ಕೇರಳ: ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಅಖಿಲ್ ಎನ್ಆರ್ಡಿ ಹಾಗೂ ಮೇಘಾ ನಾಯರ್ ಅವರ ಸಂಬಂಧ ಮುರಿದುಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಃ ಮೇಘಾ ನಾಯರ್ ಅವರೇ ಮೌನ ಮುರಿದಿದ್ದಾರೆ. ತಾವು ಅಖಿಲ್ ಅವರ ಎನ್ಆರ್ಡಿ ನಿವಾಸದಿಂದ ಹೊರಟು ಬಂದಿರುವುದು ನಿಜ ಹಾಗೂ ಪ್ರಸ್ತುತ ಅನೂಪ್ ಜೊತೆ ಇರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ಮೇಘಾ ರಾತ್ರಿ ವೇಳೆ ನೈಟಿ ಧರಿಸಿ ಕೈಯಲ್ಲಿ ಬ್ಯಾಗ್ ಹಿಡಿದು ಮನೆಯಿಂದ ಹೊರಡುತ್ತಿರುವ ಸಿಸಿಟಿವಿ ದೃಶ್ಯಾವಳಿಗಳು ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಮೇಘಾ ಬಸ್ ಕಂಡಕ್ಟರ್ ಜೊತೆ ಓಡಿಹೋಗಿದ್ದಾರೆ ಎಂಬ ವದಂತಿಗಳೂ ಹರಡಿದ್ದವು. ಆದರೆ, ಈ ನಡುವೆ ತಾವು ತಂದೆಯ ಮನೆಯಲ್ಲಿದ್ದೇನೆ ಎಂಬಂತೆ ಫೋಟೋ ಪೋಸ್ಟ್ ಮಾಡಿದ್ದು ಪ್ರೇಕ್ಷಕರಲ್ಲಿ ಗೊಂದಲ ಮೂಡಿಸಿತ್ತು.
ಈ ಕುರಿತು ಸ್ಪಷ್ಟನೆ ನೀಡಿರುವ ಮೇಘಾ, “ನಾನು ಎನ್ಆರ್ಡಿ ಮನೆಯಿಂದ ಹೊರಬಂದಿದ್ದು ನಿಜ. ನಾನು ಅನೂಪ್ ಜೊತೆ 10 ದಿನ ಇದ್ದೆ. ಆ ಮಧ್ಯೆ ತಂದೆಯನ್ನು ನೋಡಲು ಹೋದಾಗ ತೆಗೆದ ಫೋಟೋವನ್ನು ಪೋಸ್ಟ್ ಮಾಡಿದ್ದೆ. ನಂತರ ಮತ್ತೆ ಮನೆಗೆ ಮರಳಿದ್ದು, ಈಗಲೂ ಅಲ್ಲೇ ಇದ್ದೇನೆ. ಯಾರೋ ಸ್ನೇಹಿತರೆಂದು ಹೇಳಿಕೊಳ್ಳುವವರ ಮಾತುಗಳನ್ನು ನಂಬಬೇಡಿ” ಎಂದು ಹೇಳಿದ್ದಾರೆ.
ತಾವು ಮನೆ ಬಿಡಲು ವೈಯಕ್ತಿಕ ಕಾರಣಗಳಿವೆ ಎಂದಿರುವ ಮೇಘಾ, ಅದನ್ನು ಸಾರ್ವಜನಿಕರ ಮುಂದೆ ಬಹಿರಂಗಪಡಿಸಲು ಇಷ್ಟಪಡುವುದಿಲ್ಲ ಎಂದಿದ್ದಾರೆ. ಅಲ್ಲದೆ, ತಮಗೆ ಸೇರಿದ ವಸ್ತುವನ್ನು ಬಿಟ್ಟು ಎನ್ಆರ್ಡಿ ಕುಟುಂಬದ ಯಾವುದೇ ಚಿನ್ನಾಭರಣ ಅಥವಾ ಹಣವನ್ನು ತಾವು ತೆಗೆದುಕೊಂಡು ಬಂದಿಲ್ಲ, ಪ್ರತಿಯೊಂದನ್ನೂ ಅಲ್ಲಿಯೇ ಹಿಂತಿರುಗಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.








