Close Menu
    What's Hot

    “ಪೊಲೀಸ್ ಪವರ್ ತೋರಿಸಬೇಡಿ ಸಮವಸ್ತ್ರ ಬಿಚ್ಚಿ ನಿಲ್ಲಿಸ್ತೀನಿ ” ಉಲ್ಲಾಳ ಇನ್‌ಸ್ಪೆಕ್ಟರ್‌ ಕ್ರಮಕ್ಕೆ ಹೈಕೋರ್ಟ್‌ ತರಾಟೆ

    September 28, 2026

    ಮಾಣಿ ಬಳಿ ಬೆಳಂಬೆಳಗ್ಗೆ ಭೀಕರ ಅಪಘಾತ; ಓರ್ವ ಮಹಿಳೆ ಮೃತ್ಯು, ಮೂವರು ಗಂಭೀರ

    September 28, 2026

    ಉಡುಪಿ: ಬ್ಯಾಂಕ್ ಅಧಿಕಾರಿ ಹೆಸರಿನಲ್ಲಿ ಮೋಸ; APK ಫೈಲ್ ಕಳುಹಿಸಿ ₹17.50 ಲಕ್ಷ ಎಗರಿಸಿದ ಖದೀಮರು

    September 28, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರದ ಸಂಚು; ಮತ್ತೊಬ್ಬನ ಕೊಲೆಗೆ ₹24 ಲಕ್ಷ ಸುಪಾರಿ ಆರೋಪ
    ಅಪರಾಧ

    ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರದ ಸಂಚು; ಮತ್ತೊಬ್ಬನ ಕೊಲೆಗೆ ₹24 ಲಕ್ಷ ಸುಪಾರಿ ಆರೋಪ

    adminBy adminSeptember 27, 2026No Comments2 Mins Read

     ಮಂಗಳೂರು: ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತಿಕಾರ ತೀರಿಸಿಕೊಳ್ಳಲು ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲು ರೂಪಿಸಿದ್ದ ಭಾರಿ ಸಂಚನ್ನು ಮಂಗಳೂರಿನ ಬಜಪೆ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಉಡುಪಿಯ ಸುದೀಪ್ ಸೇರಿದಂತೆ ಇತರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

    ಎಫ್‌ಐಆರ್‌ನಲ್ಲಿ ನೀಡಿರುವ ವಿವರಗಳ ಪ್ರಕಾರ, ಉಡುಪಿಯ ಸುದೀಪ್ ಹಾಗೂ ಮಹೇಶ್ ಎಂಬವರು ಕೊಲೆ ಸಂಚಿನ ರೂವಾರಿಗಳಾಗಿದ್ದಾರೆ. ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತಿಕಾರವಾಗಿ ಮುಸ್ಲಿಂ ವ್ಯಕ್ತಿಯನ್ನು ಕೊಲೆ ಮಾಡಲು ಯುವಕರಿಗೆ ಪ್ರಚೋದನೆ ನೀಡಲಾಗಿತ್ತು. ಈ ಕೃತ್ಯ ಎಸಗಲು ಬರೋಬ್ಬರಿ 24 ಲಕ್ಷ ರೂಪಾಯಿ ಸುಪಾರಿ ಹಣ, ಜೈಲಿಗೆ ಹೋದರೆ ಮನೆಗೆ ತಿಂಗಳಿಗೆ 5,೦೦೦ ರೂ. ಮೌಲ್ಯದ ದಿನಸಿ ಹಾಗೂ 15,೦೦೦ ರೂ. ಮನೆ ಖರ್ಚು ನೀಡುವುದಾಗಿ ಆಮಿಷ ಒಡ್ಡಲಾಗಿತ್ತು ಎಂದು ಎಫ್‌ಐಅರ್‌ನಲ್ಲಿ ವಿವರಿಸಲಾಗಿದೆ.

    ದೂರುದಾರ ಅಭಿಷೇಕ್ ಹಾಗೂ ಆತನ ಸ್ನೇಹಿತ ಕೀರ್ತನ್ ಎಂಬವರು ಸ್ಕಾರ್ಪಿಯೋ ಕಾರಿನಲ್ಲಿ ತೆರಳಿ ಉಡುಪಿಯ ತ್ರಿವೇಣಿ ಹೋಟೆಲ್ ಹಾಗೂ ಕಾರ್ಕಳದ ಅತೂರು ಚರ್ಚ್ ಬಳಿ ಸಂಚಿನ ಸಭೆ ನಡೆಸಿದ್ದರು. ಸುದೀಪ್ ವಾಟ್ಸಾಪ್ ಮೂಲಕ ಕಳುಹಿಸಿದ ಮಂಗಳೂರಿನ ಬಜಪೆ ಕಿನ್ನಿಪದವಿನ ವ್ಯಕ್ತಿಯ ಫೋಟೋ ಆಧಾರದ ಮೇಲೆ, ಆತನ ಚಲನವಲನದ ಬಗ್ಗೆ ಮಾಹಿತಿ ಕಲೆಹಾಕಲಾಗಿತ್ತು. ಕೊಲೆ ಕೃತ್ಯಕ್ಕಾಗಿ ಸುಳ್ಯದ ಚಿಂತನ್ ಎಂಬಾತನನ್ನೂ ಸಂಪರ್ಕಿಸಿ, ಮನೆಯಲ್ಲಿದ್ದ ಎರಡು ತಲವಾರ್‌ಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲಾಗಿತ್ತು.

    ಸಂಚು ಮುಕ್ತಾಯ ಹಂತಕ್ಕೆ ತಲುಪಿದ್ದಾಗ, ದೂರುದಾರ ಅಭಿಷೇಕ್ ಅವರ ಹೆಂಡತಿಗೆ ಮಗು ಜನಿಸಿದ ಕಾರಣ ಮನ ಪರಿವರ್ತನೆಯಾಗಿದೆ. ಅಪರಾಧ ಎಸಗಿದರೆ ಜೈಲು ಪಾಲಾಗಬೇಕಾಗುತ್ತದೆ ಎಂಬ ಭಯದಿಂದ ಕೃತ್ಯ ನಡೆಸುವುದನ್ನು ಕೈಬಿಟ್ಟಿದ್ದರು. ಆದರೆ ಆರೋಪಿಗಳಾದ ಸುದೀಪ್ ಹಾಗೂ ಮಹೇಶ್ ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದು, ನಿರಂತರವಾಗಿ ಕೃತ್ಯ ಎಸಗುವಂತೆ ವಾಟ್ಸಾಪ್ ಮೂಲಕ ಒತ್ತಡ ಹೇರುತ್ತಿದ್ದರು. ಇದರಿಂದ ಹೆದರಿದ ಅಭಿಷೇಕ್ ಬಜಪೆ ಪೊಲೀಸ್ ಠಾಣೆಗೆ ತೆರಳಿ, ಸುದೀಪ್ ಹಾಗೂ ಇತರರ ವಿರುದ್ಧ ದೂರು ನೀಡಿದ್ದಾರೆ.

    ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಬಜಪೆ ಪೊಲೀಸರು, ವಾಟ್ಸಾಪ್ ಚಾಟ್‌ಗಳು, ಸ್ಕ್ರೀನ್‌ಶಾಟ್‌ಗಳನ್ನು ಸಾಕ್ಷ್ಯವಾಗಿ ಪಡೆದುಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

    UAPA ಅಡಿಯಲ್ಲಿ ಪ್ರಕರಣ ದಾಖಲಿಸಿ ಜೈಲಿಗಟ್ಟಿ

    ಈ ಪ್ರಕರಣದಲ್ಲಿ ಸಂಘಟಿತವಾಗಿ ಅಪರಾಧ ನಡೆಸಲು ಸಂಚು ರೂಪಿಸಿರುವುದು ತನಿಖೆಯಲ್ಲಿ ದೃಢಪಟ್ಟರೆ, ಅನ್ವಯವಾಗುವ ಕಠಿಣ ಕಾನೂನುಗಳ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

    ಮಂಗಳೂರಿನಲ್ಲಿ ಪ್ರತೀಕಾರದ ಹೆಸರಿನಲ್ಲಿ ಮತ್ತೊಂದು ಅಪರಾಧಕ್ಕೆ ಅವಕಾಶ ನೀಡದಂತೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರ ಪಾತ್ರವನ್ನು ತನಿಖೆ ನಡೆಸಿ, ಸಾಕ್ಷ್ಯಾಧಾರಗಳ ಆಧಾರದ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ.

    ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರ ನೇತೃತ್ವದಲ್ಲಿ ಪೊಲೀಸರು ಕೈಗೊಳ್ಳುತ್ತಿರುವ ಕ್ರಮಗಳು ಇದೀಗ ಗಮನ ಸೆಳೆದಿವೆ.

    ಪ್ರತೀಕಾರದ ಸರಣಿ ಮುಂದುವರಿಯದಂತೆ ಪೊಲೀಸರ ಕಟ್ಟುನಿಟ್ಟಿನ ಕ್ರಮವೇ ನಿರ್ಣಾಯಕ. 




    #crime #dakshinakannada
    Previous Articleಕಡಬದಲ್ಲಿ ಥಾರ್ ಡಿಕ್ಕಿಗೆ ಬೈಕ್ ಸವಾರ ಬಲಿ; ಅಪಘಾತದ ಬಳಿಕ ಚಾಲಕ ಪರಾರಿ
    Next Article ಮಂಗಳೂರು: ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡಿದ್ದ MDMA ಜಾಲ ಪತ್ತೆ; ₹24 ಲಕ್ಷ ಮೌಲ್ಯದ MDMA ಸಹಿತ ಮೂವರ ಬಂಧನ

    Related Posts

    “ಪೊಲೀಸ್ ಪವರ್ ತೋರಿಸಬೇಡಿ ಸಮವಸ್ತ್ರ ಬಿಚ್ಚಿ ನಿಲ್ಲಿಸ್ತೀನಿ ” ಉಲ್ಲಾಳ ಇನ್‌ಸ್ಪೆಕ್ಟರ್‌ ಕ್ರಮಕ್ಕೆ ಹೈಕೋರ್ಟ್‌ ತರಾಟೆ

    September 28, 2026

    ಮಾಣಿ ಬಳಿ ಬೆಳಂಬೆಳಗ್ಗೆ ಭೀಕರ ಅಪಘಾತ; ಓರ್ವ ಮಹಿಳೆ ಮೃತ್ಯು, ಮೂವರು ಗಂಭೀರ

    September 28, 2026

    ಉಡುಪಿ: ಬ್ಯಾಂಕ್ ಅಧಿಕಾರಿ ಹೆಸರಿನಲ್ಲಿ ಮೋಸ; APK ಫೈಲ್ ಕಳುಹಿಸಿ ₹17.50 ಲಕ್ಷ ಎಗರಿಸಿದ ಖದೀಮರು

    September 28, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    “ಪೊಲೀಸ್ ಪವರ್ ತೋರಿಸಬೇಡಿ ಸಮವಸ್ತ್ರ ಬಿಚ್ಚಿ ನಿಲ್ಲಿಸ್ತೀನಿ ” ಉಲ್ಲಾಳ ಇನ್‌ಸ್ಪೆಕ್ಟರ್‌ ಕ್ರಮಕ್ಕೆ ಹೈಕೋರ್ಟ್‌ ತರಾಟೆ

    September 28, 2026

    ಮಾಣಿ ಬಳಿ ಬೆಳಂಬೆಳಗ್ಗೆ ಭೀಕರ ಅಪಘಾತ; ಓರ್ವ ಮಹಿಳೆ ಮೃತ್ಯು, ಮೂವರು ಗಂಭೀರ

    September 28, 2026

    ಉಡುಪಿ: ಬ್ಯಾಂಕ್ ಅಧಿಕಾರಿ ಹೆಸರಿನಲ್ಲಿ ಮೋಸ; APK ಫೈಲ್ ಕಳುಹಿಸಿ ₹17.50 ಲಕ್ಷ ಎಗರಿಸಿದ ಖದೀಮರು

    September 28, 2026

    ಬ್ಯಾಂಕ್ ಮುಷ್ಕರ ಮುಂದೂಡಿದ UFBU; ಶಾಖೆಗಳು ಎಂದಿನಂತೆ ಕಾರ್ಯನಿರ್ವಹಣೆ

    September 28, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    “ಪೊಲೀಸ್ ಪವರ್ ತೋರಿಸಬೇಡಿ ಸಮವಸ್ತ್ರ ಬಿಚ್ಚಿ ನಿಲ್ಲಿಸ್ತೀನಿ ” ಉಲ್ಲಾಳ ಇನ್‌ಸ್ಪೆಕ್ಟರ್‌ ಕ್ರಮಕ್ಕೆ ಹೈಕೋರ್ಟ್‌ ತರಾಟೆ

    September 28, 2026

    ಟೆಲಿಗ್ರಾಂ ಗ್ರೂಪ್‌ನಲ್ಲಿ ಭಯೋತ್ಪಾದನಾ ಚರ್ಚೆ ಗುಪ್ತಚರ ಇಲಾಖೆಯ ನಿಗಾ; ಇಬ್ಬರು ಆರೋಪಿಗಳ ಬಂಧನ

    September 26, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.