Close Menu
    What's Hot

    ರೌಡಿಶೀಟ್ ಕೇಸ್ ವಿಚಾರದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು; ಹಳೆಯ ಮಾಹಿತಿಗೆ ಮಣೆ ಹಾಕುವಂತಿಲ್ಲ

    October 24, 2026

    ದರ್ಶನ್ ಪತ್ನಿ ವಿಜಯಲಕ್ಷ್ಮಿ ಮ್ಯಾನೇಜರ್‌ಗೆ ಧನ್ವೀರ್‌ರಿಂದ ಬೆದರಿಕೆ ಆರೋಪ; ಆಡಿಯೋ ಸಂಭಾಷಣೆ ಸಾಕ್ಷ್ಯವಾಗಿ ಸಲ್ಲಿಕೆ

    October 24, 2026

    ‘ನನ್ನ ವಿರುದ್ಧದ ಸ್ಟಿಂಗ್‌ ಆಪರೇಷನ್‌ ಸಂಪೂರ್ಣ ಸುಳ್ಳು; ನಾನೇ ದೂರು ನೀಡಿದ್ದೇನೆ’ – ಸಿದ್ದರಾಮಯ್ಯ

    October 24, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ರೌಡಿಶೀಟ್ ಕೇಸ್ ವಿಚಾರದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು; ಹಳೆಯ ಮಾಹಿತಿಗೆ ಮಣೆ ಹಾಕುವಂತಿಲ್ಲ
    ಅಪರಾಧ

    ರೌಡಿಶೀಟ್ ಕೇಸ್ ವಿಚಾರದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು; ಹಳೆಯ ಮಾಹಿತಿಗೆ ಮಣೆ ಹಾಕುವಂತಿಲ್ಲ

    adminBy adminOctober 24, 2026No Comments1 Min Read

    ಬೆಂಗಳೂರು: ವ್ಯಕ್ತಿಗಳ ವಿರುದ್ಧ ರೌಡಿಶೀಟ್ ತೆರೆಯುವ ಅಥವಾ ಮುಂದುವರೆಸುವ ನಿಟ್ಟಿನಲ್ಲಿ ನೋಟಿಸ್​ ಜಾರಿಗೊಳಿಸುವ ಮುನ್ನ ಅವರ ವಿರುದ್ಧದ ಕ್ರಿಮಿನಲ್​​ ಪ್ರಕರಣಗಳ ಸ್ಥಿತಿಗತಿ ಪರಿಶೀಲಿಸುವಂತೆ ನ್ಯಾ.ಸೂರಜ್ ಗೋವಿಂದರಾಜ್​ರಿದ್ದ ಹೈಕೋರ್ಟ್ ಪೀಠ ಶುಕ್ರವಾರ ಮಹತ್ವದ ಆದೇಶ ಹೊರಡಿಸಿದೆ. ಆಡಳಿತಾತ್ಮಕ ಸೂಚನೆ ನೀಡಲು ಡಿಜಿ ಮತ್ತು ಐಜಿಪಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

    ಹಳೆಯ ಮಾಹಿತಿಗಳನ್ನ ಆಧರಿಸಿ ರೌಡಿಶೀಟ್ ತೆರೆಯುವಂತಿಲ್ಲ

    ವ್ಯಕ್ತಿ ವಿರುದ್ಧ ದಾಖಲಾಗಿರುವ ಪ್ರಕರಣಗಳ ದತ್ತಾಂಶವನ್ನು ಪರಿಶೀಲಿಸಬೇಕು. ಹಳೆಯ ಮಾಹಿತಿಗಳನ್ನು ಆಧರಿಸಿ ರೌಡಿಶೀಟ್ ತೆರೆಯಬಾರದು ಎಂದು ಹೈಕೋರ್ಟ್ ತಿಳಿಸಿದೆ. ಪ್ರಕರಣಗಳ ಇತ್ತೀಚಿನ ಸ್ಥಿತಿಗತಿಯನ್ನು ಪರಿಶೀಲಿಸಿದ ಬಳಿಕವೇ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದೆ.

    ರೌಡಿಶೀಟ್ ತೆರೆಯುವುದರಿಂದ ವ್ಯಕ್ತಿಯ ಗೌರವ, ಘನತೆ, ಉದ್ಯೋಗ ಹಾಗೂ ವ್ಯವಹಾರದ ಮೇಲೆ ಪರಿಣಾಮ ಬೀರಬಹುದು. ಅಲ್ಲದೆ, ವ್ಯಕ್ತಿಯ ಸಾಮಾಜಿಕ ಸ್ಥಾನಮಾನದ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆಯಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

    ವ್ಯಕ್ತಿಗಳ ವಿರುದ್ಧ ಬಾಕಿ ಇರುವ ಪ್ರಕರಣಗಳ ದತ್ತಾಂಶವನ್ನು ನೈಜ ಸಮಯದಲ್ಲಿ ನವೀಕರಿಸಬೇಕು. ಪ್ರಕರಣಗಳ ಪ್ರಸ್ತುತ ಸ್ಥಿತಿಗತಿಯನ್ನು ಪರಿಶೀಲಿಸಿ, ಅದರ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಸೂಚಿಸಿದೆ.

    ಪ್ರಕರಣದ ಹಿನ್ನೆಲೆ 

    ಆಂಥೋನಿ ಡೇವಿಡ್ ಜೆ ಅಲಿಯಾಸ್ ಕುಟ್ಟಿ (26) ಎಂಬಾತನ ವಿರುದ್ಧ ಎಫ್​​ಐಆರ್​​ ಇದೆ ಎಂಬ ಕಾರಣಕ್ಕೆ ರೌಡಿಶೀಟ್​​ನಲ್ಲಿ ಹೆಸರು ಸೇರಿಸುವುದಾಗಿ ಜುಲೈ 16ರಂದು ನೋಟಿಸ್​ ಬಂದಿತ್ತು. ಇದನ್ನು ಪ್ರಶ್ನಿಸಿ ಆತ ಹೈಕೋರ್ಟ್ ಮೆಟ್ಟಿಲೇರಿದ್ದರು. ತಮ್ಮ ವಿರುದ್ಧ ರೌಡಿಶೀಟ್ ತೆರೆಯಲು ನೀಡಲಾಗಿದ್ದ ನೋಟಿಸ್ ಅನ್ನು 2024ರ ಜುಲೈ 22ರಲ್ಲೇ ಹೈಕೋರ್ಟ್ ರದ್ದುಗೊಳಿಸಿತ್ತು. ಅಲ್ಲದೆ, ಅದೇ ಪ್ರಕರಣಕ್ಕೆ ಸಂಬಂಧಿಸಿದ ಕ್ರಿಮಿನಲ್ ವಿಚಾರಣೆಯಲ್ಲಿ 2025ರ ಜುಲೈ 10ರಂದು ತಾನು ಖುಲಾಸೆಗೊಂಡಿರುವುದನ್ನೂ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.

    ಅರ್ಜಿದಾರರ ವಾದವನ್ನು ಆಲಿಸಿದ ನ್ಯಾ.ಸೂರಜ್ ಗೋವಿಂದರಾಜ್​ರಿದ್ದ ಹೈಕೋರ್ಟ್ ಪೀಠ, ಅವರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣದಲ್ಲಿ ಖುಲಾಸೆಗೊಂಡ ಬಳಿಕವು ರೌಡಿಶೀಟ್ ತೆರೆಯಲು ಅಥವಾ ಮುಂದುವರಿಸಲು ಯಾವುದೇ ವಾಸ್ತವಿಕ ಅಥವಾ ಕಾನೂನುಬದ್ಧ ಆಧಾರವಿಲ್ಲ ಎಂದು ಹೇಳಿದೆ. ಹೀಗಾಗಿ, ಅರ್ಜಿದಾರರ ವಿರುದ್ಧ ನೀಡಲಾಗಿದ್ದ ನೋಟಿಸ್ ಅನ್ನು ರದ್ದುಗೊಳಿಸಿದೆ.




    #crime #karnataka
    Previous Articleದರ್ಶನ್ ಪತ್ನಿ ವಿಜಯಲಕ್ಷ್ಮಿ ಮ್ಯಾನೇಜರ್‌ಗೆ ಧನ್ವೀರ್‌ರಿಂದ ಬೆದರಿಕೆ ಆರೋಪ; ಆಡಿಯೋ ಸಂಭಾಷಣೆ ಸಾಕ್ಷ್ಯವಾಗಿ ಸಲ್ಲಿಕೆ

    Related Posts

    ದರ್ಶನ್ ಪತ್ನಿ ವಿಜಯಲಕ್ಷ್ಮಿ ಮ್ಯಾನೇಜರ್‌ಗೆ ಧನ್ವೀರ್‌ರಿಂದ ಬೆದರಿಕೆ ಆರೋಪ; ಆಡಿಯೋ ಸಂಭಾಷಣೆ ಸಾಕ್ಷ್ಯವಾಗಿ ಸಲ್ಲಿಕೆ

    October 24, 2026

    ‘ನನ್ನ ವಿರುದ್ಧದ ಸ್ಟಿಂಗ್‌ ಆಪರೇಷನ್‌ ಸಂಪೂರ್ಣ ಸುಳ್ಳು; ನಾನೇ ದೂರು ನೀಡಿದ್ದೇನೆ’ – ಸಿದ್ದರಾಮಯ್ಯ

    October 24, 2026

    ಮಂಗಳೂರಿನಲ್ಲಿ ಕಳ್ಳರ ಅಟ್ಟಹಾಸ; ಕುಲಶೇಖರದಲ್ಲಿ ಗುತ್ತಿನ ಮನೆಯಿಂದ ಚಿನ್ನ, ಬೆಳ್ಳಿ ಆಭರಣ ಕಳವು

    October 24, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ರೌಡಿಶೀಟ್ ಕೇಸ್ ವಿಚಾರದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು; ಹಳೆಯ ಮಾಹಿತಿಗೆ ಮಣೆ ಹಾಕುವಂತಿಲ್ಲ

    October 24, 2026

    ದರ್ಶನ್ ಪತ್ನಿ ವಿಜಯಲಕ್ಷ್ಮಿ ಮ್ಯಾನೇಜರ್‌ಗೆ ಧನ್ವೀರ್‌ರಿಂದ ಬೆದರಿಕೆ ಆರೋಪ; ಆಡಿಯೋ ಸಂಭಾಷಣೆ ಸಾಕ್ಷ್ಯವಾಗಿ ಸಲ್ಲಿಕೆ

    October 24, 2026

    ‘ನನ್ನ ವಿರುದ್ಧದ ಸ್ಟಿಂಗ್‌ ಆಪರೇಷನ್‌ ಸಂಪೂರ್ಣ ಸುಳ್ಳು; ನಾನೇ ದೂರು ನೀಡಿದ್ದೇನೆ’ – ಸಿದ್ದರಾಮಯ್ಯ

    October 24, 2026

    ಮಂಗಳೂರಿನಲ್ಲಿ ಕಳ್ಳರ ಅಟ್ಟಹಾಸ; ಕುಲಶೇಖರದಲ್ಲಿ ಗುತ್ತಿನ ಮನೆಯಿಂದ ಚಿನ್ನ, ಬೆಳ್ಳಿ ಆಭರಣ ಕಳವು

    October 24, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ರೌಡಿಶೀಟ್ ಕೇಸ್ ವಿಚಾರದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು; ಹಳೆಯ ಮಾಹಿತಿಗೆ ಮಣೆ ಹಾಕುವಂತಿಲ್ಲ

    October 24, 2026

    ದರ್ಶನ್ ಪತ್ನಿ ವಿಜಯಲಕ್ಷ್ಮಿ ಮ್ಯಾನೇಜರ್‌ಗೆ ಧನ್ವೀರ್‌ರಿಂದ ಬೆದರಿಕೆ ಆರೋಪ; ಆಡಿಯೋ ಸಂಭಾಷಣೆ ಸಾಕ್ಷ್ಯವಾಗಿ ಸಲ್ಲಿಕೆ

    October 24, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.