ಬೆಂಗಳೂರು: ಭ್ರಷ್ಟರನ್ನು ನೇಮಿಸಿ ಒಳ್ಳೆಯ ಆಡಳಿತ ನೀಡಲು ಸಾಧ್ಯಾನಾ ಎಂದು ಮಾಜಿ ಕೆಪಿಎಸ್ಸಿ ಅಧ್ಯಕ್ಷ್ಯ ಸಾಹುಕಾರ್ ಶಿವಶಂಕರಪ್ಪಗೆ ಹೈಕೋರ್ಟ್ ಛೀಮಾರಿ ಹಾಕಿದೆ.
ಕೆಪಿಎಸ್ಸಿ ನೇಮಕಾತಿ ಹಗರಣ ಪ್ರಕರಣ ಸಂಬಂಧ ಸಾಹುಕಾರ್ ಶಿವಶಂಕರಪ್ಪ ಅವರು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿ ವಿಶ್ವಜೀತ್ ಶೆಟ್ಟಿ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸಾಹುಕಾರ್ ಶಿವಶಂಕರಪ್ಪ ಪರವಾಗಿ ವಾದಿಸಿದ ಹಿರಿಯ ವಕೀಲ ಅರುಣ್ ಶ್ಯಾಮ್, ಪ್ರಕರಣದಲ್ಲಿ ನಮ್ಮ ಕಕ್ಷಿದಾರರ ಪಾತ್ರ ಏನು ಇಲ್ಲ. ಎಲ್ವನ್ನೂ ಪರೀಕ್ಷೆ ಕಂಟ್ರೋಲರ್ ಅವರು ಮಾಡಿದ್ದಾರೆ. ಇವರು ಕೆಪಿಎಸ್ಸಿ ಅಧ್ಯಕ್ಷರು ಮಾತ್ರ ಆಗಿದ್ದರು. ಪ್ರಶ್ನೆ ಪತ್ರಿಕೆ ಸೋರಿಕೆಗೂ ಇವರಿಗೂ ಯಾವುದೇ ಸಂಬಂಧ ಇಲ್ಲ. ಒಮ್ಮೆ ಸಿಐಡಿ ವಿಚಾರಣೆಗೆ ಹಾಜರಾಗಿದ್ದಾರೆ ಎಂದರು.
ಇದಕ್ಕೆ ಹೈಕೋರ್ಟ್, ನಿಮ್ಮ ಪಾತ್ರ ಇಲ್ಲದೇ ಕೆಪಿಎಸ್ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಹೇಗೆ ಆಯ್ತು? ನಿಮ್ಮ ಪಾಲು ಇದ್ದೆ ಅದಕ್ಕೆ ಇಷ್ಟೆಲ್ಲಾ ಆಗಿದೆ. ಉನ್ನತ ಹುದ್ದೆಯಲ್ಲಿ ಇದ್ದು ಇಂತಹ ಕೃತ್ಯ ಮಾಡಿದ್ದೀರಿ. ಭ್ರಷ್ಟಾಚಾರದಿಂದ ಅಧಿಕಾರಿಗಳನ್ನು ನೇಮಿಸಿ ಒಳ್ಳೆಯ ಆಡಳಿತ ನೀಡಲು ಸಾಧ್ಯವೇ? ಎಂದು ಪೀಠ ಛೀಮಾರಿ ಹಾಕಿತು.
ಆಕ್ಷೇಪಣೆ ಸಲ್ಲಿಕೆ ಮಾಡಲು ಎಸ್ಪಿಪಿ ಬಿ.ಎನ್ ಜಗದೀಶ್ ಅವಕಾಶ ಕೇಳಿದರು. ಸೆ.7ಕ್ಕೆ ಕೋರ್ಟ್ ಅರ್ಜಿ ವಿಚಾರಣೆಯನ್ನು ಮುಂದೂಡಿತು.








