Author: admin

ಬೆಂಗಳೂರು: ರಾಜ್ಯದ ವಿವಿಧೆಡೆ 10 ಅಧಿಕಾರಿಗಳ ಮನೆಗಳ ಮೇಲೆ ರೇಡ್​​ ಮಾಡಿದ್ದ ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆ ಅಂತ್ಯಗೊಂಡಿದೆ. 7 ಜಿಲ್ಲೆಗಳಲ್ಲಿ ಅಧಿಕಾರಿಗಳಿಗೆ ಸೇರಿದ 54 ಕಡೆ ದಾಳಿ ನಡೆದಿತ್ತು. ರೇಡ್​​ ವೇಳೆ ಕೋಟಿ ಕೋಟಿ ಮೌಲ್ಯದ ಆಸ್ತಿ ಪಾಸ್ತಿ ಪತ್ತೆಯಾಗಿದ್ದು, ಆದಾಯ ಮೀರಿದ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಯಾವ್ಯಾವ ಅಧಿಕಾರಿಗಳ ಮನೆಯಲ್ಲಿ ಏನೇನು ಪತ್ತೆ? 1. ನರೇಂದ್ರ ಕುಮಾರ್ ಎಂ., ಸಹಾಯಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ವಿಭಾಗ-1, ಕೆ.ಆರ್. ಸರ್ಕಲ್, ಬೆಂಗಳೂರು ಒಟ್ಟು ಆಸ್ತಿ: ₹8.51 ಕೋಟಿ (ಸ್ಥಿರ ಆಸ್ತಿ ₹5.95 ಕೋಟಿ + ಚರ ಆಸ್ತಿ ₹2.56 ಕೋಟಿ) ಅಸಮತೋಲನ ಆಸ್ತಿ: ₹5.75 ಕೋಟಿ ಚಿನ್ನ: ₹1.20 ಕೋಟಿ ಮೌಲ್ಯ ನಗದು: ₹3.10 ಲಕ್ಷ ಕೃಷಿ ಜಮೀನು: 4 ಎಕರೆ ವಾಹನಗಳು: ₹16.60 ಲಕ್ಷ ಮೌಲ್ಯ ಮನೆಗಳು: 3 ಬ್ಯಾಂಕ್ ಠೇವಣಿ: ₹89.16 ಲಕ್ಷ ಇತರೆ ವಸ್ತುಗಳು: ₹27.46 ಲಕ್ಷ 2. ಪ್ರವೀಣ್ ಶ್ರೀಹರಿ ಬಿ.,…

Read More

ಬಂಟ್ವಾಳ: ಟೋಲ್ ಶುಲ್ಕ ಪಾವತಿಸದೆ ಟೋಲ್ ಗೇಟ್ ನ ಸೆನ್ಸಾರ್ ಬ್ಯಾರಿಯರ್ ಅನ್ನು ಮುರಿದು ಕಾರು ಚಲಾಯಿಸಿಕೊಂಡು ಹೋದ ಘಟನೆ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಬ್ರಹ್ಮರಕೊಟ್ಲು ಟೋಲ್ ಗೇಟ್ ನಲ್ಲಿ ನಡೆದಿದೆ. ಸದ್ಯ ಟೋಲ್ ಗೇಟ್ ಸಹಾಯಕ ವ್ಯವಸ್ಥಾಪಕ ಯಶವಂತ ಕುಂದರ್ ಅವರು ನೀಡಿದ ದೂರಿನ ಮೇರೆಗೆ ಕಾರು ಚಾಲಕನ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟೋಲ್ ಶುಲ್ಕ ಪಾವತಿಸದ ಕಾರಣ ಸೆನ್ಸಾರ್ ಬ್ಯಾರಿಯರ್ ತೆರೆಯದೆ ವಾಹನವನ್ನು ತಡೆದಿತ್ತು. ಈ ವೇಳೆ ಕಾರಿನ ಚಾಲಕ ವಾಹನದಿಂದ ಇಳಿದು ಬಂದಿದ್ದು, ಟೋಲ್ ಸಿಬ್ಬಂದಿ ಶುಲ್ಕ ಪಾವತಿಸಿ ಮುಂದುವರಿಯುವಂತೆ ಸೂಚಿಸಿದ್ದಾರೆ. ಆದರೆ ಚಾಲಕ ಟೋಲ್ ಸಿಬ್ಬಂದಿಯನ್ನು ತಡೆದು ನಿಲ್ಲಿಸಿ, ಸೆನ್ಸಾರ್ ಗೇಟ್ ನ ಬಳಿಗೆ ತೆರಳಿ ಅದನ್ನು ಕೈಯಿಂದ ಮುರಿದು ಹಾಕಿ, ಬಳಿಕ ಕಾರನ್ನು ಚಲಾಯಿಸಿಕೊಂಡು ಸ್ಥಳದಿಂದ ತೆರಳಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Read More

ಮಂಗಳೂರು : ಮಸೀದಿಗೆ ನುಗ್ಗಿ ಧರ್ಮ ಗುರುವಿಗೆ ಹಿಗ್ಗಾಮುಗ್ಗವಾಗಿ ಥಳಿಸಿರುವ ಘಟನೆ ಮಂಗಳೂರಿನ ಸೂರತ್ಕಲ್ ನಲ್ಲಿ ನಡೆದಿದೆ. ಅಲ್ಲದೆ ಧರ್ಮಗುರು ಮೇಲೆ ಹಲ್ಲೆಗೈದು ಕೊಲೆ ಬೆದರಿಕೆ ಹಾಕಲಾಗಿದೆ. ಮದರಸ ಕಲಿಸುವ ವೇಳೆ ವಿದ್ಯಾರ್ಥಿಗೆ ಧರ್ಮಗುರು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಕೃಷ್ಣಾಪುರ ಭಾಗದ ದ್ವೈಬ ಮಸೀದಿಯ ಧರ್ಮ ಗುರುವಿನ ಮೇಲೆ ಹಲ್ಲೆ ನಡೆದಿದೆ ಮಗುವಿನ ತಂದೆ ತಾಯಿ ಮತ್ತು ಕುಟುಂಬದವರಿಂದ ಹಲ್ಲೆ ನಡೆದಿರುವ ಆರೋಪ ಕೇಳಿ ಬಂದಿದೆ. ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಬೆನ್ನಲ್ಲೇ ಸೂರತ್ಕಲ್ ಠಾಣೆಗೆ ದೂರು ನೀಡಲು ಸಿದ್ಧತೆ ಮಾಡಿಕೊಂಡಿದ್ದು ಮಸೀದಿ ಆಡಳಿತ ಹಾಗೂ ಧರ್ಮ ಗುರುವಿನಿಂದ ದೂರು ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

Read More

ಪುತ್ತೂರು : ಪುತ್ತೂರು ಭೂ ನ್ಯಾಯ ಮಂಡಳಿ ಸದಸ್ಯ ನಿರಂಜನ ರೈ ಮಠಂದಬೆಟ್ಟು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಪುತ್ತೂರು ಸಹಾಯಕ ಆಯುಕ್ತರ ಕಛೇರಿಯಲ್ಲಿ ನಡೆಯುತ್ತಿದ್ದ ಮಂಡಳಿ ಸಭೆಯಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಅವರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ತೀವ್ರತರದ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕಂಬಳದ ಖ್ಯಾತ ವೀಕ್ಷಕ ವಿವರಣೆಗಾರರೂ ಆಗಿರುವ ನಿರಂಜನ್ ರೈ ಗುರುತಿಸಿಕೊಂಡಿದ್ದರು. ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ನೇತೃತ್ವದಲ್ಲಿ ನಡೆಯುತ್ತಿದ್ದ ಸಭೆ ಕುಸಿದು ಬಿದ್ದ ಅವರನ್ನು ತಕ್ಷಣವೇ ಸಹಾಯಕ ಆಯುಕ್ತ, ತಹಶೀಲ್ದಾರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅದಾಗಲೇ ಅವರು ಸಾವನಪ್ಪಿದ್ದರು ಎಂದು ವೈದ್ಯರು ತಿಳಿಸಿದ್ದಾರ. ಉಪ್ಪಿನಂಗಡಿ ಸಮೀಪದ ಮಠಂತಬೆಟ್ಟು ನಿವಾಸಿಯಾಗಿದ್ದ ನಿರಂಜನ ರೈಯವರು ಕೋಡಿಂಬಾಡಿ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೆ, ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಪುತ್ತೂರು ಭೂನ್ಯಾಯ ಮಂಡಳಿ ಸದಸ್ಯರಾಗಿದ್ದ ಅವರು ಬನ್ನೂರು ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾಗಿ, ಬಂಟರ ಸಂಘದಲ್ಲಿ ಸಕ್ರಿಯವಾಗಿದ್ದರು. ಕಂಬಳ ಸ್ಪರ್ಧೆಗಳಲ್ಲಿ ವೀಕ್ಷಕ…

Read More

ಇಂದೋರ್: ಸಮೋಸಾ ಮತ್ತು ಕಚೋರಿ ಖರೀದಿಸಲು ಲೊಕೊ ಪೈಲಟ್ ಒಬ್ಬರು ರೈಲು ನಿಲ್ಲಿಸಿದ್ದಾರೆ ಎಂದು ಆರೋಪಿಸಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿದೆ. ಲಕ್ಷಾಂತರ ಜನರು ಇದನ್ನು ವೀಕ್ಷಿಸಿದ್ದು, ಇದು ರೈಲ್ವೆ ಸಿಬ್ಬಂದಿಯ ಬೇಜವಾಬ್ದಾರಿ ಎಂದು ಟೀಕಿಸಿದ್ದಾರೆ. ಆದರೆ ಈಗ ಈ ಇಡೀ ಘಟನೆಗೆ ಭಾರತೀಯ ರೈಲ್ವೆ ಇಲಾಖೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅಸಲಿ ಸತ್ಯವನ್ನು ಜನರ ಮುಂದಿಟ್ಟಿದೆ. ವೈರಲ್ ವಿಡಿಯೋದಲ್ಲೇನಿತ್ತು? ವೈರಲ್ ಆದ ವಿಡಿಯೋದಲ್ಲಿ ‘ಇಂದೋರ್-ಮೋವ್ ಡೆಮು’ಪ್ರಯಾಣಿಕರ ರೈಲಿನ ಲೊಕೊ ಪೈಲಟ್ ಹಳಿಯ ಪಕ್ಕದ ಅಂಗಡಿಯಿಂದ ಸಮೋಸಾ ಖರೀದಿಸಲು ರೈಲನ್ನು ನಿಲ್ಲಿಸಿದ್ದರು. ಅವರು ತಿಂಡಿ ಖರೀದಿಸಿ ರೈಲು ಹತ್ತಿದ ತಕ್ಷಣವೇ ರೈಲು ಚಲಿಸಲು ಪ್ರಾರಂಭಿಸಿತು ಎಂದು ವಿಡಿಯೋ ಮಾಡಿದ ವ್ಯಕ್ತಿ ಸಾರ್ವಜನಿಕರನ್ನು ದಾರಿ ತಪ್ಪಿಸಿದ್ದ. ರೈಲ್ವೆ ಇಲಾಖೆ ನಡೆಸಿದ ‘ಸತ್ಯ ಪರಿಶೀಲನೆ’ ವಿವಾದ ದೊಡ್ಡದಾಗುತ್ತಿದ್ದಂತೆ ಎಚ್ಚೆತ್ತ ಪಶ್ಚಿಮ ರೈಲ್ವೆ ವಿಡಿಯೋವನ್ನು ಸಂಪೂರ್ಣವಾಗಿ ಪರಿಶೀಲಿಸಿ ಅಧಿಕೃತ ಎಕ್ಸ್ ಖಾತೆಯಲ್ಲಿ ಸ್ಪಷ್ಟನೆ ನೀಡಿದೆ. ಮೊದಲನೆಯದಾಗಿ, ವಿಡಿಯೋದಲ್ಲಿರುವ ರೈಲು ಯಾವುದೇ ಪ್ರಯಾಣಿಕರ…

Read More

ಮಂಗಳೂರು: ಎಸ್ಐಆರ್ ಕರ್ತವ್ಯಕ್ಕೆ ತೆರಳಿದ ದಲಿತ ಸಮುದಾಯಕ್ಕೆ ಸೇರಿದ ಬಿ.ಎಲ್.ಒ ರನ್ನು ಜಾತಿ ನಿಂದನೆ ಮಾಡಿ ಅಪಮಾನಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದಲ್ಲಿ ನಡೆದಿದೆ. ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಬಿಎಲ್.ಒ. ಆಗಿ ಕೆಲಸ ಮಾಡುತ್ತಿದ್ದು, ಅದರಂತೆ ಶಿರ್ಲಾಲು ಗ್ರಾಮದ ಕಾಳಿಕಾಂಬ ನಿವಾಸಿ ಯಶೋಧ ಆಚಾರಿ ಎಂಬವರ ಮನೆಗೆ ಎಸ್​​ಐಆರ್ ಪ್ರಕ್ರಿಯೆಗೆಂದು ತೆರಳಿದ್ದರು. ಆದ್ರೆ, ಈ ವೇಳೆ ನಿಮ್ಮ ಜಾತಿಯವರು ಒಳಗೆ ಬರಬಾರದು ಎಂದು ಅಂಗಳದಲ್ಲೇ ನಿಲ್ಲಿಸಿ ಅವಮಾನಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ SC/ST act-2015(u/s-3(1)(r),3(2)(va) ಅಡಿಯಲ್ಲಿ ದೂರು ದಾಖಲಾಗಿದೆ. ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಬಿಎಲ್.ಒ. ಆಗಿ ಕೆಲಸ ಮಾಡುತ್ತಿದ್ದು, ಜು.6 ರಂದು ಶಿರ್ಲಾಲು ಗ್ರಾಮದ ಪಲ್ಲದೋಡಿ ಕಾಳಿಕಾಂಬ ನಿವಾಸಿ ಯಶೋಧ ಆಚಾರಿ ಕೆಲಸ ಮಾಡುತ್ತಿದ್ದು, ಜು.6 ರಂದು ಶಿರ್ಲಾಲು ಗ್ರಾಮದ ಪಲ್ಲದೋಡಿ ಕಾಳಿಕಾಂಬ ನಿವಾಸಿ ಯಶೋಧ ಆಚಾರಿ ಎಂಬವರ ಮನೆಗೆ ಎ.ಎಲ್.ಒ ಮಾಧವ ಎಂಬರೊಂದಿಗೆ ತೆರಳಿದ್ದರು. ಈ ವೇಳೆ ಮನೆಯ…

Read More

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು-ಕಾರ್ಕಳ ನಡುವಿನ ರಾಷ್ಟ್ರೀಯ ಹೆದ್ದಾರಿ 169 ವಿಸ್ತರಣೆ ಕಾಮಗಾರಿ ವೇಳೆ ನಡೆದ ಅವೈಜ್ಞಾನಿಕ ನಿರ್ಮಾಣವು ಭೂಕುಸಿತಕ್ಕೆ ಕಾರಣವಾಗಿದೆ. ಮಂಗಳೂರು ಹೊರವಲಯದ ವಾಮಂಜೂರು ಸಮೀಪದ ಕೆತ್ತಿಕಲ್‌ನಲ್ಲಿ ಗುಡ್ಡವನ್ನು ಲಂಬಾಕೃತಿಯಲ್ಲಿ ಅಗೆದಿರುವುದು ಪ್ರತಿ ಮಳೆಗಾಲದಲ್ಲೂ ಭೂಕುಸಿತಕ್ಕೆ ದಾರಿ ಮಾಡಿಕೊಡುತ್ತಿದೆ. ಕೇರಳದ ವಯನಾಡ್‌ನಲ್ಲಿ ಸುರಂಗ ಮಾರ್ಗ ನಿರ್ಮಿಸುವಾಗ ದುರಂತಕ್ಕೆ ಕಾರಣವಾದ DBL ಕಂಪನಿಯೇ ಈ ಹೆದ್ದಾರಿ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ ಎನ್ನಲಾಗಿದೆ. ಕಂಪನಿಯ ಅವೈಜ್ಞಾನಿಕ ವಿಧಾನಗಳಿಂದಾಗಿ ಕಳೆದ ಮೂರು ವರ್ಷಗಳಿಂದ ಈ ಭಾಗದಲ್ಲಿ ಗುಡ್ಡ ಕುಸಿತ ಸಾಮಾನ್ಯವಾಗಿದೆ. ಈ ಬಾರಿ ಮಣ್ಣು ರಸ್ತೆಗೆ ಕುಸಿದು ಒಂದು ಬದಿಯ ಸಂಚಾರವನ್ನು ಬಂದ್ ಮಾಡಲಾಗಿದೆ. ಕೇವಲ ಒಂದು ಪಥದಲ್ಲಿ ದ್ವಿಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಕಳೆದ ವರ್ಷ ಮಾಡಿದ ಸಾಯಿಲ್ ನೇಲಿಂಗ್ ವಿಧಾನವೂ ವಿಫಲವಾಗಿದ್ದು, ಪ್ರಸ್ತುತ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಕೆತ್ತಿಕಲ್ ಮಾತ್ರವಲ್ಲದೆ, ಹೆದ್ದಾರಿಯ ಇತರ ಭಾಗಗಳಲ್ಲೂ ಇದೇ ರೀತಿಯ ಅವೈಜ್ಞಾನಿಕ ಅಗೆತ ನಡೆಸಲಾಗಿದೆ. ಒಂದು ವೇಳೆ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿದರೆ, ಕೆಳಭಾಗದ…

Read More

ಜೈಪುರ : ಹೆತ್ತ ತಾಯಿಯ ಸರ್ಕಾರಿ ಉದ್ಯೋಗ ಮತ್ತು ಆಸ್ತಿಯನ್ನು ತನ್ನದಾಗಿಸಿಕೊಳ್ಳಲು 23 ವರ್ಷದ ಸ್ವಂತ ಮಗಳೊಬ್ಬಳು ತನ್ನ ಚಿಕ್ಕಪ್ಪ ಹಾಗೂ ಸೋದರ ಸಂಬಂಧಿಯೊಂದಿಗೆ ಸೇರಿ ₹7 ಲಕ್ಷಕ್ಕೆ ಗುತ್ತಿಗೆ ಕೊಲೆಗಾರರನ್ನು (ಸುಪಾರಿ ಕಿಲ್ಲರ್ಸ್) ನೇಮಿಸಿ, ತಾಯಿಯ ಮೇಲೆ 130 ಕಿ.ಮೀ ವೇಗದಲ್ಲಿ ಎಸ್‌ಯುವಿ (SUV) ಕಾರು ಹರಿಸಿ ಭೀಕರವಾಗಿ ಕೊಲೆ ಮಾಡಿಸಿರುವ ಘಟನೆ ಬೆಳಕಿಗೆ ಬಂದಿದೆ. ಅಪಘಾತ ಎಂದು ಬಿಂಬಿಸಲು ಯತ್ನಿಸಲಾಗಿದ್ದ ಈ ಹತ್ಯಾಕಾಂಡದ ಪಿತೂರಿಯನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಮಗಳು ಆಯುಷಿ (23), ಆಕೆಯ ಚಿಕ್ಕಪ್ಪ ಮೋಹನ್ ಸ್ವರೂಪ್ (56), ಸುಪಾರಿ ಹಂತಕ ಹೇಮಂತ್ ಶರ್ಮಾ (20) ಹಾಗೂ ಆತನ ನಾಲ್ವರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಲಾದ ಎಸ್‌ಯುವಿ ಕಾರನ್ನು ವಶಪಡಿಸಿಕೊಳ್ಳಲಾಗಿದ್ದು, ತಲೆಮರೆಸಿಕೊಂಡಿರುವ ಆಯುಷಿ ಸೋದರ ಸಂಬಂಧಿ ಬಲರಾಮ್ ಅಲಿಯಾಸ್ ರವಿಗಾಗಿ ತೀವ್ರ ಹುಡುಕಾಟ ಆರಂಭವಾಗಿದೆ. ನೀರಜ್ ಶರ್ಮಾ (45) ಕೊಲೆಯಾದ ದುರ್ದೈವಿ ತಾಯಿ. ಪೊಲೀಸರ ಮಾಹಿತಿ ಪ್ರಕಾರ, ನೀರಜ್ ಅವರ ಪತಿ ವಿಜಯ್…

Read More

ಇಸ್ಲಾಮಾಬಾದ್: ಯುನೈಟೆಡ್ ಅರಬ್ ಎಮಿರೇಟ್ಸ್​​ನಿಂದ ಪಾಕಿಸ್ತಾನಕ್ಕೆ ಹಾರುತ್ತಿದ್ದ ಸರಕು ವಿಮಾನವೊಂದು ಮಂಗಳವಾರ ರಾತ್ರಿ ಅರಬ್ಬಿ ಸಮುದ್ರದ ಮೇಲೆ ದಿಢೀರ್ ರಾಡಾರ್​ನಿಂದ ಕಣ್ಮರೆಯಾಗಿದೆ. ಐವರು ಸಿಬ್ಬಂದಿಯನ್ನು ಹೊತ್ತಿದ್ದ ಈ ‘ಕೆ2 ಏರ್‌ವೇಸ್’ ವಿಮಾನವನ್ನು ಪತ್ತೆಹಚ್ಚಲು ಇದೀಗ ಸಮುದ್ರದಲ್ಲಿ ಭಾರಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಘಟನೆ ನಡೆದಿದ್ದು ಹೇಗೆ? ಪಾಕಿಸ್ತಾನದ ವಿಮಾನ ನಿಲ್ದಾಣ ಪ್ರಾಧಿಕಾರ ನೀಡಿರುವ ಮಾಹಿತಿ ಪ್ರಕಾರ,ಶಾರ್ಜಾದಿಂದ ಕರಾಚಿಗೆ ಹೊರಟಿದ್ದ ಈ ಕಾರ್ಗೋ ವಿಮಾನದಲ್ಲಿ ಮಾರ್ಗಮಧ್ಯೆ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ವಿಮಾನದ ನ್ಯಾವಿಗೇಷನ್ ಸಿಸ್ಟಮ್‌ನಲ್ಲಿ ದೋಷ ಕಂಡುಬಂದಿದೆ ಎಂದು ಪೈಲಟ್ ಕರಾಚಿ ವಾಯು ಸಂಚಾರ ನಿಯಂತ್ರಣ ಕೇಂದ್ರಕ್ಕೆ ಮಾಹಿತಿ ನೀಡಿದ್ದರು. ತಕ್ಷಣವೇ ನಿಯಂತ್ರಣ ಕೇಂದ್ರದಿಂದ ವಿಮಾನಕ್ಕೆ ಸೂಕ್ತ ಮಾರ್ಗದರ್ಶನ ನೀಡಲಾಗಿತ್ತು.ರಾತ್ರಿ 9.18ಕ್ಕೆ ಕೊನೆಯ ಸಂಪರ್ಕ ಸಿಕ್ಕಿತ್ತು. ಆದರೆ, ಸಮಸ್ಯೆ ತಿಳಿಸಿದ ಕೇವಲ 4 ನಿಮಿಷಗಳಲ್ಲಿ, ಅಂದರೆ ರಾತ್ರಿ 9.22 ರ ಸುಮಾರಿಗೆ ವಿಮಾನವು ಇದ್ದಕ್ಕಿದ್ದಂತೆ ತನ್ನ ದಿಕ್ಕನ್ನು ಬದಲಾಯಿಸಿ ಅತಿ ವೇಗವಾಗಿ ಕೆಳಮುಖವಾಗಿ ಇಳಿಯುವುದನ್ನು ರಾಡಾರ್‌ನಲ್ಲಿ ಗಮನಿಸಲಾಯಿತು. ಇದಾದ ಕೆಲವೇ…

Read More

ಡೆಹ್ರಾಡೂನ್: ಅಯೋಧ್ಯೆಯ ರಾಮ ಮಂದಿರದ ದೇಣಿಗೆ ವಿವಾದದ ಬೆನ್ನಲ್ಲೇ, ಈಗ ದೇಶದ ಮತ್ತೊಂದು ಪವಿತ್ರ ಧಾಮವಾದ ಉತ್ತರಾಖಂಡದ ಬದರಿನಾಥ ದೇವಾಲಯದಲ್ಲೂ ಕಾಣಿಕೆ ಮತ್ತು ದೇಣಿಗೆ ಹಣ ದುರುಪಯೋಗವಾಗಿರುವ ಗಂಭೀರ ಆರೋಪ ಕೇಳಿಬಂದಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಆದೇಶದ ಮೇರೆಗೆ, ರಾಜ್ಯ ಸರ್ಕಾರವು ತನಿಖೆಗಾಗಿ ಮೂವರು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. 15 ದಿನಗಳಲ್ಲಿ ವರದಿ ಸಲ್ಲಿಕೆಗೆ ಆದೇಶ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಧೀರಜ್ ಸಿಂಗ್ ಗರ್ಬ್ಯಾಲ್ ಹೊರಡಿಸಿರುವ ಆದೇಶದ ಪ್ರಕಾರ, ಈ ಉನ್ನತ ಮಟ್ಟದ ಸಮಿತಿಯು ಗರ್ವಾಲ್ ಆಯುಕ್ತ (ಕಮಿಷನರ್) ಆನಂದ್ ಸ್ವರೂಪ್ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸಲಿದೆ. ರಾಷ್ಟ್ರೀಯ ಆರೋಗ್ಯ ಮಿಷನ್‌ನ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ತಿವಾರಿ ಮತ್ತು ಹಣಕಾಸು ನಿರ್ದೇಶಕ ಜಗತ್ ಸಿಂಗ್ ಚೌಹಾಣ್ ಇದರ ಇತರ ಸದಸ್ಯರಾಗಿದ್ದಾರೆ. ಈ ಸಮಿತಿಯು ದೇಣಿಗೆ ಅಕ್ರಮಗಳ ಬಗ್ಗೆ ಸಂಪೂರ್ಣ ತನಿಖೆ ನಡೆಸಿ, ಮುಂದಿನ 15 ದಿನಗಳ ಒಳಗಾಗಿ ತನ್ನ ವರದಿ ಹಾಗೂ…

Read More