಕ್ಕೆ ಯತ್ನಿಸಿ ಮಹಿಳೆ ಮೇಲೆ ಮಚ್ಚಿನಿಂದ ಹಲ್ಲೆ ಆರೋಪ: ಚಿಕಿತ್ಸೆ ಫಲಿಸದೆ ಸಾವು, ಐವರ ವಿರುದ್ಧ ಕೇಸ್

    September 7, 2026

    ಸಹೋದರನ ಬಗ್ಗೆ ವ್ಯಂಗ್ಯವಾಡಿದ್ದಕ್ಕೆ ಅತ್ತಿಗೆ ಕೊಲೆ: ಶವವನ್ನು ನೀರಿನ ಟ್ಯಾಂಕ್‌ಗೆ ಎಸೆದ ನಾದಿನಿ

    September 7, 2026

    ಅಪಾರ್ಟ್‌ಮೆಂಟ್‌ನಿಂದ ದುರ್ವಾಸನೆ: ಬೀಗ ಒಡೆದು ನೋಡಿದ ಪೊಲೀಸರಿಗೆ ಛಿದ್ರಗೊಂಡ ಮಹಿಳೆಯ ಶವ, ಫ್ರಿಜ್‌ನಲ್ಲಿ ತಲೆ ಪತ್ತೆ

    September 7, 2026
    Advertisement

    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಹಳೇ ವೈಷಮ್ಯಕ್ಕೆ ನಡುರಸ್ತೆಯಲ್ಲೇ ತಲ್ವಾರ್ ಝಳಪಿಸಿದ ಯುವಕರು: ನಾಲ್ವರು ಗಂಭೀರ ಗಾಯ

    September 7, 2026

    ಅತ್ಯಾಚಾರಕ್ಕೆ ಯತ್ನಿಸಿ ಮಹಿಳೆ ಮೇಲೆ ಮಚ್ಚಿನಿಂದ ಹಲ್ಲೆ ಆರೋಪ: ಚಿಕಿತ್ಸೆ ಫಲಿಸದೆ ಸಾವು, ಐವರ ವಿರುದ್ಧ ಕೇಸ್

    September 7, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.