Close Menu
    What's Hot

    ಲಾಟರಿ ಅದೃಷ್ಟ ಕೈಕೊಟ್ಟಿದ್ದಕ್ಕೆ ಆಕ್ರೋಶ; ಮಹಿಳಾ ಮಾರಾಟಗಾರ್ತಿಗೆ ಚಾಕು ಇರಿತ

    September 28, 2026

    ಸೌಜನ್ಯಾ ಪ್ರಕರಣದ SIT ತನಿಖೆಗೆ ಕಲ್ಲಡ್ಕ ಪ್ರಭಾಕರ ಭಟ್‌ ಪ್ರಶ್ನೆ; ಅಧಿಕಾರಿಗಳ ಆಯ್ಕೆ ಬಗ್ಗೆ ಅನುಮಾನ

    September 28, 2026

    ಕೆಪಿಎಸ್‌ಸಿ ನೇಮಕಾತಿ ಅಕ್ರಮ; ಇಡಿ ದಾಳಿಯಲ್ಲಿ ಸಿಕ್ಕ ಡೈರಿಯಲ್ಲಿ ಲಕ್ಷಾಂತರ ಹಣದ ಲೆಕ್ಕ ಪತ್ತೆ

    September 28, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಸೌಜನ್ಯಾ ಪ್ರಕರಣದ SIT ತನಿಖೆಗೆ ಕಲ್ಲಡ್ಕ ಪ್ರಭಾಕರ ಭಟ್‌ ಪ್ರಶ್ನೆ; ಅಧಿಕಾರಿಗಳ ಆಯ್ಕೆ ಬಗ್ಗೆ ಅನುಮಾನ
    ಅಪರಾಧ

    ಸೌಜನ್ಯಾ ಪ್ರಕರಣದ SIT ತನಿಖೆಗೆ ಕಲ್ಲಡ್ಕ ಪ್ರಭಾಕರ ಭಟ್‌ ಪ್ರಶ್ನೆ; ಅಧಿಕಾರಿಗಳ ಆಯ್ಕೆ ಬಗ್ಗೆ ಅನುಮಾನ

    adminBy adminSeptember 28, 2026No Comments1 Min Read

    ಮಂಗಳೂರು : ದೇಶಾದ್ಯಂತ ತೀವ್ರ ಕುತೂಹಲ ಮೂಡಿಸಿರುವ ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣದ ಮರುತನಿಖೆಗೆ ರಾಜ್ಯ ಸರ್ಕಾರ ‘ವಿಶೇಷ ತನಿಖಾ ತಂಡ’ ರಚಿಸಿರುವುದಕ್ಕೆ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅಸಮಾಧಾನ ಮತ್ತು ಸಂಶಯ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಎಸ್ಐಟಿ ರಚನೆಯಾಗಿರುವುದು ಒಳ್ಳೆಯದೇ. ಆದರೆ ಆ ತಂಡದಲ್ಲಿರುವ ಎಲ್ಲಾ ಅಧಿಕಾರಿಗಳು ಪರಿಪೂರ್ಣರಾಗಿದ್ದಾರೆಯೇ ಎಂಬ ಬಗ್ಗೆ ಸಣ್ಣ ಸಂಶಯ ಉಂಟಾಗಿದೆ” ಎಂದು ಹೇಳಿದ್ದಾರೆ.

    ತಂಡದ ಬಗ್ಗೆ ವಿವರಣೆ ನೀಡಿದ ಭಟ್, “ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಒಳ್ಳೆಯ ಅಧಿಕಾರಿ. ಅವರು ಯಾವುದೇ ಪ್ರಭಾವಕ್ಕೆ ಒಳಗಾಗದೆ, ಆ ಕಡೆ ಈ ಕಡೆ ಆಗದೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ. ಆದರೆ ತಂಡದಲ್ಲಿರುವ ಉಳಿದ ಅಧಿಕಾರಿಗಳ ಬಗ್ಗೆ ನಮಗೆ ಸಂಶಯವಿದೆ. ಮಂಗಳೂರು ಕಮಿಷನರ್ ರೀತಿಯ ಬಲವಾದ ಹಾಗೂ ದಕ್ಷ ಅಧಿಕಾರಿಗಳನ್ನು ಈ ತಂಡಕ್ಕೆ ಸೇರಿಸಿಕೊಳ್ಳಬೇಕಿತ್ತು. ಆಗ ಜನರಿಗೆ ಎಸ್ಐಟಿ ಮೇಲೆ ಸಂಪೂರ್ಣ ವಿಶ್ವಾಸ ಬರುತ್ತಿತ್ತು. ತಂಡದಲ್ಲಿರುವ ಉಳಿದವರು ಎಂಥವರು ಎಂಬುದು ಜನರಿಗೂ ಗೊತ್ತು, ನಿಮಗೂ ಗೊತ್ತಿದೆ” ಎಂದು ಅಧಿಕಾರಿಗಳ ನೇಮಕದ ಬಗ್ಗೆ ಅಸಮಾಧಾನ ಹೊರಹಾಕಿದರು.

    “ಕಳೆದ 14 ವರ್ಷಗಳಿಂದ ಸೌಜನ್ಯಳ ಆತ್ಮ ನ್ಯಾಯಕ್ಕಾಗಿ ಅಲೆಯುತ್ತಿದೆ. ಬೇರೆ ಯಾವ ಪ್ರಕರಣವೂ ಈ ಮಟ್ಟಿಗೆ ಎಳೆದಾಡಲ್ಪಟ್ಟಿಲ್ಲ. ಈ ಬಾರಿಯಾದರೂ ಅಧಿಕಾರಿಗಳು ಯಾವುದೇ ಮುಲಾಜಿಲ್ಲದೆ, ಆ ಕಡೆ-ಈ ಕಡೆ ನೋಡದೆ ಸತ್ಯ ಏನೆಂಬುದನ್ನು ಹುಡುಕಿ ನ್ಯಾಯ ಕೊಡುವ ಕೆಲಸ ಮಾಡಲಿ. ಅಧಿಕಾರಿಗಳು ಪ್ರಾಮಾಣಿಕವಾಗಿ ತನಿಖೆ ನಡೆಸಿದರೆ ನೂರಕ್ಕೆ ನೂರು ಸತ್ಯ ಹೊರಬರಲಿದೆ” ಎಂದು ಭಟ್ ವಿನಂತಿಸಿದರು.
    ಪ್ರಕರಣದ ತನಿಖಾ ಹಾದಿಯ ಬಗ್ಗೆ ಪ್ರಸ್ತಾಪಿಸಿದ ಅವರು, “ಈ ಬಾರಿ ನ್ಯಾಯಾಲಯವೇ ಅತ್ಯಂತ ಸ್ಪಷ್ಟವಾಗಿ ಹೇಳಿದೆ. ಹಿಂದಿನ ತನಿಖೆಯಲ್ಲಿ ನಿರ್ದೋಷಿ ಎಂದು ಸಾಬೀತಾದ ಸಂತೋಷ್ ರಾವ್‌ನನ್ನು ಮತ್ತೆ ಇದರಲ್ಲಿ ಸೇರಿಸಬೇಡಿ ಹಾಗೂ ಈ ಹಿಂದೆ ತನಿಖೆ ನಡೆಸಿ ಎಡವಟ್ಟು ಮಾಡಿದ ಅಧಿಕಾರಿಗಳನ್ನು ಈ ತಂಡದಿಂದ ದೂರವಿಡಿ ಎಂದು ಸೂಚಿಸಿದೆ. ಅಪರಾಧಿಗಳನ್ನು ಹುಡುಕಿ ಹೊರತೆಗೆಯುವ ತಾಕತ್ತು ನಮ್ಮ ಪೊಲೀಸರಿಗಿದೆ. ಆದರೆ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕಿದೆ” ಎಂದು ಒತ್ತಾಯಿಸಿದರು.

    #crime #dakshinakannada
    Previous Articleಕೆಪಿಎಸ್‌ಸಿ ನೇಮಕಾತಿ ಅಕ್ರಮ; ಇಡಿ ದಾಳಿಯಲ್ಲಿ ಸಿಕ್ಕ ಡೈರಿಯಲ್ಲಿ ಲಕ್ಷಾಂತರ ಹಣದ ಲೆಕ್ಕ ಪತ್ತೆ
    Next Article ಲಾಟರಿ ಅದೃಷ್ಟ ಕೈಕೊಟ್ಟಿದ್ದಕ್ಕೆ ಆಕ್ರೋಶ; ಮಹಿಳಾ ಮಾರಾಟಗಾರ್ತಿಗೆ ಚಾಕು ಇರಿತ

    Related Posts

    ಲಾಟರಿ ಅದೃಷ್ಟ ಕೈಕೊಟ್ಟಿದ್ದಕ್ಕೆ ಆಕ್ರೋಶ; ಮಹಿಳಾ ಮಾರಾಟಗಾರ್ತಿಗೆ ಚಾಕು ಇರಿತ

    September 28, 2026

    ಕೆಪಿಎಸ್‌ಸಿ ನೇಮಕಾತಿ ಅಕ್ರಮ; ಇಡಿ ದಾಳಿಯಲ್ಲಿ ಸಿಕ್ಕ ಡೈರಿಯಲ್ಲಿ ಲಕ್ಷಾಂತರ ಹಣದ ಲೆಕ್ಕ ಪತ್ತೆ

    September 28, 2026

    ರಹಿಮಾನ್ ಹತ್ಯೆ ಪ್ರಕರಣದಲ್ಲಿ ಹೊಸ ತಿರುವು; ಎಸ್‌ಪಿಯನ್ನೇ ಮಂಪರು ಪರೀಕ್ಷೆಗೆ ಒಳಪಡಿಸಿ ಎಂದ ಕಲ್ಲಡ್ಕ ಪ್ರಭಾಕರ ಭಟ್

    September 28, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಲಾಟರಿ ಅದೃಷ್ಟ ಕೈಕೊಟ್ಟಿದ್ದಕ್ಕೆ ಆಕ್ರೋಶ; ಮಹಿಳಾ ಮಾರಾಟಗಾರ್ತಿಗೆ ಚಾಕು ಇರಿತ

    September 28, 2026

    ಸೌಜನ್ಯಾ ಪ್ರಕರಣದ SIT ತನಿಖೆಗೆ ಕಲ್ಲಡ್ಕ ಪ್ರಭಾಕರ ಭಟ್‌ ಪ್ರಶ್ನೆ; ಅಧಿಕಾರಿಗಳ ಆಯ್ಕೆ ಬಗ್ಗೆ ಅನುಮಾನ

    September 28, 2026

    ಕೆಪಿಎಸ್‌ಸಿ ನೇಮಕಾತಿ ಅಕ್ರಮ; ಇಡಿ ದಾಳಿಯಲ್ಲಿ ಸಿಕ್ಕ ಡೈರಿಯಲ್ಲಿ ಲಕ್ಷಾಂತರ ಹಣದ ಲೆಕ್ಕ ಪತ್ತೆ

    September 28, 2026

    ರಹಿಮಾನ್ ಹತ್ಯೆ ಪ್ರಕರಣದಲ್ಲಿ ಹೊಸ ತಿರುವು; ಎಸ್‌ಪಿಯನ್ನೇ ಮಂಪರು ಪರೀಕ್ಷೆಗೆ ಒಳಪಡಿಸಿ ಎಂದ ಕಲ್ಲಡ್ಕ ಪ್ರಭಾಕರ ಭಟ್

    September 28, 2026
    Advertisement

    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಕೆಪಿಎಸ್‌ಸಿ ನೇಮಕಾತಿ ಅಕ್ರಮ; ಇಡಿ ದಾಳಿಯಲ್ಲಿ ಸಿಕ್ಕ ಡೈರಿಯಲ್ಲಿ ಲಕ್ಷಾಂತರ ಹಣದ ಲೆಕ್ಕ ಪತ್ತೆ

    September 28, 2026

    15 ದಿನಗಳಲ್ಲಿ 51 ಶಾಲೆಗಳಿಗೆ ಭೇಟಿ 15ರ ಬಾಲಕಿಯ ಸಾಧನೆ ವಿಶ್ವ ದಾಖಲೆ ; ಪರೀಕ್ಷಾ ಒತ್ತಡದ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದ ವಿಷ್ಣುಪ್ರಿಯಾ

    September 28, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.