Close Menu
    What's Hot

    ಬೆಂಗಳೂರು ಸರಣಿ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಏಳು ಶವಗಳ ಸಾಗಾಟಕ್ಕೆ ಆರೋಪಿ ಹೂಡಿದ್ದ ತಂತ್ರ ಬಯಲು

    November 16, 2026

    ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಬಾಲಕನ ಮೇಲೆ ಹಲ್ಲೆ; ಒಂಬತ್ತು ಮಂದಿ ವಿರುದ್ಧ ಪ್ರಕರಣ ದಾಖಲು

    November 16, 2026

    ಥೈಲ್ಯಾಂಡ್: ಭೀಕರ ಅಗ್ನಿ ದುರಂತ; ಕಟ್ಟಡದ ಮೇಲ್ಮಹಡಿಗಳಲ್ಲಿ ಸಿಲುಕಿದ ಜನರು, 11 ಮಂದಿ ಸಾವು, 16 ಜನರಿಗೆ ಗಾಯ

    November 16, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಕೇರಳ: ಕುಡಿದ ಮತ್ತಿನಲ್ಲಿ ಅಮಾನವೀಯ ಕೃತ್ಯ; ಎರಡು ವರ್ಷದ ಮಗಳನ್ನು ನೆಲಕ್ಕೆ ಎಸೆದು ಕೊಂದ ತಂದೆ
    ಅಪರಾಧ

    ಕೇರಳ: ಕುಡಿದ ಮತ್ತಿನಲ್ಲಿ ಅಮಾನವೀಯ ಕೃತ್ಯ; ಎರಡು ವರ್ಷದ ಮಗಳನ್ನು ನೆಲಕ್ಕೆ ಎಸೆದು ಕೊಂದ ತಂದೆ

    adminBy adminNovember 16, 2026No Comments1 Min Read

    ಕೇರಳ: ಕುಡಿದ ಮತ್ತಿನಲ್ಲಿ ಪತ್ನಿಯೊಂದಿಗೆ ಜಗಳವಾಡುತ್ತಿದ್ದ ವಲಸೆ ಕಾರ್ಮಿಕನೊಬ್ಬ, ತಾಯಿಯ ಮಡಿಲಲ್ಲಿದ್ದ ಎರಡು ವರ್ಷದ ಮಗಳನ್ನು ಕಿತ್ತು ನೆಲಕ್ಕೆ ಎಸೆದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೇರಳದ ಆಲಪ್ಪುಳ ಜಿಲ್ಲೆಯ ಮಾವೆಲಿಕ್ಕರ ಸಮೀಪದ ವೆಟ್ಟಿಯಾರ್‌ನಲ್ಲಿ ನಡೆದಿದೆ. ಅಸ್ಸಾಂನ ಬಾರಾಮತಿ ಮೂಲದ ಪರಿತೋಷ್ ಮಂಡಲ್ (27) ಬಂಧಿತ ಆರೋಪಿ. ಈತನ ಕೃತ್ಯಕ್ಕೆ ಬಲಿಯಾದ ದುರ್ದೈವಿ ಮಗುವನ್ನು ದೀಪಿಕಾ (2) ಎಂದು ಗುರುತಿಸಲಾಗಿದೆ.

    ಕಟ್ಟಡ ನಿರ್ಮಾಣ ಮತ್ತು ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ ಪರಿತೋಷ್ ಮಂಡಲ್, ಪತ್ನಿ ರೊಂಡೋವಲ್ಲಿ ಮತ್ತು ಮಗಳೊಂದಿಗೆ ಮಂಗಮ್ಕುಳಿ ಜಂಕ್ಷನ್‌ನ ಪೂರ್ವ ಭಾಗದಲ್ಲಿರುವ ವೆಟ್ಟಿಯಾರ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ. ಮದ್ಯ ಸೇವಿಸಿ ಮನೆಗೆ ಬಂದಿದ್ದ ಪರಿತೋಷ್, ಪತ್ನಿ ರೊಂಡೋವಲ್ಲಿಯೊಂದಿಗೆ ತೀವ್ರ ವಾಗ್ವಾದ ನಡೆಸಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದಾಗ, ಪತ್ನಿಯ ಮಡಿಲಲ್ಲಿ ಕುಳಿತಿದ್ದ ಮಗು ದೀಪಿಕಾಳನ್ನು ಬಲವಂತವಾಗಿ ಕಿತ್ತುಕೊಂಡ ಆರೋಪಿ, ಕೋಪದ ಭರದಲ್ಲಿ ನೆಲಕ್ಕೆ ಎಸೆದಿದ್ದಾನೆ. ಇದರಿಂದ ಮಗುವಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ.

    ತಕ್ಷಣವೇ ಮಗುವನ್ನು ಮಾವೆಲಿಕ್ಕರ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅದಾಗಲೇ ಮಗು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಮಗುವಿನ ದೇಹದ ಮೇಲೆ ಹಲ್ಲೆ ಮತ್ತು ಚಿತ್ರಹಿಂಸೆಯ ಗುರುತುಗಳನ್ನು ಗಮನಿಸಿದ ವೈದ್ಯರಿಗೆ ಸಾವಿನ ಬಗ್ಗೆ ಅನುಮಾನ ಮೂಡಿದ್ದು, ತಕ್ಷಣ ಮಾವೆಲಿಕ್ಕರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಕುರತಿಕಾಡು ಪೊಲೀಸರು ತನಿಖೆ ನಡೆಸಿ ಆರೋಪಿ ಪರಿತೋಷ್ ಮಂಡಲ್‌ನನ್ನು ಬಂಧಿಸಿದ್ದಾರೆ. ಸದ್ಯ ಮಗುವಿನ ಮೃತದೇಹವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.




    #crime #national
    Previous Articleಲಾರಿ–ಬೈಕ್ ಭೀಕರ ಅಪಘಾತ; ಬೆಂಗಳೂರಿಗೆ ತೆರಳುತ್ತಿದ್ದ 26 ವರ್ಷದ ಯುವ ಎಂಜಿನಿಯರ್ ಸ್ಥಳದಲ್ಲೇ ಸಾವು
    Next Article ಮಂಗಳೂರು: ಆನ್‌ಲೈನ್ ಪಾರ್ಟ್‌ಟೈಮ್ ಕೆಲಸದ ಆಮಿಷ; ಹಂತ ಹಂತವಾಗಿ ಯುವಕನಿಂದ ₹4.49 ಲಕ್ಷ ಲಪಟಾಯಿಸಿದ ಸೈಬರ್ ವಂಚಕರು

    Related Posts

    ಬೆಂಗಳೂರು ಸರಣಿ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಏಳು ಶವಗಳ ಸಾಗಾಟಕ್ಕೆ ಆರೋಪಿ ಹೂಡಿದ್ದ ತಂತ್ರ ಬಯಲು

    November 16, 2026

    ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಬಾಲಕನ ಮೇಲೆ ಹಲ್ಲೆ; ಒಂಬತ್ತು ಮಂದಿ ವಿರುದ್ಧ ಪ್ರಕರಣ ದಾಖಲು

    November 16, 2026

    ಮಂಗಳೂರು: ಆನ್‌ಲೈನ್ ಪಾರ್ಟ್‌ಟೈಮ್ ಕೆಲಸದ ಆಮಿಷ; ಹಂತ ಹಂತವಾಗಿ ಯುವಕನಿಂದ ₹4.49 ಲಕ್ಷ ಲಪಟಾಯಿಸಿದ ಸೈಬರ್ ವಂಚಕರು

    November 16, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಬೆಂಗಳೂರು ಸರಣಿ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಏಳು ಶವಗಳ ಸಾಗಾಟಕ್ಕೆ ಆರೋಪಿ ಹೂಡಿದ್ದ ತಂತ್ರ ಬಯಲು

    November 16, 2026

    ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಬಾಲಕನ ಮೇಲೆ ಹಲ್ಲೆ; ಒಂಬತ್ತು ಮಂದಿ ವಿರುದ್ಧ ಪ್ರಕರಣ ದಾಖಲು

    November 16, 2026

    ಥೈಲ್ಯಾಂಡ್: ಭೀಕರ ಅಗ್ನಿ ದುರಂತ; ಕಟ್ಟಡದ ಮೇಲ್ಮಹಡಿಗಳಲ್ಲಿ ಸಿಲುಕಿದ ಜನರು, 11 ಮಂದಿ ಸಾವು, 16 ಜನರಿಗೆ ಗಾಯ

    November 16, 2026

    ಮಂಗಳೂರು: ಆನ್‌ಲೈನ್ ಪಾರ್ಟ್‌ಟೈಮ್ ಕೆಲಸದ ಆಮಿಷ; ಹಂತ ಹಂತವಾಗಿ ಯುವಕನಿಂದ ₹4.49 ಲಕ್ಷ ಲಪಟಾಯಿಸಿದ ಸೈಬರ್ ವಂಚಕರು

    November 16, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಬೆಂಗಳೂರು ಸರಣಿ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಏಳು ಶವಗಳ ಸಾಗಾಟಕ್ಕೆ ಆರೋಪಿ ಹೂಡಿದ್ದ ತಂತ್ರ ಬಯಲು

    November 16, 2026

    ಲಾರಿ–ಬೈಕ್ ಭೀಕರ ಅಪಘಾತ; ಬೆಂಗಳೂರಿಗೆ ತೆರಳುತ್ತಿದ್ದ 26 ವರ್ಷದ ಯುವ ಎಂಜಿನಿಯರ್ ಸ್ಥಳದಲ್ಲೇ ಸಾವು

    November 16, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.