Close Menu
    What's Hot

    ಮಂಗಳೂರಿನಲ್ಲಿ ಕಾಲೇಜು ಕ್ಯಾಂಟೀನ್ ಬಳಿ ವಿದ್ಯಾರ್ಥಿಗೆ ಚೂರಿ ಇರಿತ; 6 ಮಂದಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲು

    October 4, 2026

    ಪುತ್ತೂರು:ಎಚ್‌ಟಿ ಲೈನ್ ಕೆಲಸ ವೇಳೆ ದಿಢೀರ್ ವಿದ್ಯುತ್ ಪ್ರವಹಿಸಿ ಪವರ್‌ಮ್ಯಾನ್ ಸಾವು

    October 4, 2026

    ಮಂಗಳೂರಿನಲ್ಲಿ ಮನೆಗಳ್ಳತನ; 24 ಗಂಟೆಯೊಳಗೆ ಇಬ್ಬರು ಆರೋಪಿಗಳ ಬಂಧನ, ₹18 ಲಕ್ಷದ ಸೊತ್ತು ಪತ್ತೆ

    October 3, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಮಂಗಳೂರಿನಲ್ಲಿ ಕಾಲೇಜು ಕ್ಯಾಂಟೀನ್ ಬಳಿ ವಿದ್ಯಾರ್ಥಿಗೆ ಚೂರಿ ಇರಿತ; 6 ಮಂದಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲು
    ಅಪರಾಧ

    ಮಂಗಳೂರಿನಲ್ಲಿ ಕಾಲೇಜು ಕ್ಯಾಂಟೀನ್ ಬಳಿ ವಿದ್ಯಾರ್ಥಿಗೆ ಚೂರಿ ಇರಿತ; 6 ಮಂದಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲು

    adminBy adminOctober 4, 2026No Comments1 Min Read

    ಮಂಗಳೂರು: ಖಾಸಗಿ ಕಾಲೇಜಿನ ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿಯೊಬ್ಬನ ಮೇಲೆ ಸಹಪಾಠಿ ಹಾಗೂ ಆತನ ಐವರು ಸಹಚರರು ಕ್ಯಾಂಟೀನ್‌ ಬಳಿ ಚೂರಿಯಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ಶನಿವಾರ (ಅಕ್ಟೋಬರ್ 3) ಮಧ್ಯಾಹ್ನ ನಡೆದಿದೆ. ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಮಹಮ್ಮದ್ ಉನೈಸ್ ಎಂದು ಗುರುತಿಸಲಾಗಿದ್ದು, ಗಂಭೀರ ಗಾಯಗೊಂಡಿರುವ ಆತನನ್ನು ಮಂಗಳೂರು ನಗರದ ಸರ್ಕಾರಿ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ವಿಧ್ಯಾರ್ಥಿ ಉನೈಸ್ ಶನಿವಾರ ಕಾಲೇಜು ಕ್ಯಾಂಪಸ್‌ಗೆ ಬಂದ ಬಳಿಕ, ಬೆಳಿಗ್ಗೆ ಸುಮಾರು 11.30 ಗಂಟೆಗೆ ಕಾಲೇಜು ಬಳಿಯಿರುವ ‘ಸಿಟಿ ಅರೇನಾ’ ಟರ್ಫ್‌ಗೆ ಕಬಡ್ಡಿ ಆಡಲು ತೆರಳಿದ್ದರು. ಈ ವೇಳೆ ಟರ್ಫ್‌ ಎದುರುಗಡೆಯ ರಸ್ತೆಯಲ್ಲಿ ಉನೈಸ್ ಅವರ ಸ್ನೇಹಿತ ಪ್ರಥಮ ವರ್ಷದ ಬಿ.ಕಾಂ ವಿದ್ಯಾರ್ಥಿ ರಾಯಿಝ್ ಹಾಗೂ ಅದೇ ಕಾಲೇಜಿನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿರುವ ಕಾಟಿಪಳ್ಳ ನಿವಾಸಿ ರಿಯಾನ್ ನಡುವೆ ಸಣ್ಣ ವಿಚಾರಕ್ಕೆ ಜಗಳ ನಡೆದಿತ್ತು.

    ಅಲ್ಲಿದ್ದ ಉನೈಸ್ ಹಾಗೂ ಇತರ ವಿದ್ಯಾರ್ಥಿಗಳು ಜಗಳ ಬಿಡಿಸಲು ಮಧ್ಯಪ್ರವೇಶಿಸಿದಾಗ, ರಿಯಾನ್ ಉನೈಸ್‌‌ಗೆ ಕೈಯಿಂದ ಹೊಡೆದಿದ್ದನು. ತದನಂತರ ಉನೈಸ್ ಮತ್ತು ಇತರ ವಿದ್ಯಾರ್ಥಿಗಳು ಕಾಲೇಜಿಗೆ ಮರಳಿ, ಮಧ್ಯಾಹ್ನ ಸುಮಾರು 1.45 ಗಂಟೆಯ ವೇಳೆಗೆ ಕಾಲೇಜಿನ ಕ್ಯಾಂಟೀನ್ ಬಳಿ ನಿಂತುಕೊಂಡಿದ್ದರು. ಈ ಸಂದರ್ಭದಲ್ಲಿ ಎರಡು ದ್ವಿಚಕ್ರ ವಾಹನಗಳಲ್ಲಿ ಬಂದ ರಿಯಾನ್ ಹಾಗೂ ಆತನ ಜೊತೆಗಿದ್ದ ಐವರು ಸಹಚರರು, ಏಕಾಏಕಿ ಉನೈಸ್ ಅವರನ್ನು ಸುತ್ತುವರಿದು ಹಲ್ಲೆ ನಡೆಸಿದ್ದಾರೆ. “ನಿನ್ನನ್ನು ಕೊಲೆ ಮಾಡದೇ ಬಿಡುವುದಿಲ್ಲ” ಎಂದು ಪ್ರಾಣ ಬೆದರಿಕೆ ಒಡ್ಡಿದ ಆರೋಪಿಗಳು, ಚೂರಿಯಿಂದ ಉನೈಸ್ ಅವರ ತಲೆ, ಬೆನ್ನು, ಎಡಕಿವಿ ಹಾಗೂ ದೇಹದ ವಿವಿಧ ಭಾಗಗಳಿಗೆ ಚುಚ್ಚಿ ರಕ್ತಗಾಯಗೊಳಿಸಿ ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

    #crime #dakshinakannada
    Previous Articleಪುತ್ತೂರು:ಎಚ್‌ಟಿ ಲೈನ್ ಕೆಲಸ ವೇಳೆ ದಿಢೀರ್ ವಿದ್ಯುತ್ ಪ್ರವಹಿಸಿ ಪವರ್‌ಮ್ಯಾನ್ ಸಾವು

    Related Posts

    ಪುತ್ತೂರು:ಎಚ್‌ಟಿ ಲೈನ್ ಕೆಲಸ ವೇಳೆ ದಿಢೀರ್ ವಿದ್ಯುತ್ ಪ್ರವಹಿಸಿ ಪವರ್‌ಮ್ಯಾನ್ ಸಾವು

    October 4, 2026

    ಮಂಗಳೂರಿನಲ್ಲಿ ಮನೆಗಳ್ಳತನ; 24 ಗಂಟೆಯೊಳಗೆ ಇಬ್ಬರು ಆರೋಪಿಗಳ ಬಂಧನ, ₹18 ಲಕ್ಷದ ಸೊತ್ತು ಪತ್ತೆ

    October 3, 2026

    ಸಿಎಂ ಕರೆ ಬಳಿಕ ಪೂವಮ್ಮ ಭಾವುಕ; ‘ಕ್ರೀಡಾ ಜೀವನಕ್ಕೆ ಸಂಪೂರ್ಣ ಬೆಂಬಲದ ಭರವಸೆ ಸಿಕ್ಕಿದೆ’

    October 3, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಮಂಗಳೂರಿನಲ್ಲಿ ಕಾಲೇಜು ಕ್ಯಾಂಟೀನ್ ಬಳಿ ವಿದ್ಯಾರ್ಥಿಗೆ ಚೂರಿ ಇರಿತ; 6 ಮಂದಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲು

    October 4, 2026

    ಪುತ್ತೂರು:ಎಚ್‌ಟಿ ಲೈನ್ ಕೆಲಸ ವೇಳೆ ದಿಢೀರ್ ವಿದ್ಯುತ್ ಪ್ರವಹಿಸಿ ಪವರ್‌ಮ್ಯಾನ್ ಸಾವು

    October 4, 2026

    ಮಂಗಳೂರಿನಲ್ಲಿ ಮನೆಗಳ್ಳತನ; 24 ಗಂಟೆಯೊಳಗೆ ಇಬ್ಬರು ಆರೋಪಿಗಳ ಬಂಧನ, ₹18 ಲಕ್ಷದ ಸೊತ್ತು ಪತ್ತೆ

    October 3, 2026

    ಸಿಎಂ ಕರೆ ಬಳಿಕ ಪೂವಮ್ಮ ಭಾವುಕ; ‘ಕ್ರೀಡಾ ಜೀವನಕ್ಕೆ ಸಂಪೂರ್ಣ ಬೆಂಬಲದ ಭರವಸೆ ಸಿಕ್ಕಿದೆ’

    October 3, 2026
    Advertisement

    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಆಗುಂಬೆ ಘಾಟಿಯಲ್ಲಿ ಭೀಕರ ಅಪಘಾತ; 150 ಅಡಿ ಕಂದಕಕ್ಕೆ ಬಿದ್ದ ಲಾರಿ, ಚಾಲಕ ಸಾವು-ಬದುಕಿನ ನಡುವೆ ರಕ್ಷಣೆ

    October 3, 2026

    ಪೊಲೀಸರಿಂದ ತಪ್ಪಿಸಿಕೊಳ್ಳಲು ಚಿನ್ನದ ಸರ ನುಂಗಿದ ಕಳ್ಳ; 50ಕ್ಕೂ ಹೆಚ್ಚು ಬಾಳೆಹಣ್ಣು ತಿನ್ನಿಸಿ ಆಭರಣ ವಶಕ್ಕೆ

    October 3, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.