Close Menu
    What's Hot

    ಜೈಲಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಮೂಲಸೌಕರ್ಯಕ್ಕಾಗಿ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಕೈದಿ

    September 5, 2026

    ಪತ್ನಿಯ ಪ್ರಿಯಕರನಿಗೆ ಎಣ್ಣೆ ಪಾರ್ಟಿ ನೆಪದಲ್ಲಿ ಕರೆ: ಕತ್ತು ಹಿಸುಕಿ ಕೊಂದು ಸಂಪ್‌ಗೆ ಹಾಕಿದ ಪತಿ

    September 5, 2026

    ಮೂವರು ಮಕ್ಕಳ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್: ತೀರ್ಪು ನೀಡಲು ಜ್ಯೂರಿ ವಿಫಲ

    September 5, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ರಾಷ್ಟ್ರೀಯ»ಇ20 ಪೆಟ್ರೋಲ್‌ನಿಂದ ಮೈಲೇಜ್ ಮಾತ್ರ ಕಡಿಮೆ-ಎಂಜಿನ್‌ಗೆ ಹಾನಿಯಿಲ್ಲ : ಕೇಂದ್ರ ಸರ್ಕಾರ ಸ್ಪಷ್ಟನೆ
    ರಾಷ್ಟ್ರೀಯ

    ಇ20 ಪೆಟ್ರೋಲ್‌ನಿಂದ ಮೈಲೇಜ್ ಮಾತ್ರ ಕಡಿಮೆ-ಎಂಜಿನ್‌ಗೆ ಹಾನಿಯಿಲ್ಲ : ಕೇಂದ್ರ ಸರ್ಕಾರ ಸ್ಪಷ್ಟನೆ

    adminBy adminJuly 22, 2026No Comments1 Min Read

    ನವದೆಹಲಿ: ದೇಶದಲ್ಲಿ ಬಳಕೆಯಲ್ಲಿರುವ ಇ20 ಪೆಟ್ರೋಲ್ ಅಂದರೆ ಎಥೆನಾಲ್ ಮಿಶ್ರಿತ ಪೆಟ್ರೋಲ್ ಹಳೆಯ ವಾಹನಗಳ ಎಂಜಿನ್​ಗಳು ಹಾಳಾಗುತ್ತಿವೆ ಎಂಬ ಸಾರ್ವಜನಿಕರ ಆತಂಕಕ್ಕೆ ಕೇಂದ್ರ ಸರ್ಕಾರ ತೆರೆ ಎಳೆದಿದೆ. ಇ20 ಇಂಧನ ಬಳಕೆಯಿಂದ ಹಳೆಯವ ವಾಹನಗಳಲ್ಲಿ ಮೈಲೇಜ್ ಶೇ.3 ರಿಂದ 5ರಷ್ಟು ಕಡಿಮೆಯಾಗಬಹುದೇ ವಿನಃ ಯಾವುದೇ ದೊಡ್ಡ ಹಾನಿಯಾಗುವುದಿಲ್ಲ ಎಂದು ಸರ್ಕಾರ ಸಂಸತ್ತಿನಲ್ಲಿ ಸ್ಪಷ್ಟಪಡಿಸಿದೆ. ರಾಜ್ಯಸಭೆಯಲ್ಲಿ ಎತ್ತಲಾದ ಪ್ರಶ್ನೆಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ಅವರು ಲಿಖಿತ ಉತ್ತರ ನೀಡಿದ್ದಾರೆ.

    ಮೈಲೇಜ್ ಇಳಿಕೆಗೆ ಹಲವು ಕಾರಣ

    ಹಳೆಯ ಇ10 ಹೊಂದಿಕೊಳ್ಳುವ ವಾಹನಗಳಲ್ಲಿ ಇ20 ಪೆಟ್ರೋಲ್ ಬಳಸಿದಾಗ ಮೈಲೇಜ್‌ ಶೇ. 3 ರಿಂದ 5 ರಷ್ಟು ಮಾತ್ರ ಕಡಿತಗೊಳ್ಳಬಹುದು. ಆದರೆ, ವಾಹನದ ಮೈಲೇಜ್‌ ಎನ್ನುವುದು ಕೇವಲ ಇಂಧನವನ್ನಷ್ಟೇ ಅಲ್ಲದೆ, ಚಾಲನೆ ಮಾಡುವ ಶೈಲಿ, ಟೈರ್ ಒತ್ತಡ , ಎಸಿ ಬಳಕೆ ಮತ್ತು ವಾಹನದ ನಿರ್ವಹಣೆಯನ್ನು ಅವಲಂಬಿಸಿರುತ್ತದೆ.

    ಎಂಜಿನ್‌ಗೆ ತೊಂದರೆಯಿಲ್ಲ

    ದೇಶಾದ್ಯಂತ ಕೋಟ್ಯಂತರ ಕಾರುಗಳು ಹಾಗೂ ದ್ವಿಚಕ್ರ ವಾಹನಗಳು ಕಳೆದ 2.5 ವರ್ಷಗಳಿಂದ ಇ20 ಇಂಧನದಲ್ಲೇ ಚಲಿಸುತ್ತಿವೆ. ಇಂಧನದಿಂದಾಗಿ ಎಂಜಿನ್ ಕೈಕೊಟ್ಟ ಯಾವುದೇ ನಿಖರ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ. ಆಟೋಮೊಬೈಲ್ ಕಂಪನಿಗಳು ಕೂಡ ಇ20 ಪೆಟ್ರೋಲ್ ಬಳಸುವ ವಾಹನಗಳಿಗೆ ಖಾತರಿ ಸೇವೆಗಳನ್ನು ನೀಡುತ್ತಿವೆ. ಇ20 ಪೆಟ್ರೋಲ್‌ನಲ್ಲಿ ಆಕ್ಟೇನ್ ಮಟ್ಟ ಹೆಚ್ಚಿರುವುದರಿಂದ, ಎಂಜಿನ್ ಸುಲಭವಾಗಿ ಚಲಿಸಲು ಮತ್ತು ವಾಹನ ಶೀಘ್ರವಾಗಿ ವೇಗ ಪಡೆದುಕೊಳ್ಳಲು ಇದು ನೆರವಾಗುತ್ತದೆ.

    ಹಳೆಯ ಪೆಟ್ರೋಲ್‌ಗೆ ಮರಳುವ ಪ್ರಶ್ನೆಯೇ ಇಲ್ಲ

    ಸಾಮಾನ್ಯ ಪೆಟ್ರೋಲ್ (E0) ಅಥವಾ ಇ10 ಪೆಟ್ರೋಲ್‌ಗೆ ಸರ್ಕಾರ ಮತ್ತೆ ಮರಳುವುದಿಲ್ಲ. ದೇಶದ 1 ಲಕ್ಷಕ್ಕೂ ಹೆಚ್ಚು ಪೆಟ್ರೋಲ್ ಬಂಕ್‌ಗಳಲ್ಲಿ ಬೇರೆ ಬೇರೆ ಮಾದರಿಯ ಪೆಟ್ರೋಲ್ ಪೂರೈಸುವುದು ಪ್ರಾಯೋಗಿಕವಾಗಿ ಮತ್ತು ಸಾಫ್ಟ್‌ವೇರ್ ಲಾಜಿಸ್ಟಿಕ್ಸ್ ದೃಷ್ಟಿಯಿಂದ ವೆಚ್ಚದಾಯಕವಾಗಿದೆ ಎಂದು ಸರ್ಕಾರ ತಿಳಿಸಿದೆ.




    #national
    Previous Articleಹಿರಿಯ ದಲಿತ ನಾಯಕ ಎಂ. ದೇವದಾಸ್ ಹೃದಯಾಘಾತದಿಂದ ನಿಧನ
    Next Article ಕಾಂಗ್ರೆಸ್ ಕಚೇರಿ ಮುಂದೆ ಉದ್ವಿಗ್ನತೆ; ಬಿಜೆಪಿ ಶಾಸಕನ ಮೇಲೆ ಮೊಟ್ಟೆ ಎಸೆತ

    Related Posts

    ‘ಆಪರೇಷನ್ ಅಶ್‌ದಾರ್’ ಯಶಸ್ಸು: ಲಷ್ಕರ್ ಉಗ್ರ ಕಮಾಂಡರ್ ಯಾಸಿರ್ ಹತ್ಯೆ

    September 5, 2026

    ‘ಚಂದ್ರನತ್ತ ತಲುಪಿದ ಭಾರತ, ಜಾತಿ ಪಿಡುಗಿನಿಂದ ಇನ್ನೂ ಮುಕ್ತವಾಗಿಲ್ಲ’: ಬಾಂಬೆ ಹೈಕೋರ್ಟ್

    September 5, 2026

    ಕುಡಿಯುವ ನೀರಿಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ: ಪಂಚಾಯಿತಿ ಅಧ್ಯಕ್ಷನ ಹತ್ಯೆ

    September 5, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಜೈಲಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಮೂಲಸೌಕರ್ಯಕ್ಕಾಗಿ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಕೈದಿ

    September 5, 2026

    ಪತ್ನಿಯ ಪ್ರಿಯಕರನಿಗೆ ಎಣ್ಣೆ ಪಾರ್ಟಿ ನೆಪದಲ್ಲಿ ಕರೆ: ಕತ್ತು ಹಿಸುಕಿ ಕೊಂದು ಸಂಪ್‌ಗೆ ಹಾಕಿದ ಪತಿ

    September 5, 2026

    ಮೂವರು ಮಕ್ಕಳ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್: ತೀರ್ಪು ನೀಡಲು ಜ್ಯೂರಿ ವಿಫಲ

    September 5, 2026

    ‘ಆಪರೇಷನ್ ಅಶ್‌ದಾರ್’ ಯಶಸ್ಸು: ಲಷ್ಕರ್ ಉಗ್ರ ಕಮಾಂಡರ್ ಯಾಸಿರ್ ಹತ್ಯೆ

    September 5, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಜೈಲಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಮೂಲಸೌಕರ್ಯಕ್ಕಾಗಿ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಕೈದಿ

    September 5, 2026

    ಪತ್ನಿಯ ಪ್ರಿಯಕರನಿಗೆ ಎಣ್ಣೆ ಪಾರ್ಟಿ ನೆಪದಲ್ಲಿ ಕರೆ: ಕತ್ತು ಹಿಸುಕಿ ಕೊಂದು ಸಂಪ್‌ಗೆ ಹಾಕಿದ ಪತಿ

    September 5, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.