ಕಾಸರಗೋಡು: ವಿವಾಹ ವಿಚ್ಛೇದನ ಪ್ರಕರಣ ದಾಖಲಿಸಿದ ದ್ವೇಷದಿಂದ ಪತ್ನಿ ಮತ್ತು ಅತ್ತೆಯ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಸಂದರ್ಭದಲ್ಲಿ ಬೆಂಕಿ ತಗಲಿ ಗಂಭೀರ ಸುಟ್ಟು ಗಾಯಗೊಂಡ ಯುವಕ ಮಂಗಳವಾರ ಸಾವಿಗೀಡಾದ ಘಟನೆ ವರದಿಯಾಗಿದೆ.
ಕರಿವೆಳ್ಳೂರು ಕೊಳಮ್ಮಲ್ ವರಿಕ್ಕರ ನಿವಾಸಿಯಾದ ಆಟೋ ರಿಕ್ಷಾ ಚಾಲಕ ಸಿ.ವಿ.ಸನಲ್ ಕುಮಾರ್ (46) ಸಾವಿಗೀಡಾದವರು
ಸನಲ್ ಕುಮಾರ್ ಮತ್ತು ಪತ್ನಿ ಪ್ರಜೀಶ ದಾಂಪತ್ಯದಲ್ಲಿ ಬಿರುಕುಂಟಾಗಿತ್ತು. ಇದರಿಂದ ಪತ್ನಿ ಪ್ರಜೀಶ ವಿವಾಹ ವಿಚ್ಛೇದನ ಪ್ರಕರಣ ದಾಖಲಿಸಿದ್ದರು. ಈ ದ್ವೇಷದಿಂದ ಭಾನುವಾರ ಸನಲ್ ಕುಮಾರ್ ಕರಿವೆಳ್ಳೂರು ಕೂಕಾನಂ ಶ್ರೀ ಮುತ್ತಪ್ಪನ್ ಕ್ಷೇತ್ರ ಬಳಿಯಿರುವ ಪತ್ನಿ ಪ್ರಜೀಶರ ಮನೆಗೆ ತೆರಳಿ ಪ್ರಜೀಶ ಹಾಗೂ ಆಕೆಯ ತಾಯಿ ಪದ್ಮಿನಿ ಅವರ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಈ ಸಂದರ್ಭದಲ್ಲಿ ಬೆಂಕಿ ಸನಲ್ ಕುಮಾರ್‌ಗೂ ತಗಲಿ ಗಂಭೀರ ಸುಟ್ಟು ಗಾಯಗೊಂಡಿದ್ದರು. ಕಣ್ಣೂರಿನ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಪ್ರಜೀಶ ಹಾಗೂ ಪದ್ಮಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.








