Close Menu
    What's Hot

    ಬಂಟ್ವಾಳ :ಮನೆಯಲ್ಲಿ ಆಟವಾಡುತ್ತಿದ್ದ ಬಾಲಕನ ಕುತ್ತಿಗೆಗೆ ಹಗ್ಗ ಸಿಲುಕಿಸಾವು

    October 26, 2026

    ಸಿದ್ದರಾಮಯ್ಯ ಸ್ಟಿಂಗ್ ಪ್ರಕರಣದ ತನಿಖೆ ತೀವ್ರ: ಕಾಂಗ್ರೆಸ್ ನಾಯಕಿ ಕೃಪಾ ಆಳ್ವ ವಿಚಾರಣೆ ನಡೆಸಿದ ಸಿಸಿಬಿ

    October 26, 2026

    ಚಿನ್ನ ಕದ್ದು ಐಷಾರಾಮಿ ಕಾರು ಖರೀದಿಸಿದ ಯುವಕ: ಮಾವನ ಮನೆಗೆ ಕನ್ನ ಹಾಕಿ ಕೊನೆಗೆ ಅಂದರ್

    October 26, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಕರ್ನಾಟಕ»ಅರಮನೆ ಜಾಗ ಸರ್ಕಾರದ್ದು, ಅವರಿಗೆ ಉಳಿದುಕೊಳ್ಳಲು ಜಾಗ ಕೊಟ್ಟಿದ್ದೇವೆ ಅಷ್ಟೇ: ಪ್ರಮೋದಾದೇವಿ ಒಡೆಯರ್‌ಗೆ ಯತೀಂದ್ರ ತಿರುಗೇಟು
    ಕರ್ನಾಟಕ

    ಅರಮನೆ ಜಾಗ ಸರ್ಕಾರದ್ದು, ಅವರಿಗೆ ಉಳಿದುಕೊಳ್ಳಲು ಜಾಗ ಕೊಟ್ಟಿದ್ದೇವೆ ಅಷ್ಟೇ: ಪ್ರಮೋದಾದೇವಿ ಒಡೆಯರ್‌ಗೆ ಯತೀಂದ್ರ ತಿರುಗೇಟು

    adminBy adminOctober 26, 2026No Comments1 Min Read

    ಮೈಸೂರು: ಅರಮನೆ ಬೋರ್ಡ್ ಸರ್ಕಾರದ್ದು, ಅರಮನೆ ಜಾಗ ಸರ್ಕಾರದ್ದು, ಅರಮನೆ ಸರ್ಕಾರದ್ದು, ಅವರಿಗೆ ಉಳಿದುಕೊಳ್ಳಲು ಒಂದಿಷ್ಟು ಜಾಗ ಕೊಟ್ಟಿದ್ದೇವೆ ಅಷ್ಟೇ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ  ಹೇಳಿದ್ದಾರೆ.

    ಮೈಸೂರಿನಲ್ಲಿ  ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಪ್ರಮೋದಾದೇವಿ ಒಡೆಯರ್ ಅವರು ಮಾಧ್ಯಮಗಳಿಗೆ ಬರೆದ ಪತ್ರದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ಅಂಬಾರಿಯನ್ನು ನಾವು ಉಚಿತವಾಗಿ ಪಡೆಯುತ್ತಿಲ್ಲ. ಅಂಬಾರಿಗೂ  ಸರ್ಕಾರ ದುಡ್ಡು ಕೊಡುತ್ತದೆ. ಏನಾದರೂ ಸಮಸ್ಯೆ ಇದ್ದಿದ್ದರೆ, ಸರ್ಕಾರಕ್ಕೆ ನೇರವಾಗಿ ಹೇಳಬಹುದಿತ್ತು. ನಾವು ನಿರಂತರವಾಗಿ ಅವರ ಜೊತೆಯಲ್ಲಿ ಸಂಪರ್ಕದಲ್ಲಿದ್ದೆವು. ನಮ್ಮ ಗಮನಕ್ಕೆ ಏನೂ ತಂದಿಲ್ಲ. ಏಕಾಏಕಿ ಮಾಧ್ಯಮಗಳಿಗೆ ಪತ್ರ ಬರೆದಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ಅವರೇನು ಸರ್ಕಾರಕ್ಕೆ ಪತ್ರ ಬರೆದಿಲ್ಲ. ಅಗತ್ಯವಿದ್ದರೆ ನಾವು ಕೆಲವರನ್ನ ಸರ್ಕಾರದಿಂದ ಅವರ ಬಳಿಗೆ ಕಳಿಹಿಸುತ್ತೇವೆ. ಏನು ಸಮಸ್ಯೆಯಾಗಿದೆ ಎಂಬುದನ್ನ ಬೇಕಾದರೆ ಚರ್ಚೆ ಮಾಡುತ್ತೇವೆ. ಅವರು ಹೇಳಿರುವ ಸಮಸ್ಯೆ ಬಗೆಹರಿಸುತ್ತೇವೆ. ಆದರೆ ಅವರು ಹೇಳಿರುವುದನ್ನೆಲ್ಲ ಒಪ್ಪಲು ಆಗುವುದಿಲ್ಲ. ಅವರು ಹೇಳಿದ ರೀತಿ 7 ದಿನ ದಸರಾ ಮಾಡಲು ಸಾಧ್ಯವಿಲ್ಲ. ದಸರಾ ಸರ್ಕಾರದ್ದಲ್ಲ ಎಂಬ ಪದ ಬಳಕೆಯೂ ಸರಿಯಲ್ಲ. ಸರ್ಕಾರದ ದಸರಾಕ್ಕೂ ಇತಿಹಾಸ ಇದೆ. ಅದನ್ನ ದಸರಾ ಅಲ್ಲ ಎಂಬುದನ್ನ ನಾವು ಒಪ್ಪುವುದಿಲ್ಲ.

    ಅಂಬಾರಿ ಆನೆ ಯಾವುದು ಎಂದು ಕಾನೂನು ಪ್ರಕಾರ ಅವರಿಗೆ ಹೇಳುವ ಅವಶ್ಯಕತೆ ಇಲ್ಲ. ಅಂಬಾರಿ ಆನೆ ತೀರ್ಮಾನ ಆಗಿದ್ದೇ ಕೊನೆ ಘಳಿಗೆಯಲ್ಲಿ. ಮೊದಲು ಮಹೇಂದ್ರ ಆಮೇಲೆ ಧನಂಜಯ ಎಂದರು, ಆಮೇಲೆ ಪ್ರಶಾಂತ ಎಂದರು. ಇಲ್ಲೇ ಸ್ವಲ್ಪ ಗೊಂದಲ ಇತ್ತು, ಹೀಗಾಗಿ ಆಯ್ಕೆ ತಡವಾಗಿದೆ. ಅವರಿಗೆ ಅಂಬಾರಿ ಆನೆ ಯಾವುದು ಎಂಬುದನ್ನು ಹೇಳುವ ಅಗತ್ಯ ಇಲ್ಲ.

    ಜೆಟ್ಟಿ ಕಾಳಗ ರದ್ದಾದ ವಿಚಾರವಾಗಿ, ಪ್ರಮೋದಾದೇವಿಯವರು ಪತ್ರದಲ್ಲಿ ಉಲ್ಲೇಖ ಮಾಡಿರುವುದು ಒಂದು. ಪೊಲೀಸರು ಹೇಳುತ್ತಿರುವುದು ಒಂದು. ಜೆಟ್ಟಿಗಳ ತಡವಾಗಿ ಬಂದರೂ ನಮ್ಮದೇನು ತೊಂದರೆ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೇ ನಾವು ಪರಿಶೀಲನೆ ಮಾಡುತ್ತಿದ್ದೇವೆ. ಎಲ್ಲಿ ತಪ್ಪಾಗಿದೆ ಎಂಬುದನ್ನು ನೋಡುತ್ತಿದ್ದೇವೆ ಎಂದರು.




    #karnataka
    Previous Articleರಾಹುಲ್ ಗಾಂಧಿ ಪ್ರಯಾಣದ ವೇಳೆ ಬೆಂಗಾವಲು ವಾಹನಗಳ ನಡುವೆ ಸರಣಿ ಅಪಘಾತ: 6 ವಾಹನಗಳು ಜಖಂ
    Next Article ಚಿನ್ನ ಕದ್ದು ಐಷಾರಾಮಿ ಕಾರು ಖರೀದಿಸಿದ ಯುವಕ: ಮಾವನ ಮನೆಗೆ ಕನ್ನ ಹಾಕಿ ಕೊನೆಗೆ ಅಂದರ್

    Related Posts

    ಸಿದ್ದರಾಮಯ್ಯ ಸ್ಟಿಂಗ್ ಪ್ರಕರಣದ ತನಿಖೆ ತೀವ್ರ: ಕಾಂಗ್ರೆಸ್ ನಾಯಕಿ ಕೃಪಾ ಆಳ್ವ ವಿಚಾರಣೆ ನಡೆಸಿದ ಸಿಸಿಬಿ

    October 26, 2026

    ನಮ್ಮ ಕುಟುಂಬವನ್ನು ಮುಗಿಸಲು ₹600 ಕೋಟಿಯ ಸಂಚು: ಡಿಕೆಶಿ ವಿರುದ್ಧ ಕುಮಾರಸ್ವಾಮಿಯಿಂದ ಸ್ಫೋಟಕ ಆರೋಪ

    October 26, 2026

    ಉಡುಪಿ–ಕುಂದಾಪುರ ಹೆದ್ದಾರಿಯಲ್ಲಿ ಭೀಕರ ಅಪಘಾತ; ಕಾರು ಡಿಕ್ಕಿಯಾಗಿ ಸ್ಥಳೀಯ RSS ಮುಖಂಡ ಗುರುದಾಸ್ ಶೆಣೈ ಸ್ಥಳದಲ್ಲೇ ಸಾವು

    October 26, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಬಂಟ್ವಾಳ :ಮನೆಯಲ್ಲಿ ಆಟವಾಡುತ್ತಿದ್ದ ಬಾಲಕನ ಕುತ್ತಿಗೆಗೆ ಹಗ್ಗ ಸಿಲುಕಿಸಾವು

    October 26, 2026

    ಸಿದ್ದರಾಮಯ್ಯ ಸ್ಟಿಂಗ್ ಪ್ರಕರಣದ ತನಿಖೆ ತೀವ್ರ: ಕಾಂಗ್ರೆಸ್ ನಾಯಕಿ ಕೃಪಾ ಆಳ್ವ ವಿಚಾರಣೆ ನಡೆಸಿದ ಸಿಸಿಬಿ

    October 26, 2026

    ಚಿನ್ನ ಕದ್ದು ಐಷಾರಾಮಿ ಕಾರು ಖರೀದಿಸಿದ ಯುವಕ: ಮಾವನ ಮನೆಗೆ ಕನ್ನ ಹಾಕಿ ಕೊನೆಗೆ ಅಂದರ್

    October 26, 2026

    ಅರಮನೆ ಜಾಗ ಸರ್ಕಾರದ್ದು, ಅವರಿಗೆ ಉಳಿದುಕೊಳ್ಳಲು ಜಾಗ ಕೊಟ್ಟಿದ್ದೇವೆ ಅಷ್ಟೇ: ಪ್ರಮೋದಾದೇವಿ ಒಡೆಯರ್‌ಗೆ ಯತೀಂದ್ರ ತಿರುಗೇಟು

    October 26, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಸಿದ್ದರಾಮಯ್ಯ ಸ್ಟಿಂಗ್ ಪ್ರಕರಣದ ತನಿಖೆ ತೀವ್ರ: ಕಾಂಗ್ರೆಸ್ ನಾಯಕಿ ಕೃಪಾ ಆಳ್ವ ವಿಚಾರಣೆ ನಡೆಸಿದ ಸಿಸಿಬಿ

    October 26, 2026

    ಅರಮನೆ ಜಾಗ ಸರ್ಕಾರದ್ದು, ಅವರಿಗೆ ಉಳಿದುಕೊಳ್ಳಲು ಜಾಗ ಕೊಟ್ಟಿದ್ದೇವೆ ಅಷ್ಟೇ: ಪ್ರಮೋದಾದೇವಿ ಒಡೆಯರ್‌ಗೆ ಯತೀಂದ್ರ ತಿರುಗೇಟು

    October 26, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.