Close Menu
    What's Hot

    ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಅಂತಾರಾಜ್ಯ ನಂಟು; ಕೃಪಾ ಆಳ್ವಾ ಸಂಪರ್ಕದಲ್ಲಿದ್ದ ವ್ಯಕ್ತಿಗೆ ಪೊಲೀಸರ ನೋಟಿಸ್

    November 28, 2026

    ಕಡಬದಲ್ಲಿ ಕಾರು–ಸ್ಕೂಟರ್ ಮುಖಾಮುಖಿ ಡಿಕ್ಕಿ; ಗಂಭೀರ ಗಾಯಗೊಂಡ 31 ವರ್ಷದ ಯುವಕ ಮೃತ್ಯು

    November 28, 2026

    20 ವರ್ಷಗಳ ಹಿಂದಿನ ಮನೋಹರ್ ಶೆಟ್ಟಿ ಕೊಲೆ ಪ್ರಕರಣ; ದುಬೈನಿಂದ ಮೋಸ್ಟ್ ವಾಂಟೆಡ್ ಆರೋಪಿ ರಾಜೇಶ್ ಆಚಾರ್ಯ ಗಡಿಪಾರು

    November 28, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಮಂಗಳೂರು :ಸಾಲದ ಕಂತು ಕಟ್ಟಲು ಸ್ನೇಹಿತನನ್ನೇ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ; ಆರೋಪಿಯ ಬಂಧನ
    ಅಪರಾಧ

    ಮಂಗಳೂರು :ಸಾಲದ ಕಂತು ಕಟ್ಟಲು ಸ್ನೇಹಿತನನ್ನೇ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ; ಆರೋಪಿಯ ಬಂಧನ

    adminBy adminNovember 23, 2026No Comments2 Mins Read

    ಮಂಗಳೂರು : ಹಣಕ್ಕಾಗಿ ತನ್ನ ಸ್ನೇಹಿತನನ್ನೇ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜ್ಪೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಖುಷ್‌ನಗರದ ಶ್ರವಣ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

    ಹಿಟಾಚಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಈತ ತನ್ನದೇ ಊರಿನ ಮನೀಶ್ ಶರ್ಮಾ (25) ಎಂಬಾತನನ್ನು ಅ.27ರಂದು ಕೊಲೆ ಮಾಡಿ ಬಳಿಕ ಊರಿಗೆ ಪರಾರಿಯಾಗಿದ್ದ ಎನ್ನಲಾಗಿದೆ. ಹಣಕ್ಕಾಗಿ ಶ್ರವಣ್ ತನ್ನ ಸ್ನೇಹಿತ ಮನೀಶ್‌ನನ್ನು ಊಟದ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೊಲೆ ಮಾಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

    ನ.13ರಂದು ಮನೀಶ್‌ನ ಮೃತದೇಹದ ಅಸ್ಥಿಪಂಜರವು ಹಳೆಯ ವಿಮಾನ ನಿಲ್ದಾಣ ರಸ್ತೆಯ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿತ್ತು. ಇದೊಂದು ವ್ಯವಸ್ಥಿತ ಕೊಲೆ ಎಂದು ಶಂಕಿಸಿ ಮೃತನ ಸಹೋದರ ಸೋನು ಶರ್ಮಾ ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಅದರಂತೆ ತನಿಖೆ ನಡೆಸಿದ ಬಜ್ಪೆ ಪೊಲೀಸರು ಪ್ರಕರಣವನ್ನು ಬೇಧಿಸಿದ್ದಾರೆ.

    ಮನೀಶ್ ಮತ್ತು ಶ್ರವಣ್ ಸೋಮಸುಂದರ್ ಎಂಬವರ ಬಳಿ ಹಿಟಾಚಿ ಚಾಲಕರಾಗಿ ದುಡಿಯುತ್ತಿದ್ದರು. ಅಲ್ಲದೆ ಬಾಡಿಗೆಯ ಒಂದೇ ಕೊಠಡಿಯಲ್ಲಿ ವಾಸವಾಗಿದ್ದರು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಸೋನು ಅ.27ರಂದು ಹಲವು ಬಾರಿ ತನ್ನ ಸಹೋದರ ಮನಿಶ್‌ಗೆ ಕರೆ ಮಾಡಿದ್ದ. ಆದರೆ ಮೊಬೈಲ್ ಸ್ವಿಚ್‌ಆಫ್ ಎಂಬ ಸೂಚನೆ ಬರುತ್ತಿತ್ತು. ಆ ದಿನ ರಾತ್ರಿ ಹಿಟಾಚಿ ಮಾಲಕ ಸೋಮಸುಂದರ್ ಬೆಂಗಳೂರಿನಲ್ಲಿರುವ ಸೋನುವಿಗೆ ಕರೆ ಮಾಡಿ ಮನೀಶ್ ಇಂದು ಸಂಜೆ ಶ್ರವಣ್ ಜೊತೆ ಹೊರಗಡೆ ಹೋದವ ಮರಳಿ ಬಂದಿಲ್ಲ. ಕರೆಗೂ ಸಿಗುತ್ತಿಲ್ಲ ಎಂದು ತಿಳಿಸಿದ್ದರು. ಅ.30ರಂದು ಸೋನು ಬಜ್ಪೆಗೆ ಆಗಮಿಸಿ ಮನೀಶ್ ಉಳಿದುಕೊಂಡಿದ್ದ ರೂಮ್‌ಗೆ ತೆರಳಿ ಬಿಹಾರ ಮೂಲದ ಬೈಜುಲಾಲ್ ಎಂಬಾತನಲ್ಲಿ ತನ್ನ ಸಹೋದರನ ಬಳಿ ವಿಚಾರಿಸಿದ. ಅ.27ರಂದು ಸಂಜೆ ಶ್ರವಣ್ ಮತ್ತು ಮನೀಶ್ ಊಟಕ್ಕೆ ಹೋಗಿದ್ದು, ವಾಪಸ್ ಶ್ರವಣ್ ಮಾತ್ರ ಬಂದಿರುವುದಾಗಿ ಬೈಜುಲಾಲ್ ತಿಳಿಸಿದ. ಅದರಂತೆ ಶ್ರವಣ್ ಬಳಿ ಮನೀಶ್ ಬಗ್ಗೆ ಕೇಳಿದಾಗ ಆತ ಊರಿಗೆ ಹೋಗಿರುವುದಾಗಿ ತಿಳಿಸಿದ. ಇದರಿಂದ ಸಂಶಯಗೊಂಡ ಸೋನು ನ.1ರಂದು ಬಜ್ಪೆ ಠಾಣೆಗೆ ದೂರು ನೀಡಿದ್ದರು. ಅಲ್ಲದೆ ಮನೀಶ್‌ನ ಬ್ಯಾಂಕ್ ಖಾತೆಯ ವಿವರಗಳನ್ನು ಪಡೆದಾಗ ಅ.27ರಂದು ರಾಜನ್ ಎಂಬವರಿಗೆ 63,720 ರೂ. ವರ್ಗಾವಣೆ ಆಗಿದ್ದು, ಅವರಿಂದ ಶ್ರವಣ್ ಖಾತೆಗೆ ಹೋಗಿರುವುದು ತಿಳಿದು ಬಂದಿತ್ತು. ನ.13ರಂದು ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಮನುಷ್ಯ ದೇಹದ ಮೂಳೆಯ ತುಂಡುಗಳು, ತಲೆ ಬುರುಡೆಯ ಚೂರುಗಳು ಕಂಡು ಬಂದಿದ್ದು, ಪಕ್ಕದಲ್ಲಿ ಶರ್ಟ್ ಮತ್ತು ಪ್ಯಾಂಟ್ ಲಭಿಸಿತ್ತು. ಅದು ಮನೀಶ್‌ನದ್ದೇ ಎಂದು ಸ್ಪಷ್ಟವಾಗಿದ್ದವು.

    ಪೊಲೀಸರು ತನಿಖೆ ತೀವ್ರಗೊಳಿಸಿದಾಗ ತಾನು ಊರಲ್ಲಿ ಸಾಲ ಮಾಡಿಕೊಂಡಿದ್ದೆ. ಇಎಂಐ ಕಟ್ಟಲು ಹಣದ ಅವಶ್ಯಕತೆ ಇತ್ತು. ಅದಕ್ಕಾಗಿ ಸ್ನೇಹಿತನ ಹಣ ಲಪಟಾಯಿಸಲು ಊಟದ ನೆಪದಲ್ಲಿ ಕರೆದೊಯ್ದು ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ನಿರ್ಜನ ಪ್ರದೇಶದಲ್ಲಿ ಕೊಲೆ ಮಾಡಿ ಊರಿಗೆ ಪರಾರಿಯಾಗಿರುವುದಾಗಿ ಆರೋಪಿ ಶ್ರವಣ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.




    #crime #dakshinakannada
    Previous Articleಬಂಟ್ವಾಳ: ಚಿನ್ನ ಮಾರಾಟದ ಹೆಸರಿನಲ್ಲಿ ವಂಚನೆಗೆ ಯತ್ನ; ನಕಲಿ ಆಭರಣ ನೀಡಿ ಹಣ ಪಡೆದ ಆರೋಪ
    Next Article ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಸಂಸದನ ಬೆಂಗಾವಲು ವಾಹನ; ಕೂದಲೆಳೆಯ ಅಂತರದಲ್ಲಿ ಪಾರಾದ ಸಂಸದ, ಐವರಿಗೆ ಗಾಯ

    Related Posts

    ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಅಂತಾರಾಜ್ಯ ನಂಟು; ಕೃಪಾ ಆಳ್ವಾ ಸಂಪರ್ಕದಲ್ಲಿದ್ದ ವ್ಯಕ್ತಿಗೆ ಪೊಲೀಸರ ನೋಟಿಸ್

    November 28, 2026

    ಕಡಬದಲ್ಲಿ ಕಾರು–ಸ್ಕೂಟರ್ ಮುಖಾಮುಖಿ ಡಿಕ್ಕಿ; ಗಂಭೀರ ಗಾಯಗೊಂಡ 31 ವರ್ಷದ ಯುವಕ ಮೃತ್ಯು

    November 28, 2026

    20 ವರ್ಷಗಳ ಹಿಂದಿನ ಮನೋಹರ್ ಶೆಟ್ಟಿ ಕೊಲೆ ಪ್ರಕರಣ; ದುಬೈನಿಂದ ಮೋಸ್ಟ್ ವಾಂಟೆಡ್ ಆರೋಪಿ ರಾಜೇಶ್ ಆಚಾರ್ಯ ಗಡಿಪಾರು

    November 28, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಅಂತಾರಾಜ್ಯ ನಂಟು; ಕೃಪಾ ಆಳ್ವಾ ಸಂಪರ್ಕದಲ್ಲಿದ್ದ ವ್ಯಕ್ತಿಗೆ ಪೊಲೀಸರ ನೋಟಿಸ್

    November 28, 2026

    ಕಡಬದಲ್ಲಿ ಕಾರು–ಸ್ಕೂಟರ್ ಮುಖಾಮುಖಿ ಡಿಕ್ಕಿ; ಗಂಭೀರ ಗಾಯಗೊಂಡ 31 ವರ್ಷದ ಯುವಕ ಮೃತ್ಯು

    November 28, 2026

    20 ವರ್ಷಗಳ ಹಿಂದಿನ ಮನೋಹರ್ ಶೆಟ್ಟಿ ಕೊಲೆ ಪ್ರಕರಣ; ದುಬೈನಿಂದ ಮೋಸ್ಟ್ ವಾಂಟೆಡ್ ಆರೋಪಿ ರಾಜೇಶ್ ಆಚಾರ್ಯ ಗಡಿಪಾರು

    November 28, 2026

    ಹೆಣ್ಣುಮಕ್ಕಳ ಪಿಜಿಗಳನ್ನೇ ಟಾರ್ಗೆಟ್ ಮಾಡಿ ಅತ್ಯಾಚಾರ ಯತ್ನ, ಮೊಬೈಲ್ ಕಳವು; ಆರೋಪಿಗೆ ಗುಂಡೇಟು

    November 28, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಅಂತಾರಾಜ್ಯ ನಂಟು; ಕೃಪಾ ಆಳ್ವಾ ಸಂಪರ್ಕದಲ್ಲಿದ್ದ ವ್ಯಕ್ತಿಗೆ ಪೊಲೀಸರ ನೋಟಿಸ್

    November 28, 2026

    ಹೆಣ್ಣುಮಕ್ಕಳ ಪಿಜಿಗಳನ್ನೇ ಟಾರ್ಗೆಟ್ ಮಾಡಿ ಅತ್ಯಾಚಾರ ಯತ್ನ, ಮೊಬೈಲ್ ಕಳವು; ಆರೋಪಿಗೆ ಗುಂಡೇಟು

    November 28, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.