Close Menu
    What's Hot

    16 ಅಡಿ ಆಳದ ಬಾವಿಯಲ್ಲಿ 50 ನಿಮಿಷಗಳ ಹೋರಾಟ; 62 ವರ್ಷದ ಮಹಿಳೆಗೆ ಮರುಜೀವ ನೀಡಿದ ಚಾಲಕ

    October 16, 2026

    ಕೆಪಿಎಸ್‌ಸಿ ನೇಮಕಾತಿ ಹಗರಣಕ್ಕೆ ಬಿಗ್ ಟ್ವಿಸ್ಟ್: ಅಭ್ಯರ್ಥಿಗಳಿಗೆ ಫೈವ್‌ಸ್ಟಾರ್ ಹೋಟೆಲ್​ನಲ್ಲಿ ಪರೀಕ್ಷೆ ಬರೆಸಿದರೇ ಸದಸ್ಯರು?

    October 16, 2026

    ಸ್ಟಿಂಗ್ ಆಪರೇಷನ್ ವಿಡಿಯೋ ಅಪ್‌ಲೋಡ್‌ಗೆಂದೇ ಹೊಸ ಚಾನೆಲ್; ಮಾಸ್ಟರ್‌ಮೈಂಡ್‌ಗಾಗಿ ತನಿಖೆ ಚುರುಕು

    October 16, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಅಪ್ರಾಪ್ತ ಬಾಲಕನಿಗೆ ನಿರಂತರ ಲೈಂಗಿಕ ಕಿರುಕುಳ ಆರೋಪ; ಮಂಗಳೂರಿನ ಫಾದರ್ ವಿರುದ್ಧ ಪ್ರಕರಣ ದಾಖಲು
    ಅಪರಾಧ

    ಅಪ್ರಾಪ್ತ ಬಾಲಕನಿಗೆ ನಿರಂತರ ಲೈಂಗಿಕ ಕಿರುಕುಳ ಆರೋಪ; ಮಂಗಳೂರಿನ ಫಾದರ್ ವಿರುದ್ಧ ಪ್ರಕರಣ ದಾಖಲು

    adminBy adminOctober 16, 2026No Comments1 Min Read

    ಮಂಗಳೂರು: ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕನಿಗೆ ಸುದೀರ್ಘ ಕಾಲ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಚರ್ಚ್‌ನ ಫಾದರ್ ವಿರುದ್ಧ ಕೇಳಿಬಂದಿದೆ. ಈ ಸಂಬಂಧ ಪೊಲೀಸರು ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

    ಆರೋಪಿಯನ್ನು ಫಾದರ್ ಸಿಪ್ರಿಯನ್ ಪಿಂಟೋ ಎಂದು ಗುರುತಿಸಲಾಗಿದೆ. ಎಫ್‌ಐಆರ್ ಮಾಹಿತಿಯ ಪ್ರಕಾರ, ಪ್ರಾರ್ಥನೆಗಾಗಿ ಚರ್ಚ್‌ಗೆ ನಿಯಮಿತವಾಗಿ ಬರುತ್ತಿದ್ದ ಅಪ್ರಾಪ್ತ ಬಾಲಕನಿಗೆ ಆಮಿಷ ಒಡ್ಡಿದ್ದ ಧರ್ಮಗುರು, ಆತನನ್ನು ಖಾಸಗಿಯಾಗಿ ಪ್ರಾರ್ಥನಾ ಕೊಠಡಿ ಹಾಗೂ ತಮ್ಮ ವಸತಿ ಕೊಠಡಿಗೆ ಕರೆಸಿಕೊಂಡು ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.

    2026ರ ಆಗಸ್ಟ್ 14 ಸಂಜೆ ಪ್ರಾರ್ಥನೆಯ ಸಮಯದಲ್ಲಿ ಧರ್ಮಗುರು ಬಾಲಕನಿಗೆ ಮತ್ತೆ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ಇದರಿಂದ ಭಯಭೀತನಾದ ಅಪ್ರಾಪ್ತ ತನ್ನ ಸ್ನೇಹಿತರೊಂದಿಗೆ ಈ ವಿಷಯವನ್ನು ಹಂಚಿಕೊಂಡಾಗ, ಇನ್ನು ಕೆಲವು ಬಾಲಕರಿಗೂ ಇದೇ ರೀತಿಯ ಲೈಂಗಿಕ ದೌರ್ಜನ್ಯ ನಡೆದಿರುವುದು ಬೆಳಕಿಗೆ ಬಂದಿದೆ.

    ಭಯಗೊಂಡ ಸಂತ್ರಸ್ತ ಬಾಲಕ ಕೊನೆಗೆ ತನ್ನ ಕುಟುಂಬದ ಸದಸ್ಯರಿಗೆ ಈ ವಿಷಯ ತಿಳಿಸಿದ್ದಾನೆ. ಪೋಷಕರು ತಕ್ಷಣವೇ ಈ ವಿಚಾರವನ್ನು ಬಿಷಪ್ ಗಮನಕ್ಕೆ ತಂದಿದ್ದಾರೆ. ಬಿಷಪ್ ಅವರ ಸಲಹೆಯಂತೆ ಪೋಷಕರು ಪೊಲೀಸರನ್ನು ಸಂಪರ್ಕಿಸಿ ಅಧಿಕೃತ ದೂರು ನೀಡಿದ್ದಾರೆ. ಈ ಸಮಾಲೋಚನೆ ಪ್ರಕ್ರಿಯೆಯಿಂದಾಗಿ ದೂರು ನೀಡಲು ವಿಳಂಬವಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

    ಪೋಕ್ಸೋ ಕಾಯ್ದೆಯ ಮಾರ್ಗಸೂಚಿಗಳ ಪ್ರಕಾರ, ಸಂತ್ರಸ್ತ ಮತ್ತು ದೂರುದಾರರ ಗುರುತನ್ನು ಗೌಪ್ಯವಾಗಿಡಲಾಗಿದೆ. ಮಂಗಳೂರು ದಕ್ಷಿಣ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

    #crime #dakshinakannada
    Previous Articleಕಾಂಗ್ರೆಸ್‌-ಕಾಕ್ರೋಚ್ ಜನತಾ ಪಾರ್ಟಿ ಒಂದೇ ಎಂದ ಗೃಹ ಸಚಿವ ಪ್ರಿಯಾಂಕ್ ಖರ್ಗೆ
    Next Article ವಾಮಂಜೂರು ಶಾರದಾ ಮಹೋತ್ಸವದ ಕಾನೂನು ತಡೆ ಯತ್ನಕ್ಕೆ ಕೋರ್ಟ್ ಮೆಟ್ಟಿಲೇರಿದವರಿಗೆ ನ್ಯಾಯಾಲಯದಲ್ಲಿ ಮುಖಭಂಗ; ವಿಜೃಂಭಣೆಯಿಂದ ನಡೆದ ಶಾರದಾ ಮಾತೆಯ ಪ್ರತಿಷ್ಠಾಪನೆ

    Related Posts

    16 ಅಡಿ ಆಳದ ಬಾವಿಯಲ್ಲಿ 50 ನಿಮಿಷಗಳ ಹೋರಾಟ; 62 ವರ್ಷದ ಮಹಿಳೆಗೆ ಮರುಜೀವ ನೀಡಿದ ಚಾಲಕ

    October 16, 2026

    ಕೆಪಿಎಸ್‌ಸಿ ನೇಮಕಾತಿ ಹಗರಣಕ್ಕೆ ಬಿಗ್ ಟ್ವಿಸ್ಟ್: ಅಭ್ಯರ್ಥಿಗಳಿಗೆ ಫೈವ್‌ಸ್ಟಾರ್ ಹೋಟೆಲ್​ನಲ್ಲಿ ಪರೀಕ್ಷೆ ಬರೆಸಿದರೇ ಸದಸ್ಯರು?

    October 16, 2026

    ಸ್ಟಿಂಗ್ ಆಪರೇಷನ್ ವಿಡಿಯೋ ಅಪ್‌ಲೋಡ್‌ಗೆಂದೇ ಹೊಸ ಚಾನೆಲ್; ಮಾಸ್ಟರ್‌ಮೈಂಡ್‌ಗಾಗಿ ತನಿಖೆ ಚುರುಕು

    October 16, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    16 ಅಡಿ ಆಳದ ಬಾವಿಯಲ್ಲಿ 50 ನಿಮಿಷಗಳ ಹೋರಾಟ; 62 ವರ್ಷದ ಮಹಿಳೆಗೆ ಮರುಜೀವ ನೀಡಿದ ಚಾಲಕ

    October 16, 2026

    ಕೆಪಿಎಸ್‌ಸಿ ನೇಮಕಾತಿ ಹಗರಣಕ್ಕೆ ಬಿಗ್ ಟ್ವಿಸ್ಟ್: ಅಭ್ಯರ್ಥಿಗಳಿಗೆ ಫೈವ್‌ಸ್ಟಾರ್ ಹೋಟೆಲ್​ನಲ್ಲಿ ಪರೀಕ್ಷೆ ಬರೆಸಿದರೇ ಸದಸ್ಯರು?

    October 16, 2026

    ಸ್ಟಿಂಗ್ ಆಪರೇಷನ್ ವಿಡಿಯೋ ಅಪ್‌ಲೋಡ್‌ಗೆಂದೇ ಹೊಸ ಚಾನೆಲ್; ಮಾಸ್ಟರ್‌ಮೈಂಡ್‌ಗಾಗಿ ತನಿಖೆ ಚುರುಕು

    October 16, 2026

    ಹೋಂಸ್ಟೇ ನಿರ್ಮಾಣಕ್ಕೆ ಎನ್‌ಒಸಿ ನೀಡಲು ಲಂಚದ ಬೇಡಿಕೆ; ಗ್ರಾಮ ಲೆಕ್ಕಿಗನ ಬಂಧನ

    October 16, 2026
    Advertisement

    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಕೆಪಿಎಸ್‌ಸಿ ನೇಮಕಾತಿ ಹಗರಣಕ್ಕೆ ಬಿಗ್ ಟ್ವಿಸ್ಟ್: ಅಭ್ಯರ್ಥಿಗಳಿಗೆ ಫೈವ್‌ಸ್ಟಾರ್ ಹೋಟೆಲ್​ನಲ್ಲಿ ಪರೀಕ್ಷೆ ಬರೆಸಿದರೇ ಸದಸ್ಯರು?

    October 16, 2026

    ಸ್ಟಿಂಗ್ ಆಪರೇಷನ್ ವಿಡಿಯೋ ಅಪ್‌ಲೋಡ್‌ಗೆಂದೇ ಹೊಸ ಚಾನೆಲ್; ಮಾಸ್ಟರ್‌ಮೈಂಡ್‌ಗಾಗಿ ತನಿಖೆ ಚುರುಕು

    October 16, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.