ಮಂಗಳೂರು: ವಾಮಂಜೂರು ಶ್ರೀರಾಮನಗರದ ಶ್ರೀ ರಕ್ತೇಶ್ವರಿ ಹಾಗೂ ಪಂಚದೇವತಾ ಸಾನ್ನಿಧ್ಯದ ಆಶ್ರಯದಲ್ಲಿ ದಿನಾಂಕ 16.10.2026 ರಿಂದ 22.10.2026 ರವರೆಗೆ ನಡೆಯಲಿರುವ ಐದನೇ ವರ್ಷದ ವಾಮಂಜೂರು ಶಾರದಾ ಮಹೋತ್ಸವದ ವಿಜೃಂಭಣೆಯ ಸಿದ್ಧತೆಯ ಸಂದರ್ಭದಲ್ಲಿ ಈ ಮಹೋತ್ಸವವನ್ನು ತಡೆಹಿಡಿಯಬೇಕೆಂದು ಅರ್ಜಿ ಸಲ್ಲಿಸಿದ್ದ ಉಳಾಯಿಬೆಟ್ಟು ಪಟ್ರಕೋಡಿ ಕೊರಗಜ್ಜ ಮನೆಯ ದೇವದಾಸ್ ಅಂಚನ್ ಯಾನೆ ದಿನೇಶ್ (47), ಗುಣಪಾಲ್ ವಾಮಂಜೂರು (47) ಮತ್ತು ನವೀನ್ ಶೆಟ್ಟಿ ವಾಮಂಜೂರು (51) ಅವರ ಕೋರಿಕೆಗೆ ಹಿನ್ನಡೆಯಾಗಿದ್ದು, ಕೋರ್ಟ್ ಛೀಮಾರಿ ಹಾಕಿ ಮುಖಭಂಗ ಮಾಡಿದೆ.
ಶಾರದಾ ಮಾತೆಯ ಕೃಪೆ ಎಂದೇ ಹೇಳಬಹುದು. ಇಂದು ಸುಸೂತ್ರವಾಗಿ ಮಾತೆಯ ಪ್ರತಿಷ್ಠಾಪನೆ ವಿಜೃಂಭಣೆಯಿಂದ ನಡೆದಿದ್ದು, ಸತ್ಯಕ್ಕೆ ಸಂದ ಜಯವಾಗಿದೆ. ಈ ದಾವೆಗಾಗಿ ವಾದ ಮಂಡಿಸಿದ ಖ್ಯಾತ ನ್ಯಾಯವಾದಿಗಳಾದ ಬಿ. ಅರುಣ್ ಬಂಗೇರ ಹಾಗೂ ಶ್ರೀ ಚಿದಾನಂದ ಕೆದಿಲಾಯ ಇವರಿಂದ ಪ್ರತಿಷ್ಠಾಪನೆಗೆ ಯಶಸ್ಸು ಸಿಕ್ಕಿದೆ.
ಅಕ್ಟೋಬರ್ 22ರಂದು ಶಾರದಾ ಮಾತೆಯ ವಿಸರ್ಜನಾ ಮೆರವಣಿಗೆಗೆ 10ಕ್ಕೂ ಅಧಿಕ ಟ್ಯಾಬ್ಲೋ, ಕೇರಳ ಚೆಂಡೆ ವಾದ್ಯ ಹಾಗೂ ವರ್ಣರಂಜಿತ ಸ್ತಬ್ಧಚಿತ್ರಗಳು ಪ್ರಮುಖ ಆಕರ್ಷಣೆಯಾಗಲಿವೆ. ಬೃಹತ್ ಶೋಭಾಯಾತ್ರೆಯೊಂದಿಗೆ ನಡೆಯಲಿರುವ ಈ ಮೆರವಣಿಗೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ವಾಮಂಜೂರು ಸಾರ್ವಜನಿಕ ಶ್ರೀ ಶಾರದೋತ್ಸವವನ್ನು ನಿಲ್ಲಿಸಲು ಕೋರ್ಟ್ ಮೆಟ್ಟಿಲೇರಿದ್ದ ದೂರುದಾರರ ಪರವಾಗಿ ಬಿ.ಜಿ. ಫುರ್ಟಾಡೊ ವಾದ ಮಂಡಿಸಿದ್ದರು.
ನ್ಯಾಯದ ಪರ ವಾದಿಸಿದ ನ್ಯಾಯವಾದಿಗಳಿಗೆ ವಾಮಂಜೂರು ಶ್ರೀರಾಮನಗರದ ಶ್ರೀ ರಕ್ತೇಶ್ವರಿ ಹಾಗೂ ಪಂಚದೇವತಾ ಸಾನ್ನಿಧ್ಯ ಸಮಿತಿಯವರು ಕೃತಜ್ಞತೆಯೊಂದಿಗೆ ಚಿರಋಣಿಯಾಗಿರುತ್ತಾರೆ.









