Close Menu
    What's Hot

    ಬೆಂಗಳೂರು ಸರಣಿ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಏಳು ಶವಗಳ ಸಾಗಾಟಕ್ಕೆ ಆರೋಪಿ ಹೂಡಿದ್ದ ತಂತ್ರ ಬಯಲು

    November 16, 2026

    ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಬಾಲಕನ ಮೇಲೆ ಹಲ್ಲೆ; ಒಂಬತ್ತು ಮಂದಿ ವಿರುದ್ಧ ಪ್ರಕರಣ ದಾಖಲು

    November 16, 2026

    ಥೈಲ್ಯಾಂಡ್: ಭೀಕರ ಅಗ್ನಿ ದುರಂತ; ಕಟ್ಟಡದ ಮೇಲ್ಮಹಡಿಗಳಲ್ಲಿ ಸಿಲುಕಿದ ಜನರು, 11 ಮಂದಿ ಸಾವು, 16 ಜನರಿಗೆ ಗಾಯ

    November 16, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಬೆಂಗಳೂರು ಸರಣಿ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಏಳು ಶವಗಳ ಸಾಗಾಟಕ್ಕೆ ಆರೋಪಿ ಹೂಡಿದ್ದ ತಂತ್ರ ಬಯಲು
    ಅಪರಾಧ

    ಬೆಂಗಳೂರು ಸರಣಿ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಏಳು ಶವಗಳ ಸಾಗಾಟಕ್ಕೆ ಆರೋಪಿ ಹೂಡಿದ್ದ ತಂತ್ರ ಬಯಲು

    adminBy adminNovember 16, 2026No Comments1 Min Read

    ಬೆಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಸರಣಿ ಹತ್ಯೆ ಹಾಗೂ ಏಳು ಶವಗಳ ನಿಗೂಢ ವಿಲೇವಾರಿ ಪ್ರಕರಣದ ತನಿಖೆಯಲ್ಲಿ ಪೊಲೀಸರೇ ದಂಗಾಗುವಂತಹ ಸ್ಫೋಟಕ ಮಾಹಿತಿಗಳು ಹೊರಬರುತ್ತಿವೆ. ಪ್ರಕರಣದ ಪ್ರಮುಖ ಆರೋಪಿ ಇಂದುಶೇಖರ್, ಹಂತ ಹಂತವಾಗಿ ಏಳು ಶವಗಳನ್ನು ಯಾರಿಗೂ ಕಿಂಚಿತ್ತೂ ಅನುಮಾನ ಬಾರದಂತೆ ಸಾಗಿಸಲು ಹೂಡಿದ್ದ ಮಾಸ್ಟರ್ ಪ್ಲ್ಯಾನ್ ಈಗ ಬಯಲಾಗಿದೆ. ತಪಾಸಣೆಯಿಂದ ತಪ್ಪಿಸಿಕೊಳ್ಳಲು ಆತ ಪತ್ರಿಕೋದ್ಯಮದ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.

    ಆರೋಪಿ ಇಂದುಶೇಖರ್ ಶವಗಳನ್ನು ಸಾಗಿಸಲು ತನ್ನ ಯೆಲ್ಲೋ ಬೋರ್ಡ್ ಟೊಯೋಟಾ ಇಟಿಯೋಸ್ ಕಾರನ್ನು ಬಳಸಿದ್ದನು. ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರು ಕಾರು ತಡೆದು ತಪಾಸಣೆ ನಡೆಸದಿರಲಿ ಎಂಬ ಉದ್ದೇಶದಿಂದ, ಕಾರಿನ ಮುಂಭಾಗದ ಗ್ಲಾಸ್ ಮೇಲೆ ‘PRESS’ ಸಿಂಬಲ್ ಹಾಕಿಸಿಕೊಂಡಿದ್ದನು.

    ಅಷ್ಟೇ ಅಲ್ಲದೆ, ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಪತ್ರಕರ್ತರ ಪ್ರವಾಸ ಎಂದು ಬರೆಸಿದ ದೊಡ್ಡ ಬ್ಯಾನರ್ ಒಂದನ್ನು ಮಾಡಿಸಿ, ಕಾರಿನ ನಂಬರ್ ಪ್ಲೇಟ್ ಕಾಣದಂತೆ ಅಡ್ಡಲಾಗಿ ಕಟ್ಟಿಕೊಂಡಿದ್ದನು. ಪತ್ರಿಕೆ ಹೆಸರಿನಲ್ಲಿ ಹೋದರೆ ಯಾರಿಗೂ ಅನುಮಾನ ಬರುವುದಿಲ್ಲ ಎಂಬ ಲೆಕ್ಕಾಚಾರ ಆತನದ್ದಾಗಿತ್ತು. ಒಂದು ವೇಳೆ ದಾರಿಯಲ್ಲಿ ಯಾರಾದರೂ ಅನುಮಾನಗೊಂಡು ಪ್ರಶ್ನಿಸಿದರೆ, ತಕ್ಷಣವೇ ತನ್ನ ಬಳಿಯಿದ್ದ ಠಾಣಾ ವರದಿಯ ಪತ್ರಿಕೆ ಹಾಗೂ ವಿಸಿಟಿಂಗ್ ಕಾರ್ಡ್ ತೋರಿಸಿ ನಾವು ಪತ್ರಕರ್ತರು, ಪ್ರವಾಸಕ್ಕೆ ಹೋಗುತ್ತಿದ್ದೇವೆ ಎಂದು ನಂಬಿಸಿ ಸುಲಭವಾಗಿ ಪಾರಾಗುತ್ತಿದ್ದನು.

    ಈ ಹಿಂದೆ ನಡೆದ ಸರಣಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕರು ಒಟ್ಟು ಏಳು ಮಂದಿಯನ್ನು ಕೊಂದು ಶವಗಳನ್ನು ವಿವಿಧೆಡೆ ಎಸೆದು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದರು. ಒಂದೇ ಬಾರಿ ಸಾಗಿಸಿದರೆ ಸಿಕ್ಕಿಬೀಳುವ ಭಯದಿಂದ ಹಂತ ಹಂತವಾಗಿ ಈ ಕೃತ್ಯ ಎಸಗಲಾಗಿತ್ತು. ಆರೋಪಿ ಇಂದುಶೇಖರ್ ಇದೇ ರೀತಿಯ ಬ್ಯಾನರ್ ಕಟ್ಟಿಕೊಂಡು ಸಕಲೇಶಪುರ ಘಾಟಿ, ಮಂಗಳೂರು ಸೇರಿದಂತೆ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ರಾಜಾರೋಷವಾಗಿ ಓಡಾಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ರಾಜ್ಯದ ಇತರ ಭಾಗಗಳಲ್ಲೂ ಇದೇ ತಂತ್ರ ಬಳಸಿ ಶವಗಳನ್ನು ಸಾಗಿಸಿರುವ ಬಗ್ಗೆ ಪೊಲೀಸರು ಬಲವಾದ ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದು, ತೀವ್ರ ವಿಚಾರಣೆ ಮುಂದುವರಿದಿದೆ.




    #crime #karnataka
    Previous Articleಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಬಾಲಕನ ಮೇಲೆ ಹಲ್ಲೆ; ಒಂಬತ್ತು ಮಂದಿ ವಿರುದ್ಧ ಪ್ರಕರಣ ದಾಖಲು

    Related Posts

    ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಬಾಲಕನ ಮೇಲೆ ಹಲ್ಲೆ; ಒಂಬತ್ತು ಮಂದಿ ವಿರುದ್ಧ ಪ್ರಕರಣ ದಾಖಲು

    November 16, 2026

    ಮಂಗಳೂರು: ಆನ್‌ಲೈನ್ ಪಾರ್ಟ್‌ಟೈಮ್ ಕೆಲಸದ ಆಮಿಷ; ಹಂತ ಹಂತವಾಗಿ ಯುವಕನಿಂದ ₹4.49 ಲಕ್ಷ ಲಪಟಾಯಿಸಿದ ಸೈಬರ್ ವಂಚಕರು

    November 16, 2026

    ಕೇರಳ: ಕುಡಿದ ಮತ್ತಿನಲ್ಲಿ ಅಮಾನವೀಯ ಕೃತ್ಯ; ಎರಡು ವರ್ಷದ ಮಗಳನ್ನು ನೆಲಕ್ಕೆ ಎಸೆದು ಕೊಂದ ತಂದೆ

    November 16, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಬೆಂಗಳೂರು ಸರಣಿ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಏಳು ಶವಗಳ ಸಾಗಾಟಕ್ಕೆ ಆರೋಪಿ ಹೂಡಿದ್ದ ತಂತ್ರ ಬಯಲು

    November 16, 2026

    ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಬಾಲಕನ ಮೇಲೆ ಹಲ್ಲೆ; ಒಂಬತ್ತು ಮಂದಿ ವಿರುದ್ಧ ಪ್ರಕರಣ ದಾಖಲು

    November 16, 2026

    ಥೈಲ್ಯಾಂಡ್: ಭೀಕರ ಅಗ್ನಿ ದುರಂತ; ಕಟ್ಟಡದ ಮೇಲ್ಮಹಡಿಗಳಲ್ಲಿ ಸಿಲುಕಿದ ಜನರು, 11 ಮಂದಿ ಸಾವು, 16 ಜನರಿಗೆ ಗಾಯ

    November 16, 2026

    ಮಂಗಳೂರು: ಆನ್‌ಲೈನ್ ಪಾರ್ಟ್‌ಟೈಮ್ ಕೆಲಸದ ಆಮಿಷ; ಹಂತ ಹಂತವಾಗಿ ಯುವಕನಿಂದ ₹4.49 ಲಕ್ಷ ಲಪಟಾಯಿಸಿದ ಸೈಬರ್ ವಂಚಕರು

    November 16, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಬೆಂಗಳೂರು ಸರಣಿ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಏಳು ಶವಗಳ ಸಾಗಾಟಕ್ಕೆ ಆರೋಪಿ ಹೂಡಿದ್ದ ತಂತ್ರ ಬಯಲು

    November 16, 2026

    ಲಾರಿ–ಬೈಕ್ ಭೀಕರ ಅಪಘಾತ; ಬೆಂಗಳೂರಿಗೆ ತೆರಳುತ್ತಿದ್ದ 26 ವರ್ಷದ ಯುವ ಎಂಜಿನಿಯರ್ ಸ್ಥಳದಲ್ಲೇ ಸಾವು

    November 16, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.