Close Menu
    What's Hot

    ಜೈಲಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಮೂಲಸೌಕರ್ಯಕ್ಕಾಗಿ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಕೈದಿ

    September 5, 2026

    ಪತ್ನಿಯ ಪ್ರಿಯಕರನಿಗೆ ಎಣ್ಣೆ ಪಾರ್ಟಿ ನೆಪದಲ್ಲಿ ಕರೆ: ಕತ್ತು ಹಿಸುಕಿ ಕೊಂದು ಸಂಪ್‌ಗೆ ಹಾಕಿದ ಪತಿ

    September 5, 2026

    ಮೂವರು ಮಕ್ಕಳ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್: ತೀರ್ಪು ನೀಡಲು ಜ್ಯೂರಿ ವಿಫಲ

    September 5, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಮನೆಯಲ್ಲೇ ₹6.37 ಲಕ್ಷ ಮೌಲ್ಯದ ಚಿನ್ನಾಭರಣ ಕಳವು; ಕೆಲಸಗಾರರ ಮೇಲೆ ಶಂಕೆ
    ಅಪರಾಧ

    ಮನೆಯಲ್ಲೇ ₹6.37 ಲಕ್ಷ ಮೌಲ್ಯದ ಚಿನ್ನಾಭರಣ ಕಳವು; ಕೆಲಸಗಾರರ ಮೇಲೆ ಶಂಕೆ

    adminBy adminJuly 22, 2026No Comments1 Min Read

    ಮಂಗಳೂರು : ಮಂಗಳೂರು ತಾಲೂಕಿನ ಪಡವು ಗ್ರಾಮದ ಕೊಪ್ಪಳಕಾಡುವಿನಲ್ಲಿರುವ ಮನೆಯೊಂದರ ಬೆಡ್‌ರೂಮ್‌ ಟೇಬಲ್ ಡ್ರಾವರ್‌ನಲ್ಲಿಟ್ಟಿದ್ದ ಬರೋಬ್ಬರಿ ₹6,37,000 (ಆರು ಲಕ್ಷದ ಮೂವತ್ತೇಳು ಸಾವಿರ ರೂಪಾಯಿ) ಮೌಲ್ಯದ ಚಿನ್ನಾಭರಣ ಹಾಗೂ ಕೈಗಡಿಯಾರ ಕಳವಾಗಿರುವ ಘಟನೆ ಬೆಳಕಿಗೆ ಬಂದಿದೆ.

    ಕೊಪ್ಪಳಕಾಡುವಿನ ‘ಶ್ರೀದೇವಿ ನಿವಾಸ’ದ ನಿವಾಸಿ ಜಗದೀಶ್ ದಾಸ್ ಎಂಬುವರು ತಮ್ಮ ಮನೆಯ ಹಿಂಭಾಗದ ಕೊಠಡಿಯ ಸಿಮೆಂಟ್ ಸ್ಲಾಬ್ ಕೆಲಸ ಮುಗಿದ ಬಳಿಕ, ಮನೆಯ ಹಾಲ್‌ನಲ್ಲಿ ಫಾಲ್ ಸೀಲಿಂಗ್ (False Ceiling) ಕೆಲಸವನ್ನು ವಹಿಸಿಕೊಟ್ಟಿದ್ದರು. ಅದರಂತೆ ಐದು ಮಂದಿ ಜುಲೈ 8, 2026 ರಿಂದ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ದೂರುದಾರ ಜಗದೀಶ್ ದಾಸ್ ಅವರು ತಮ್ಮ ಬೆಡ್‌ರೂಮ್‌ನಲ್ಲಿರುವ ಕಬ್ಬಿಣದ ಆಫೀಸ್ ಟೇಬಲ್‌ ಡ್ರಾವರ್‌ನಲ್ಲಿ (ಬೀಗ ಹಾಕಿರಲಿಲ್ಲ)

    ಸಣ್ಣ ಪರ್ಸ್‌ನಲ್ಲಿ ಇರಿಸಿದ್ದ:

    20 ಗ್ರಾಂ ತೂಕದ ಚಿನ್ನದ ಕಡಗ (1),17 ಗ್ರಾಂ ತೂಕದ ವೆಂಕಟರಮಣ ದೇವರ ಪೆಂಡೆಂಟ್ ಹೊಂದಿದ್ದ ಚಿನ್ನದ ಚೈನ್ (1),8 ಗ್ರಾಂ ತೂಕದ ನವಗ್ರಹ ಉಂಗುರ (1),4 ಗ್ರಾಂ ತೂಕದ ಸಾದಾ ಚಿನ್ನದ ಉಂಗುರ (1)
    2000 ಮೌಲ್ಯದ ಸೋನಾಟಾ ಕಂಪನಿಯ ಗೋಲ್ಡ್ ಕೋಟೆಡ್ ವಾಚ್, ಒಟ್ಟು 49 ಗ್ರಾಂ ತೂಕದ ₹6.37 ಲಕ್ಷ ಮೌಲ್ಯದ ಆಭರಣಗಳು ಕಳವಾಗಿವೆ. ಜುಲೈ 6 ರಂದು ಕೈಕಡಗವನ್ನು ಬಳಸಿ ವಾಪಸ್ ಅದೇ ಪರ್ಸ್‌ನಲ್ಲಿಟ್ಟಿದ್ದ ಜಗದೀಶ್ ಅವರು, ಜುಲೈ 16 ರಂದು ಬೆಳಿಗ್ಗೆ ನೋಡಿದಾಗ ಡ್ರಾವರ್‌ನಲ್ಲಿದ್ದ ಪರ್ಸ್ ನಾಪತ್ತೆಯಾಗಿತ್ತು. ಮನೆಯವರನ್ನು ವಿಚಾರಿಸಿದಾಗ ಯಾರೂ ತೆಗೆದಿರಲಿಲ್ಲ ಎಂಬುದು ಗೊತ್ತಾಗಿದೆ.

    ಮನೆಯಲ್ಲಿ ಸೀಲಿಂಗ್ ಕೆಲಸ ನಿರ್ವಹಿಸುತ್ತಿದ್ದ ಕೆಲಸಗಾರರೇ ಈ ಕೃತ್ಯ ಎಸಗಿದ್ದಾರೆ ಎಂಬ ದಟ್ಟ ಶಂಕೆ ವ್ಯಕ್ತಪಡಿಸಿ ಜಗದೀಶ್ ದಾಸ್ ಅವರು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

    #crime #dakshinakannada
    Previous Articleಶಿವಾಜಿನಗರದಲ್ಲಿ ಫುಟ್‌ಪಾತ್ ತೆರವು ವೇಳೆ ಹೈಡ್ರಾಮಾ; ಜಿಬಿಎ ಸಿಬ್ಬಂದಿ ಮೇಲೆ ಪೆಪ್ಪರ್ ಸ್ಪ್ರೇ, ಹಲ್ಲೆ ಆರೋಪ
    Next Article ಮನೆ ದುರಸ್ತಿ ವೇಳೆ ಚಿನ್ನ ಕಳವು; 24 ಗಂಟೆಯಲ್ಲೇ ಆರೋಪಿ ಬಂಧನ

    Related Posts

    ಜೈಲಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಮೂಲಸೌಕರ್ಯಕ್ಕಾಗಿ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಕೈದಿ

    September 5, 2026

    ಪತ್ನಿಯ ಪ್ರಿಯಕರನಿಗೆ ಎಣ್ಣೆ ಪಾರ್ಟಿ ನೆಪದಲ್ಲಿ ಕರೆ: ಕತ್ತು ಹಿಸುಕಿ ಕೊಂದು ಸಂಪ್‌ಗೆ ಹಾಕಿದ ಪತಿ

    September 5, 2026

    ಮೂವರು ಮಕ್ಕಳ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್: ತೀರ್ಪು ನೀಡಲು ಜ್ಯೂರಿ ವಿಫಲ

    September 5, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಜೈಲಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಮೂಲಸೌಕರ್ಯಕ್ಕಾಗಿ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಕೈದಿ

    September 5, 2026

    ಪತ್ನಿಯ ಪ್ರಿಯಕರನಿಗೆ ಎಣ್ಣೆ ಪಾರ್ಟಿ ನೆಪದಲ್ಲಿ ಕರೆ: ಕತ್ತು ಹಿಸುಕಿ ಕೊಂದು ಸಂಪ್‌ಗೆ ಹಾಕಿದ ಪತಿ

    September 5, 2026

    ಮೂವರು ಮಕ್ಕಳ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್: ತೀರ್ಪು ನೀಡಲು ಜ್ಯೂರಿ ವಿಫಲ

    September 5, 2026

    ‘ಆಪರೇಷನ್ ಅಶ್‌ದಾರ್’ ಯಶಸ್ಸು: ಲಷ್ಕರ್ ಉಗ್ರ ಕಮಾಂಡರ್ ಯಾಸಿರ್ ಹತ್ಯೆ

    September 5, 2026
    Advertisement

    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಜೈಲಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಮೂಲಸೌಕರ್ಯಕ್ಕಾಗಿ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಕೈದಿ

    September 5, 2026

    ಪತ್ನಿಯ ಪ್ರಿಯಕರನಿಗೆ ಎಣ್ಣೆ ಪಾರ್ಟಿ ನೆಪದಲ್ಲಿ ಕರೆ: ಕತ್ತು ಹಿಸುಕಿ ಕೊಂದು ಸಂಪ್‌ಗೆ ಹಾಕಿದ ಪತಿ

    September 5, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.