Close Menu
    What's Hot

    ಬೀಡಿ ಹಚ್ಚಲು ಕಡ್ಡಿ ಗೀರಿದಾಗ ಸಿಲಿಂಡರ್ ಸ್ಫೋಟ; 6 ಜನ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ

    October 19, 2026

    ಟ್ರಾಲಿ ಬ್ಯಾಗ್‌ಗಳಲ್ಲಿ ನಕಲಿ ಸಿಗರೇಟ್ ಸಾಗಾಟ : ಸಿಸಿಬಿ ಪೊಲೀಸರಿಂದ ಇಬ್ಬರ ಬಂಧನ

    October 19, 2026

    ದಸರಾ ಆಚರಣೆಗೆ ಮಾನವೀಯತೆಯ ಸ್ಪರ್ಶ : ಬಡ ರೋಗಿಯ ನೆರವಿಗೆ ನಿಂತ ಏಳು ಮಕ್ಕಳು

    October 19, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಪುತ್ತೂರು ನ್ಯಾಯಾಲಯದಲ್ಲಿ ಪರಾರಿಯಾಗಲು ಯತ್ನಿಸಿದ್ದ ಜಯೇಶ್‌ಗೆ 2 ವರ್ಷ ಜೈಲು ಶಿಕ್ಷೆ
    ಅಪರಾಧ

    ಪುತ್ತೂರು ನ್ಯಾಯಾಲಯದಲ್ಲಿ ಪರಾರಿಯಾಗಲು ಯತ್ನಿಸಿದ್ದ ಜಯೇಶ್‌ಗೆ 2 ವರ್ಷ ಜೈಲು ಶಿಕ್ಷೆ

    adminBy adminOctober 7, 2026No Comments2 Mins Read

    ಪುತ್ತೂರು: ಜೋಡಿ ಕೊಲೆ ಪ್ರಕರಣದ ನ್ಯಾಯಾಲಯ ವಿಚಾರಣೆ ವೇಳೆ ಕೋರ್ಟ್ ಕಟಕಟೆಯಿಂದ ಜಿಗಿದು ಪರಾರಿಯಾಗಲು ಯತ್ನಿಸಿದ್ದ ರೌಡಿಶೀಟರ್, ಸಿರಿಬಾಗಿಲು ನಿವಾಸಿ ಜಯೇಶ್ (41) ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪುತ್ತೂರಿನ ಪ್ರಧಾನ ಹಿರಿಯ ಸಿವಿಲ್ ಮತ್ತು ಎಸಿಜೆಎಂ ನ್ಯಾಯಾಲಯವು ಆತನಿಗೆ 2 ವರ್ಷಗಳ ಸಾದಾ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

    2008 ರಲ್ಲಿ ಕಡಬ ತಾಲೂಕಿನ ಶಿರಾಡಿಯಲ್ಲಿ ನಡೆದಿದ್ದ ಭೀಕರ ತಾಯಿ-ಮಗುವಿನ ಕೊಲೆ ಪ್ರಕರಣದ ಆರೋಪಿಯಾಗಿದ್ದ ಜಯೇಶ್‌ನ ವಿಚಾರಣೆಯು 2016 ರ ಏಪ್ರಿಲ್ 5 ರಂದು ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ಈ ವೇಳೆ ಆರೋಪಿ ಜಯೇಶ್‌ ಏಕಾಏಕಿ ಕಟಕಟೆಯಿಂದ ಜಿಗಿದು ಪರಾರಿಯಾಗಲು ಯತ್ನಿಸಿದ್ದ. ತಕ್ಷಣವೇ ಕಾರ್ಯಪ್ರವೃತ್ತರಾದ ಕಡಬ ಪೊಲೀಸ್ ಸಿಬ್ಬಂದಿ ಮಹೇಶ್, ಪುತ್ತೂರಿನ ವಕೀಲರೊಬ್ಬರು ಹಾಗೂ ಸ್ಥಳೀಯ ಸಾರ್ವಜನಿಕರು ನ್ಯಾಯಾಲಯದ ಹೊರಭಾಗದಲ್ಲಿ ಆತನನ್ನು ಬೆನ್ನಟ್ಟಿ ಹಿಡಿದು ಮತ್ತೆ ಕೋರ್ಟ್‌ಗೆ ಹಸ್ತಾಂತರಿಸಿದ್ದರು.

    ಈ ಕುರಿತು ವಿಚಾರಣೆ ನಡೆಸಿದ ಪುತ್ತೂರಿನ ಪ್ರಧಾನ ಹಿರಿಯ ಸಿವಿಲ್ ಮತ್ತು ಎಸಿಜೆಎಂ ನ್ಯಾಯಾಧೀಶರಾದ ಪ್ರಕೃತಿ ಕಲ್ಯಾಣಪುರ್ ಅವರು ಅಪರಾಧಿಗೆ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಪುತ್ತೂರು ನಗರ ಠಾಣೆಯ ಆಗಿನ ಎಸ್‌ಐ ಖಾದರ್ ಪ್ರಕರಣದ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಪ್ರಾಸಿಕ್ಯೂಶನ್ ಪರ ಸರ್ಕಾರಿ ವಕೀಲ ಮನೋಜ್ ಕುಮಾರ್ ವಾದ ಮಂಡಿಸಿದ್ದರು. 2008 ರಲ್ಲಿ ಶಿರಾಡಿ ನಿವಾಸಿ ಜಯೇಶ್, ತನ್ನ ದೊಡ್ಡಪ್ಪನ ಮಗ ಲೋಹಿತ್ ಅವರ ಪತ್ನಿ ಸೌಮ್ಯ ಹಾಗೂ ಆಕೆಯ ಮೂರು ವರ್ಷದ ಮಗುವನ್ನು ಭೀಕರವಾಗಿ ಕೊಲೆ ಮಾಡಿ ಚಿನ್ನಾಭರಣದೊಂದಿಗೆ ಕೇರಳಕ್ಕೆ ಪರಾರಿಯಾಗಿದ್ದ. ಅಲ್ಲಿ ಮುಸ್ಲಿಂ ಯುವತಿಯನ್ನು ವಿವಾಹವಾಗಿದ್ದ ಆತ, 2012 ರಲ್ಲಿ ಪತ್ನಿ ಜೊತೆ ಜಗಳವಾಡಿ ತೆಂಗಿನ ಮರವೇರಿ ಕುಳಿತಿದ್ದ. ಅಲ್ಲಿನ ಪೊಲೀಸರು ಆತನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಶಿರಾಡಿ ಜೋಡಿ ಕೊಲೆ ಪ್ರಕರಣದ ರಹಸ್ಯ ಬಯಲಾಗಿತ್ತು.

    ಶಿರಾಡಿ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದ ಜಯೇಶ್, ಜೈಲಿನಿಂದಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಕಚೇರಿಗೆ ಕರೆ ಮಾಡಿ ತಾನು ದಾವೂದ್ ಇಬ್ರಾಹಿಂ ಗ್ಯಾಂಗ್‌ನವನೆಂದು ಹೇಳಿ ₹100 ಕೋಟಿಗೆ ಬೇಡಿಕೆಯಿಟ್ಟಿದ್ದ. ಹಣ ನೀಡದಿದ್ದರೆ ಬಾಂಬ್ ಇಟ್ಟು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಈ ಪ್ರಕರಣದಲ್ಲೂ ನಾಗಪುರ ನ್ಯಾಯಾಲಯ ಆತನಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.




    #crime #dakshinakannada
    Previous Articleಪಣಂಬೂರು ಕಡಲಿನಲ್ಲಿ ನಾಪತ್ತೆಯಾಗಿದ್ದ 14 ವರ್ಷದ ಬಾಲಕ; 2 ದಿನಗಳ ಬಳಿಕ ಮೃತದೇಹ ಪತ್ತೆ
    Next Article ನಾಲ್ಕು ವರ್ಷಗಳ ಬಳಿಕ ರೆಪೋ ದರ ಏರಿಸಿದ ಆರ್‌ಬಿಐ; ಸಾಲದ EMI ಮತ್ತಷ್ಟು ದುಬಾರಿ ಸಾಧ್ಯತೆ

    Related Posts

    ಟ್ರಾಲಿ ಬ್ಯಾಗ್‌ಗಳಲ್ಲಿ ನಕಲಿ ಸಿಗರೇಟ್ ಸಾಗಾಟ : ಸಿಸಿಬಿ ಪೊಲೀಸರಿಂದ ಇಬ್ಬರ ಬಂಧನ

    October 19, 2026

    ದಸರಾ ಆಚರಣೆಗೆ ಮಾನವೀಯತೆಯ ಸ್ಪರ್ಶ : ಬಡ ರೋಗಿಯ ನೆರವಿಗೆ ನಿಂತ ಏಳು ಮಕ್ಕಳು

    October 19, 2026

    ಸಿದ್ದಕಟ್ಟೆಯಲ್ಲಿ ಯುವಕನ ಮೇಲೆ ಚೂರಿಯಿಂದ ದಾಳಿ : ಆರು ಮಂದಿ ವಿರುದ್ಧ ಪ್ರಕರಣ ದಾಖಲು

    October 19, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಬೀಡಿ ಹಚ್ಚಲು ಕಡ್ಡಿ ಗೀರಿದಾಗ ಸಿಲಿಂಡರ್ ಸ್ಫೋಟ; 6 ಜನ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ

    October 19, 2026

    ಟ್ರಾಲಿ ಬ್ಯಾಗ್‌ಗಳಲ್ಲಿ ನಕಲಿ ಸಿಗರೇಟ್ ಸಾಗಾಟ : ಸಿಸಿಬಿ ಪೊಲೀಸರಿಂದ ಇಬ್ಬರ ಬಂಧನ

    October 19, 2026

    ದಸರಾ ಆಚರಣೆಗೆ ಮಾನವೀಯತೆಯ ಸ್ಪರ್ಶ : ಬಡ ರೋಗಿಯ ನೆರವಿಗೆ ನಿಂತ ಏಳು ಮಕ್ಕಳು

    October 19, 2026

    ಸಿದ್ದಕಟ್ಟೆಯಲ್ಲಿ ಯುವಕನ ಮೇಲೆ ಚೂರಿಯಿಂದ ದಾಳಿ : ಆರು ಮಂದಿ ವಿರುದ್ಧ ಪ್ರಕರಣ ದಾಖಲು

    October 19, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಬೀಡಿ ಹಚ್ಚಲು ಕಡ್ಡಿ ಗೀರಿದಾಗ ಸಿಲಿಂಡರ್ ಸ್ಫೋಟ; 6 ಜನ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ

    October 19, 2026

    ಟ್ರಾಲಿ ಬ್ಯಾಗ್‌ಗಳಲ್ಲಿ ನಕಲಿ ಸಿಗರೇಟ್ ಸಾಗಾಟ : ಸಿಸಿಬಿ ಪೊಲೀಸರಿಂದ ಇಬ್ಬರ ಬಂಧನ

    October 19, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.