Close Menu
    What's Hot

    ಕೊಕ್ಕಡ ಬಳಿ ಕಾರು-ಕೆಎಸ್‌ಆರ್‌ಟಿಸಿ ಬಸ್ ನಡುವೆ ಭೀಕರ ಅಪಘಾತ: ಹಲವರಿಗೆ ಗಾಯ

    September 12, 2026

    ಭಾರತೀಯ ಮೂಲದ ಮಹಿಳೆಗೆ ನಿರಂತರ ಕಿರುಕುಳ: ಕೆಲಸದ ಸ್ಥಳದ ಹೊರಗೆ ಬೆನ್ನಟ್ಟಿ ಗುಂಡಿಕ್ಕಿ ಕೊಲೆ, ಆರೋಪಿ ಆತ್ಮಹತ್ಯೆ

    September 12, 2026

    ಮಹಿಳೆ-ಯುವಕನ ಪ್ರೀತಿಗೆ ಕುಟುಂಬದ ವಿರೋಧ: ಪ್ರೇಮಿಗಳಿಬ್ಬರು ಆತ್ಮಹತ್ಯೆ, ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ

    September 12, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಂತರಾಷ್ಟ್ರೀಯ»ಭಾರತೀಯ ಮೂಲದ ಮಹಿಳೆಗೆ ನಿರಂತರ ಕಿರುಕುಳ: ಕೆಲಸದ ಸ್ಥಳದ ಹೊರಗೆ ಬೆನ್ನಟ್ಟಿ ಗುಂಡಿಕ್ಕಿ ಕೊಲೆ, ಆರೋಪಿ ಆತ್ಮಹತ್ಯೆ
    ಅಂತರಾಷ್ಟ್ರೀಯ

    ಭಾರತೀಯ ಮೂಲದ ಮಹಿಳೆಗೆ ನಿರಂತರ ಕಿರುಕುಳ: ಕೆಲಸದ ಸ್ಥಳದ ಹೊರಗೆ ಬೆನ್ನಟ್ಟಿ ಗುಂಡಿಕ್ಕಿ ಕೊಲೆ, ಆರೋಪಿ ಆತ್ಮಹತ್ಯೆ

    adminBy adminSeptember 12, 2026Updated:September 12, 2026No Comments1 Min Read

    ಕ್ಯಾಲಿಫೋರ್ನಿಯಾ: ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾಕ್ರಮೆಂಟೊ ನಗರದಲ್ಲಿ ಭೀಕರ ಘಟನೆಯೊಂದು ನಡೆದಿದೆ.38 ವರ್ಷದ ಭಾರತೀಯ ಮೂಲದ ಮಹಿಳೆ ಶಾಲಿನಿ ಠಾಕೂರ್ ಅವರನ್ನು ಅವರ ಕೆಲಸದ ಸ್ಥಳದ ಹೊರಗಡೆ ಹಂತಕನೊಬ್ಬ ಬೆನ್ನಟ್ಟಿ ಗುಂಡಿಕ್ಕಿ ಕೊಲೆ ಮಾಡಿದ್ದಾನೆ.ಕೊಲೆ ಮಾಡಿದ 22 ವರ್ಷದ ಆರೋಪಿ ರೋಹಿತ್ ನಂತರ ಪೋಲಿಸರು ಬೆನ್ನಟ್ಟಿದಾಗ ಹೈವೇಯಲ್ಲಿ ತನ್ನ ಕಾರಿನಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಘಟನೆಯ ಹಿನ್ನೆಲೆ ಮತ್ತು ಕಿರುಕುಳ

    ಶಾಲಿನಿ ಠಾಕೂರ್ ಅವರು ಕಾರ್ಯನಿರ್ವಹಿಸುತ್ತಿದ್ದ ರೆಸ್ಟೋರೆಂಟ್‌ಗೆ ‘ಡೋರ್‌ಡ್ಯಾಶ್’ ಮೂಲಕ ಡೆಲಿವರಿ ಮಾಡಲು ಬರುತ್ತಿದ್ದ ರೋಹಿತ್‌ನ ಪರಿಚಯವಾಗಿತ್ತು. ಸೆಪ್ಟೆಂಬರ್ 2025 ರಿಂದ ಆರೋಪಿ ಶಾಲಿನಿಗೆ ನಿರಂತರವಾಗಿ ಹಿಂಸೆ ಹಾಗೂ ಕಿರುಕುಳ ನೀಡಲು ಪ್ರಾರಂಭಿಸಿದ್ದ. ಆಕೆಯ ಕಾರಿಗೆ ರಹಸ್ಯವಾಗಿ ಆಪಲ್ ಏರ್‌ಟ್ಯಾಗ್ ಅಳವಡಿಸಿ ಚಲನವಲನಗಳನ್ನು ಟ್ರ್ಯಾಕ್ ಮಾಡುವುದು, ಕಾರಿನ ಟೈರ್‌ಗಳ ಗಾಳಿ ತೆಗೆಯುವುದು, ಮತ್ತು ಬಲವಂತವಾಗಿ ಮದುವೆಯಾಗುವಂತೆ ಒತ್ತಾಯಿಸುವುದು ಆತನ ಕೃತ್ಯವಾಗಿತ್ತು. ಒಂದೊಮ್ಮೆ ಶಾಲಿನಿ ಮಲಗಿದ್ದಾಗ ಆಕೆಯ ಫ್ಲ್ಯಾಟ್‌ನ ನಕಲಿ ಕೀ ಬಳಸಿ ಮನೆ ಪ್ರವೇಶಿಸಿದ್ದನೆಂದು ವರದಿಯಾಗಿದೆ.

    ರಕ್ಷಣಾ ಆದೇಶ ಉಲ್ಲಂಘನೆ:

    ಆರೋಪಿಯ ಕಿರುಕುಳ ಸಹಿಸಲಾರದೆ ಶಾಲಿನಿ ನ್ಯಾಯಾಲಯದಿಂದ ರಕ್ಷಣಾ ಆದೇಶವನ್ನು ಪಡೆದುಕೊಂಡಿದ್ದರು. ಮೇ 2026 ರಲ್ಲಿ ಈ ನೋಟಿಸ್ ಆರೋಪಿಗೆ ತಲುಪಿದ್ದರೂ, ಆತ ಅದನ್ನು ಉಲ್ಲಂಘಿಸಿ ಜುಲೈನಲ್ಲಿ ಆಕೆಯ ಮನೆಯ ಮುಂದೆ ತರಕಾರಿಗಳನ್ನು ಇಟ್ಟು ಕಿರುಕುಳ ಮುಂದುವರಿಸಿದ್ದ.

    ದಾಳಿ ಮತ್ತು ಸಾವು:

    ಮಂಗಳವಾರ ಮಧ್ಯಾಹ್ನ ಸ್ಯಾಕ್ರಮೆಂಟೊದ ಪನೇರಾ ಬ್ರೆಡ್ ರೆಸ್ಟೋರೆಂಟ್ ಬಳಿ ಶಾಲಿನಿ ಕಾರಿನಿಂದ ಇಳಿಯುತ್ತಿದ್ದಂತೆ ಕಾಯುತ್ತಿದ್ದ ರೋಹಿತ್ ಆಕೆಯನ್ನು ತಡೆದು ಜಗಳ ತೆಗೆದಿದ್ದಾನೆ.ಶಾಲಿನಿ ಓಡಿಹೋಗಲುತ್ನಿಸಿದಾಗ, ಆಕೆಯನ್ನು ಬೆನ್ನಟ್ಟಿ ಹತ್ತಿರದಿಂದ ಹಲವು ಬಾರಿ ಗುಂಡು ಹಾರಿಸಿದ್ದಾನೆ.ಸ್ಥಳದಲ್ಲೇ ಶಾಲಿನಿ ಕೊನೆಯುಸಿರೆಳೆದಿದ್ದಾರೆ.

    ಆರೋಪಿಯ ಅಂತ್ಯ:

    ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೀಡರ್ ವ್ಯವಸ್ಥೆಯ ಮೂಲಕ ಪೋಲಿಸರು ಆರೋಪಿಯ ಕಾರನ್ನು ಹೈವೇ 50 ರಲ್ಲಿ ಪತ್ತೆಹಚ್ಚಿದರು.ಪೋಲಿಸರು ಆತನನ್ನು ಸುತ್ತುವರಿದಾಗ, ಆರೋಪಿ ರೋಹಿತ್ ತನಗೆ ತಾನೇ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ.ತನಿಖಾಧಿಕಾರಿಗಳ ಪ್ರಕಾರ ಆರೋಪಿ ಅನಧಿಕೃತವಾಗಿ ಅಮೆರಿಕದಲ್ಲಿ ನೆಲೆಸಿದ್ದ ವ್ಯಕ್ತಿಯಾಗಿದ್ದ.




    #crime International
    Previous Articleಮಹಿಳೆ-ಯುವಕನ ಪ್ರೀತಿಗೆ ಕುಟುಂಬದ ವಿರೋಧ: ಪ್ರೇಮಿಗಳಿಬ್ಬರು ಆತ್ಮಹತ್ಯೆ, ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ
    Next Article ಕೊಕ್ಕಡ ಬಳಿ ಕಾರು-ಕೆಎಸ್‌ಆರ್‌ಟಿಸಿ ಬಸ್ ನಡುವೆ ಭೀಕರ ಅಪಘಾತ: ಹಲವರಿಗೆ ಗಾಯ

    Related Posts

    ED ದಾಳಿ ಬೆನ್ನಲ್ಲೇ ಸತೀಶ್ ಜಾರಕಿಹೊಳಿ ಪರ ವಿಜಯ್ ಮಲ್ಯ ಹೇಳಿದ್ದೇನು?

    September 12, 2026

    “ನಾನು ಮೀಡಿಯಾದವನು, ವಿಡಿಯೋ ಮಾಡಿ ವೈರಲ್ ಮಾಡುತ್ತೇನೆ” ಎಂದು ಸಂಚಾರ ಪೊಲೀಸರಿಗೆ ಬೆದರಿಕೆ: ಮಂಗಳೂರಿನಲ್ಲಿ ಪ್ರಕರಣ ದಾಖಲು

    September 12, 2026

    ಪ್ರಿಯಕರನ ಜೊತೆ ಸೇರಿ ಪತಿಯ ಕೊಲೆ: ಹೃದಯಾಘಾತ ಎಂದು ಬಿಂಬಿಸಲು ಯತ್ನ, ಮೂವರ ಬಂಧನ

    September 12, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಕೊಕ್ಕಡ ಬಳಿ ಕಾರು-ಕೆಎಸ್‌ಆರ್‌ಟಿಸಿ ಬಸ್ ನಡುವೆ ಭೀಕರ ಅಪಘಾತ: ಹಲವರಿಗೆ ಗಾಯ

    September 12, 2026

    ಭಾರತೀಯ ಮೂಲದ ಮಹಿಳೆಗೆ ನಿರಂತರ ಕಿರುಕುಳ: ಕೆಲಸದ ಸ್ಥಳದ ಹೊರಗೆ ಬೆನ್ನಟ್ಟಿ ಗುಂಡಿಕ್ಕಿ ಕೊಲೆ, ಆರೋಪಿ ಆತ್ಮಹತ್ಯೆ

    September 12, 2026

    ಮಹಿಳೆ-ಯುವಕನ ಪ್ರೀತಿಗೆ ಕುಟುಂಬದ ವಿರೋಧ: ಪ್ರೇಮಿಗಳಿಬ್ಬರು ಆತ್ಮಹತ್ಯೆ, ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ

    September 12, 2026

    ED ದಾಳಿ ಬೆನ್ನಲ್ಲೇ ಸತೀಶ್ ಜಾರಕಿಹೊಳಿ ಪರ ವಿಜಯ್ ಮಲ್ಯ ಹೇಳಿದ್ದೇನು?

    September 12, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಮಹಿಳೆ-ಯುವಕನ ಪ್ರೀತಿಗೆ ಕುಟುಂಬದ ವಿರೋಧ: ಪ್ರೇಮಿಗಳಿಬ್ಬರು ಆತ್ಮಹತ್ಯೆ, ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ

    September 12, 2026

    ED ದಾಳಿ ಬೆನ್ನಲ್ಲೇ ಸತೀಶ್ ಜಾರಕಿಹೊಳಿ ಪರ ವಿಜಯ್ ಮಲ್ಯ ಹೇಳಿದ್ದೇನು?

    September 12, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.