Author: admin

ಮಂಗಳೂರು : ಫೇಸ್‌ಬುಕ್‌ನಲ್ಲಿ ಪರಿಚಯವಾದ ಅಪರಿಚಿತ ವ್ಯಕ್ತಿಯೊಬ್ಬ ಬ್ರಿಟನ್‌ನಿಂದ ಕಳುಹಿಸಿದ್ದಾನೆ ಎನ್ನಲಾದ ‘ಉಡುಗೊರೆ ಪಾರ್ಸೆಲ್’ ಬಿಡುಗಡೆಗೊಳಿಸುವ ನೆಪದಲ್ಲಿ, ಕಸ್ಟಮ್ಸ್ ಅಧಿಕಾರಿಯಂತೆ ನಟಿಸಿ ಗೃಹಣಿಯೊಬ್ಬರಿಂದ ಬರೋಬ್ಬರಿ ₹2,67,000 ಹಣ ಪಡೆದು ವಂಚಿಸಿರುವ ಘಟನೆ ನಡೆದಿದೆ. ಗೃಹಣಿ ಶ್ರೀಮತಿ (46) ಅವರಿಗೆ ಸುಮಾರು ಎರಡು ತಿಂಗಳ ಹಿಂದೆ ಫೇಸ್‌ಬುಕ್‌ನಲ್ಲಿ “ಡಾ. ವಿಲಿಯಮ್ಸ್ ಹೆರ್ಬರ್ಟ್” ಎಂಬ ಪ್ರೊಫೈಲ್‌ನಿಂದ ಪರಿಚಯವಾಗಿತ್ತು. ತಾನು ಯುನೈಟೆಡ್ ಕಿಂಗ್ಡಮ್ (UK) ಮೂಲದವನೆಂದು ಪರಿಚಯಿಸಿಕೊಂಡಿದ್ದ ಈತ, ವಾಟ್ಸಾಪ್ ಹಾಗೂ ಫೇಸ್‌ಬುಕ್ ಮೆಸೆಂಜರ್ ಮೂಲಕ ನಿರಂತರ ಸಂಪರ್ಕದಲ್ಲಿದ್ದು ದೂರುದಾರರ ವಿಶ್ವಾಸ ಗಳಿಸಿದ್ದ. ಜೂನ್ 28ರಂದು ವಾಟ್ಸಾಪ್ ಮೂಲಕ ಕರೆ ಮಾಡಿ, “ನಿಮಗಾಗಿ ಚಾಕೊಲೇಟ್, ಚಿನ್ನ, ಬ್ಯಾಗ್ ಹಾಗೂ ಅಪಾರ ಪ್ರಮಾಣದ ಹಣವಿರುವ ಪಾರ್ಸೆಲ್ ಕಳುಹಿಸಿದ್ದೇನೆ,” ಎಂದು ನಂಬಿಸಿದ್ದ. ಇದರ ಬೆನ್ನಲ್ಲೇ ಜೂನ್ 29ರಂದು ‘ಕಸ್ಟಮ್ಸ್ ಆಫೀಸರ್’ ಎಂದು ಪರಿಚಯಿಸಿಕೊಂಡ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, “ನಿಮ್ಮ ಹೆಸರಿನಲ್ಲಿದ್ದ ಪಾರ್ಸೆಲ್ ಏರ್‌ಪೋರ್ಟ್ ಕಸ್ಟಮ್ಸ್‌ನಲ್ಲಿದೆ. ಲಗೇಜ್ ಚಾರ್ಜ್ ಪಾವತಿಸಿದರೆ ಬಿಡುಗಡೆ ಮಾಡುತ್ತೇವೆ,” ಎಂದಿದ್ದ. ಇದನ್ನು ನಂಬಿದ ಮಹಿಳೆ…

Read More

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಬಾಡಿಗುಡ್ಡೆ ಸಮೀಪದ ಕಪಿಲಾ ನದಿಯಲ್ಲಿ ಸಿಲುಕಿಕೊಂಡಿದ್ದ 73 ವರ್ಷದ ವೃದ್ಧನನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಸಾಹಸಮಯ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಭಾರೀ ಮಳೆಯಿಂದಾಗಿ ಕಪಿಲಾ ನದಿಯಲ್ಲಿ ನೀರಿನ ಹರಿವು ಏಕಾಏಕಿ ಹೆಚ್ಚಿದ ಪರಿಣಾಮ ಬಾಲಪ್ಪ (73) ಎಂಬ ವೃದ್ಧ ನದಿಯ ಮಧ್ಯದಲ್ಲಿ ಸಿಲುಕಿಕೊಂಡಿದ್ದರು. ನದಿಯ ಮಧ್ಯದಲ್ಲಿ ಸಿಲುಕಿರುವುದನ್ನು ಗಮನಿಸಿದ ಸ್ಥಳೀಯ ಯುವಕರು ತಕ್ಷಣವೇ ಶೌರ್ಯ ವಿಪತ್ತು ನಿರ್ವಹಣಾ ತಂಡಕ್ಕೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ತಕ್ಷಣ ತಂಡದ ಸದಸ್ಯರಾದ ರಾಧಾಕೃಷ್ಣ ಗುತ್ತು, ರಮೇಶ್ ಬೈರಕಟ್ಟ ಹಾಗೂ ಸ್ಥಳೀಯ ಪರಿಣಿತ ಈಜುಗಾರ ಮೋಹನ ಗೌಡ ಬದ್ರಿಜಲು ಸ್ಥಳಕ್ಕೆ ಧಾವಿಸಿದರು. ಶಿಶಿಲೇಶ್ವರ ದೇವಸ್ಥಾನದ ವೆಂಟೆಡ್ ಅಣೆಕಟ್ಟಿನಿಂದ ಸುಮಾರು 900 ಮೀಟರ್ ಕೆಳಭಾಗದಲ್ಲಿ, ಕಪಿಲಾ ನದಿಯ ಎರಡು ಶಾಖೆಗಳ ಮಧ್ಯೆ ಸಿಲುಕಿದ್ದ ಬಾಲಪ್ಪ ಅವರಿಗೆ ಮೊದಲು ಲೈಫ್ ಜಾಕೆಟ್ ಧರಿಸಿ, ಬಳಿಕ ಹಗ್ಗಗಳ ನೆರವಿನಿಂದ ಸುರಕ್ಷಿತವಾಗಿ ನದಿಯ ದಡಕ್ಕೆ ಕರೆತರಲಾಯಿತು.…

Read More

ಬಲೂಚಿಸ್ತಾನ: ಬಲೂಚಿಸ್ತಾನದಲ್ಲಿ ಪಾಕಿಸ್ತಾನ  ಸೇನೆಯ ದೌರ್ಜನ್ಯಗಳ ಕುರಿತು ಹೊಸ ವರದಿಗಳು ಹೊರಬಿದ್ದಿದ್ದು, ಆ ಪ್ರಾಂತ್ಯದಲ್ಲಿ ಸೇನೆಯು ನಡೆಸುತ್ತಿರುವ ಸೇನಾ ಕಾರ್ಯಾಚರಣೆಗಳ ಕುರಿತು ಕಳವಳಗಳು ತೀವ್ರಗೊಂಡಿವೆ. ಪಾಕಿಸ್ತಾನ ಸೇನೆಯ ಸಿಬ್ಬಂದಿ ಬಲೂಚಿಸ್ತಾನದಲ್ಲಿ ನಿರಪರಾಧಿ ಬಾಲಕಿಯೊಬ್ಬಳಿಗೆ ಗುಂಡಿಕ್ಕಿ ಕೊಂದ ನಂತರ, ಹಮಾಸ್ ಮಾದರಿಯಲ್ಲಿ ಆಕೆಯ ಮೃತದೇಹವನ್ನು ಸೇನಾ ವಾಹನದ ಮುಂಭಾಗದಲ್ಲಿ ಕಟ್ಟಿ ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದಾರೆ. ಪಾಕಿಸ್ತಾನ ಸೇನೆಯು ಕಳೆದ ಹಲವಾರು ವರ್ಷಗಳಿಂದ ಬಲೂಚಿಸ್ತಾನ ಮತ್ತು ಖೈಬರ್ ಪಖ್ತುಂಖ್ವಾಗಳಲ್ಲಿ ಇಂತಹ ದೌರ್ಜನ್ಯಗಳನ್ನು ನಡೆಸುತ್ತಾ ಬಂದಿದೆ. ಪಾಕಿಸ್ತಾನ ಸೇನೆಯು ಬಲೂಚಿಸ್ತಾನ ಹಾಗೂ ಖೈಬರ್ ಪಖ್ತುಂಖ್ವಾ ಪ್ರಾಂತ್ಯಗಳಲ್ಲಿ ಸ್ಥಳೀಯ ನಾಗರಿಕರ ವಿರುದ್ಧ ಸುದೀರ್ಘ ಕಾಲದಿಂದ ಇಂತಹ ಕಠಿಣ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದೆ ಎಂಬ ಆರೋಪಗಳಿವೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲೂ ಹಿಂಸಾಚಾರ: ಈ ಘಟನೆಯ ಜೊತೆಗೆ ಪಾಕ್ ಆಕ್ರಮಿತ ಕಾಶ್ಮೀರದ (PoK) ರಾವಲಾಕೋಟ್ ಪ್ರದೇಶದಲ್ಲೂ ಭಾರಿ ಪ್ರತಿಭಟನೆಗಳು ಹಾಗೂ ಹಿಂಸಾಚಾರ ವರದಿಯಾಗಿದೆ. ರಾವಲಾಕೋಟ್‌ನಲ್ಲಿ ನಡೆದ ಪ್ರತಿಭಟನೆಗಳ ವೇಳೆ ಪಾಕಿಸ್ತಾನಿ ಪಡೆಗಳು ಕಳೆದ ಎರಡು…

Read More

ಮಂಗಳೂರು: ಧರ್ಮಸ್ಥಳದ ಆಸುಪಾಸಿನಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಬಂಗ್ಲೆಗುಡ್ಡೆಯಲ್ಲಿ ಎಸ್‌ಐಟಿ ನಡೆಸಿದ ಉತ್ಖನನದ ವೇಳೆ ಪತ್ತೆಯಾಗಿದ್ದ ಅಸ್ಥಿಪಂಜರಗಳ ಪೈಕಿ ಮೂರು ಅಸ್ಥಿಪಂಜರಗಳ ಗುರುತು ಡಿಎನ್‌ಎ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಮೂವರ ಕುಟುಂಬಸ್ಥರಿಂದ ಸಂಗ್ರಹಿಸಿದ್ದ ಡಿಎನ್‌ಎ ಮಾದರಿಗಳನ್ನು ಅಸ್ಥಿಪಂಜರಗಳ ಡಿಎನ್‌ಎ ಜತೆ ಹೋಲಿಕೆ ಮಾಡಲಾಗಿತ್ತು. ಈ ಪರೀಕ್ಷೆಯಲ್ಲಿ ಮೂರು ಅಸ್ಥಿಪಂಜರಗಳ ಡಿಎನ್‌ಎ ಕುಟುಂಬಸ್ಥರ ಮಾದರಿಗಳೊಂದಿಗೆ ಹೊಂದಾಣಿಕೆಯಾಗಿದೆ ಎಂದು ತಿಳಿದುಬಂದಿದೆ. ಪತ್ತೆಯಾದವರು ಯಾರು? ಡಿಎನ್‌ಎ ಪರೀಕ್ಷೆಯಲ್ಲಿ ಗುರುತು ದೃಢಪಟ್ಟಿರುವವರ ಪೈಕಿ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಗ್ರಾಮದ ಯು.ಬಿ. ಅಯ್ಯಪ್ಪ (70), ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದಾಸರಕಲ್ಲಹಳ್ಳಿಯ ಆದಿಶೇಷ (27) ಹಾಗೂ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮೀಸಗಾಣಹಳ್ಳಿ ಗ್ರಾಮದ ಕೃಷ್ಣಪ್ಪ (85) ಸೇರಿದ್ದಾರೆ. ಅಂದರೆ, ಡಿಎನ್‌ಎ ಪರೀಕ್ಷೆಯಲ್ಲಿ ಗುರುತು ಪತ್ತೆಯಾದ ಮೂವರೂ ಪುರುಷರು ಎಂಬುದು ದೃಢಪಟ್ಟಿದೆ. ಇವರ ಪೈಕಿ ಅಯ್ಯಪ್ಪ ಮತ್ತು ಕೃಷ್ಣಪ್ಪ 70…

Read More

ಕೋಲ್ಕತ್ತಾ: ಬಂಗಾಳದ ಬಿರ್ಭಮ್‌ನಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಮರಳು ಮಾಫಿಯಾ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ಪೊಲೀಸರು ನಿವೃತ್ತ ಸರ್ಕಾರಿ ಬಸ್‌ ಚಾಲಕನ (ಈಗ ಕಲ್ಲು ವ್ಯಾಪಾರಿ) ಮನೆ ಮೇಲೆ ದಾಳಿ ನಡೆಸಿದ ವೇಳೆ ಭಾರೀ ಸಂಪತ್ತನ್ನ ಕಂಡು ಬೆಚ್ಚಿಬಿದ್ದಿದ್ದಾರೆ. ನಿವೃತ್ತ ಸರ್ಕಾರಿ ಬಸ್‌ ಚಾಲಕನ  ಮನೆ ಮೇಲೆ ದಾಳಿ ನಡೆಸಿದ ಬಂಗಾಳ ಪೊಲೀಸರು ಕನಿಷ್ಠ 28.5 ಕೋಟಿ ನಗದು, 15 ಚಿನ್ನ ಜಪ್ತಿಮಾಡಿದ್ದಾರೆ. ಜಪ್ತಿ ಮಾಡಿದ ಚಿನ್ನದ ಮೌಲ್ಯ 20 ಕೋಟಿ ರೂ.ಗಿಂತಲೂ ಅಧಿಕ ಎಂದು ಅಂದಾಜಿಸಲಾಗಿದೆ. ಈ ಪ್ರಕರಣ ಸಂಬಂಧ ಪೊಲೀಸರು ನಿವೃತ್ತ ಬಸ್‌ ಚಾಲಕ ಮಿನಾರ್‌ ಮತ್ತು ಅವರ ಮಗನನ್ನ ಬಂಧಿಸಿದ್ದಾರೆ. ಜೊತೆಗೆ ಇತರ ಸ್ಥಳಗಳಲ್ಲೂ ಹಣ ಸಂಗ್ರಹಿಸಲಾಗಿದೆಯೇ ಅನ್ನೋದ್ರ ಬಗ್ಗೆ ಪ್ರಶ್ನೆ ಮಾಡಲಾಗ್ತಿದೆ. ಮಿನಾರ್‌, ಎಸ್ಕೇಪ್‌ ಆಗಿರುವ ಟಿಲ್ಲು ಮೊಂಡಲ್‌ ಅಲಿಯಾಸ್‌ ಮೊಹಮ್ಮದ್‌ ನಜೀಬುದ್ದೀನ್‌ ಅವರ ಸೋದರ ಮಾವ. ಟಿಲ್ಲು ಮಂಡಲ್‌ ಬಿರ್ಭಮ್‌ನ ಕ್ಷೇತ್ರದ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥ ಅನುಬ್ರತಾ ಮೊಂಡಲ್ ಅವರ ಆಪ್ತ. ಸರ್ಕಾರಿ ಬಸ್‌…

Read More

ನವದೆಹಲಿ: ಕಳೆದ ವರ್ಷ ಭೀಕರವಾಗಿ ಪತನಗೊಂಡು 260 ಪ್ರಯಾಣಿಕರ ಸಾವಿಗೆ ಕಾರಣವಾಗಿದ್ದ ಏರ್ ಇಂಡಿಯಾ ಎಐ-171 ವಿಮಾನದ ಇಂಧನ ನಿಯಂತ್ರಣ ಸ್ವಿಚ್‌ನ ಲಾಕಿಂಗ್ ವ್ಯವಸ್ಥೆಯಲ್ಲಿ ತನಿಖಾಧಿಕಾರಿಗಳಿಗೆ ಯಾವುದೇ ದೋಷ ಅಥವಾ ಅಸಹಜತೆ ಕಂಡುಬಂದಿಲ್ಲ ಎಂದು ಕೇಂದ್ರ ಸರ್ಕಾರ ಇಂದು ಸಂಸತ್​​ಗೆ ತಿಳಿಸಿದೆ. ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ ಕೇಂದ್ರ ಸರ್ಕಾರ, ಏರ್ ಇಂಡಿಯಾ ಡ್ರೀಮ್​ಲೈನರ್ ವಿಮಾನದ ಮೂಲ ಉಪಕರಣ ತಯಾರಕರು ನಡೆಸಿದ ಸುಧಾರಿತ ತಾಂತ್ರಿಕ ತಪಾಸಣೆಯ ನಂತರ ಈ ವಿಷಯ ದೃಢಪಟ್ಟಿದೆ ಎಂದು ಸ್ಪಷ್ಟಪಡಿಸಿದೆ. ಪ್ರಸ್ತುತ ಅಮೆರಿಕದ ಸಿಯಾಟಲ್‌ನಲ್ಲಿ ಈ ವಿಮಾನದ ಸಂಪೂರ್ಣ ಥ್ರಸ್ಟ್ ನಿಯಂತ್ರಣ ಮಾಡ್ಯೂಲ್‌ನ ತಪಾಸಣೆ ನಡೆಯುತ್ತಿರುವ ನಡುವೆಯೇ ಕೇಂದ್ರ ಸರ್ಕಾರದಿಂದ ಈ ಹೇಳಿಕೆ ಬಂದಿದೆ. ವಿಮಾನ ಅಪಘಾತ ತನಿಖಾ ಸಂಸ್ಥೆಯು ತನ್ನ ಅಂತಿಮ ವರದಿ ನೀಡುವಲ್ಲಿ ಯಾವುದೇ ವಿಳಂಬ ಮಾಡಿಲ್ಲ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಸಂಸತ್ತಿಗೆ ತಿಳಿಸಿದೆ. ಬೃಹತ್ ವಿಮಾನ ಅಪಘಾತಗಳ ತನಿಖೆಯು ಸುದೀರ್ಘ ಪ್ರಕ್ರಿಯೆಯಾಗಿದ್ದು, ಎಐ-171 ವಿಮಾನದ ತನಿಖೆಯು ಪ್ರಸ್ತುತ ಅಂತಿಮ…

Read More

ಬೆಂಗಳೂರು: ಕೆಲಸದ ಅವಧಿಯಲ್ಲಿ ಗ್ರಾಮ ಪಂಚಾಯತ್ ಅಧಿಕಾರಿ ಮತ್ತು ಸಿಬ್ಬಂದಿ ಸಿದ್ದರಬೆಟ್ಟದ ತಪ್ಪಲಲ್ಲಿ ಮದ್ಯ ಸಹಿತ ಪಾರ್ಟಿ ಮಾಡಿದ್ದ 6 ಜನ ಪಿಡಿಓಗಳನ್ನ ಸಸ್ಪೆಂಡ್ ಮಾಡಲಾಗಿದೆ. ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ ಅಮಾನತು ಆದೇಶ ಹೊರಡಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧ ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿ ಅಧಿಕಾರಿ, ಇಬ್ಬರು ಕಾರ್ಯದರ್ಶಿ ಮತ್ತು ಒಬ್ಬ ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಶುಕ್ರವಾರ (ಜು.24ರಂದು) ಸಂಜೆ ಸಿದ್ದರಬೆಟ್ಟದ ಬಳಿ ಮದ್ಯ, ಮಾಂಸ ಸೇವಿಸಿ ಮೋಜು ಮಸ್ತಿ ಮಾಡಿದ ಬಗ್ಗೆ ಹಲವು ಮಾಧ್ಯಮಗಳಲ್ಲಿ ದೃಶ್ಯ ಸಹಿತ ವರದಿ ಪ್ರಸಾರವಾಗಿದ್ದ ಹಿನ್ನೆಲೆಯಲ್ಲಿ ಪಾರ್ಟಿಯಲ್ಲಿ ಪಾಲ್ಗೊಂಡ ಎಲ್ಲರಿಗೂ ಕಾರಣ ಕೇಳಿ ನೋಟಿಸ್ ನೀಡಿ, ಕರ್ತವ್ಯದ ಸಮಯದಲ್ಲಿ ಒಂದು ಕಡೆ ಸೇರಿ ಪಾರ್ಟಿ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾದಲ್ಲಿ ಅಮಾನತು ಮಾಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ 6 ಪಿಡಿಓ ಹಾಗೂ ಸಿಬ್ಬಂದಿಗೆ ನೋಟಿಸ್ ನೀಡಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆ…

Read More

ಉಪ್ಪಿನಂಗಡಿ: ಜುಲೈ 16 ರಂದು ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಲಾವಣ್ಯ ಎಂಬ ಯುವತಿಯನ್ನು ಹತ್ಯೆ ಮಾಡಿದ್ದ ಆರೋಪಿಯು ಕೊಲೆಗೆ ಬಳಸಿದ್ದ ಮಾರಾಕಾಸ್ತ್ರವನ್ನು ಉಪ್ಪಿನಂಗಡಿಯಲ್ಲಿ ಖರೀದಿಸಿದ್ದ, ಈ ಹಿನ್ನೆಲೆ ಉಪ್ಪಿನಂಗಡಿಯಲ್ಲಿ ಬುಧವಾರದಂದು ಮಹಜರು ಪ್ರಕ್ರಿಯೆಯನ್ನು ನಡೆಸಲಾಯಿತು. ಲಾವಣ್ಯಳನ್ನು ಕೊಲೆಗೈಯುವ ಬಗ್ಗೆ ಪೂರ್ವ ಯೋಜನೆಯನ್ನು ರೂಪಿಸಿದ್ದ ಎನ್ನಲಾಗಿದ್ದು, ಪೂರಕವಾಗಿ ಜುಲೈ 15 ರಂದೇ ಉಪ್ಪಿನಂಗಡಿಗೆ ಆಗಮಿಸಿ ಅಲ್ಲಿ ಕೃಷಿ ಸಲಕರಣೆಗಳ ಮಾರಾಟ ಮಳಿಗೆಗೆ ಭೇಟಿ ನೀಡಿದ್ದ. ಅಲ್ಲಿ ಕೃಷಿಕರು ಬಳಕೆಗೆ ಬೇಕಾಗುವ ಉದ್ದನೆಯ ಕತ್ತಿಯನ್ನು ಪರಿಶೀಲಿಸಿ ಅದರ ಬೆಲೆಯನ್ನು ಕೇಳಿದ್ದ. ಬಳಿಕ ಅಲ್ಲಿದ ಹೋರ ಹೋಗಿ ಬೇರೆಲ್ಲೋ ವಿಚಾರಿಸಲು ಯತ್ನಿಸಿ ಮರಳಿ ಅದೇ ಮಳಿಗೆಗೆ ಬಂದು ಕತ್ತಿಯನ್ನು ಖರೀದಿಸಿದ್ದ. ಕಾಗದದಿಂದ ಸುತ್ತುವರೆದು ಪ್ಯಾಕ್ ಮಾಡಲಾದ ಕತ್ತಿಯನ್ನು ಅಲ್ಲೇ ಸ್ವಲ್ಪ ಹೊತ್ತು ಇರಿಸಿ ಹೊರ ಹೋದಾತ ಬಳಿಕ ಬಂದು ಕತ್ತಿಯನ್ನು ಪಡೆದುಕೊಂಡು ಹೋಗಿರುವ ದೃಶ್ಯಾವಳಿಗಳು ಸಿಸಿ ಕ್ಯಾಮಾರದ ಸಂಗ್ರಹದಲ್ಲಿ ಗೋಚರಿಸಿದೆ. ಈ ಬಗ್ಗೆ ತನಿಖಾಧಿಕಾರಿಗಳು ಆರೋಪಿ ಚೇತನ್ ನ ಮುಖವನ್ನು ಕಪ್ಪು ಬಟ್ಟೆಯಿಂದ ಮರೆಮಾಚಿ ಸ್ಥಳಕ್ಕೆ…

Read More

ತಿರುವನಂತಪುರಂ: ಭಾರತದ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಹೆಜ್ಜೆಯಾಗಿ, ಹೊಸ ಪೀಳಿಗೆಯ ಬ್ರಹ್ಮೋಸ್-ಎನ್‌ಜಿ  ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳ ಉತ್ಪಾದನಾ ಘಟಕವನ್ನು ಕೇರಳದ ತಿರುವನಂತಪುರಂ ಸಮೀಪದ ನೆಟ್ಟುಕಲ್ತೇರಿಯಲ್ಲಿ ಸ್ಥಾಪಿಸಲು ಸಿದ್ಧತೆಗಳು ಆರಂಭವಾಗಿವೆ. ಈ ಉದ್ದೇಶಕ್ಕಾಗಿ ಸುಮಾರು 180 ಎಕರೆ ಭೂಮಿಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೆ ಹಸ್ತಾಂತರಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ವರದಿಯಾಗಿದೆ. ಪ್ರಸ್ತುತ ತಿರುವನಂತಪುರಂನ ಚಕ್ಕಾದಲ್ಲಿರುವ ಬ್ರಹ್ಮೋಸ್ ಏರೋಸ್ಪೇಸ್ ತಿರುವನಂತಪುರಂ ಲಿಮಿಟೆಡ್ ಘಟಕದಲ್ಲಿ ಕ್ಷಿಪಣಿಗಳ ಹೊರ ಶೆಲ್, ಕಂಟೇನರ್ ಮತ್ತು ಏರ್‌ಬೋರ್ನ್ ಲಾಂಚರ್‌ಗಳ ನಿರ್ಮಾಣ ನಡೆಯುತ್ತಿದೆ. ಹೊಸ ಘಟಕದಲ್ಲಿ ಸಂಪೂರ್ಣ ಪ್ರಮಾಣದಲ್ಲಿ ಹೊಸ ತಲೆಮಾರಿನ ಬ್ರಹ್ಮೋಸ್-ಎನ್‌ಜಿ ಕ್ಷಿಪಣಿಗಳ ಉತ್ಪಾದನೆಗೆ ಅಗತ್ಯವಾದ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಾಗುತ್ತದೆ. ಬ್ರಹ್ಮೋಸ್-ಎನ್‌ಜಿ ಎಂದರೇನು? : ಬ್ರಹ್ಮೋಸ್-ಎನ್‌ಜಿ ಈಗ ಬಳಕೆಯಲ್ಲಿರುವ ಬ್ರಹ್ಮೋಸ್ ಕ್ಷಿಪಣಿಯ ಹಗುರ ಮತ್ತು ಚಿಕ್ಕ ಆವೃತ್ತಿಯಾಗಿದೆ. ಸುಮಾರು 3 ಟನ್ ತೂಕದ ಸಾಂಪ್ರದಾಯಿಕ ಬ್ರಹ್ಮೋಸ್‌ಗೆ ಹೋಲಿಸಿದರೆ, ಹೊಸ ಮಾದರಿಯ ತೂಕ 1.3 ರಿಂದ 1.5 ಟನ್ ಮಾತ್ರವಾಗಿದ್ದು, ಉದ್ದವೂ 5–6 ಮೀಟರ್‌ಗಳಷ್ಟಿರಲಿದೆ. ಇದರ…

Read More

ಹೈದರಾಬಾದ್: ಪ್ರಯಾಣಿಕನ ದುಬಾರಿ ಮದ್ಯದ ಬಾಟಲಿ ಒಡೆದ ಪ್ರಕರಣದಲ್ಲಿ ಕೇವಲ 500 ಮೌಲ್ಯದ ವೋಚರ್​​ ನೀಡಲು ಮುಂದಾಗಿದ್ದ ಇಂಡಿಗೋ ಏರ್‌ಲೈನ್ಸ್‌ಗೆ ಹೈದರಾಬಾದ್ ಜಿಲ್ಲಾ ಗ್ರಾಹಕರ ವಿವಾದ ಪರಿಹಾರ ಆಯೋಗ-III ತೀವ್ರ ತರಾಟೆಗೆ ತೆಗೆದುಕೊಂಡಿದೆ. ಒಡೆದ ಬಾಟಲಿಯ ಸಂಪೂರ್ಣ ಮೌಲ್ಯ, ಮಾನಸಿಕ ವೇದನೆಗೆ ಪರಿಹಾರ ಹಾಗೂ ನ್ಯಾಯಾಂಗ ವೆಚ್ಚವನ್ನು ಪಾವತಿಸುವಂತೆ ಆಯೋಗ ಆದೇಶಿಸಿದೆ. ಯೂಸುಫ್‌ಗುಡ ನಿವಾಸಿ ವಿನೀತ್ ಅವರು 2025ರ ಸೆಪ್ಟೆಂಬರ್ 3ರಂದು ದೆಹಲಿಯಿಂದ ಚೆನ್ನೈಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಿದ್ದರು. ಚೆಕ್-ಇನ್ ವೇಳೆ ತಮ್ಮ ಸೂಟ್‌ಕೇಸ್‌ನಲ್ಲಿ 35,000 ಮೌಲ್ಯದ ಪ್ರೀಮಿಯಂ ವೈಟ್ ಅಂಡ್ ಬ್ಲೂ ಮದ್ಯದ ಬಾಟಲಿ ಇದೆ ಎಂದು ವಿಮಾನಯಾನ ಸಂಸ್ಥೆಯ ಸಿಬ್ಬಂದಿಗೆ ಮುಂಚಿತವಾಗಿಯೇ ತಿಳಿಸಿದ್ದರು. ಇದು ಅತ್ಯಂತ ಸೂಕ್ಷ್ಮ ವಸ್ತುವಾಗಿರುವುದನ್ನೂ ಅವರು ಹೇಳಿದ್ದರು. ಆದರೆ ಚೆನ್ನೈ ತಲುಪಿ ಲಗೇಜ್ ಪಡೆದು ಸೂಟ್‌ಕೇಸ್ ತೆರೆದಾಗ, ಮದ್ಯದ ಬಾಟಲಿ ಸಂಪೂರ್ಣ ಒಡೆದಿರುವುದು ಕಂಡುಬಂದಿತು. ಬಾಟಲಿಯಲ್ಲಿದ್ದ ಮದ್ಯ ಸೋರಿಕೆಯಾಗಿದ್ದು, ಸೂಟ್‌ಕೇಸ್‌ನಲ್ಲಿದ್ದ ಇತರೆ ವಸ್ತುಗಳಿಗೂ ಹಾನಿಯಾಗಿತ್ತು. ವಿಮಾನ ನಿಲ್ದಾಣದಲ್ಲೇ ದೂರು ನೀಡಿದ ಬಳಿಕವೂ ಯಾವುದೇ ಸಮರ್ಪಕ ಪ್ರತಿಕ್ರಿಯೆ ಸಿಗದ…

Read More