Close Menu
    What's Hot

    ಕಾಕ್‌ಪಿಟ್‌ನಲ್ಲಿ ಪೈಲಟ್‌ಗೆ ಇರಿತ; ದುಬೈ–ಇಸ್ರೇಲ್ ವಿಮಾನ ದುರಂತ ತಪ್ಪಿಸಿ 180 ಜನರ ಜೀವ ಉಳಿಸಿದ ‘ಹೀರೋ’ ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ಗೆ ಪ್ರಯಾಣಿಕರಲ್ಲಿದ್ದ ದಂತವೈದ್ಯನಿಂದ ತಕ್ಷಣದ ಚಿಕಿತ್ಸೆ

    October 1, 2026

    ಎಂಆರ್‌ಪಿಎಲ್‌ ಸ್ಫೋಟ ಪ್ರಕರಣ; ಸಂಸ್ಥೆ ಹಾಗೂ ಘಟಕದ ಮುಖ್ಯಸ್ಥರ ನಿರ್ಲಕ್ಷ್ಯ ಆರೋಪಿಸಿ ಎಫ್ಐಆರ್

    October 1, 2026

    ಸೌಜನ್ಯಾ ಪ್ರಕರಣ ಮರುತನಿಖೆ: SITಯಿಂದ ಹಿಂದೆ ಸರಿಯಲು ಎಎಸ್‌ಪಿ ವೆಂಕಟೇಶ್ ಪ್ರಸನ್ನ ಮನವಿ

    October 1, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಎಂಆರ್‌ಪಿಎಲ್‌ ಸ್ಫೋಟ ಪ್ರಕರಣ; ಸಂಸ್ಥೆ ಹಾಗೂ ಘಟಕದ ಮುಖ್ಯಸ್ಥರ ನಿರ್ಲಕ್ಷ್ಯ ಆರೋಪಿಸಿ ಎಫ್ಐಆರ್
    ಅಪರಾಧ

    ಎಂಆರ್‌ಪಿಎಲ್‌ ಸ್ಫೋಟ ಪ್ರಕರಣ; ಸಂಸ್ಥೆ ಹಾಗೂ ಘಟಕದ ಮುಖ್ಯಸ್ಥರ ನಿರ್ಲಕ್ಷ್ಯ ಆರೋಪಿಸಿ ಎಫ್ಐಆರ್

    adminBy adminOctober 1, 2026No Comments2 Mins Read

    ಮಂಗಳೂರು: ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಸಂಸ್ಥೆಯ 3ನೇ ಹಂತದ (Phase-3) ‘ಕೋಕರ್ ಹೈಡ್ರೋ ಟ್ರೀಟರ್ ಘಟಕ’ದಲ್ಲಿ (CHTU) ಸಂಭವಿಸಿದ ಭೀಕರ ಸ್ಫೋಟ ಮತ್ತು ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಎಂಆರ್‌ಪಿಎಲ್ ಸಂಸ್ಥೆ ಹಾಗೂ ಘಟಕದ ಮುಖ್ಯಸ್ಥರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಪೊಲೀಸ್ ದೂರು ದಾಖಲಾಗಿದೆ. ಈ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗುತ್ತಿಗೆ ಉದ್ಯೋಗಿ ಮನೀಶ್ ಕರ್ಕೇರ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದು, ಘಟನೆಯಲ್ಲಿ ಒಟ್ಟು 12 ಮಂದಿ ಕಾರ್ಮಿಕರು ಹಾಗೂ ಸಿಬ್ಬಂದಿ ಗಾಯಗೊಂಡಿದ್ದಾರೆ.

    ಎಂಆರ್‌ಪಿಎಲ್‌ನ 3ನೇ ಹಂತದಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಕೆ ಸ್ಟಾರ್ ಫುಡ್ ಅಂಡ್ ಹಾಸ್ಪಿಟಾಲಿಟಿ ಸರ್ವಿಸಸ್’  ಸಂಸ್ಥೆಯ ನೌಕರರೊಬ್ಬರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಸ್ಥೆಯು ಎಂಆರ್‌ಪಿಎಲ್ ಉದ್ಯೋಗಿಗಳಿಗೆ ಊಟ, ಉಪಹಾರ ಮತ್ತು ಕುಡಿಯುವ ನೀರು ಸರಬರಾಜು ಮಾಡುವ ಕೆಲಸ ನಿರ್ವಹಿಸುತ್ತಿತ್ತು.

    ಬುಧವಾರ (ಸೆಪ್ಟೆಂಬರ್ 30, 2026) ಮಧ್ಯಾಹ್ನ ಸುಮಾರು 12:15 ಗಂಟೆಗೆ ಸಿಬ್ಬಂದಿಗಳು ಕರ್ತವ್ಯದಲ್ಲಿದ್ದಾಗ, ಕೋಕರ್ ಹೈಡ್ರೋ ಟ್ರೀಟರ್ ಘಟಕದಲ್ಲಿ ಒಮ್ಮೆಗೆ ಭಾರಿ ಶಬ್ದದೊಂದಿಗೆ ಸ್ಫೋಟ ಸಂಭವಿಸಿದೆ. ಸ್ಫೋಟದ ರಭಸಕ್ಕೆ ಯಂತ್ರೋಪಕರಣಗಳು ಹಾಗೂ ಬಿಡಿಭಾಗಗಳು ಛಿದ್ರಗೊಂಡು, ಬೆಂಕಿಯ ಜ್ವಾಲೆಯೊಂದಿಗೆ ಸುತ್ತಮುತ್ತಲಿನ ಪರಿಸರಕ್ಕೆ ಚಿಮ್ಮಿವೆ.

    ಗಾಯಾಳುಗಳ ವಿವರ

    ಈ ಭೀಕರ ಸ್ಫೋಟದ ಪರಿಣಾಮವಾಗಿ ದೂರುದಾರರು ಸೇರಿದಂತೆ ಒಟ್ಟು 12 ಜನರಿಗೆ ಗಾಯಗಳಾಗಿವೆ:
    ಮನೀಶ್ ಕರ್ಕೇರ (ಗಂಭೀರ ಗಾಯ – ಮೃತಪಟ್ಟಿದ್ದಾರೆ)
    ರಾಜೇಶ್ ಪ್ರಸಾದ್ (ಗಂಭೀರ ಗಾಯ)
    ಇಂದ್ರಜಿತ್ , ರಮಣ್ ಕುಮಾರ್, ಲೋಕೇಶ್ ಕುಳಾಯಿ, ಜಯರಾಮ್, ಜೆರೋಮ್ , ಅವಿನಾಶ್, ಅಕ್ಷಯ್, ಜಗಜೀವನ್ ಸಿಂಗ್, ಶರತ್ ಶೆಟ್ಟಿ, ರಾಜೇಶ್ ಪೂಜಾರಿ.
    ಗಂಭೀರವಾಗಿ ಗಾಯಗೊಂಡಿದ್ದ ಮನೀಶ್ ಕರ್ಕೇರ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮಾರ್ಗಮಧ್ಯೆ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಮತ್ತೋರ್ವ ಗಾಯಾಳು ರಾಜೇಶ್ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    3ನೇ ಹಂತದಲ್ಲಿರುವ ಕೋಕರ್ ಹೈಡ್ರೋ ಟ್ರೀಟರ್ ಘಟಕದ ಯಂತ್ರೋಪಕರಣಗಳು ಹಾಗೂ ಸೌಲಭ್ಯಗಳನ್ನು ಯುನಿಟ್‌ನ ಮುಖ್ಯಸ್ಥರು ಮತ್ತು ಎಂಆರ್‌ಪಿಎಲ್ ಸಂಸ್ಥೆಯ ಆಡಳಿತ ಮಂಡಳಿಯವರು ಸರಿಯಾಗಿ ನಿರ್ವಹಣೆ ಮಾಡದೆ ತೀವ್ರ ನಿರ್ಲಕ್ಷ್ಯ ವಹಿಸಿದ್ದಾರೆ. ಈ ಭಾರಿ ಭದ್ರತಾ ಲೋಪ ಹಾಗೂ ನಿರ್ಲಕ್ಷ್ಯದ ಪರಿಣಾಮವಾಗಿಯೇ ಈ ಭೀಕರ ಸ್ಫೋಟ ಸಂಭವಿಸಿ ಜೀವಹಾನಿಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
    ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ.




    #crime #dakshinakannada
    Previous Articleಸೌಜನ್ಯಾ ಪ್ರಕರಣ ಮರುತನಿಖೆ: SITಯಿಂದ ಹಿಂದೆ ಸರಿಯಲು ಎಎಸ್‌ಪಿ ವೆಂಕಟೇಶ್ ಪ್ರಸನ್ನ ಮನವಿ
    Next Article ಕಾಕ್‌ಪಿಟ್‌ನಲ್ಲಿ ಪೈಲಟ್‌ಗೆ ಇರಿತ; ದುಬೈ–ಇಸ್ರೇಲ್ ವಿಮಾನ ದುರಂತ ತಪ್ಪಿಸಿ 180 ಜನರ ಜೀವ ಉಳಿಸಿದ ‘ಹೀರೋ’ ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ಗೆ ಪ್ರಯಾಣಿಕರಲ್ಲಿದ್ದ ದಂತವೈದ್ಯನಿಂದ ತಕ್ಷಣದ ಚಿಕಿತ್ಸೆ

    Related Posts

    ಸೌಜನ್ಯಾ ಪ್ರಕರಣ ಮರುತನಿಖೆ: SITಯಿಂದ ಹಿಂದೆ ಸರಿಯಲು ಎಎಸ್‌ಪಿ ವೆಂಕಟೇಶ್ ಪ್ರಸನ್ನ ಮನವಿ

    October 1, 2026

    ಸುಳ್ಯದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್

    October 1, 2026

    ಕುಂಪಲ ಬೈಪಾಸ್‌ನಲ್ಲಿ ಭೀಕರ ಅಪಘಾತ; ಎರಡು ಕಾರುಗಳ ನಡುವೆ ಸಿಲುಕಿ 68 ವರ್ಷದ ವ್ಯಕ್ತಿ ಸಾವು

    September 30, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಕಾಕ್‌ಪಿಟ್‌ನಲ್ಲಿ ಪೈಲಟ್‌ಗೆ ಇರಿತ; ದುಬೈ–ಇಸ್ರೇಲ್ ವಿಮಾನ ದುರಂತ ತಪ್ಪಿಸಿ 180 ಜನರ ಜೀವ ಉಳಿಸಿದ ‘ಹೀರೋ’ ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ಗೆ ಪ್ರಯಾಣಿಕರಲ್ಲಿದ್ದ ದಂತವೈದ್ಯನಿಂದ ತಕ್ಷಣದ ಚಿಕಿತ್ಸೆ

    October 1, 2026

    ಎಂಆರ್‌ಪಿಎಲ್‌ ಸ್ಫೋಟ ಪ್ರಕರಣ; ಸಂಸ್ಥೆ ಹಾಗೂ ಘಟಕದ ಮುಖ್ಯಸ್ಥರ ನಿರ್ಲಕ್ಷ್ಯ ಆರೋಪಿಸಿ ಎಫ್ಐಆರ್

    October 1, 2026

    ಸೌಜನ್ಯಾ ಪ್ರಕರಣ ಮರುತನಿಖೆ: SITಯಿಂದ ಹಿಂದೆ ಸರಿಯಲು ಎಎಸ್‌ಪಿ ವೆಂಕಟೇಶ್ ಪ್ರಸನ್ನ ಮನವಿ

    October 1, 2026

    ಸುಳ್ಯದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್

    October 1, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಸೌಜನ್ಯಾ ಪ್ರಕರಣ ಮರುತನಿಖೆ: SITಯಿಂದ ಹಿಂದೆ ಸರಿಯಲು ಎಎಸ್‌ಪಿ ವೆಂಕಟೇಶ್ ಪ್ರಸನ್ನ ಮನವಿ

    October 1, 2026

    25ಕ್ಕೂ ಹೆಚ್ಚು ದೂರುಗಳ ಬೆನ್ನಲ್ಲೇ ನಕಲಿ ಲೇಡಿ PSI ಅರೆಸ್ಟ್; ಚಿನ್ನ, ಕಾರು, ಹಣ ವಂಚನೆ ಆರೋಪ

    September 30, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.