Close Menu
    What's Hot

    ನಕಲಿ ಕೋರ್ಟ್ ಆದೇಶ ಬಳಸಿ ಜೀವಾವಧಿ ಕೈದಿ ಬಿಡುಗಡೆ; ಜೈಲು DIG ಸೋಮಶೇಖರ್ ಅರೆಸ್ಟ್

    October 6, 2026

    KPSC ಪಶುವೈದ್ಯಾಧಿಕಾರಿ ಹಗರಣ; ED–CID ನಡುವೆ ದಾಖಲೆ ಹಂಚಿಕೆ ವಿಚಾರದಲ್ಲಿ ಸಂಘರ್ಷ

    October 6, 2026

    ವಾಯುಪಡೆಯ ವಿಮಾನ ಪತನ; 25 ಪ್ರಯಾಣಿಕರು, 7 ಸಿಬ್ಬಂದಿ ಸೇರಿ 32 ಮಂದಿ ಸಾವು

    October 6, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಂತರಾಷ್ಟ್ರೀಯ»ವಾಯುಪಡೆಯ ವಿಮಾನ ಪತನ; 25 ಪ್ರಯಾಣಿಕರು, 7 ಸಿಬ್ಬಂದಿ ಸೇರಿ 32 ಮಂದಿ ಸಾವು
    ಅಂತರಾಷ್ಟ್ರೀಯ

    ವಾಯುಪಡೆಯ ವಿಮಾನ ಪತನ; 25 ಪ್ರಯಾಣಿಕರು, 7 ಸಿಬ್ಬಂದಿ ಸೇರಿ 32 ಮಂದಿ ಸಾವು

    adminBy adminOctober 6, 2026No Comments1 Min Read

    ಲಾಗೋಸ್ (ನೈಜೀರಿಯಾ) : ನೈಜೀರಿಯಾ ವಾಯುಪಡೆಗೆ ಸೇರಿದ ಲಘು ವಿಮಾನವೊಂದು ಜೌಗು ಪ್ರದೇಶದಲ್ಲಿ ಪತನಗೊಂಡು, ವಿಮಾನದಲ್ಲಿದ್ದ ಎಲ್ಲಾ 32 ಮಂದಿ ದಾರುಣವಾಗಿ ಮೃತಪಟ್ಟ ಘಟನೆ ಮಂಗಳವಾರ ವರದಿಯಾಗಿದೆ. ದುರಂತದಲ್ಲಿ ಯಾರೊಬ್ಬರೂ ಬದುಕುಳಿದಿಲ್ಲ ಎಂದು ನೈಜೀರಿಯಾ ಸರ್ಕಾರದ ಅಧಿಕಾರಿಗಳು ಖಚಿತಪಡಿಸಿದ್ದಾರೆ.

    ಬೆನಿನ್ ನಗರದಿಂದ ದೇಶದ ಪ್ರಮುಖ ಆರ್ಥಿಕ ಕೇಂದ್ರವಾದ ಲಾಗೋಸ್‌ಗೆ ವಾಡಿಕೆಯ ಕಾರ್ಯಾಚರಣೆಯಲ್ಲಿದ್ದ ವಿಮಾನವು ಬೆಳಿಗ್ಗೆ ಸುಮಾರು 9:00 ಗಂಟೆಗೆ ಪತನಗೊಂಡಿದೆ. ಮೃತಪಟ್ಟವರಲ್ಲಿ 25 ಪ್ರಯಾಣಿಕರು ಹಾಗೂ ಏಳು ಮಂದಿ ವಿಮಾನ ಸಿಬ್ಬಂದಿ ಸೇರಿದ್ದಾರೆ. ದಕ್ಷಿಣ ನೈಜೀರಿಯಾದ ಕರಾವಳಿ ತೈಲ ಉತ್ಪಾದನಾ ಪ್ರದೇಶವಾದ ಒಂಡೋ ರಾಜ್ಯದ ಇಗ್ಬೊಕೊಡಾ ಬಳಿ ಈ ಭೀಕರ ಅವಘಡ ಸಂಭವಿಸಿದೆ. ಸಮೀಪದ ನೌಕಾ ನೆಲೆಯ ಬಳಿಯಿದ್ದ ಜೌಗು ಪ್ರದೇಶಕ್ಕೆ ವಿಮಾನವು ನೇರವಾಗಿ ಅಪ್ಪಳಿಸಿದೆ. ಪತನಗೊಂಡ ವಿಮಾನವನ್ನು ಅವಳಿ-ಎಂಜಿನ್‌ನ ಟರ್ಬೊಪ್ರೊಪ್ ATR-42 ಎಂದು ಗುರುತಿಸಲಾಗಿದ್ದು, ಇದು ಸಾಮಾನ್ಯವಾಗಿ 30 ರಿಂದ 50 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

    ಅಪಘಾತದ ವೇಳೆ ಭಾರೀ ಗುಡುಗಿನಂತಹ ಶಬ್ದ ಕೇಳಿಬಂತು ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ಜೌಗು ಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿದ್ದವರು ಸ್ಥಳೀಯ ನೌಕಾ ನೆಲೆಗೆ ತಕ್ಷಣ ಮಾಹಿತಿ ನೀಡಿದ್ದು, ಬಳಿಕ ದೋಣಿಗಳ ಮೂಲಕ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ. ವಿಮಾನವು ನದಿಯ ಬಳಿ ಪತನಗೊಂಡಿದ್ದರಿಂದ ಅದರ ಹಲವು ಭಾಗಗಳು ನೀರಿನಲ್ಲಿ ಮುಳುಗಿವೆ. ನದಿಯ ದಂಡೆಯ ಮೇಲೆ ಪ್ರಯಾಣಿಕರ ಶೂ, ಚಪ್ಪಲಿ, ಬಟ್ಟೆಗಳು ಹಾಗೂ ಶವಗಳ ಭಾಗಗಳು ಹರಿದುಬಿದ್ದಿದ್ದು, ಭೀಕರ ದೃಶ್ಯ ಕಂಡುಬಂದಿದೆ.

    ಅಪಘಾತದ ನಿಖರ ಕಾರಣ ಇನ್ನು ತಿಳಿದುಬಂದಿಲ್ಲ. ಘಟನೆಯ ಕುರಿತು ತಕ್ಷಣವೇ ಉನ್ನತ ಮಟ್ಟದ ಸಮಗ್ರ ತನಿಖೆ ನಡೆಸುವಂತೆ ವಾಯುಪಡೆಗೆ ನೈಜೀರಿಯಾ ಸರ್ಕಾರ ಸೂಚನೆ ನೀಡಿದೆ.




    International
    Previous Articleವಂದೇ ಭಾರತ್ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸುವ ಬೇಡಿಕೆ; ಉತ್ತರ ಕನ್ನಡ ಪ್ರಯಾಣಿಕರಿಂದ ಆಕ್ಷೇಪ
    Next Article KPSC ಪಶುವೈದ್ಯಾಧಿಕಾರಿ ಹಗರಣ; ED–CID ನಡುವೆ ದಾಖಲೆ ಹಂಚಿಕೆ ವಿಚಾರದಲ್ಲಿ ಸಂಘರ್ಷ

    Related Posts

    ಪ್ಲೇಗ್ ಪ್ರಕರಣದ ಬೆನ್ನಲ್ಲೇ ರಷ್ಯಾದಲ್ಲಿ ಕಟ್ಟೆಚ್ಚರ; 5 ಆಸ್ಪತ್ರೆಗಳು ಬಂದ್‌, ನೂರಾರು ಮಂದಿ ಕ್ವಾರಂಟೈನ್

    October 5, 2026

    ಫ್ಲೈದುಬೈ ವಿಮಾನ ದಾಳಿಗೆ ಹೊಸ ಟ್ವಿಸ್ಟ್; ಜುಲೈನಲ್ಲೇ ವಿಮಾನ ಪತನಗೊಳಿಸಲು ಯೋಜನೆ ಹೊಂದಿದ್ದ ಸಂಚು ಬಯಲು

    October 5, 2026

    ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ದಾಳಿ; ಫ್ಲೈದುಬೈ ಸಹ-ಪೈಲಟ್‌ನ ಗುರುತು ಬಹಿರಂಗ

    October 3, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ನಕಲಿ ಕೋರ್ಟ್ ಆದೇಶ ಬಳಸಿ ಜೀವಾವಧಿ ಕೈದಿ ಬಿಡುಗಡೆ; ಜೈಲು DIG ಸೋಮಶೇಖರ್ ಅರೆಸ್ಟ್

    October 6, 2026

    KPSC ಪಶುವೈದ್ಯಾಧಿಕಾರಿ ಹಗರಣ; ED–CID ನಡುವೆ ದಾಖಲೆ ಹಂಚಿಕೆ ವಿಚಾರದಲ್ಲಿ ಸಂಘರ್ಷ

    October 6, 2026

    ವಾಯುಪಡೆಯ ವಿಮಾನ ಪತನ; 25 ಪ್ರಯಾಣಿಕರು, 7 ಸಿಬ್ಬಂದಿ ಸೇರಿ 32 ಮಂದಿ ಸಾವು

    October 6, 2026

    ವಂದೇ ಭಾರತ್ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸುವ ಬೇಡಿಕೆ; ಉತ್ತರ ಕನ್ನಡ ಪ್ರಯಾಣಿಕರಿಂದ ಆಕ್ಷೇಪ

    October 6, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ನಕಲಿ ಕೋರ್ಟ್ ಆದೇಶ ಬಳಸಿ ಜೀವಾವಧಿ ಕೈದಿ ಬಿಡುಗಡೆ; ಜೈಲು DIG ಸೋಮಶೇಖರ್ ಅರೆಸ್ಟ್

    October 6, 2026

    KPSC ಪಶುವೈದ್ಯಾಧಿಕಾರಿ ಹಗರಣ; ED–CID ನಡುವೆ ದಾಖಲೆ ಹಂಚಿಕೆ ವಿಚಾರದಲ್ಲಿ ಸಂಘರ್ಷ

    October 6, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.