Close Menu
    What's Hot

    ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ : ರೈಲಿನಲ್ಲಿ ಪರಾರಿಯಾಗುತ್ತಿದ್ದ ಮೂವರ ಬಂಧನ

    October 19, 2026

    ಕೊಕ್ಕಡದ ಅಂಗಡಿ ವಿಚಾರವಾಗಿ ಹಲ್ಲೆ, ಜೀವ ಬೆದರಿಕೆ ಆರೋಪ : ಎರಡೂ ಗುಂಪುಗಳ ವಿರುದ್ಧ ಪ್ರಕರಣ ದಾಖಲು

    October 19, 2026

    ಪುತ್ತೂರು: ಎರಡು ಗುಂಪುಗಳ ನಡುವೆ ಮಾರಾಮಾರಿ : ತಲ್ವಾರ್ ವಶಪಡಿಸಿಕೊಂಡ ಪೊಲೀಸರು

    October 19, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»‘ಮಗ ಬಂದ ಮೇಲೆ ಸಹಿ ಮಾಡುತ್ತೇನೆ’ ಎಂದಿದ್ದೇ ತಡ; ವೃದ್ಧೆಯನ್ನು ತಳ್ಳಿ ಚಿನ್ನದ ಸರ ಕಿತ್ತುಕೊಂಡ ಖದೀಮರು
    ಅಪರಾಧ

    ‘ಮಗ ಬಂದ ಮೇಲೆ ಸಹಿ ಮಾಡುತ್ತೇನೆ’ ಎಂದಿದ್ದೇ ತಡ; ವೃದ್ಧೆಯನ್ನು ತಳ್ಳಿ ಚಿನ್ನದ ಸರ ಕಿತ್ತುಕೊಂಡ ಖದೀಮರು

    adminBy adminOctober 9, 2026No Comments1 Min Read

    ಉಡುಪಿ : ಜನಗಣತಿ (SIR) ಸರ್ವೇ ಹೆಸರಿನಲ್ಲಿ ಮನೆಗೆ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು 74 ವರ್ಷದ ವೃದ್ಧೆಯನ್ನು ಕೆಳಗೆ ತಳ್ಳಿ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ದೋಚಿ ಪರಾರಿಯಾಗಿರುವ ಘಟನೆ ಉಡುಪಿ ತಾಲೂಕಿನ ಪುತ್ತೂರು ಗ್ರಾಮದ ನಿಟ್ಟೂರಿನಲ್ಲಿ ನಡೆದಿದೆ. ಉಡುಪಿ ಪುತ್ತೂರು ಗ್ರಾಮದ ನಿಟ್ಟೂರು ನಿವಾಸಿ ಶಾಂತ ಕಾರಂತ್ (74) ವಂಚನೆ ಹಾಗೂ ದರೋಡೆಗೆ ಒಳಗಾದ ವೃದ್ಧೆ.

    ಶಾಂತ ಕಾರಂತ್ ಅವರು ನಿಟ್ಟೂರಿನ ಮನೆಯಲ್ಲಿ ಒಬ್ಬರೇ ಇದ್ದ ವೇಳೆ, ಅಕ್ಟೋಬರ್ 7 ರಂದು ಸಂಜೆ 3:47 ರ ಸುಮಾರಿಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಬಂದಿದ್ದಾರೆ. ತಾವು ಜನಗಣತಿ (SIR) ಕುರಿತು ಮಾಹಿತಿ ಸಂಗ್ರಹಿಸಲು ಬಂದಿರುವುದಾಗಿ ಹೇಳಿ ಮಾತನಾಡಿಸಿದ್ದಾರೆ. ಈ ವೇಳೆ ಶಾಂತ ಕಾರಂತ್ ಅವರು, “ಮಗ ಬಂದ ಮೇಲೆ ಕೇಳಿ ಅವರು ತಂದ ಕಾಗದಕ್ಕೆ ಸಹಿ ಮಾಡುತ್ತೇನೆ” ಎಂದು ಹೇಳಿ ಮನೆಯೊಳಗೆ ತೆರಳಿದ್ದಾರೆ.
    ಶಾಂತ ಕಾರಂತ್ ಅವರ ಹಿನ್ನಡೆಯನ್ನೇ ಕಾದಿದ್ದ ಅಪರಿಚಿತರು, ಏಕಾಏಕಿ ಮನೆಯೊಳಗೆ ಅಕ್ರಮವಾಗಿ ನುಗ್ಗಿದ್ದಾರೆ. ಬಳಿಕ ವೃದ್ಧೆಯನ್ನು ಬಲವಾಗಿ ದೂಡಿ ಕೆಳಗೆ ಬೀಳಿಸಿ, ಅವರ ಕುತ್ತಿಗೆಯಲ್ಲಿದ್ದ ಸುಮಾರು 30 ಗ್ರಾಂ ತೂಕದ ಗಾರ್ನೇಟ್ ಮಣಿ ಇರುವ ಬೆಲೆಬಾಳುವ ಚಿನ್ನದ ಸರವನ್ನು ಬಲವಂತವಾಗಿ ಎಳೆದುಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

    ಘಟನೆ ಕುರಿತು ಶ್ರೀನಿವಾಸ ಕಾರಂತ್ ಅವರು ನೀಡಿದ ದೂರಿನನ್ವಯ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 136/2026, ಬಿಎನ್‌ಎಸ್ (BNS) ಕಲಂ 309(4) ಹಾಗೂ 3(5) ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಖದೀಮರ ಪತ್ತೆಗೆ ಜಾಲ ಬೀಸಿದ್ದಾರೆ.




    #crime #udupi
    Previous Articleರೈಲು ಪ್ರಯಾಣಿಕನ ಬ್ಯಾಗ್ ಕಳವು; ಟಿಟಿಇ ಚಾಕಚಕ್ಯತೆಯಿಂದ ಆರೋಪಿ ಸೆರೆ, ಸೊತ್ತು ವಶಕ್ಕೆ
    Next Article ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಹೊಸ ತಿರುವು; ಚಿಕ್ಕಣ್ಣ, ಯಶಸ್‌ ಸೂರ್ಯಗೆ ಕೋರ್ಟ್‌ ಸಮನ್ಸ್‌

    Related Posts

    ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ : ರೈಲಿನಲ್ಲಿ ಪರಾರಿಯಾಗುತ್ತಿದ್ದ ಮೂವರ ಬಂಧನ

    October 19, 2026

    ಕೊಕ್ಕಡದ ಅಂಗಡಿ ವಿಚಾರವಾಗಿ ಹಲ್ಲೆ, ಜೀವ ಬೆದರಿಕೆ ಆರೋಪ : ಎರಡೂ ಗುಂಪುಗಳ ವಿರುದ್ಧ ಪ್ರಕರಣ ದಾಖಲು

    October 19, 2026

    ಪುತ್ತೂರು: ಎರಡು ಗುಂಪುಗಳ ನಡುವೆ ಮಾರಾಮಾರಿ : ತಲ್ವಾರ್ ವಶಪಡಿಸಿಕೊಂಡ ಪೊಲೀಸರು

    October 19, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ : ರೈಲಿನಲ್ಲಿ ಪರಾರಿಯಾಗುತ್ತಿದ್ದ ಮೂವರ ಬಂಧನ

    October 19, 2026

    ಕೊಕ್ಕಡದ ಅಂಗಡಿ ವಿಚಾರವಾಗಿ ಹಲ್ಲೆ, ಜೀವ ಬೆದರಿಕೆ ಆರೋಪ : ಎರಡೂ ಗುಂಪುಗಳ ವಿರುದ್ಧ ಪ್ರಕರಣ ದಾಖಲು

    October 19, 2026

    ಪುತ್ತೂರು: ಎರಡು ಗುಂಪುಗಳ ನಡುವೆ ಮಾರಾಮಾರಿ : ತಲ್ವಾರ್ ವಶಪಡಿಸಿಕೊಂಡ ಪೊಲೀಸರು

    October 19, 2026

    ಹಿರಿಯಡ್ಕ ಜೈಲಿನಿಂದ ಬಿಡುಗಡೆಯಾದ ವ್ಯಕ್ತಿ ಮತ್ತೆ ಪೊಲೀಸ್ ಬಲೆಗೆ : ಎಂಡಿಎಂಎ ಪ್ರಕರಣ ದಾಖಲು

    October 19, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆ ; ಜನಸಾಮಾನ್ಯರಿಗೆ ನೆರವಾಗುವ ಕ್ರಮ ಎಂದ ಸಚಿವ ಖಾದರ್

    October 19, 2026

    ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸೌಮ್ಯಾ ರೆಡ್ಡಿ ರಾಜೀನಾಮೆ

    October 17, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.