Author: admin

ಚಿಕ್ಕಬಳ್ಳಾಪುರ:ಹೆಣ್ಣು ಮಗು ಹುಟ್ಟಿತೆಂಬ ಒಂದೇ ಕಾರಣಕ್ಕೆ ಸ್ವಂತ ತಂದೆಯೇ ತನ್ನ 13 ದಿನದ ಕಂದಮ್ಮನನ್ನು ನೀರಿನ ಸಂಪ್‌ಗೆ ಎಸೆದು ಕ್ರೂರವಾಗಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಚಿಕ್ಕಬಳ್ಳಾಪುರ ನಗರದ ಶಾಂತಿನಗರದಲ್ಲಿ ನಡೆದಿದೆ. ಹುಡುಕಾಡುವ ನಾಟಕವಾಡಿದ್ದ ಆರೋಪಿ ಸ್ಥಳೀಯ ನಿವಾಸಿಗಳಾದ ಇಮ್ರಾನ್ ಹಾಗೂ ಮುಸ್ಕಾನ್ ದಂಪತಿಗೆ ಕೇವಲ 13 ದಿನಗಳ ಹಿಂದೆಯಷ್ಟೇ ಹೆಣ್ಣು ಮಗು ಜನಿಸಿತ್ತು. ಆದರೆ ಹೆಣ್ಣು ಮಗು ಹುಟ್ಟಿದ್ದಕ್ಕೆ ಅಸಮಾಧಾನಗೊಂಡಿದ್ದ ತಂದೆ ಇಮ್ರಾನ್, ಬುಧವಾರ (ಜುಲೈ 22) ತಡರಾತ್ರಿ ಕುಟುಂಬಸ್ಥರೆಲ್ಲರೂ ನಿದ್ರಿಸುತ್ತಿದ್ದ ವೇಳೆ ರಾಕ್ಷಸ ಕೃತ್ಯ ಎಸಗಿದ್ದಾನೆ. ಮಲಗಿದ್ದ ಮಗುವನ್ನು ಗುಟ್ಟಾಗಿ ಎತ್ತಿಕೊಂಡು ಹೋಗಿ ಮನೆಯಲ್ಲಿದ್ದ ನೀರಿನ ಸಂಪ್‌ಗೆ ಎಸೆದಿದ್ದಾನೆ. ಬೆಳಕಿಗೆ ಬಂದ ಕೃತ್ಯ ತಡರಾತ್ರಿ ಎಚ್ಚರಗೊಂಡ ತಾಯಿ ಮುಸ್ಕಾನ್ ಮಗು ಕಾಣದೇ ಗಾಬರಿಯಿಂದ ಪತಿಯಲ್ಲಿ ವಿಚಾರಿಸಿದಾಗ, ತನಗೆ ಏನೂ ತಿಳಿದಿಲ್ಲವೆಂದು ಇಮ್ರಾನ್ ನಟಿಸಿದ್ದಾನೆ. ಅಲ್ಲದೆ, ಮಗು ಎಲ್ಲೋ ಕಾಣೆಯಾಗಿದೆ ಎಂದು ಕುಟುಂಬದವರೊಂದಿಗೆ ಸೇರಿ ಹುಡುಕುವ ನಾಟಕವಾಡಿದ್ದಾನೆ. ಆದರೆ ಅನುಮಾನಗೊಂಡು ಪರಿಶೀಲಿಸಿದಾಗ ಮಗು ನೀರಿನ ಸಂಪ್‌ನಲ್ಲಿ ಹೆಣವಾಗಿ ಪತ್ತೆಯಾಗಿದೆ. ಸ್ವಂತ…

Read More

ಬೆಂಗಳೂರು: ಕಾವೇರಿ ನೀರು ಹಂಚಿಕೆ ಸಮಸ್ಯೆ ಮತ್ತು ಮೇಕೆದಾಟು ಯೋಜನೆ ವಿಚಾರ ಸಂಬಂಧ ಸದಾ ಒಂದಿಲ್ಲೊಂದು ಕ್ಯಾತೆ ತೆಗೆಯುತ್ತಿರುವ ನೆರೆ ರಾಜ್ಯ ತಮಿಳುನಾಡಿನೊಂದಿಗೆ ಸಂಧಾನಕ್ಕೆ ಕರ್ನಾಟಕ ಮುಂದಾಗಿದೆ. ಈ ವಿಚಾರವಾಗಿ ಆಗಸ್ಟ್ 3ರಂದು ಮಾತುಕತೆಗೆ ಬರುವಂತೆ ತಮಿಳುನಾಡು ಸಿಎಂ ವಿಜಯ್​ಗೆ ಕರ್ನಾಟಕ ಆಹ್ವಾನ ನೀಡಿದೆ. ಕರ್ನಾಟಕ ಮತ್ತು ತಮಿಳುನಾಡು ನಡುವೆ ಪತ್ರ ವ್ಯವಹಾರ ನಡೆದಿದ್ದರೂ ಮಾತುಕತೆಗೆ ಬರುವ ವಿಚಾರವಾಗಿ ವಿಜಯ್​​ರಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎನ್ನಲಾಗಿದೆ. ಹೀಗಾಗಿ ತಮಿಳುನಾಡಿನ ಮುಂದಿನ ನಿರ್ಧಾರ ಏನಿರಬಹುದು ಎಂಬ ಕುತೂಹಲ ಹೆಚ್ಚಿದೆ. ಒಂದೊಮ್ಮೆ ಕರ್ನಾಟಕದ ಆಹ್ವಾನ ಒಪ್ಪಿ ವಿಜಯ್​​ ಬಂದಿದ್ದೇ ಆದಲ್ಲಿ ಸಂಕಷ್ಟ ಪರಿಹಾರ ಸೂತ್ರದ ಬಗ್ಗೆ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಮಹತ್ವದ ಚರ್ಚೆ ನಡೆಸಲಿದ್ದಾರೆ. ನೀರು ಬಿಡದಿರಲು ಆದೇಶಿಸಿದ್ದ CWMA ಕರ್ನಾಟಕದಲ್ಲಿ ಬರ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆ ತಮಿಳುನಾಡಿಗೆ ನೀರು ಬಿಡದಿರಲು CWMA ನಿನ್ನೆಯಷ್ಟೇ ಆದೇಶಿಸಿತ್ತು. ಜುಲೈ 26ರ ಬಳಿಕ ಕರ್ನಾಟಕದಲ್ಲಿ ಮಳೆಯಾಗುವ ಸಾಧ್ಯತೆಯಿದೆ . ಈ ಹಿನ್ನೆಲೆ ಒಂದು ವಾರದ ಬಳಿಕ…

Read More

ಅರಂತೋಡು : ಅರಂತೋಡು ಕುಲ್ಚಾರ್ ಸಮೀಪ ಬೈಕ್ ಕಾರು ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ನಡೆದಿದೆ. ಗಂಭೀರ ಗಾಯಗೊಂಡು ಮೃತಪಟ್ಟ ಬೈಕ್ ಸವಾರ ವಿದ್ಯಾರ್ಥಿಯನ್ನು ಅರಂತೋಡು ಗ್ರಾಮದ ಬಿಳಿಯಾರು ಬನ ಸುಬ್ರಾಯ ಅವರ ಮಗ ಸಂತೋಷ್ (17 ವರ್ಷ) ಎಂದು ಗುರುತಿಸಲಾಗಿದೆ. ಸಂತೋಷ್ ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ ಓದುತ್ತಿದ್ದರು. ಇಲ್ಲಿನ ಕುಲ್ಚಾರ್ ಸಮೀಪ ಬೈಕ್ ಮತ್ತು ಕಾರು ನಡುವೆ ಬುಧವಾರ ದಂದು ರಾತ್ರಿ ಅಪಘಾತ ಸಂಭವಿಸಿದೆ. ಈ ವೇಳೆ ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿ ಸಂತೋಷ್ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಗಾಯಾಳುವನ್ನು‌ ಶರತ್ ಅಡ್ಯಡ್ಕ ಅವರು ಸ್ಥಳೀಯರ ಸಹಕಾರದಿಂದ ಸುಳ್ಯದ ಖಾಸಗಿ ಆಸ್ಪತ್ರೆಗೆ ಆಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಹೋಗಿದ್ದರು.

Read More

ನವದೆಹಲಿ: ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ 16 ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ ಭಾರತಕ್ಕೆ ಮರಳಲು ಸಿದ್ಧತೆ ನಡೆಸಿದ್ದಾರೆ. 2009ರ ದಕ್ಷಿಣ ಆಫ್ರಿಕಾ ಐಪಿಎಲ್ ಆಯೋಜನೆಗೆ ಸಂಬಂಧಿಸಿದ ಫೆಮಾ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ವಿಧಿಸಿದ್ದ ದಂಡ ಹಾಗೂ ಆರೋಪಗಳನ್ನು ಮೇಲ್ಮನವಿ ಪ್ರಾಧಿಕಾರ ರದ್ದುಗೊಳಿಸಿದ ಬೆನ್ನಲ್ಲೇ ಈ ಪ್ರಮುಖ ಬೆಳವಣಿಗೆ ನಡೆದಿದೆ. ಮೇಲ್ಮನವಿ ಪ್ರಾಧಿಕಾರದ ತೀರ್ಪಿನ ನಂತರ ಹರ್ಷ ವ್ಯಕ್ತಪಡಿಸಿರುವ ಲಲಿತ್ ಮೋದಿ, ಎಕ್ಸ್​ನಲ್ಲಿ ಪ್ರತಿಕ್ರಿಯಿಸಿದ್ದು, ಕೊನೆಗೂ ಸತ್ಯ ಬಯಲಾಗಿದೆ ಎಂದಿದ್ದಾರೆ. “ನನಗೆ ನಿನ್ನೆಯ ತೀರ್ಪಿನಿಂದ ತುಂಬಾ ಸಂತೋಷವಾಗಿದೆ. 16 ವರ್ಷಗಳಿಂದ ನಾನು ಸತತವಾಗಿ ಹೋರಾಟ ನಡೆಸಿದ್ದೇನೆ. ಮಾಧ್ಯಮಗಳಿಗೆ ಮತ್ತು ಪ್ರತಿಯೊಬ್ಬರಿಗೂ ನಾನು ಏನು ಹೇಳುತ್ತ ಬಂದಿದ್ದೆನೋ, ಕೊನೆಗೂ ಅದೇ ಸತ್ಯವೆಂದು ಸಾಬೀತಾಗಿದೆ. ಟ್ರಿಬ್ಯೂನಲ್ ನನ್ನ ಪರವಾಗಿ ತೀರ್ಪು ನೀಡಿರುವುದಕ್ಕೆ ನನಗೆ ಅತ್ಯಂತ ಸಂತಸವಾಗಿದೆ. ಐಪಿಎಲ್‌ನ ಒಳಿತನ್ನು ಹೊರತುಪಡಿಸಿ ನನಗೆ ಬೇರೆ ಯಾವುದೇ ಸ್ವಾರ್ಥವಿರಲಿಲ್ಲ. ಈಗ ಆ ಅಧ್ಯಾಯ ಮುಗಿದಿದೆ. ನಾನು ಜೀವನದಲ್ಲಿ ಮುನ್ನಡೆಯಲಿದ್ದು, ಭಾರತಕ್ಕೆ ಮರಳಲು ಕಾತರನಾಗಿದ್ದೇನೆ” ಎಂದು ತಿಳಿಸಿದ್ದಾರೆ.…

Read More

ಉಡುಪಿ  : ಜಿಲ್ಲೆಯ ಕಾರ್ಕಳ ತಾಲೂಕಿನ ಅಜೆಕಾರ್ ಗ್ರಾಮದಲ್ಲಿ ನಡೆಯುತ್ತಿರುವ ಕಟ್ಟಡ ಕಾಮಗಾರಿ ಸ್ಥಳದಲ್ಲಿ ಬಾಲಕಾರ್ಮಿಕರು ದುಡಿಯುತ್ತಿದ್ದಾರೆ ಎಂಬ ಸಾರ್ವಜನಿಕ ದೂರಿನ ಅನ್ವಯ ಕಾರ್ಮಿಕ ಅಧಿಕಾರಿ ಅವರ ನಿರ್ದೇಶನದ ಮೇರೆಗೆ ಅಧಿಕಾರಿಗಳು ಜಂಟಿ ತಪಾಸಣೆ ನಡೆಸಿ ಉತ್ತರ ಪ್ರದೇಶ ಮೂಲದ ಓರ್ವ ಬಾಲ ಕಾರ್ಮಿಕನನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿದರು. ಕಟ್ಟಡದ ಮಾಲೀಕರು/ನಿಯೋಜಕರು ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಅಥವಾ ಇನ್ಯಾವುದೇ ಕೆಲಸದಲ್ಲಿ ಬಾಲಕಾರ್ಮಿಕರನ್ನು ನೇಮಿಸಿಕೊಳ್ಳಬಾರದು. ಬೇರೆ ರಾಜ್ಯದಿಂದ ಕಾರ್ಮಿಕರನ್ನು ಕರೆ ತರುವಾಗ ಮೂಲ ದಾಖಲೆಯನ್ನು ಪರಿಶೀಲಿಸಿ ಕೆಲಸಕ್ಕೆ ನೇಮಿಸಿಕೊಳ್ಳುವಂತೆ ಹಾಗೂ ಮೇಲ್ಕಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥ ಮಾಲೀಕರ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಕಳ ವೃತ್ತ ಕಾರ್ಮಿಕ ನಿರೀಕ್ಷಕ ನವೀನ್ ಸಿ.ಎಚ್ ತಿಳಿಸಿದ್ದಾರೆ. ಉಡುಪಿ ಉಪವಿಭಾಗದ ಜಿಲ್ಲಾ ಕಾರ್ಮಿಕ ಅಧಿಕಾರಿ ಕಮಲ್ ಷಾ ಅಲ್ತಾಫ್ ಅಹಮದ್ ಇವರು, ಉಚಿತ ಮತ್ತು ಕಡ್ಡಾಯ ಶಿಕ್ಷಣ ಪ್ರತಿ ಮಗುವಿನ ಹಕ್ಕು ಹಾಗೂ ಅದನ್ನು ಪ್ರತಿ ಮಗು ದೊರಕಿಸುವುದು ಪ್ರತಿ ನಾಗರಿಕನ…

Read More

ರಿಯಾದ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಅವರು ಸೌದಿ ಅರೇಬಿಯಾ ಜೊತೆಗಿನ ಬಹು-ಶತಕೋಟಿ ಡಾಲರ್ ಮೌಲ್ಯದ ಐತಿಹಾಸಿಕ ‘ನಾಗರಿಕ ಪರಮಾಣು ಒಪ್ಪಂದಕ್ಕೆ’ ಸಹಿ ಹಾಕಿದ್ದಾರೆ. ಮುಂದಿನ 30 ವರ್ಷಗಳ ಕಾಲ ಬಾಳಿಕೆ ಬರುವ ಈ ಒಪ್ಪಂದವು ಸೌದಿ ಅರೇಬಿಯಾದಲ್ಲಿ ಪರಮಾಣು ಮೂಲಸೌಕರ್ಯಗಳನ್ನು ನಿರ್ಮಿಸಲು ಅಮೆರಿಕನ್ ಕಂಪನಿಗಳಿಗೆ ಪೂರ್ಣ ಮುಕ್ತ ಅವಕಾಶ ನೀಡಲಿದೆ. ಆದರೆ, ಈ ಒಪ್ಪಂದದಲ್ಲಿ ಇರಬೇಕಾಗಿದ್ದ ಕಠಿಣ ಜಾಗತಿಕ ಸುರಕ್ಷತಾ ನಿಯಮಗಳನ್ನು ಸಡಿಲಗೊಳಿಸಿರುವುದು ವಿಶ್ವಮಟ್ಟದಲ್ಲಿ, ವಿಶೇಷವಾಗಿ ಅಣ್ವಸ್ತ್ರ ಪ್ರಸರಣದ ಕಳವಳವನ್ನು ಹೆಚ್ಚಿಸಿದೆ. ಏನಿದು ‘123 ಒಪ್ಪಂದ’? ಅಮೆರಿಕದ ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್ ಮತ್ತು ಸೌದಿ ಇಂಧನ ಸಚಿವ ಪ್ರಿನ್ಸ್ ಅಬ್ದುಲಜೀಜ್ ಬಿನ್ ಸಲ್ಮಾನ್ ಅವರು ‘123 ಒಪ್ಪಂದ’ ಎಂದು ಕರೆಯಲ್ಪಡುವ ಈ ಶಾಂತಿಯುತ ಪರಮಾಣು ಸಹಕಾರ ಒಪ್ಪಂದಕ್ಕೆ ಅಂಕಿತ ಹಾಕಿದ್ದಾರೆ. ಈ ಒಪ್ಪಂದದ ಮೂಲಕ ಸೌದಿ ಅರೇಬಿಯಾದಲ್ಲಿ ವಾಣಿಜ್ಯ ಪರಮಾಣು ವಿದ್ಯುತ್ ಸ್ಥಾವರಗಳನ್ನು ನಿರ್ಮಿಸುವ ಹಕ್ಕನ್ನು ಅಮೆರಿಕದ ಕಂಪನಿಗಳು ಪಡೆಯಲಿವೆ ಹಾಗೂ ರಷ್ಯಾ-ಚೀನಾದಂತಹ ವಿದೇಶಿ ಸ್ಪರ್ಧಿಗಳನ್ನು ಈ ರೇಸ್‌ನಿಂದ…

Read More

ಸುಳ್ಯ: ಕೌಟುಂಬಿಕ ಕಿರುಕುಳ ಹಾಗೂ ಮನಸ್ತಾಪದ ಹಿನ್ನೆಲೆಯಲ್ಲಿ ವಿವಾಹಿತೆಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣದಲ್ಲಿ, ಆಕೆಯನ್ನು ಕೊಲೆ ಮಾಡಲಾಗಿದೆ ಎಂಬ ದೂರಿನ ಮೇರೆಗೆ ಮೃತಳ ಮಾವ, ಅತ್ತೆ ಹಾಗೂ ನಾದಿನಿಯನ್ನು ಸುಳ್ಯ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಪುತ್ತೂರು ತಾಲೂಕಿನ ಕೆದಂಬಾಡಿ ನಿವಾಸಿ ಜುಬೈದಾ ಅವರ ಮಗಳು ಫಾತಿಮತ್‌ ನಿಶಾನ ಮೃತಪಟ್ಟ ವಿವಾಹಿತೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ಮಾವ ಸಿ.ಪಿ. ಅಲವಿ , ಅತ್ತೆ ಅಯಿಷಾ ಸಿ.ಎ. ಹಾಗೂ ನಾದಿನಿ ಫಸಿಲಾ ಸಿ.ಎ. ಎಂಬುವರನ್ನು ಪೊಲೀಸರು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಫಾತಿಮತ್‌ ನಿಶಾನ ಅವರ ವಿವಾಹ ನೆರವೇರಿತ್ತು. ಜುಲೈ 18ರ ರಾತ್ರಿ ನಿಶಾನ ತಮ್ಮ ತಾಯಿ ಜುಬೈದಾ ಅವರಿಗೆ ಫೋನ್ ಮಾಡಿ, “ಗಂಡನ ಮನೆಯಲ್ಲಿ ಮಾವ, ಅತ್ತೆ ಹಾಗೂ ನಾದಿನಿ ಮಾನಸಿಕ ಮತ್ತು ದೈಹಿಕವಾಗಿ ತೀವ್ರ ಕಿರುಕುಳ ನೀಡುತ್ತಿದ್ದಾರೆ” ಎಂದು ಅಳಲು ತೋಡಿಕೊಂಡಿದ್ದರು. ತಾಯಿ-ಮಗಳ ಸಂಭಾಷಣೆ ನಡೆಯುತ್ತಿದ್ದಂತೆಯೇ ಮಧ್ಯ ಪ್ರವೇಶಿಸಿದ ಮಾವ ಅಲವಿ, ನಿಶಾನ ಕೈಯಿಂದ ಫೋನ್…

Read More

ಸುಳ್ಯ: ಅರಂತೋಡು ಕುಲ್ಚಾರ್ ಸಮೀಪ ಬೈಕ್ ಕಾರು ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಬುಧವಾರ ತಡರಾತ್ರಿ ನಡೆದಿದೆ. ಗಂಭೀರ ಗಾಯಗೊಂಡ ಬೈಕ್ ಸವಾರನನ್ನು ಅರಂತೋಡು ಗ್ರಾಮದ ಬಿಳಿಯಾರು ಬನ ಸುಬ್ರಾಯ ಅವರ ಮಗ ಸಂತೋಷ್ ಎಂದು ಗುರುತಿಸಲಾಗಿದೆ. ಗಾಯಾಳುವನ್ನು ಶರತ್ ಅಡ್ಯಡ್ಕ ಅವರು ಸ್ಥಳೀಯರ ಸಹಕಾರದಿಂದ ಸುಳ್ಯದ ಖಾಸಗಿ ಆಸ್ಪತ್ರೆಗೆ ಆಂಬ್ಯುಲೆನ್ಸ್ ನಲ್ಲಿ ಕರೆದೊಯ್ದಿದ್ದಾರೆ.

Read More

ಬೆಂಗಳೂರು: ಬೆಂಗಳೂರಿನ ಕೆಂಗೇರಿ ಸಮೀಪದ ರಾಮೋಹಳ್ಳಿಯ ತಿಮ್ಮಪ್ಪ ಕೆರೆಯಲ್ಲಿ ಸೂಟ್‌ಕೇಸ್‌ನಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣ ಸಂಬಂಧ, ಶವ ಪತ್ತೆಯಾದ 24 ಗಂಟೆಯೊಳಗೆ 21 ವರ್ಷದ ಯುವಕನನ್ನು ಬಂಧಿಸಲಾಗಿದ್ದು, ಚಿನ್ನಾಭರಣ ದೋಚುವ ಉದ್ದೇಶದಿಂದ ಮಹಿಳೆಯನ್ನು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಚಿನ್ನಾಭರಣಕ್ಕಾಗಿ ಚಲ್ಲಘಟ್ಟ ಜಯಮ್ಮ ಹತ್ಯೆ ಶಂಕೆ ಪೊಲೀಸರ ಮಾಹಿತಿ ಪ್ರಕಾರ, ಮೃತರನ್ನು ಕೆಂಗೇರಿ ಸಮೀಪದ ಚಲ್ಲಘಟ್ಟ ನಿವಾಸಿ 61 ವರ್ಷದ ಜಯಮ್ಮ ಎಂದು ಗುರುತಿಸಲಾಗಿದೆ. ಅವರು ನಾಪತ್ತೆಯಾಗಿದ್ದ ಬಗ್ಗೆ ಕುಟುಂಬದವರು ದೂರು ನೀಡಿದ್ದರು. ಜುಲೈ 21ರಂದು ತಿಮ್ಮಪ್ಪ ಕೆರೆಯಲ್ಲಿ ಕೆಂಪು ಬಣ್ಣದ ಸೂಟ್‌ಕೇಸ್‌ನಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ತನಿಖೆ ವೇಳೆ ಕುಂಬಳಗೋಡು ಪೊಲೀಸರು ಚಲ್ಲಘಟ್ಟ ನಿವಾಸಿ 21 ವರ್ಷದ ಗಗನ್ ಆರ್‌ನನ್ನು ಬಂಧಿಸಿದ್ದಾರೆ. ಆರೋಪಿ ಚಿನ್ನಾಭರಣ ಕಳವು ಮಾಡುವ ಉದ್ದೇಶದಿಂದ ಜಯಮ್ಮ ಅವರನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದ ಆರೋಪಿ ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಯು ಮಹಿಳೆಯ…

Read More

ಸೂರತ್ : ನೀವು ನಿಮ್ಮ ಮೊಬೈಲ್‌ನಲ್ಲಿ ಬಳಸುತ್ತಿರುವುದು ಅಸಲಿ ಬ್ಯಾಂಕಿಂಗ್ ಆ್ಯಪ್‌ ಗಳೇ? ಒಮ್ಮೆ ತಪಾಸಣೆ ಮಾಡಿಕೊಳ್ಳಿ! ಕೃತಕ ಬುದ್ಧಿಮತ್ತೆ (AI) ಮತ್ತು ಟೆಲಿಗ್ರಾಂ ಬಳಸಿ ಬರೋಬ್ಬರಿ 121 ನಕಲಿ ಬ್ಯಾಂಕಿಂಗ್ ಆ್ಯಪ್‌ ಗಳನ್ನು ತಯಾರಿಸಿ, ಸಾವಿರಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ 17 ವರ್ಷದ ಯುವಕನನ್ನು ಸೂರತ್ ಸೈಬರ್ ಕ್ರೈಮ್ ಪೋಲಿಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರದ 11ನೇ ತರಗತಿ ಡ್ರಾಪೌಟ್ ವಿದ್ಯಾರ್ಥಿ ರೋಹಿತ್ ವೀರೇಂದ್ರಸಿಂಗ್ ಶಾಕ್ಯ ಬಂಧಿತ ಆರೋಪಿ. ಈತ ತಯಾರಿಸಿದ ನಕಲಿ ಆ್ಯಪ್‌ ಗಳಿಗೆ ಸಿಲುಕಿ ಇದುವರೆಗೆ 2,928 ಜನರು ಬರೋಬ್ಬರಿ 64.38 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ! ಜಮ್ತಾರಾ ಗ್ಯಾಂಗ್‌ಗೆ ಮಾಸಿಕ ಬಾಡಿಗೆಗೆ ‘ಮಾಲ್‌ವೇರ್’ ಆರೋಪಿ ರೋಹಿತ್, ಸೈಬರ್ ಅಪರಾಧಗಳಿಗೆ ಹೆಸರಾದ ಜಾರ್ಖಂಡ್‌ನ ಜಮ್ತಾರಾ, ಹರಿಯಾಣ ಹಾಗೂ ರಾಜಸ್ಥಾನದ ಸೈಬರ್ ಗ್ಯಾಂಗ್‌ಗಳಿಗೆ ನಕಲಿ APK ಫೈಲ್‌ಗಳನ್ನು ಸರಬರಾಜು ಮಾಡುತ್ತಿದ್ದ. ಆ್ಯಪ್‌ ಗಳ ನಕಲು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB), ಆಕ್ಸಿಸ್…

Read More