ಮಂಗಳೂರು: ದಸರಾ ಪ್ರಯುಕ್ತ *ದಿನಾಂಕ: 21-10-2026 ರಂದು ಬುಧವಾರ ಸಂಜೆ 4-00 ಗಂಟೆಯಿಂದ ದಿನಾಂಕ 22-10-2026 ರಂದು ಬೆಳಿಗ್ಗೆ 6-00 ಗಂಟೆಯ ವರೆಗೆ* ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ದೇವರ ಮೆರವಣೆಗೆ ಮತ್ತು ಟ್ಯಾಬುಲುಗಳು *ಕುದ್ರೋಳಿ ದೇವಸ್ಥಾನದ ದ್ವಾರ – ಮಣ್ಣಗುಡ್ಡೆ ಜಂಕ್ಷನ್ – ನಾರಾಯಣಗುರು ವೃತ್ತ (ಲೇಡಿಹಿಲ್) – ಲಾಲ್ಭಾಗ್ – ಬಳ್ಳಾಲ್ ಭಾಗ್ – ಪಿ. ವಿ.ಎಸ್.ಜಂಕ್ಷನ್ – ನವಭಾರತ ವೃತ್ತ -ಸಿಟಿ ಸೆಂಟರ್ – ಹಂಪನಕಟ್ಟೆ- ಕೆಬಿ ಕಟ್ಟೆ – ಕಾರ್ ಸ್ಟ್ರೀಟ್- ನ್ಯೂಚಿತ್ರಾ ಜಂಕ್ಷನ್ – ಕುದ್ರೋಳಿ ದ್ವಾರದ* ಮೂಲಕ ದೇವಸ್ಥಾನಕ್ಕೆ ಸಂಚರಿಸಲಿರುತ್ತದೆ. ಸದರಿ ದಿವಸ ಮಧ್ಯಾಹ್ನ 2 ಗಂಟೆಯಿಂದ ನಗರದ ರಸ್ತೆಗಳಲ್ಲಿ ವಾಹನ ದಟ್ಟಣೆಯಿಂದ ಸಂಚಾರಕ್ಕೆ ಅಡಚಣೆ* ಉಂಟಾಗಲಿದೆ.
*ಸಾರ್ವಜನಿಕರಿಗೆ ಸುರಕ್ಷತೆಗಾಗಿ ಸಾರ್ವಜನಿಕರು ಸದ್ರಿ ಮಾರ್ಗವನ್ನು ಉಪಯೋಗಿಸದೇ ಪರ್ಯಾಯ ಮಾರ್ಗಗಳನ್ನು ಅನುಸರಿಸಲು ಮತ್ತು ಮೆರವಣಿಗೆ ಸಾಗುವ ಸದರಿ ರಸ್ತೆಯ ಬದಿಗಳಲ್ಲಿ ವಾಹನಗಳನ್ನು ಪಾರ್ಕ್ ಮಾಡದಂತೆ ತಿಳಿಸಲಾಗಿದೆ.*
ಕುದ್ರೋಳಿ ದಸರಾ ಮೆರವಣಿಗೆಯ ಸಮಯ ವಾಹನ ಸಂಚಾರದ ಮಾರ್ಪಾಡಿನ ವಿವರ:-
- ಕೊಟ್ಟಾರ ಚೌಕಿ ಜಂಕ್ಷನ್ ನಿಂದ ಲೇಡಿಹಿಲ್ ಮುಖಾಂತರ ಮಂಗಳೂರು ನಗರಕ್ಕೆ ಬರುವ ಎಲ್ಲಾ ತರಹದ ವಾಹನಗಳು ಬದಲಿ ಮಾರ್ಗವಾದ ಕುಂಟಿಕಾನ- ಕೆಪಿಟಿ – ನಂತೂರು ಮುಖೇನ ಮಂಗಳೂರು ನಗರಕ್ಕೆ ಸಂಚರಿಸುವುದು.
- ಬಂಟ್ಸ್ ಹಾಸ್ಟೆಲ್ ನಿಂದ ಪಿವಿಎಸ್ ಮುಖಾಂತರ ಎಂ.ಜಿ ರಸ್ತೆಯಲ್ಲಿ ಸಂಚರಿಸುವ ಎಲ್ಲಾ ವಾಹನಗಳು ಬಂಟ್ಸ್ ಹಾಸ್ಟೆಲ್ – ಭಾರತ್ ಬೀಡಿ -ಬಟ್ಟಗುಡ್ಡ -ಕೆಪಿಟಿ ಮುಖೇನ ಅಥವಾ ಬಂಟ್ಸ್ ಹಾಸ್ಟೆಲ್- ಭಾರತ್ ಬೀಡಿ-ಮಲ್ಲಿಕಟ್ಟೆ ಮಾರ್ಗವಾಗಿ ಸಂಚರಿಸುವುದು.
- ಕೆಎಸ್ಆರ್ಟಿಸಿ ಜಂಕ್ಷನ್ ನಿಂದ ಲಾಲ್ ಬಾಗ್ ಕಡೆಗೆ ಬರುವ ವಾಹನಗಳು ಕೆ.ಎಸ್.ಅರ್.ಟಿ.ಸಿ ಜಂಕ್ಷನ್ – ಕಾಪಿಕಾಡ್- ಕುಂಟಿಕಾನ ಮೂಲಕ ಅಥವಾ ಕೆ.ಎಸ್.ಆರ್.ಟಿ.ಸಿ ಜಂಕ್ಷನ್ -ಬಿಜೈ ಬಟ್ಟಗುಡ್ಡ ಮಾರ್ಗವಾಗಿ ಸಂಚರಿಸುವುದು.
- ಎಲ್ಲಾ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಕೆ.ಎಸ್.ಆರ್.ಟಿ.ಸಿ ಜಂಕ್ಷನ್ ನಿಂದ – ಕಾಪಿಕಾಡ್- ಕುಂಟಿಕಾನ ಮೂಲಕ ಅಥವಾ ಬಿಜೈ ಬಟ್ಟಗುಡ್ಡ ಮೂಲಕ ಸಂಚರಿಸುವುದು.
- ಹಂಪನಕಟ್ಟೆ ಕಡೆಯಿಂದ ಕೆ.ಎಸ್.ಆರ್ ರಸ್ತೆ- ನವಭಾರತ್ ವೃತ್ತದ ಮೂಲಕ ಪಿವಿಎಸ್ ಜಂಕ್ಷನ್ ಕಡೆಗೆ ಸಂಚರಿಸುವ ಎಲ್ಲಾ ತರಹದ ವಾಹನಗಳು ಹಂಪನಕಟ್ಟೆ- ಎಲ್.ಹೆಚ್.ಹೆಚ್ – ಅಂಬೇಡ್ಕರ್ ಜಂಕ್ಷನ್ ಮೂಲಕ ಸಂಚರಿಸುವುದು.
- ನ್ಯೂ ಚಿತ್ರಾ ಜಂಕ್ಷನ್ನಿಂದ ನವಭಾರತ ಕಡೆಗೆ ಕಡೆಗೆ ಸಂಚರಿಸುವ ಎಲ್ಲಾ ತರಹದ ವಾಹನಗಳು ಬದಲಿ ಮಾರ್ಗದಲ್ಲಿ ಸಂಚರಿಸುವುದು.
- ಲೇಡಿಹಿಲ್ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಿಂದ ಮಣ್ಣಗುಡ್ಡೆ ಜಂಕ್ಷನ್ -ದುರ್ಗಾಮಹಲ್-ಕುದ್ರೋಳಿ ದೇವಸ್ಥಾನ ಕಡೆಗೆ ಸಂಚರಿಸುವ ಎಲ್ಲಾ ತರಹದ ವಾಹನಗಳು ಬದಲಿ ಮಾರ್ಗದಲ್ಲಿ ಸಂಚರಿಸುವುದು.
- • *ಮಂಗಳೂರು ದಸರಾ ಮೆರವಣಿಗೆ ನೋಡಲು ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ಈ ಕೆಳಕಂಡಂತೆ ನಿಗಧಿಪಡಿಸಿದ ಪಾರ್ಕಿಂಗ್ ಸ್ಥಳಗಳಲ್ಲಿ ನಿಲುಗಡೆ ಮಾಡುವುದು.*
- 📍 ಕರಾವಳಿ ಮೈದಾನ ಪಾರ್ಕಿಂಗ್
📍ಅಳಕೆ ಮಾರ್ಕೆಟ್ ಪಾರ್ಕಿಂಗ್
📍ಉರ್ವ ಮಾರ್ಕೆಟ್ ಮೈದಾನ
📍ಉರ್ವ ಕೆನರಾ ಸ್ಕೂಲ್ ಪಾರ್ಕಿಂಗ್
📍ಕೆನರಾ ಡೊಂಗರಕೇರಿ ಸ್ಕೂಲ್ ಪಾರ್ಕಿಂಗ್
📍ಪೊಂಪೈ ಚರ್ಚ್ ಪಾರ್ಕಿಂಗ್
📍ದುರ್ಗಾಮಹಲ್ ಹೊಟೇಲ್ ಪಾರ್ಕಿಂಗ್
📍 ಕುದ್ರೋಳಿ ನಾರಾಯಣ ಕಾಲೇಜು ಪಾರ್ಕಿಂಗ್
📍ಬಿ ಇ ಎಂ ಸ್ಕೂಲ್ ಪಾರ್ಕಿಂಗ್
📍 ಸರಕಾರಿ ಹೆಣ್ಣುಮಕ್ಕಳ ಪ್ರೌಢ ಶಾಲೆ ಕಾರ್ ಸ್ಟ್ರೀಟ್
📍 ಹೊಟೇಲ್ ವಿಮಲೇಶ್ ಪಾರ್ಕಿಂಗ್
*ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಲು ವಿನಂತಿ.*
“ಸಂಚಾರ ನಿಯಮಗಳನ್ನು ಪಾಲಿಸಿ, ಸುರಕ್ಷಿತರಾಗಿರಿ”
*ಪೊಲೀಸ್ ಆಯುಕ್ತರು*
*ಮಂಗಳೂರು ನಗರ*








