ಬೆಂಗಳೂರು: ಇಲ್ಲಿನ ರಾಜಾಜಿನಗರದಭೀಕರ ಏಳು ಜನರ ಕೊಲೆ ಪ್ರಕರಣದ ತನಿಖೆಯಲ್ಲಿ ಆರೋಪಿ ಇಂದುಶೇಖರ್ನ ಕ್ರೂರ ಪ್ಲ್ಯಾನ್ಗಳನ್ನು ಕಂಡು ಪೊಲೀಸರು ದಂಗಾಗಿದ್ದಾರೆ. ಕೊಲೆ ಮಾಡಿದ ಬಳಿಕ ಶವದ ವಾಸನೆ ಹೊರಬಾರದಂತೆ ಹಾಗೂ ಯಾರಿಗೂ ಅನುಮಾನ ಬಾರದಂತೆ ತಡೆಗಟ್ಟಲು ಪ್ರತಿಯೊಂದು ಮೃತದೇಹಕ್ಕೂ 10 ಲೇಯರ್ ಟೇಪ್ ಸುತ್ತಿರುವುದು ಸ್ಪೋಟಕ ಸತ್ಯ ಹೊರಬಿದ್ದಿದೆ.
ಹತ್ಯಾಕಾಂಡದಲ್ಲಿ ಬಲಿಯಾದ ಬಾಲಕ ಪುನೀತ್ ಅಂತ್ಯಕ್ರಿಯೆ ಪೂರ್ಣ
ಏಳು ಜನರ ಭೀಕರ ಕೊಲೆ ಪ್ರಕರಣದಲ್ಲಿ ಹತ್ಯೆಗೀಡಾಗಿದ್ದ ಪುಟ್ಟ ಬಾಲಕ ಪುನೀತ್ನ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ನೆರವೇರಿಸಿದ್ದಾರೆ. ಚಿಕ್ಕಬಳ್ಳಾಪುರದ ನಂದಿಬೆಟ್ಟದ ತಪ್ಪಲಿನಲ್ಲಿ ಮಗುವಿನ ಮೃತದೇಹ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯ ನಂತರ ಮಗುವಿನ ಶವವನ್ನು ಬೆಂಗಳೂರಿಗೆ ತಂದ ಕುಟುಂಬದವರು, ನ.6ರ ರಾತ್ರಿಯೇ ರಾಜಾಜಿನಗರದ ಹರಿಶ್ಚಂದ್ರ ಘಾಟ್ನಲ್ಲಿ ನೆರವೇರಿಸಿದ್ದಾರೆ.
ಘೋರ ಕೃತ್ಯಕ್ಕೆ ಬಲಿಯಾದ ಪುಟ್ಟ ಕಂದನ ಅಗಲಿಕೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಶವಸಂಸ್ಕಾರದ ವೇಳೆ ಕಣ್ಣೀರಿನ ವಾತಾವರಣ ನಿರ್ಮಾಣವಾಗಿತ್ತು. ಇತ್ತ ಕ್ರೂರ ಹತ್ಯಾಕಾಂಡದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ








