Close Menu
    What's Hot

    ಥಾರ್–ಕಾರು ನಡುವೆ ಅಪಘಾತ; ಮೆಸ್ಕಾಂ ಎಇ ಸ್ಥಳದಲ್ಲೇ ಸಾವು, ಮೂವರಿಗೆ ಗಂಭೀರ ಗಾಯ

    November 14, 2026

    ಮಲ್ಪೆ: ನಿಗೂಢ ಪಾಪ್‌ಅಪ್ ಸಂದೇಶದ ಮೂಲಕ ಮೊಬೈಲ್ ಹ್ಯಾಕ್; ಎರಡು ಬ್ಯಾಂಕ್ ಖಾತೆಗಳಿಂದ ₹3.03 ಲಕ್ಷ ಹಣ ವರ್ಗಾವಣೆ

    November 14, 2026

    ಪುತ್ತೂರು: 10 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಸುಲಿಗೆ ಪ್ರಕರಣದ ಆರೋಪಿಯ ಬಂಧನ

    November 14, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಮಲ್ಪೆ: ನಿಗೂಢ ಪಾಪ್‌ಅಪ್ ಸಂದೇಶದ ಮೂಲಕ ಮೊಬೈಲ್ ಹ್ಯಾಕ್; ಎರಡು ಬ್ಯಾಂಕ್ ಖಾತೆಗಳಿಂದ ₹3.03 ಲಕ್ಷ ಹಣ ವರ್ಗಾವಣೆ
    ಅಪರಾಧ

    ಮಲ್ಪೆ: ನಿಗೂಢ ಪಾಪ್‌ಅಪ್ ಸಂದೇಶದ ಮೂಲಕ ಮೊಬೈಲ್ ಹ್ಯಾಕ್; ಎರಡು ಬ್ಯಾಂಕ್ ಖಾತೆಗಳಿಂದ ₹3.03 ಲಕ್ಷ ಹಣ ವರ್ಗಾವಣೆ

    adminBy adminNovember 14, 2026Updated:November 14, 2026No Comments1 Min Read

    ಮಲ್ಪೆ : ಮೊಬೈಲ್‌ ಫೋನ್‌ಗೆ ನಿಗೂಢ ಸಂದೇಶ (ಪಾಪ್–ಅಪ್) ಕಳುಹಿಸಿ, ಫೋನ್ ಹ್ಯಾಕ್ ಮಾಡುವ ಮೂಲಕ ವ್ಯಕ್ತಿಯೊಬ್ಬರ ಎರಡು ಬ್ಯಾಂಕ್ ಖಾತೆಗಳಿಂದ ಒಟ್ಟು ₹3.03 ಲಕ್ಷ ಹಣವನ್ನು ಸೈಬರ್ ವಂಚಕರು ಲಪಟಾಯಿಸಿರುವ ಘಟನೆ ಕೊಡವೂರಿನಲ್ಲಿ ನಡೆದಿದೆ. ವಂಚನೆಗೆ ಒಳಗಾದ ಕೊಡವೂರು ನಿವಾಸಿ ಪ್ರಸನ್ನ ಅವರು ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ನವೆಂಬರ್ 9ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಪ್ರಸನ್ನ ಅವರು ಮನೆಯಲ್ಲಿರುವಾಗ, ಅವರ ಮೊಬೈಲ್ ಪರದೆಯ ಮೇಲೆ ‘PLAY LOOM’ ಎಂದು ನಿರಂತರವಾಗಿ ಸಂದೇಶ ಬರಲಾರಂಭಿಸಿತ್ತು. ಅದನ್ನು ತೆಗೆಯಲು ಪ್ರಯತ್ನಿಸಿದರೂ ಸಂದೇಶ ಹೋಗಿರಲಿಲ್ಲ. ಜೊತೆಗೆ ಪರದೆಯ ಮೇಲೆ ‘ಅಪ್‌ಡೇಟ್’  ಎಂದು ತೋರಿಸುತ್ತಿತ್ತು. ಇದರಿಂದ ಗಾಬರಿಗೊಂಡ ಪ್ರಸನ್ನ ಅವರು, ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿ ಜಿಯೋ ಹಾಗೂ ಬಿಎಸ್‌ಎನ್‌ಎಲ್ ಸಿಮ್ ಕಾರ್ಡ್‌ಗಳನ್ನು ಹೊರತೆಗೆದು, ಬಳಿಕ ಮತ್ತೆ ಫೋನ್ ಆನ್ ಮಾಡಿದ್ದರು. ಮರುದಿನ ಬೆಳಿಗ್ಗೆ ಮೊಬೈಲ್ ಆನ್ ಮಾಡಿದಾಗಲೂ ಮತ್ತೆ ಅಪ್‌ಡೇಟ್ ಕೇಳುತ್ತಿತ್ತು.

    ಈ ನಡುವೆ ಪ್ರಸನ್ನ ಅವರು ಮೊಬೈಲ್ ರೀಚಾರ್ಜ್ ಮಾಡಲು ಮುಂದಾದಾಗ, ಬ್ಯಾಂಕ್ ಖಾತೆಗಳಲ್ಲಿ ಹಣವಿಲ್ಲ ಎಂಬ ಸಂದೇಶ ಬಂದಿದೆ. ಅನುಮಾನಗೊಂಡು ಪರಿಶೀಲಿಸಿದಾಗ, ಕೆಳಾರ್ಕಳಬೆಟ್ಟು ಬ್ಯಾಂಕ್ ಆಫ್ ಬರೋಡಾ ಖಾತೆಯಿಂದ ₹1,85,000 ಹಾಗೂ ಆದಿ ಉಡುಪಿ ಶಾಖೆಯ ಕೆನರಾ ಬ್ಯಾಂಕ್ ಖಾತೆಯಿಂದ ₹1,18,000 ಸೇರಿ ಒಟ್ಟು ₹3,03,000 ಹಣ ಅಕ್ರಮವಾಗಿ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿದೆ.
    ತಕ್ಷಣವೇ ಎಚ್ಚೆತ್ತ ಪ್ರಸನ್ನ ಅವರು ಸೈಬರ್ ಸಹಾಯವಾಣಿ ಸಂಖ್ಯೆ 1930ಕ್ಕೆ ಕರೆ ಮಾಡಿ ದೂರು ದಾಖಲಿಸಿ, ತಮ್ಮ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದಾರೆ (ಫ್ರೀಜ್). ದೂರಿನ ಮೇರೆಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




    #crime #udupi
    Previous Articleಪುತ್ತೂರು: 10 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಸುಲಿಗೆ ಪ್ರಕರಣದ ಆರೋಪಿಯ ಬಂಧನ
    Next Article ಥಾರ್–ಕಾರು ನಡುವೆ ಅಪಘಾತ; ಮೆಸ್ಕಾಂ ಎಇ ಸ್ಥಳದಲ್ಲೇ ಸಾವು, ಮೂವರಿಗೆ ಗಂಭೀರ ಗಾಯ

    Related Posts

    ಪುತ್ತೂರು: 10 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಸುಲಿಗೆ ಪ್ರಕರಣದ ಆರೋಪಿಯ ಬಂಧನ

    November 14, 2026

    ಸುಬ್ರಹ್ಮಣ್ಯ: 26 ವರ್ಷಗಳ ಹಿಂದಿನ ಕೊಲೆ ಪ್ರಕರಣದ ಆರೋಪಿ ಕೇರಳದಲ್ಲಿ ಬಂಧನ; ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಸೆರೆ

    November 14, 2026

    ಕಡಬ: ಹಣ್ಣು ಸಾಗಿಸುತ್ತಿದ್ದ ಪಿಕಪ್‌ಗೆ ಕಾರು ಡಿಕ್ಕಿ; ಅಪಘಾತದಲ್ಲಿ ಓರ್ವ ಬಲಿ, ಮತ್ತೋರ್ವನಿಗೆ ಗಂಭೀರ ಗಾಯ

    November 14, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಥಾರ್–ಕಾರು ನಡುವೆ ಅಪಘಾತ; ಮೆಸ್ಕಾಂ ಎಇ ಸ್ಥಳದಲ್ಲೇ ಸಾವು, ಮೂವರಿಗೆ ಗಂಭೀರ ಗಾಯ

    November 14, 2026

    ಮಲ್ಪೆ: ನಿಗೂಢ ಪಾಪ್‌ಅಪ್ ಸಂದೇಶದ ಮೂಲಕ ಮೊಬೈಲ್ ಹ್ಯಾಕ್; ಎರಡು ಬ್ಯಾಂಕ್ ಖಾತೆಗಳಿಂದ ₹3.03 ಲಕ್ಷ ಹಣ ವರ್ಗಾವಣೆ

    November 14, 2026

    ಪುತ್ತೂರು: 10 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಸುಲಿಗೆ ಪ್ರಕರಣದ ಆರೋಪಿಯ ಬಂಧನ

    November 14, 2026

    ಅಮೆರಿಕ: ಮಿಸ್ಸಿಸ್ಸಿಪ್ಪಿ ನದಿಯಲ್ಲಿ ಕ್ರೂಸ್ ಹಡಗಿಗೆ ಟ್ಯಾಂಕರ್ ಡಿಕ್ಕಿ; ಹಡಗು ಪಲ್ಟಿ, 32 ಮಂದಿಗೆ ಗಾಯ

    November 14, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಥಾರ್–ಕಾರು ನಡುವೆ ಅಪಘಾತ; ಮೆಸ್ಕಾಂ ಎಇ ಸ್ಥಳದಲ್ಲೇ ಸಾವು, ಮೂವರಿಗೆ ಗಂಭೀರ ಗಾಯ

    November 14, 2026

    ಮಂಗಳೂರು: ಕೋಟಿ ರೂಪಾಯಿ ದರೋಡೆ ಪ್ರಕರಣದಲ್ಲಿ ಖಾಕಿ ಕೈವಾಡ; ಕಾರವಾರ ಪೊಲೀಸ್ ಕಾನ್‌ಸ್ಟೇಬಲ್ ಉರ್ವ ಪೊಲೀಸರ ವಶಕ್ಕೆ

    November 14, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.