Close Menu
    What's Hot

    ವೆಲೆನ್ಸಿಯಾ ಚರ್ಚ್ ಪಾದ್ರಿಯ ವಿರುದ್ಧ ಪೋಕ್ಸೊ ಪ್ರಕರಣ : ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

    October 18, 2026

    ಕೋಲ್ಕತ್ತಾ ದುರ್ಗಾ ಪೂಜಾ ಸಂಭ್ರಮದಲ್ಲಿ ಕಾಲ್ತುಳಿತ: 19 ಸಾವು, ಘಟನೆಗೆ ಉನ್ನತ ಮಟ್ಟದ ತನಿಖೆಗೆ ಸಿಎಂ ಆದೇಶ

    October 18, 2026

    ಕೊಳತ್ತಮಜಲು ರಹ್ಮಾನ್ ಕೊಲೆ ಪ್ರಕರಣ : ಜಾಮೀನು ಪ್ರಶ್ನಿಸಿ ಸರ್ಕಾರದ ಅರ್ಜಿ, ಹೈಕೋರ್ಟ್‌ನಿಂದ ತಡೆ

    October 18, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಅಕ್ರಮವಾಗಿ ಜಾನುವಾರು ಸಾಗಾಟ ಆರೋಪ; ಹಿರಿಯಡ್ಕ ಪೊಲೀಸರ ಕಾರ್ಯಾಚರಣೆಯಲ್ಲಿ ಇಬ್ಬರು ಸೆರೆ
    ಅಪರಾಧ

    ಅಕ್ರಮವಾಗಿ ಜಾನುವಾರು ಸಾಗಾಟ ಆರೋಪ; ಹಿರಿಯಡ್ಕ ಪೊಲೀಸರ ಕಾರ್ಯಾಚರಣೆಯಲ್ಲಿ ಇಬ್ಬರು ಸೆರೆ

    adminBy adminOctober 11, 2026No Comments1 Min Read

    ಉಡುಪಿ: ಕಾರ್ಕಳ ತಾಲೂಕಿನ ಕುಕ್ಕುಜೆಯಿಂದ ದನಗಳನ್ನು ಕದ್ದು ಮಾರಾಟಕ್ಕಾಗಿ ಕಸಾಯಿಖಾನೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇಲೆ ಹಿರಿಯಡ್ಕ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಪೊಲೀಸರು ನಾಲ್ಕು ದನಗಳನ್ನು ರಕ್ಷಿಸಿ, ಸಾಗಿಸಲು ಬಳಸುತ್ತಿದ್ದ ಗೂಡ್ಸ್ ಟೆಂಪೋವನ್ನು ವಶಪಡಿಸಿಕೊಂಡಿದ್ದಾರೆ.

    ಬಂಧಿತ ಆರೋಪಿಗಳು ಕಾಪು ತಾಲೂಕಿನ ಕುರ್ಕಾಲು ಗ್ರಾಮದ ನಿವಾಸಿ ಅಬ್ದುಲ್ ಸತ್ತಾರ್ (54) ಮತ್ತು ಇನ್ನಂಜೆ ಗ್ರಾಮದ ನಿವಾಸಿ ಯೋಗೀಶ್ ನಾಯಕ್ (49) ಎಂದು ಗರುತಿಸಲಾಗಿದೆ.

    ಪೊಲೀಸರ ಪ್ರಕಾರ, ಅಕ್ಟೋಬರ್ 9, 2026 ರಂದು ಸಂಜೆ 7.30 ರ ಸುಮಾರಿಗೆ, ಹರಿಖಂಡೆ ಕಡೆಯಿಂದ ಹಿರಿಯಡ್ಕ ಕಡೆಗೆ ನೋಂದಣಿ ಸಂಖ್ಯೆ KA 20 AA 5197 ಹೊಂದಿರುವ ಗೂಡ್ಸ್ ಟೆಂಪೋದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸಲಾಗುತ್ತಿದೆ ಎಂದು ಸಿಬ್ಬಂದಿಗೆ ಮಾಹಿತಿ ದೊರಕಿದೆ. ಹಿರಿಯಡ್ಕ ಪೊಲೀಸ್ ಠಾಣೆ ಜಂಕ್ಷನ್ ಬಳಿ ಪೊಲೀಸರು ವಾಹನವನ್ನು ತಡೆದು ತಪಾಸಣೆ ನಡೆಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ.

    ಕಾರ್ಕಳ ತಾಲೂಕಿನ ಕುಕ್ಕುಜೆ ಗ್ರಾಮದ ಕೃಷ್ಣ ಪೂಜಾರಿ ಎಂಬುವವರ ಮನೆಯ ಬಳಿ ಮೇಯುತ್ತಿದ್ದ ದನಗಳನ್ನು ಆರೋಪಿಗಳು ಕಳ್ಳತನ ಮಾಡಿದ್ದರು. ಇವುಗಳನ್ನು ಮಾರಾಟಕ್ಕಾಗಿ ಕಸಾಯಿಖಾನೆಗೆ ಸಾಗಿಸುತ್ತಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.

    ರಕ್ಷಿಸಲಾದ 4 ದನಗಳು (ಅಂದಾಜು ಮೌಲ್ಯ 20,000) ಮತ್ತು ಸಾಗಾಟಕ್ಕೆ ಬಳಸಲಾಗಿದ್ದ 3 ಲಕ್ಷ ಮೌಲ್ಯದ ಗೂಡ್ಸ್ ಟೆಂಪೋ ವಾಹನವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ದನಗಳ ಕುತ್ತಿಗೆ ಮತ್ತು ಕಾಲುಗಳನ್ನು ನೈಲಾನ್ ಹಗ್ಗದಿಂದ ಅಮಾನವೀಯವಾಗಿ ಕಟ್ಟಿ ಹಿಂಸಾತ್ಮಕವಾಗಿ ಸಾಗಿಸಲಾಗುತ್ತಿತ್ತು. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

    ಉಡುಪಿ ಉಪವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ ಬೆಳ್ಳಿಯಪ್ಪ ಮತ್ತು ವೃತ್ತ ನಿರೀಕ್ಷಕ ಗೋಪಿಕೃಷ್ಣ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಪಿಎಸ್ಐ ಪುನೀತ್ ಕುಮಾರ್ ಬಿಇ ಮತ್ತು ಇತರ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.




    #crime #udupi
    Previous Article2009ರ ಪ್ರಕರಣದಲ್ಲಿ 17 ವರ್ಷಗಳಿಂದ ನಾಪತ್ತೆ; ವಾರೆಂಟ್ ಜಾರಿಯಾಗಿದ್ದ ಆರೋಪಿ ಸೆರೆ
    Next Article ಮಂಗಳೂರು ದಸರಾ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ; ಅ. 11ರಿಂದ 21ರವರೆಗೆ ವಾಹನ ಸವಾರರಿಗೆ ಪೊಲೀಸ್ ಸಲಹೆ

    Related Posts

    ವೆಲೆನ್ಸಿಯಾ ಚರ್ಚ್ ಪಾದ್ರಿಯ ವಿರುದ್ಧ ಪೋಕ್ಸೊ ಪ್ರಕರಣ : ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

    October 18, 2026

    ಕೊಳತ್ತಮಜಲು ರಹ್ಮಾನ್ ಕೊಲೆ ಪ್ರಕರಣ : ಜಾಮೀನು ಪ್ರಶ್ನಿಸಿ ಸರ್ಕಾರದ ಅರ್ಜಿ, ಹೈಕೋರ್ಟ್‌ನಿಂದ ತಡೆ

    October 18, 2026

    ಎಂಆರ್‌ಪಿಎಲ್‌ ಸ್ಫೋಟದಲ್ಲಿ ಗಾಯಗೊಂಡಿದ್ದ ಕಾರ್ಮಿಕ ಸಾವು : ₹1.2 ಕೋಟಿ ಪರಿಹಾರ ಘೋಷಣೆ

    October 17, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ವೆಲೆನ್ಸಿಯಾ ಚರ್ಚ್ ಪಾದ್ರಿಯ ವಿರುದ್ಧ ಪೋಕ್ಸೊ ಪ್ರಕರಣ : ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

    October 18, 2026

    ಕೋಲ್ಕತ್ತಾ ದುರ್ಗಾ ಪೂಜಾ ಸಂಭ್ರಮದಲ್ಲಿ ಕಾಲ್ತುಳಿತ: 19 ಸಾವು, ಘಟನೆಗೆ ಉನ್ನತ ಮಟ್ಟದ ತನಿಖೆಗೆ ಸಿಎಂ ಆದೇಶ

    October 18, 2026

    ಕೊಳತ್ತಮಜಲು ರಹ್ಮಾನ್ ಕೊಲೆ ಪ್ರಕರಣ : ಜಾಮೀನು ಪ್ರಶ್ನಿಸಿ ಸರ್ಕಾರದ ಅರ್ಜಿ, ಹೈಕೋರ್ಟ್‌ನಿಂದ ತಡೆ

    October 18, 2026

    ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸೌಮ್ಯಾ ರೆಡ್ಡಿ ರಾಜೀನಾಮೆ

    October 17, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸೌಮ್ಯಾ ರೆಡ್ಡಿ ರಾಜೀನಾಮೆ

    October 17, 2026

    ರಾಜ್ಯಾದ್ಯಂತ ಸ್ವೀಟ್ ಅಂಗಡಿಗಳ ತಪಾಸಣೆ ಚುರುಕು: 145 ಮಾದರಿ ಸಂಗ್ರಹ, 15 ಘಟಕಗಳಿಗೆ ನೋಟಿಸ್

    October 17, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.