Close Menu
    What's Hot

    ಲಾಟರಿ ಅದೃಷ್ಟ ಕೈಕೊಟ್ಟಿದ್ದಕ್ಕೆ ಆಕ್ರೋಶ; ಮಹಿಳಾ ಮಾರಾಟಗಾರ್ತಿಗೆ ಚಾಕು ಇರಿತ

    September 28, 2026

    ಸೌಜನ್ಯಾ ಪ್ರಕರಣದ SIT ತನಿಖೆಗೆ ಕಲ್ಲಡ್ಕ ಪ್ರಭಾಕರ ಭಟ್‌ ಪ್ರಶ್ನೆ; ಅಧಿಕಾರಿಗಳ ಆಯ್ಕೆ ಬಗ್ಗೆ ಅನುಮಾನ

    September 28, 2026

    ಕೆಪಿಎಸ್‌ಸಿ ನೇಮಕಾತಿ ಅಕ್ರಮ; ಇಡಿ ದಾಳಿಯಲ್ಲಿ ಸಿಕ್ಕ ಡೈರಿಯಲ್ಲಿ ಲಕ್ಷಾಂತರ ಹಣದ ಲೆಕ್ಕ ಪತ್ತೆ

    September 28, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಉಡುಪಿ: ಬಡ್ಡಿ ಸಹಿತ ಖರೀದಿ ಮೊತ್ತದೊಂದಿಗೆ ಪರಿಹಾರ ನೀಡಲು ದ್ವಿಚಕ್ರ ವಾಹನ ಕಂಪನಿಗೆ ಗ್ರಾಹಕ ಆಯೋಗದ ಆದೇಶ
    ಅಪರಾಧ

    ಉಡುಪಿ: ಬಡ್ಡಿ ಸಹಿತ ಖರೀದಿ ಮೊತ್ತದೊಂದಿಗೆ ಪರಿಹಾರ ನೀಡಲು ದ್ವಿಚಕ್ರ ವಾಹನ ಕಂಪನಿಗೆ ಗ್ರಾಹಕ ಆಯೋಗದ ಆದೇಶ

    adminBy adminSeptember 24, 2026No Comments1 Min Read

    ಉಡುಪಿ: ಉತ್ಪಾದನಾ ದೋಷವಿರುವ ಎಲೆಕ್ಟ್ರಿಕ್ ಸ್ಕೂಟರ್ ಪೂರೈಸಿ, ಸೇವೆಯಲ್ಲಿ ಲೋಪ ಎಸಗಿದ್ದಕ್ಕಾಗಿ ಗ್ರಾಹಕನಿಗೆ ಪರಿಹಾರ ನೀಡುವಂತೆ ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಚೇತಕ್ ಬಜಾಜ್ ಆಟೋ ಕಂಪನಿಗೆ ನಿರ್ದೇಶನ ನೀಡಿದೆ.

    ಕಾಪು ತಾಲೂಕಿನ ಕಟಪಾಡಿ ಸಮೀಪದ ಮಣಿಪುರದ ರಿತೇಶ್ ಎಸ್. ಸುವರ್ಣ ಎಂಬವರು ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ್ದರು. ವಾಹನ ಖರೀದಿಸಿದ ಕೆಲವೇ ದಿನಗಳಲ್ಲಿ ಅದರ ಬ್ಯಾಟರಿಯಲ್ಲಿ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಕಂಪನಿಯ ಅಧಿಕೃತ ಸೇವಾ ಕೇಂದ್ರದಲ್ಲಿ ಸ್ಕೂಟರ್ ಸರ್ವೀಸ್ ಮಾಡಿಸಲಾಗಿದ್ದು, ಮೊದಲ ಮೂರು ಸರ್ವೀಸ್‌ಗಳಲ್ಲೇ ಎರಡು ಬಾರಿ ಬ್ಯಾಟರಿಯನ್ನು ಬದಲಾಯಿಸಲಾಗಿತ್ತು.

    ಆದಾಗ್ಯೂ, ಮೂರನೇ ಬಾರಿಯೂ ಬ್ಯಾಟರಿಯಲ್ಲಿ ಮತ್ತೆ ದೋಷ ಕಾಣಿಸಿಕೊಂಡಿದ್ದು, ಗ್ರಾಹಕರಿಗೆ ತೀವ್ರ ತೊಂದರೆ ಮತ್ತು ನಷ್ಟ ಉಂಟಾಗಿತ್ತು. ಈ ಕುರಿತು ಕಂಪನಿಗೆ ಕಾನೂನು ನೋಟಿಸ್ ನೀಡಿದ್ದರೂ ಯಾವುದೇ ಸೂಕ್ತ ಸ್ಪಂದನೆ ಸಿಕ್ಕಿರಲಿಲ್ಲ. ಇದರಿಂದಾಗಿ ರಿತೇಶ್ ಎಸ್. ಸುವರ್ಣ ಅವರು ನ್ಯಾಯಕ್ಕಾಗಿ ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವನ್ನು ಸಂಪರ್ಕಿಸಿದರು.

    ದೂರು, ಕಂಪನಿ ಸಲ್ಲಿಸಿದ ಆಕ್ಷೇಪಣೆಗಳು ಹಾಗೂ ವಾಹನದ ಸರ್ವೀಸ್ ದಾಖಲೆಗಳನ್ನು ಪರಿಶೀಲಿಸಿದ ಆಯೋಗವು, ಎರಡು ಬಾರಿ ಬ್ಯಾಟರಿ ಬದಲಾಯಿಸಿದರೂ ಮರುಕಳಿಸುತ್ತಿದ್ದ ದೋಷವನ್ನು ಸರಿಪಡಿಸಲು ಕಂಪನಿ ವಿಫಲವಾಗಿದೆ ಎಂದು ಗಮನಿಸಿತು. ಪದೇ ಪದೇ ಬ್ಯಾಟರಿ ಕೈಕೊಟ್ಟಿರುವುದು ಎಲೆಕ್ಟ್ರಿಕ್ ವಾಹನದ ತಯಾರಿಕಾ ದೋಷ ಹಾಗೂ ಸೇವೆಯ ಲೋಪವನ್ನು ಎತ್ತಿಹಿಡಿಯುತ್ತದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.

    ಆಯೋಗದ ಅಧ್ಯಕ್ಷ ಸುನಿಲ್ ಟಿ. ಮಸರೆಡ್ಡಿ ಹಾಗೂ ಸದಸ್ಯೆ ಸುಜಾತಾ ಬಿ. ಕೊರಳ್ಳಿ ಅವರನ್ನೊಳಗೊಂಡ ಪೀಠವು, ಆದೇಶ ತಲುಪಿದ 30 ದಿನಗಳೊಳಗೆ ವಾಹನದ ಖರೀದಿ ಬೆಲೆ 1,21,750 ರೂ. ಅನ್ನು ಶೇ. 9 ರಷ್ಟು ಬಡ್ಡಿಯೊಂದಿಗೆ ಹಿಂತಿರುಗಿಸಲು ಮತ್ತು ಇತರೆ ವೆಚ್ಚಗಳಿಗಾಗಿ 15,000 ರೂ. ಪಾವತಿಸುವಂತೆ ಕಂಪನಿಗೆ ಆದೇಶಿಸಿದೆ.

    ಈ ಆದೇಶವನ್ನು ಆಗಸ್ಟ್ 5 ರಂದು ಹೊರಡಿಸಲಾಗಿದೆ.

    ಗ್ರಾಹಕರ ಪರವಾಗಿ ವಕೀಲರಾದ ವಿವೇಕಾನಂದ ಮಲ್ಯ ಮತ್ತು ಪ್ರವೀಣ್ ಪೂಜಾರಿ ವಾದ ಮಂಡಿಸಿದ್ದರು.




    #crime #dakshinakannada
    Previous Articleಪಡುಬೆಳ್ಳೆ-ಉಡುಪಿ ನಗರದಲ್ಲಿ ಡ್ರಗ್ಸ್ ದಂಧೆ ಬಯಲು; ಆರೋಪಿಗಳ ಬಂಧನ, ಗಾಂಜಾ ಜಪ್ತಿ
    Next Article ಉಪ್ಪಿನಂಗಡಿ ಗ್ರಾಪಂನಲ್ಲಿ ಲೋಕಾಯುಕ್ತ ಪರಿಶೀಲನೆ ಬಳಿಕ ಕ್ರಮ; ಆರ್ಯಾಪು ಪಿಡಿಒ ಅಮಾನತು

    Related Posts

    ಲಾಟರಿ ಅದೃಷ್ಟ ಕೈಕೊಟ್ಟಿದ್ದಕ್ಕೆ ಆಕ್ರೋಶ; ಮಹಿಳಾ ಮಾರಾಟಗಾರ್ತಿಗೆ ಚಾಕು ಇರಿತ

    September 28, 2026

    ಸೌಜನ್ಯಾ ಪ್ರಕರಣದ SIT ತನಿಖೆಗೆ ಕಲ್ಲಡ್ಕ ಪ್ರಭಾಕರ ಭಟ್‌ ಪ್ರಶ್ನೆ; ಅಧಿಕಾರಿಗಳ ಆಯ್ಕೆ ಬಗ್ಗೆ ಅನುಮಾನ

    September 28, 2026

    ಕೆಪಿಎಸ್‌ಸಿ ನೇಮಕಾತಿ ಅಕ್ರಮ; ಇಡಿ ದಾಳಿಯಲ್ಲಿ ಸಿಕ್ಕ ಡೈರಿಯಲ್ಲಿ ಲಕ್ಷಾಂತರ ಹಣದ ಲೆಕ್ಕ ಪತ್ತೆ

    September 28, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಲಾಟರಿ ಅದೃಷ್ಟ ಕೈಕೊಟ್ಟಿದ್ದಕ್ಕೆ ಆಕ್ರೋಶ; ಮಹಿಳಾ ಮಾರಾಟಗಾರ್ತಿಗೆ ಚಾಕು ಇರಿತ

    September 28, 2026

    ಸೌಜನ್ಯಾ ಪ್ರಕರಣದ SIT ತನಿಖೆಗೆ ಕಲ್ಲಡ್ಕ ಪ್ರಭಾಕರ ಭಟ್‌ ಪ್ರಶ್ನೆ; ಅಧಿಕಾರಿಗಳ ಆಯ್ಕೆ ಬಗ್ಗೆ ಅನುಮಾನ

    September 28, 2026

    ಕೆಪಿಎಸ್‌ಸಿ ನೇಮಕಾತಿ ಅಕ್ರಮ; ಇಡಿ ದಾಳಿಯಲ್ಲಿ ಸಿಕ್ಕ ಡೈರಿಯಲ್ಲಿ ಲಕ್ಷಾಂತರ ಹಣದ ಲೆಕ್ಕ ಪತ್ತೆ

    September 28, 2026

    ರಹಿಮಾನ್ ಹತ್ಯೆ ಪ್ರಕರಣದಲ್ಲಿ ಹೊಸ ತಿರುವು; ಎಸ್‌ಪಿಯನ್ನೇ ಮಂಪರು ಪರೀಕ್ಷೆಗೆ ಒಳಪಡಿಸಿ ಎಂದ ಕಲ್ಲಡ್ಕ ಪ್ರಭಾಕರ ಭಟ್

    September 28, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಕೆಪಿಎಸ್‌ಸಿ ನೇಮಕಾತಿ ಅಕ್ರಮ; ಇಡಿ ದಾಳಿಯಲ್ಲಿ ಸಿಕ್ಕ ಡೈರಿಯಲ್ಲಿ ಲಕ್ಷಾಂತರ ಹಣದ ಲೆಕ್ಕ ಪತ್ತೆ

    September 28, 2026

    15 ದಿನಗಳಲ್ಲಿ 51 ಶಾಲೆಗಳಿಗೆ ಭೇಟಿ 15ರ ಬಾಲಕಿಯ ಸಾಧನೆ ವಿಶ್ವ ದಾಖಲೆ ; ಪರೀಕ್ಷಾ ಒತ್ತಡದ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದ ವಿಷ್ಣುಪ್ರಿಯಾ

    September 28, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.