Close Menu
    What's Hot

    ವೆಲೆನ್ಸಿಯಾ ಚರ್ಚ್ ಪಾದ್ರಿಯ ವಿರುದ್ಧ ಪೋಕ್ಸೊ ಪ್ರಕರಣ : ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

    October 18, 2026

    ಕೋಲ್ಕತ್ತಾ ದುರ್ಗಾ ಪೂಜಾ ಸಂಭ್ರಮದಲ್ಲಿ ಕಾಲ್ತುಳಿತ: 19 ಸಾವು, ಘಟನೆಗೆ ಉನ್ನತ ಮಟ್ಟದ ತನಿಖೆಗೆ ಸಿಎಂ ಆದೇಶ

    October 18, 2026

    ಕೊಳತ್ತಮಜಲು ರಹ್ಮಾನ್ ಕೊಲೆ ಪ್ರಕರಣ : ಜಾಮೀನು ಪ್ರಶ್ನಿಸಿ ಸರ್ಕಾರದ ಅರ್ಜಿ, ಹೈಕೋರ್ಟ್‌ನಿಂದ ತಡೆ

    October 18, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಂತರಾಷ್ಟ್ರೀಯ»ಅಮೆರಿಕ-ಇರಾನ್ ನಡುವೆ ಮತ್ತೆ ಯುದ್ಧದ ಕಾರ್ಮೋಡ; ಜಾಗತಿಕ ಆತಂಕ ಹೆಚ್ಚಳ
    ಅಂತರಾಷ್ಟ್ರೀಯ

    ಅಮೆರಿಕ-ಇರಾನ್ ನಡುವೆ ಮತ್ತೆ ಯುದ್ಧದ ಕಾರ್ಮೋಡ; ಜಾಗತಿಕ ಆತಂಕ ಹೆಚ್ಚಳ

    adminBy adminJuly 15, 2026No Comments2 Mins Read

    ವಾಷಿಂಗ್ಟನ್ : ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮೇಲಿನ ದಾಳಿ ಹಾಗೂ ನೌಕಾ ದಿಗ್ಬಂಧನದಿಂದಾಗಿ ಅಮೆರಿಕ ಮತ್ತು ಇರಾನ್ ನಡುವಿನ ಜಾಗತಿಕ ಉದ್ವಿಗ್ನತೆ ಅತ್ಯಂತ ತುತ್ತತುದಿಗೆ ತಲುಪಿದೆ. ಕಳೆದ ಜೂನ್ ತಿಂಗಳಷ್ಟೇ ಉಭಯ ದೇಶಗಳ ನಡುವೆ ಏರ್ಪಟ್ಟಿದ್ದ ‘ತಾತ್ಕಾಲಿಕ ತಿಳಿವಳಿಕೆ ಒಪ್ಪಂದ’ ದಿಂದ ಅಧಿಕೃತವಾಗಿ ಹಿಂದೆ ಸರಿಯುತ್ತಿರುವುದಾಗಿ ಇರಾನ್ ಘೋಷಿಸಿದೆ. ಅಮೆರಿಕ ತನ್ನ ಬಂದರುಗಳ ಮೇಲೆ ಮತ್ತೆ ಕಠಿಣ ನೌಕಾ ನಿರ್ಬಂಧ ಹೇರಿ ಒಪ್ಪಂದವನ್ನು ಗಾಳಿಗೆ ತೂರಿರುವುದೇ ಇದಕ್ಕೆ ಕಾರಣ ಎಂದು ಇರಾನ್ ವಿದೇಶಾಂಗ ಸಚಿವಾಲಯ ಗಂಭೀರ ಆರೋಪ ಮಾಡಿದೆ.
    ವಿಶ್ವದ ಒಟ್ಟು ತೈಲ ಮತ್ತು ನೈಸರ್ಗಿಕ ಅನಿಲ ಸಾಗಣೆಯ ಸುಮಾರು ಶೇಕಡಾ 20 ರಷ್ಟು ಭಾಗ ಹಾರ್ಮುಜ್ ಜಲಸಂಧಿಯ ಮೂಲಕವೇ ಸಾಗುವುದರಿಂದ, ಈ ಪ್ರಾಂತ್ಯದಲ್ಲಿ ಇರಾನ್ ನಡೆಸುತ್ತಿರುವ ಕ್ಷಿಪಣಿ ಅಬ್ಬರ ಇಡೀ ಜಗತ್ತನ್ನೇ ಆತಂಕಕ್ಕೆ ತಳ್ಳಿದೆ.

    ಇರಾನ್‌ನ ಉದ್ಧಟತನಕ್ಕೆ ತೀವ್ರ ಆಕ್ರೋಶ ಹೊರಹಾಕಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್‌ಗೆ ಹಿಂದೆಂದೂ ಕಾಣದ ಕಠಿಣ ಮುನ್ನೆಚ್ಚರಿಕೆ ನೀಡಿದ್ದಾರೆ. “ಇರಾನ್ ತನ್ನ ಆಕ್ರಮಣಕಾರಿ ದಾಳಿಗಳನ್ನು ನಿಲ್ಲಿಸದಿದ್ದರೆ, ಆ ದೇಶದ ವಿದ್ಯುತ್ ಸ್ಥಾವರಗಳು ಮತ್ತು ಉಪ್ಪುನೀರು ಶುದ್ಧೀಕರಣ ಘಟಕಗಳು ಸೇರಿದಂತೆ ಪ್ರಮುಖ ನಾಗರಿಕ ಮೂಲಸೌಕರ್ಯಗಳ ಮೇಲೆಯೇ ಅಮೆರಿಕ ಸೇನೆ ದಾಳಿ ನಡೆಸಲಿದೆ. ಇಷ್ಟೇ ಅಲ್ಲದೆ, ಇರಾನ್‌ನ ತೈಲ ರಫ್ತಿನ ಬಹುದೊಡ್ಡ ಶಕ್ತಿ ಕೇಂದ್ರವಾಗಿರುವ ‘ಖಾರ್ಗ್ ದ್ವೀಪ’ವನ್ನು ಅಗತ್ಯಬಿದ್ದರೆ ಅಮೆರಿಕ ಸೇನೆ ತನ್ನ ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಳ್ಳಲಿದೆ. ಇದನ್ನು ತಡೆಯಲು ಇರಾನ್‌ನಿಂದ ಸಾಧ್ಯವಿಲ್ಲ” ಎಂದು ಟ್ರಂಪ್ ಗುಡುಗಿದ್ದಾರೆ.

    ಟ್ರಂಪ್ ಎಚ್ಚರಿಕೆಗೆ ತಿರುಗೇಟು ನೀಡಿರುವ ಇರಾನ್ ಉಪ ವಿದೇಶಾಂಗ ಸಚಿವ ಕಾಜೆಂ ಘರೀಬಾಬಾದಿ, “ಯಾವುದೇ ಬೆಲೆ ತೆತ್ತರೂ ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್ ತನ್ನ ಸಂಪೂರ್ಣ ಸಾರ್ವಭೌಮ ನಿಯಂತ್ರಣವನ್ನು ಸಾಧಿಸಲಿದೆ. ಯುದ್ಧದ ಪರಿಸ್ಥಿತಿಯಲ್ಲಿ ರಾಷ್ಟ್ರೀಯ ಭದ್ರತೆಯ ಕಾರಣಕ್ಕಾಗಿ ಜಲಸಂಧಿಯನ್ನು ಇರಾನ್ ತನ್ನ ಸುಪರ್ದಿಗೆ ತೆಗೆದುಕೊಳ್ಳಲಿದೆ. ಇನ್ನು ಮುಂದೆ ಅಮೆರಿಕದೊಂದಿಗೆ ಯಾವುದೇ ಹೊಸ ಮಾತುಕತೆ ನಡೆಸುವ ಪ್ರಶ್ನೆಯೇ ಇಲ್ಲ” ಎಂದು ಖಡಕ್ಕಾಗಿ ಹೇಳಿದ್ದಾರೆ.

    ಕಳೆದ ಫೆಬ್ರವರಿ 28 ರಂದು ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ಮಿಲಿಟರಿ ಆಪರೇಷನ್ ಆರಂಭಿಸಿದಾಗಿನಿಂದ ಈ ಸಂಘರ್ಷ ತಾರಕಕ್ಕೇರಿದೆ. ಸದ್ಯ ಇರಾನ್ ದಾಳಿಯನ್ನು ಹತ್ತಿಕ್ಕಲು ಅಮೆರಿಕದ ಸೆಂಟ್ರಲ್ ಕಮಾಂಡ್ ಅರಬ್ಬೀ ಸಮುದ್ರದಲ್ಲಿ ಬರೋಬ್ಬರಿ 19 ಸುಸಜ್ಜಿತ ಯುದ್ಧನೌಕೆಗಳು, 2 ದೈತ್ಯ ವಿಮಾನವಾಹಕ ನೌಕೆಗಳು ಹಾಗೂ ಸಾವಿರಾರು ನೌಕಾಪಡೆಯ ಯೋಧರನ್ನು ಜಲಸಂಧಿಯ ಸುತ್ತಲೂ ನಿಯೋಜಿಸಿದೆ. ಹಾರ್ಮುಜ್ ಜಲಸಂಧಿಯಲ್ಲಿ ಈಗಾಗಲೇ ಇರಾನ್ ಪಡೆ ಹಾಗೂ ಅಮೆರಿಕ ನೌಕಾಪಡೆ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಇರಾನ್ ಉಡಾಯಿಸಿದ ಡ್ರೋನ್ ಮತ್ತು ಕ್ಷಿಪಣಿಗಳ ದಾಳಿಯಿಂದಾಗಿ ನೆರೆಯ ಬಹರೈನ್ ಮತ್ತು ಕುವೈತ್ ರಾಷ್ಟ್ರಗಳಲ್ಲಿ ಹೈ-ಅಲರ್ಟ್ ಸೈರನ್‌ಗಳು ಮೊಳಗಿವೆ.




    International
    Previous Article‘ಪೊಲೀಸರ ತಲೆ ಬೇಕು’ ಎಂದು ಅಬ್ಬರಿಸಿ ಅಧಿಕಾರಿಯ ಮೇಲೆ ಮಾರಣಾಂತಿಕ ದಾಳಿ
    Next Article ಹಾರ್ಮುಝ್ ಜಲಸಂಧಿಯಲ್ಲಿ ಕ್ಷಿಪಣಿ ದಾಳಿ; ಬಂಟ್ವಾಳದ ರಚನ್ ಜೀವ ಉಳಿಸಿದ ಒಮನ್ ನೌಕಾಪಡೆ

    Related Posts

    ವಾಯುಪಡೆಯ ವಿಮಾನ ಪತನ; 25 ಪ್ರಯಾಣಿಕರು, 7 ಸಿಬ್ಬಂದಿ ಸೇರಿ 32 ಮಂದಿ ಸಾವು

    October 6, 2026

    ಪ್ಲೇಗ್ ಪ್ರಕರಣದ ಬೆನ್ನಲ್ಲೇ ರಷ್ಯಾದಲ್ಲಿ ಕಟ್ಟೆಚ್ಚರ; 5 ಆಸ್ಪತ್ರೆಗಳು ಬಂದ್‌, ನೂರಾರು ಮಂದಿ ಕ್ವಾರಂಟೈನ್

    October 5, 2026

    ಫ್ಲೈದುಬೈ ವಿಮಾನ ದಾಳಿಗೆ ಹೊಸ ಟ್ವಿಸ್ಟ್; ಜುಲೈನಲ್ಲೇ ವಿಮಾನ ಪತನಗೊಳಿಸಲು ಯೋಜನೆ ಹೊಂದಿದ್ದ ಸಂಚು ಬಯಲು

    October 5, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ವೆಲೆನ್ಸಿಯಾ ಚರ್ಚ್ ಪಾದ್ರಿಯ ವಿರುದ್ಧ ಪೋಕ್ಸೊ ಪ್ರಕರಣ : ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

    October 18, 2026

    ಕೋಲ್ಕತ್ತಾ ದುರ್ಗಾ ಪೂಜಾ ಸಂಭ್ರಮದಲ್ಲಿ ಕಾಲ್ತುಳಿತ: 19 ಸಾವು, ಘಟನೆಗೆ ಉನ್ನತ ಮಟ್ಟದ ತನಿಖೆಗೆ ಸಿಎಂ ಆದೇಶ

    October 18, 2026

    ಕೊಳತ್ತಮಜಲು ರಹ್ಮಾನ್ ಕೊಲೆ ಪ್ರಕರಣ : ಜಾಮೀನು ಪ್ರಶ್ನಿಸಿ ಸರ್ಕಾರದ ಅರ್ಜಿ, ಹೈಕೋರ್ಟ್‌ನಿಂದ ತಡೆ

    October 18, 2026

    ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸೌಮ್ಯಾ ರೆಡ್ಡಿ ರಾಜೀನಾಮೆ

    October 17, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸೌಮ್ಯಾ ರೆಡ್ಡಿ ರಾಜೀನಾಮೆ

    October 17, 2026

    ರಾಜ್ಯಾದ್ಯಂತ ಸ್ವೀಟ್ ಅಂಗಡಿಗಳ ತಪಾಸಣೆ ಚುರುಕು: 145 ಮಾದರಿ ಸಂಗ್ರಹ, 15 ಘಟಕಗಳಿಗೆ ನೋಟಿಸ್

    October 17, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.