ಚಿಕ್ಕಬಳ್ಳಾಪುರ: ಹೆಣ್ಣುಮಕ್ಕಳ ಪಿಜಿಗೆ ನುಗ್ಗಿ ಅತ್ಯಾಚಾರ ಯತ್ನ, ಮೊಬೈಲ್ ಕಳ್ಳತನ ಮಾಡುತ್ತಿದ್ದ ಆರೋಪಿ ಕಾಲಿಗೆ ಚಿಕ್ಕಜಾಲ ಪೊಲೀಸರು ಗುಂಡೇಟು ನೀಡಿದ್ದಾರೆ.
ಆಂಧ್ರಪ್ರದೇಶದ ಮದನಪಲ್ಲಿ ಮೂಲದ ನರೇಶ್ ಕಾಲಿಗೆ ಗುಂಡೇಟು ಬಿದ್ದಿದೆ. ಆರೋಪಿಯು ಹೆಣ್ಣುಮಕ್ಕಳ ಪಿಜಿ ಗಳನ್ನೇ ಟಾರ್ಗೆಟ್ ಮಾಡುತ್ತಿದ್ದ. ಪಿಜಿ ಗಳಿಗೆ ನುಗ್ಗಿ ಮೊಬೈಲ್ ಸಹ ಕಳವು ಮಾಡಿ ಪರಾರಿಯಾಗುತ್ತಿದ್ದ.
ಹುಣಸಮಾರನಹಳ್ಳಿ ಬಳಿ ಪಿಜಿಯೊಂದಕ್ಕೆ ನುಗ್ಗಿ ಯುವತಿ ಮೇಲೆ ಅತ್ಯಾಚಾರ ಯತ್ನಿಸಿದ್ದ. ಬಂಧಿಸಲು ತೆರಳಿದ್ದ ಇಬ್ಬರು ಪಿಸಿ ಗಳ ಮೇಲೆ ದಾಳಿಗೆ ಮುಂದಾಗಿದ್ದ. ಈ ವೇಳೆ ಆರೋಪಿ ಕಾಲಿಗೆ ಚಿಕ್ಕಜಾಲ ಸಿಪಿಐ ಗುಂಡೇಟು ನೀಡಿದ್ದಾರೆ. ಆರೋಪಿಯನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.ಲಕ್ಷ್ಮಣ್ ಹಾಗೂ ಸಚಿನ್ ಎಂಬ ಪೇದೆಗಳ ಮೇಲೆ ಆರೋಪಿ ಚಾಕುವಿನಿಂದ ಅಟ್ಯಾಕ್ ಮಾಡಿದ್ದ. ಬೆಂಗಳೂರಿನ ಯಲಹಂಕ ಹಾಗೂ ಹುಣಸಮಾರನಹಳ್ಳಿ ಬಳಿ ಪಿಜಿ ಗಳಗೆ ನುಗ್ಗಿದ್ದ. ಪಿಜಿ ಗಳಲ್ಲಿ ಇದ್ದ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಚಿಕ್ಕಜಾಲ ಪೋಲಿಸ್ ಠಾಣಾ ವ್ಯಾಪ್ತಿಯ ದೇವನಹಳ್ಳಿ ಬಳಿಯ IVC ರೋಡ್ ಲೇಔಟ್ನಲ್ಲಿ ಆರೋಪಿ ಕಾಲಿಗೆ ಗುಂಡೇಟು ಬಿದ್ದಿದೆ.








