Close Menu
    What's Hot

    ಉಡುಪಿಯಲ್ಲಿ ನಾಪತ್ತೆಯಾದ ಖಾಸಗಿ ಬಸ್ ಕೆಲವೇ ಗಂಟೆಗಳಲ್ಲಿ ಪತ್ತೆ; ಕಳ್ಳರಿಗಾಗಿ ಪೊಲೀಸರ ಶೋಧ

    September 30, 2026

    ಕರಂಗಲ್ಪಾಡಿ ಅಪಘಾತ ಪ್ರಕರಣ; ಗಂಭೀರ ಗಾಯಗೊಂಡಿದ್ದ ಗೂಡ್ಸ್ ಆಟೋ ಚಾಲಕ ಸಾವು

    September 30, 2026

    ಪ್ರತಿಭಟನಾ ಸಭೆಯಲ್ಲಿ ನ್ಯಾಯಾಲಯದ ಪ್ರಕ್ರಿಯೆ ಬಗ್ಗೆ ತಪ್ಪು ಮಾಹಿತಿ ಆರೋಪ; ವಕೀಲರ ವಿರುದ್ಧ ಪ್ರಕರಣ ದಾಖಲು

    September 30, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ರಾಷ್ಟ್ರೀಯ»ಕೊಂಕಣ ರೈಲ್ವೆ ವಿಲೀನಕ್ಕೆ ಕೇಂದ್ರದ ಸಿದ್ಧತೆ; ಕರ್ನಾಟಕ, ಮಹಾರಾಷ್ಟ್ರದ ಷೇರು ವರ್ಗಾವಣೆ ನಿರ್ಧಾರ ಬಾಕಿ
    ರಾಷ್ಟ್ರೀಯ

    ಕೊಂಕಣ ರೈಲ್ವೆ ವಿಲೀನಕ್ಕೆ ಕೇಂದ್ರದ ಸಿದ್ಧತೆ; ಕರ್ನಾಟಕ, ಮಹಾರಾಷ್ಟ್ರದ ಷೇರು ವರ್ಗಾವಣೆ ನಿರ್ಧಾರ ಬಾಕಿ

    adminBy adminAugust 13, 2026No Comments1 Min Read

    ನವದೆಹಲಿ : ಕೊಂಕಣ ರೈಲ್ವೆ ನಿಗಮದ (KRCL) ಮೂಲಸೌಕರ್ಯ ನವೀಕರಣ, ಸುರಕ್ಷತೆ ಹಾಗೂ ಸಾಮರ್ಥ್ಯ ವರ್ಧನೆಗಾಗಿ ಹಣಕಾಸು ನೆರವು ನೀಡುವ ಉದ್ದೇಶದಿಂದ ಸಂಸ್ಥೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಲು ಮತ್ತು ಶೇ 100ರಷ್ಟು ಸಂಪೂರ್ಣ ಕೇಂದ್ರ ಸರ್ಕಾರಿ ಸ್ವಾಮ್ಯಕ್ಕೆ ಪಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ, ಷೇರುದಾರ ರಾಜ್ಯಗಳಿಂದ ಷೇರು ವರ್ಗಾವಣೆಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಗೆ ತಿಳಿಸಿದ್ದಾರೆ.

    ಆಗಸ್ಟ್ 12ರಂದು ಲೋಕಸಭೆಯಲ್ಲಿ ಮಾಹಿತಿ ನೀಡಿದ ಸಚಿವರು, “ಗೋವಾ ಸರ್ಕಾರ ಮಾತ್ರ ತನ್ನ ಷೇರುಗಳನ್ನು ರೈಲ್ವೆ ಸಚಿವಾಲಯಕ್ಕೆ ವರ್ಗಾಯಿಸಲು ಒಪ್ಪಿಗೆ ಸೂಚಿಸಿದೆ. ಆದರೆ, ಮಹಾರಾಷ್ಟ್ರ ಸರ್ಕಾರವು ತನ್ನ ಇಕ್ವಿಟಿ ಬಂಡವಾಳ ಹೂಡಿಕೆಯನ್ನು ಮರುಪಾವತಿಸುವಂತೆ (Refund) ಒತ್ತಾಯಿಸಿದ್ದರೆ, ಕರ್ನಾಟಕ ಸರ್ಕಾರವು ವಿವಿಧ ರೀತಿಯ ನಿರ್ಗಮನ (Exit options) ಮಾರ್ಗಗಳನ್ನು ಪರಿಶೀಲಿಸುತ್ತಿದೆ” ಎಂದು ವಿವರಿಸಿದರು.
    1990ರಲ್ಲಿ ಸ್ಥಾಪನೆಯಾದ ಕೆಆರ್‌ಸಿಎಲ್, ಮಹಾರಾಷ್ಟ್ರದ ರೋಹಾದಿಂದ ಕರ್ನಾಟಕದ ತೋಕೂರು (ಮಂಗಳೂರು) ವರೆಗಿನ 739 ಕಿ.ಮೀ ರೈಲು ಮಾರ್ಗವನ್ನು ನಿರ್ವಹಿಸುತ್ತಿದೆ. ಇದರಲ್ಲಿ ರೈಲ್ವೆ ಸಚಿವಾಲಯ (ಶೇ 66.79), ಮಹಾರಾಷ್ಟ್ರ (ಶೇ 14.91), ಕರ್ನಾಟಕ (ಶೇ 10.17), ಗೋವಾ (ಶೇ 4.07) ಹಾಗೂ ಕೇರಳ (ಶೇ 4.07) ಷೇರುಗಳನ್ನು ಹೊಂದಿವೆ.

    ಮಾರ್ಗದ ಮೂಲಸೌಕರ್ಯವು 30 ವರ್ಷ ಹಳೆಯದಾಗಿದ್ದು, ಸುರಂಗಗಳ ನಿರ್ವಹಣೆ ಮತ್ತು ಸಾಮರ್ಥ್ಯ ಹೆಚ್ಚಳಕ್ಕೆ ಗಣನೀಯ ಬಂಡವಾಳದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ರಾಜ್ಯಗಳು ಅಗತ್ಯ ಬಂಡವಾಳ ಹೂಡಿಕೆ ಮಾಡಬೇಕು ಇಲ್ಲವೇ ತಮ್ಮ ಷೇರುಗಳನ್ನು ಕೇಂದ್ರಕ್ಕೆ ಬಿಟ್ಟುಕೊಡಬೇಕು ಎಂದು ಸಚಿವಾಲಯ ಕೋರಿತ್ತು.

    739 ಕಿ.ಮೀ ಮಾರ್ಗದಲ್ಲಿ ರೋಹಾ-ವೀರ್ ಮತ್ತು ಮಡ್ಗಾಂವ್-ಮಜೋರ್ಡಾ ನಡುವಿನ 55 ಕಿ.ಮೀ ಹಳಿ ದ್ವಿಗುಣಗೊಳಿಸುವಿಕೆ ಕಾರ್ಯ ಪೂರ್ಣಗೊಂಡಿದೆ. ಉಳಿದಂತೆ ಸಾಮರ್ಥ್ಯ ಹೆಚ್ಚಳಕ್ಕಾಗಿ ಗುರುತಿಸಲಾದ 263 ಕಿ.ಮೀ ಮಾರ್ಗದಲ್ಲಿ ಹಳಿ ದ್ವಿಗುಣಗೊಳಿಸುವಿಕೆ ಕಾರ್ಯಸಾಧ್ಯತಾ ಸಮೀಕ್ಷೆಗೆ ಅನುಮೋದನೆ ನೀಡಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಆದರೆ ಕೊಂಕಣ ರೈಲ್ವೆಯಲ್ಲಿ ಹೆಚ್ಚು ಷೇರು ಹೊಂದಿರುವ ಮಹಾರಾಷ್ಟ್ರ ಮತ್ತು ಕರ್ನಾಟಕದ ನಿರ್ಧಾರದ ಮೇಲೆ ಈ ವೀಲಿನ ನಿಂತಿದೆ.




    #nation #national
    Previous Articleಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಆರೋಪ; ನಟಿಯ ಸಹೋದರಿಗೆ ಬೆದರಿಕೆ, ಆರೋಪಿ ಅರೆಸ್ಟ್
    Next Article ಅಧಿಕ ಬಡ್ಡಿಗೆ ಸಾಲ ನೀಡಿ ಕಿರುಕುಳ ಆರೋಪ; ಹಣಕಾಸು ಕಂಪನಿಯ ಮೂವರು ಸಿಬ್ಬಂದಿ ಅರೆಸ್ಟ್

    Related Posts

    ‘ಏಕಪಕ್ಷೀಯ ನಿರ್ಧಾರ’ ಆರೋಪ; ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಸಮ್ಮತಿ

    September 29, 2026

    ಸಿನಿಮಾ ಯೋಜನೆಗಳ ಹೆಸರಿನಲ್ಲಿ ಹಣ ವರ್ಗಾವಣೆ ಆರೋಪ; ರಕುಲ್ ಪ್ರೀತ್ ಸಿಂಗ್‌ಗೆ ಸೇರಿದ ಸ್ಥಳಗಳಲ್ಲಿ ಐಟಿ ಪರಿಶೋಧನೆ

    September 29, 2026

    ಸ್ನೇಹಿತನ ಮಾತು ನಂಬಿ ಸೌದಿ ಅರೇಬಿಯಾದಲ್ಲಿ ‘ಡೆತ್ ಟ್ರ್ಯಾಪ್’ಗೆ ಸಿಲುಕಿದ ಕೇರಳ ಮೂಲದ ವ್ಯಕ್ತಿ

    September 29, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಉಡುಪಿಯಲ್ಲಿ ನಾಪತ್ತೆಯಾದ ಖಾಸಗಿ ಬಸ್ ಕೆಲವೇ ಗಂಟೆಗಳಲ್ಲಿ ಪತ್ತೆ; ಕಳ್ಳರಿಗಾಗಿ ಪೊಲೀಸರ ಶೋಧ

    September 30, 2026

    ಕರಂಗಲ್ಪಾಡಿ ಅಪಘಾತ ಪ್ರಕರಣ; ಗಂಭೀರ ಗಾಯಗೊಂಡಿದ್ದ ಗೂಡ್ಸ್ ಆಟೋ ಚಾಲಕ ಸಾವು

    September 30, 2026

    ಪ್ರತಿಭಟನಾ ಸಭೆಯಲ್ಲಿ ನ್ಯಾಯಾಲಯದ ಪ್ರಕ್ರಿಯೆ ಬಗ್ಗೆ ತಪ್ಪು ಮಾಹಿತಿ ಆರೋಪ; ವಕೀಲರ ವಿರುದ್ಧ ಪ್ರಕರಣ ದಾಖಲು

    September 30, 2026

    ‘ಏಕಪಕ್ಷೀಯ ನಿರ್ಧಾರ’ ಆರೋಪ; ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಸಮ್ಮತಿ

    September 29, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಕುಂದಾಪುರ: “ಸ್ವಲ್ಪ ನಿಧಾನವಾಗಿ ಮಾತನಾಡಿ” ಎಂದಿದ್ದಕ್ಕೆ ಸೋಡಾ ಬಾಟಲಿಯಿಂದ ಹಲ್ಲೆ; ನಾಲ್ವರ ವಿರುದ್ಧ ಕೇಸ್

    September 29, 2026

    ಕೆಪಿಎಸ್‌ಸಿ ನೇಮಕಾತಿ ಅಕ್ರಮ; ಇಡಿ ದಾಳಿಯಲ್ಲಿ ಸಿಕ್ಕ ಡೈರಿಯಲ್ಲಿ ಲಕ್ಷಾಂತರ ಹಣದ ಲೆಕ್ಕ ಪತ್ತೆ

    September 28, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.