Close Menu
    What's Hot

    ಟಿಟಿಡಿ ಉಪ ಇಒ ಲೋಕನಾಥಮ್ ನಿವಾಸಗಳ ಮೇಲೆ ಎಸಿಬಿ ದಾಳಿ; ₹5 ಕೋಟಿ ಅಕ್ರಮ ಆಸ್ತಿ ಪತ್ತೆ

    September 4, 2026

    ಮುಲ್ಕಿ: ಕೊರ್ದಬ್ಬು ದೈವಸ್ಥಾನಕ್ಕೆ ಕನ್ನ; ₹14.95 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ಆಭರಣ ಕಳವು

    September 4, 2026

    ಮಂಗಳೂರು: ಬ್ಲಿಂಕ್‌ಇಟ್‌ ಗೋಡೌನ್‌ಗೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ; ಕೊಳೆತ ಮೊಟ್ಟೆ ಪತ್ತೆ, ಗೋದಾಮುಗೆ ಸೀಲ್‌ ಮಾಡಿ ನೋಟಿಸ್

    September 4, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ತಮಿಳುನಾಡಿನಲ್ಲಿ ಕುಟುಂಬ ದುರಂತ: ಇಬ್ಬರು ಮಕ್ಕಳ ಹತ್ಯೆ ಬಳಿಕ ತಂದೆಯ ಆತ್ಮಹತ್ಯೆ
    ಅಪರಾಧ

    ತಮಿಳುನಾಡಿನಲ್ಲಿ ಕುಟುಂಬ ದುರಂತ: ಇಬ್ಬರು ಮಕ್ಕಳ ಹತ್ಯೆ ಬಳಿಕ ತಂದೆಯ ಆತ್ಮಹತ್ಯೆ

    adminBy adminJuly 13, 2026No Comments2 Mins Read

    ತಮಿಳುನಾಡು: ಪತ್ನಿಯು ತನ್ನನ್ನು ಮತ್ತು ಮಕ್ಕಳನ್ನು ತೊರೆದು ಬೇರೊಬ್ಬ ಪುರುಷನೊಂದಿಗೆ ಹೋದ ಕಟು ಸತ್ಯವನ್ನು ಸಹಿಸಲಾರದೆ ತೀವ್ರ ಖಿನ್ನತೆಗೆ ಒಳಗಾಗಿದ್ದ ಟ್ರಕ್ ಚಾಲಕನೊಬ್ಬ, ಮಲಗಿದ್ದ ತನ್ನಿಬ್ಬರು ಮುಗ್ಧ ಮಕ್ಕಳಿಗೆ ವಿದ್ಯುತ್ ತಂತಿ ಬಿಗಿದು ಕರೆಂಟ್ ಶಾಕ್ ಕೊಟ್ಟು ಹತ್ಯೆ ಮಾಡಿ, ತಾನೂ ಅದೇ ತಂತಿಯಿಂದ ಕರೆಂಟ್ ಶಾಕ್ ಕೊಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪುದುಕೊಟ್ಟೈ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಮೃತರನ್ನು ಟ್ರಕ್ ಚಾಲಕ ಮೇರಿ ಮೈಕೆಲ್ ಹಾಗೂ ಅವರ ಮಕ್ಕಳಾದ 9ನೇ ತರಗತಿ ವಿದ್ಯಾರ್ಥಿನಿ ಮೇರಿ ನಿರೋಷಾ (14) ಮತ್ತು 7ನೇ ತರಗತಿ ವಿದ್ಯಾರ್ಥಿ ಮೇರಿ ಕೆನಿಸ್ಟನ್ (12) ಎಂದು ಗುರುತಿಸಲಾಗಿದೆ. ಮೃತ ಮುಗ್ಧ ಮಕ್ಕಳಿಬ್ಬರೂ ಸ್ಥಳೀಯ ಖಾಸಗಿ ಶಾಲೆಯಲ್ಲಿ ಓದುತ್ತಿದ್ದರು. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಮೈಕೆಲ್ ಅವರ ಪತ್ನಿ ಸುಮಾರು ಆರು ತಿಂಗಳ ಹಿಂದೆಯಷ್ಟೇ ತನ್ನ ಇಡೀ ಕುಟುಂಬವನ್ನು ಕೈಬಿಟ್ಟು ಬೇರೊಬ್ಬ ವ್ಯಕ್ತಿಯೊಂದಿಗೆ ವಾಸಿಸಲು ಹೋಗಿದ್ದಳು. ಇದರಿಂದ ತೀವ್ರವಾಗಿ ಕಂಗಾಲಾಗಿದ್ದ ಮೈಕೆಲ್ ಮಾನಸಿಕ ಖಿನ್ನತೆಗೆ (Depression) ಒಳಗಾಗಿದ್ದರು. ದಿನ ನಿತ್ಯ ಟ್ರಕ್ ಚಾಲನೆಗೆ ಹೋಗುತ್ತಿದ್ದ ಅವರು ಕೆಲಸ ನಿಲ್ಲಿಸಿ, ಜೀವನೋಪಾಯಕ್ಕಾಗಿ ಸಾಂದರ್ಭಿಕವಾಗಿ ಮನೆಗಳಿಗೆ ಬಣ್ಣ ಬಳಿಯುವ (Painting) ಕೆಲಸಕ್ಕೆ ಹೋಗುತ್ತಿದ್ದರು.

    ಶುಕ್ರವಾರ ರಾತ್ರಿ ಮೈಕೆಲ್ ತನ್ನಿಬ್ಬರು ಮಕ್ಕಳಿಗೆ ಹೊರಗಿನಿಂದ ಆಹಾರ ತಂದುಕೊಟ್ಟು ಮಲಗಲು ಹೇಳಿದ್ದಾನೆ. ಮಕ್ಕಳು ಗಾಢ ನಿದ್ರೆಗೆ ಜಾರಿದ ನಂತರ, ತಂದೆ ತನ್ನ ಇಬ್ಬರ ಮಕ್ಕಳ ದೇಹಗಳಿಗೂ ವಿದ್ಯುತ್ ತಂತಿಗಳನ್ನು (Electric Wires) ಬಿಗಿದು ಅದನ್ನು ನೇರವಾಗಿ ವಿದ್ಯುತ್ ಬೋರ್ಡ್‌ಗೆ ಕನೆಕ್ಟ್ ಮಾಡಿದ್ದಾನೆ. ಕರೆಂಟ್ ಶಾಕ್ ತಗುಲಿ ಮಕ್ಕಳಿಬ್ಬರು ಹಾಸಿಗೆಯಲ್ಲೇ ಮೃತಪಟ್ಟ ಬೆನ್ನಲ್ಲೇ, ಮೈಕೆಲ್ ತಾನೂ ಅದೇ ವೈರ್ ಸನ್ ಕನೆಕ್ಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಇದೇ ಮನೆಯಲ್ಲಿ ವಾಸಿಸುತ್ತಿದ್ದ ಮೈಕೆಲ್ ಅವರ 75 ವರ್ಷದ ವೃದ್ಧ ತಂದೆ ಆಂಥೋನಿ ಮುತ್ತು ಅವರು ಎಂದಿನಂತೆ ಕೋಣೆಯ ಹೊರಗಿನ ವರಾಂಡದಲ್ಲಿ ಮಲಗಿದ್ದರು. ಶನಿವಾರ ಮಧ್ಯಾಹ್ನವಾದರೂ ಕೋಣೆಯ ಬಾಗಿಲು ಒಳಗಿನಿಂದ ಲಾಕ್ ಆಗಿದ್ದನ್ನು ಕಂಡು ಗಾಬರಿಗೊಂಡ ಅವರು ನೆರೆಹೊರೆಯವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳೀಯರು ಪುದುಕೊಟ್ಟೈ ಪೊಲೀಸರಿಗೆ ಸಮಾಚಾರ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಗಿಲು ಒಡೆದು ಒಳಗೆ ಹೋದಾಗ ಮೂವರ ದೇಹಗಳು ವಿದ್ಯುತ್ ತಂತಿಗಳಿಂದ ಸುತ್ತುವರಿದು ಹಾಸಿಗೆಯ ಮೇಲೆ ಶವವಾಗಿ ಬಿದ್ದಿರುವುದು ಪತ್ತೆಯಾಗಿದೆ. ಸದ್ಯ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಟುಟಿಕೋರಿನ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದ್ದು, ಪುದುಕೊಟ್ಟೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.




    #crime #nation
    Previous Articleಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಎನ್‌ಐಎ ಬಲೆಗೆ
    Next Article ಓಮನ್ ಕರಾವಳಿ ಬಳಿ ವಾಣಿಜ್ಯ ಹಡಗಿನ ಮೇಲೆ ದಾಳಿ; ಭಾರತೀಯ ನಾವಿಕರ ಸುರಕ್ಷತೆಗೆ ಭಾರತ ಕಳವಳ

    Related Posts

    ಟಿಟಿಡಿ ಉಪ ಇಒ ಲೋಕನಾಥಮ್ ನಿವಾಸಗಳ ಮೇಲೆ ಎಸಿಬಿ ದಾಳಿ; ₹5 ಕೋಟಿ ಅಕ್ರಮ ಆಸ್ತಿ ಪತ್ತೆ

    September 4, 2026

    ಮುಲ್ಕಿ: ಕೊರ್ದಬ್ಬು ದೈವಸ್ಥಾನಕ್ಕೆ ಕನ್ನ; ₹14.95 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ಆಭರಣ ಕಳವು

    September 4, 2026

    ಮಂಗಳೂರು: ಬ್ಲಿಂಕ್‌ಇಟ್‌ ಗೋಡೌನ್‌ಗೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ; ಕೊಳೆತ ಮೊಟ್ಟೆ ಪತ್ತೆ, ಗೋದಾಮುಗೆ ಸೀಲ್‌ ಮಾಡಿ ನೋಟಿಸ್

    September 4, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಟಿಟಿಡಿ ಉಪ ಇಒ ಲೋಕನಾಥಮ್ ನಿವಾಸಗಳ ಮೇಲೆ ಎಸಿಬಿ ದಾಳಿ; ₹5 ಕೋಟಿ ಅಕ್ರಮ ಆಸ್ತಿ ಪತ್ತೆ

    September 4, 2026

    ಮುಲ್ಕಿ: ಕೊರ್ದಬ್ಬು ದೈವಸ್ಥಾನಕ್ಕೆ ಕನ್ನ; ₹14.95 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ಆಭರಣ ಕಳವು

    September 4, 2026

    ಮಂಗಳೂರು: ಬ್ಲಿಂಕ್‌ಇಟ್‌ ಗೋಡೌನ್‌ಗೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ; ಕೊಳೆತ ಮೊಟ್ಟೆ ಪತ್ತೆ, ಗೋದಾಮುಗೆ ಸೀಲ್‌ ಮಾಡಿ ನೋಟಿಸ್

    September 4, 2026

    ಹಿಂಡಲಗಾ ಜೈಲಿನ ಕೈದಿಯೊಂದಿಗೆ ವಿಡಿಯೋ ಕಾಲ್; ವಿವಾದದ ಬೆನ್ನಲ್ಲೇ ಪಿಎಸ್ಐ ಜಯಶ್ರೀ ಸಸ್ಪೆಂಡ್

    September 3, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಹಿಂಡಲಗಾ ಜೈಲಿನ ಕೈದಿಯೊಂದಿಗೆ ವಿಡಿಯೋ ಕಾಲ್; ವಿವಾದದ ಬೆನ್ನಲ್ಲೇ ಪಿಎಸ್ಐ ಜಯಶ್ರೀ ಸಸ್ಪೆಂಡ್

    September 3, 2026

    IPS ಅಧಿಕಾರಿ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ಜನರಿಂದ ಹಣ ವಸೂಲಿ ಮಾಡುತ್ತಿದ್ದ 17ರ ಬಾಲಕನ ಬಂಧನ

    September 3, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.