Close Menu
    What's Hot

    ಒಸಾಮಾ ಬಿನ್ ಲಾಡೆನ್‌ನಂತೆ ದಾವೂದ್ ಇಬ್ರಾಹಿಂ ಕೂಡ ಪಾಕಿಸ್ತಾನದಲ್ಲಿ ನೆಲೆಸಿದ್ದಾನೆ : ವಿಶ್ವಸಂಸ್ಥೆಯಲ್ಲಿ ಭಾರತ ಪ್ರತಿಪಾದನೆ

    October 22, 2026

    ಮಂಗಳೂರು–ಬೆಂಗಳೂರು ಹೆದ್ದಾರಿಯಲ್ಲಿ ದುರಂತ : ಗ್ಯಾಸ್ ಟ್ಯಾಂಕರ್‌ಗೆ ಕಾರು ಡಿಕ್ಕಿ, ವಿದ್ಯಾರ್ಥಿ ಸ್ಥಳದಲ್ಲೇ ಸಾವು

    October 22, 2026

    ಬೋಳಿಯಾರು ಡಬಲ್‌ ಮರ್ಡರ್‌ ಪ್ರಕರಣಕ್ಕೆ ತಿರುವು : ಸ್ಥಳ ಮಹಜರು ವೇಳೆ ಆರೋಪಿಯ ಮೇಲೆ ದಾಳಿಗೆ ಯತ್ನ

    October 22, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ರಾಷ್ಟ್ರೀಯ»ಸಮೋಸಾಗಾಗಿ ರೈಲು ನಿಲ್ಲಿಸಲಾಯಿತೇ? ವೈರಲ್ ವಿಡಿಯೋ ಕುರಿತು ರೈಲ್ವೆಯ ಅಧಿಕೃತ ಸ್ಪಷ್ಟನೆ
    ರಾಷ್ಟ್ರೀಯ

    ಸಮೋಸಾಗಾಗಿ ರೈಲು ನಿಲ್ಲಿಸಲಾಯಿತೇ? ವೈರಲ್ ವಿಡಿಯೋ ಕುರಿತು ರೈಲ್ವೆಯ ಅಧಿಕೃತ ಸ್ಪಷ್ಟನೆ

    adminBy adminJuly 8, 2026No Comments2 Mins Read

    ಇಂದೋರ್: ಸಮೋಸಾ ಮತ್ತು ಕಚೋರಿ ಖರೀದಿಸಲು ಲೊಕೊ ಪೈಲಟ್ ಒಬ್ಬರು ರೈಲು ನಿಲ್ಲಿಸಿದ್ದಾರೆ ಎಂದು ಆರೋಪಿಸಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿದೆ. ಲಕ್ಷಾಂತರ ಜನರು ಇದನ್ನು ವೀಕ್ಷಿಸಿದ್ದು, ಇದು ರೈಲ್ವೆ ಸಿಬ್ಬಂದಿಯ ಬೇಜವಾಬ್ದಾರಿ ಎಂದು ಟೀಕಿಸಿದ್ದಾರೆ. ಆದರೆ ಈಗ ಈ ಇಡೀ ಘಟನೆಗೆ ಭಾರತೀಯ ರೈಲ್ವೆ ಇಲಾಖೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅಸಲಿ ಸತ್ಯವನ್ನು ಜನರ ಮುಂದಿಟ್ಟಿದೆ.

    ವೈರಲ್ ವಿಡಿಯೋದಲ್ಲೇನಿತ್ತು? ವೈರಲ್ ಆದ ವಿಡಿಯೋದಲ್ಲಿ ‘ಇಂದೋರ್-ಮೋವ್ ಡೆಮು’ಪ್ರಯಾಣಿಕರ ರೈಲಿನ ಲೊಕೊ ಪೈಲಟ್ ಹಳಿಯ ಪಕ್ಕದ ಅಂಗಡಿಯಿಂದ ಸಮೋಸಾ ಖರೀದಿಸಲು ರೈಲನ್ನು ನಿಲ್ಲಿಸಿದ್ದರು. ಅವರು ತಿಂಡಿ ಖರೀದಿಸಿ ರೈಲು ಹತ್ತಿದ ತಕ್ಷಣವೇ ರೈಲು ಚಲಿಸಲು ಪ್ರಾರಂಭಿಸಿತು ಎಂದು ವಿಡಿಯೋ ಮಾಡಿದ ವ್ಯಕ್ತಿ ಸಾರ್ವಜನಿಕರನ್ನು ದಾರಿ ತಪ್ಪಿಸಿದ್ದ.

    ರೈಲ್ವೆ ಇಲಾಖೆ ನಡೆಸಿದ ‘ಸತ್ಯ ಪರಿಶೀಲನೆ’ ವಿವಾದ ದೊಡ್ಡದಾಗುತ್ತಿದ್ದಂತೆ ಎಚ್ಚೆತ್ತ ಪಶ್ಚಿಮ ರೈಲ್ವೆ ವಿಡಿಯೋವನ್ನು ಸಂಪೂರ್ಣವಾಗಿ ಪರಿಶೀಲಿಸಿ ಅಧಿಕೃತ ಎಕ್ಸ್ ಖಾತೆಯಲ್ಲಿ ಸ್ಪಷ್ಟನೆ ನೀಡಿದೆ.

    ಮೊದಲನೆಯದಾಗಿ, ವಿಡಿಯೋದಲ್ಲಿರುವ ರೈಲು ಯಾವುದೇ ಪ್ರಯಾಣಿಕರ ರೈಲಲ್ಲ. ಅದು ‘ಕಾನ್ಕಾರ್ ಗ್ರೀನ್ ಫೀಲ್ಡ್ ಪ್ರೈವೇಟ್ ಟರ್ಮಿನಸ್’ಗೆ ಸೇರಿದ ಸರಕು ಸಾಗಣೆ ರೈಲಾಗಿದೆ.

    ತಿಂಡಿಗಾಗಿ ರೈಲು ನಿಂತಿಲ್ಲ: ರೈಲ್ವೆ ಯಾರ್ಡ್‌ನಲ್ಲಿ ಮೊದಲೇ ನಿಗದಿಯಾಗಿದ್ದ ತುರ್ತು ಎಂಜಿನಿಯರಿಂಗ್ ಕಾಮಗಾರಿಗಳ  ಕಾರಣದಿಂದಾಗಿ, ಆ ರೈಲನ್ನು ಆರ್‌ಎಯು ಹೋಮ್ ಸಿಗ್ನಲ್ ಬಳಿ ಮೊದಲೇ ನಿಲ್ಲಿಸಲಾಗಿತ್ತು. ರೈಲು ಅಧಿಕೃತವಾಗಿ ಸಿಗ್ನಲ್‌ನಲ್ಲಿ ನಿಂತಿದ್ದ ಆ ಬಿಡುವಿನ ಸಮಯದಲ್ಲಿ, ಹಸಿವಾಗಿದ್ದರಿಂದ ಸಹಾಯಕ ಲೊಕೊ ಪೈಲಟ್ ಕೆಳಗಿಳಿದು ಪಕ್ಕದ ಅಂಗಡಿಯಿಂದ ಆಹಾರ ಖರೀದಿಸಿದ್ದರು.

    ಅಧಿಕೃತ ಕಾರಣಗಳಿಗಾಗಿ ರೈಲು ನಿಂತಿದ್ದಾಗ ಸಿಬ್ಬಂದಿ ಆಹಾರ ಖರೀದಿಸಿದ್ದನ್ನು, ಕೇವಲ ತಿಂಡಿಗಾಗಿಯೇ ರೈಲು ನಿಲ್ಲಿಸಲಾಗಿದೆ ಎಂದು ಆಯ್ದ ಭಾಗಗಳನ್ನು ಎಡಿಟ್ ಮಾಡಿ ತಪ್ಪು ನಿರೂಪಣೆ ಮಾಡಲಾಗಿದೆ. ಇಂತಹ ಸುಳ್ಳು ಸುದ್ದಿಗಳು ಸಾರ್ವಜನಿಕರಲ್ಲಿ ಇಲಾಖೆಯ ಮೇಲಿನ ನಂಬಿಕೆಯನ್ನು ಹಾಳುಮಾಡುತ್ತವೆ. ಹಂಚಿಕೊಳ್ಳುವ ಮುನ್ನ ಸತ್ಯಾಸತ್ಯತೆ ಪರಿಶೀಲಿಸಿ ಎಂದು ಪಶ್ಚಿಮ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

    ರೈಲ್ವೆ ನಿಯಮಗಳ ಹೆಚ್ಚುವರಿ ಮಾಹಿತಿ ಭಾರತೀಯ ರೈಲ್ವೆ ನಿಯಮಾವಳಿಗಳ ಪ್ರಕಾರ, ಗೂಡ್ಸ್ ರೈಲುಗಳು ಸಿಗ್ನಲ್ ಅಥವಾ ಕ್ರಾಸಿಂಗ್‌ಗಾಗಿ ಗಂಟೆಗಟ್ಟಲೆ ಕಾಯಬೇಕಾಗಿ ಬರುತ್ತದೆ. ಅಂತಹ ಸಂದರ್ಭಗಳಲ್ಲಿ ಇಂಜಿನ್ ಚಾಲನೆಯಲ್ಲಿಟ್ಟುಕೊಂಡೇ, ಸ್ಟೇಷನ್ ಮಾಸ್ಟರ್ ಅನುಮತಿ ಪಡೆದು ಸಿಬ್ಬಂದಿ ಆಹಾರ ಅಥವಾ ನೀರನ್ನು ಖರೀದಿಸಲು ಅವಕಾಶವಿರುತ್ತದೆ. ಸದ್ಯ ಪಿಟಿಐ ಸೇರಿದಂತೆ ಪ್ರಮುಖ ಮಾಧ್ಯಮಗಳು ರೈಲ್ವೆಯ ಈ ಫ್ಯಾಕ್ಟ್ ಚೆಕ್ ಅನ್ನು ಪ್ರಕಟಿಸಿದ್ದು, ಸುಳ್ಳು ಸುದ್ದಿ ಹರಡಿದವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

     




    #nation
    Previous Articleಬೆಳ್ತಂಗಡಿಯಲ್ಲಿ ಎಸ್‌ಐಆರ್ ವೇಳೆ ಜಾತಿ ನಿಂದನೆ ಆರೋಪ; ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಕೇಸ್ ದಾಖಲು
    Next Article ಭೂ ನ್ಯಾಯ ಮಂಡಳಿ ಸಭೆಯಲ್ಲೇ ಕುಸಿದು ಬಿದ್ದು ಕಂಬಳದ ಖ್ಯಾತ ವೀಕ್ಷಕ ವಿವರಣೆಗಾರ ನಿರಂಜನ ರೈ ನಿಧನ

    Related Posts

    ಒಸಾಮಾ ಬಿನ್ ಲಾಡೆನ್‌ನಂತೆ ದಾವೂದ್ ಇಬ್ರಾಹಿಂ ಕೂಡ ಪಾಕಿಸ್ತಾನದಲ್ಲಿ ನೆಲೆಸಿದ್ದಾನೆ : ವಿಶ್ವಸಂಸ್ಥೆಯಲ್ಲಿ ಭಾರತ ಪ್ರತಿಪಾದನೆ

    October 22, 2026

    ಜಂತರ್ ಮಂತರ್‌ನಲ್ಲಿ ರಾಷ್ಟ್ರಧ್ವಜ ಹಾರಿಸಿದ ಪ್ರಕರಣ : ಕಾಕ್ರೋಚ್ ಜನತಾ ಪಾರ್ಟಿ ಮುಖಂಡರ ಬಿಡುಗಡೆಗೆ ಆದೇಶ

    October 22, 2026

    ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಟ್ವಿಸ್ಟ್ : ಬಂಧಿತರ ಸಂಖ್ಯೆ 10ಕ್ಕೆ ಏರಿಕೆ

    October 22, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಒಸಾಮಾ ಬಿನ್ ಲಾಡೆನ್‌ನಂತೆ ದಾವೂದ್ ಇಬ್ರಾಹಿಂ ಕೂಡ ಪಾಕಿಸ್ತಾನದಲ್ಲಿ ನೆಲೆಸಿದ್ದಾನೆ : ವಿಶ್ವಸಂಸ್ಥೆಯಲ್ಲಿ ಭಾರತ ಪ್ರತಿಪಾದನೆ

    October 22, 2026

    ಮಂಗಳೂರು–ಬೆಂಗಳೂರು ಹೆದ್ದಾರಿಯಲ್ಲಿ ದುರಂತ : ಗ್ಯಾಸ್ ಟ್ಯಾಂಕರ್‌ಗೆ ಕಾರು ಡಿಕ್ಕಿ, ವಿದ್ಯಾರ್ಥಿ ಸ್ಥಳದಲ್ಲೇ ಸಾವು

    October 22, 2026

    ಬೋಳಿಯಾರು ಡಬಲ್‌ ಮರ್ಡರ್‌ ಪ್ರಕರಣಕ್ಕೆ ತಿರುವು : ಸ್ಥಳ ಮಹಜರು ವೇಳೆ ಆರೋಪಿಯ ಮೇಲೆ ದಾಳಿಗೆ ಯತ್ನ

    October 22, 2026

    ಉಡುಪಿಯಲ್ಲಿ ನಿಗೂಢವಾಗಿ ಪತ್ತೆಯಾದ ಮಾನವ ಅಸ್ಥಿಪಂಜರ : ವಿಧಿವಿಜ್ಞಾನ ಪರೀಕ್ಷೆಗೆ ರವಾನೆ

    October 22, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ವಿಮಾನ ನಿಲ್ದಾಣದಿಂದ ವಾಪಸ್ ಬರುತ್ತಿದ್ದ ಕಾರಿಗೆ ಬಸ್ ಡಿಕ್ಕಿ : 23 ವರ್ಷದ ಚಾಲಕ ಸಾವು

    October 21, 2026

    “ಅವರೇ ಪಾಕಿಸ್ತಾನದ ಜೊತೆ ನಂಟು ಬೆಳೆಸುತ್ತಿದ್ದಾರೆ” : ಆರ್‌ಎಸ್‌ಎಸ್‌ ವಿರುದ್ಧ ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ

    October 21, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.