Close Menu
    What's Hot

    ಹಳೇ ವೈಷಮ್ಯಕ್ಕೆ ನಡುರಸ್ತೆಯಲ್ಲೇ ತಲ್ವಾರ್ ಝಳಪಿಸಿದ ಯುವಕರು: ನಾಲ್ವರು ಗಂಭೀರ ಗಾಯ

    September 7, 2026

    ಅತ್ಯಾಚಾರಕ್ಕೆ ಯತ್ನಿಸಿ ಮಹಿಳೆ ಮೇಲೆ ಮಚ್ಚಿನಿಂದ ಹಲ್ಲೆ ಆರೋಪ: ಚಿಕಿತ್ಸೆ ಫಲಿಸದೆ ಸಾವು, ಐವರ ವಿರುದ್ಧ ಕೇಸ್

    September 7, 2026

    ಸಹೋದರನ ಬಗ್ಗೆ ವ್ಯಂಗ್ಯವಾಡಿದ್ದಕ್ಕೆ ಅತ್ತಿಗೆ ಕೊಲೆ: ಶವವನ್ನು ನೀರಿನ ಟ್ಯಾಂಕ್‌ಗೆ ಎಸೆದ ನಾದಿನಿ

    September 7, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»Uncategorized»ಮಂಗಳೂರು: ಗೆಸ್ಟ್ ಹೌಸ್‌ನ ಬೃಹತ್ ಆವರಣ ಗೋಡೆ ಕುಸಿದು ಮನೆ ನಾಶ; 40ಕ್ಕೂ ಹೆಚ್ಚು ಕುಟುಂಬಗಳಲ್ಲಿ ಆತಂಕ
    Uncategorized

    ಮಂಗಳೂರು: ಗೆಸ್ಟ್ ಹೌಸ್‌ನ ಬೃಹತ್ ಆವರಣ ಗೋಡೆ ಕುಸಿದು ಮನೆ ನಾಶ; 40ಕ್ಕೂ ಹೆಚ್ಚು ಕುಟುಂಬಗಳಲ್ಲಿ ಆತಂಕ

    adminBy adminJuly 1, 2026No Comments1 Min Read

    ಮಂಗಳೂರು : ಕಳೆದೆರಡು ದಿನಗಳಿಂದ ಕರಾವಳಿಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಯ ಆರ್ಭಟಕ್ಕೆ ತಾಲೂಕಿನ ಕೆರೆಬೈಲ್ ಗುಡ್ಡೆ ಪ್ರದೇಶದಲ್ಲಿ ಬುಧವಾರ (ಜುಲೈ 01) ಭೀಕರ ಅವಘಡವೊಂದು ಸಂಭವಿಸಿದೆ. ಗುಡ್ಡದ ತುತ್ತ ತುದಿಯಲ್ಲಿದ್ದ ಖಾಸಗಿ ಗೆಸ್ಟ್ ಹೌಸ್‌ನ ಬೃಹತ್ ಆವರಣ ಗೋಡೆ (ಕಾಂಪೌಂಡ್ ವಾಲ್) ತಳಭಾಗದಲ್ಲಿದ್ದ ವಾಸದ ಮನೆಯ ಮೇಲೆ ಕುಸಿದು ಬಿದ್ದ ಪರಿಣಾಮ ಮನೆ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಆದರೆ, ಮನೆಯಲ್ಲಿದ್ದ ಕುಟುಂಬಸ್ಥರು ವಾರದ ಹಿಂದಷ್ಟೇ ಸುರಕ್ಷಿತ ಸ್ಥಳಕ್ಕೆ ವಲಸೆ ಹೋಗಿದ್ದರಿಂದ ದೊಡ್ಡದೊಂದು ದುರಂತ ತಪ್ಪಿದೆ.

    ಇಲ್ಲಿನ ನಿವಾಸಿ ಕಿಶೋರ್ ಅವರಿಗೆ ಸೇರಿದ ಮನೆ ಸಂಪೂರ್ಣವಾಗಿ ಹಾನಿಗೀಡಾದ ಕಟ್ಟಡವಾಗಿದೆ. ಕೆರೆಬೈಲು ಗುಡ್ಡೆ ಪ್ರದೇಶದಲ್ಲಿ ಸುಮಾರು 40ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಗುಡ್ಡದ ತುದಿಯಲ್ಲಿ ಮಂಗಳೂರು ಮೂಲದ ಪ್ರತಿಷ್ಠಿತ ಸಂಸ್ಥೆಯೊಂದಕ್ಕೆ ಸೇರಿದ ಗೆಸ್ಟ್ ಹೌಸ್ ಇದೆ. ಇದರ ಅವೈಜ್ಞಾನಿಕ ಆವರಣ ಗೋಡೆಯೇ ಇಂದಿನ ದುರಂತಕ್ಕೆ ಕಾರಣ ಎನ್ನಲಾಗಿದೆ.

    ಕಿಶೋರ್ ಅವರ ಮನೆಯ ಮೇಲ್ಭಾಗದಲ್ಲಿದ್ದ ಗೆಸ್ಟ್ ಹೌಸ್‌ನ ಆವರಣ ಗೋಡೆಯಲ್ಲಿ ಕಳೆದ ವಾರವಷ್ಟೇ ದೊಡ್ಡ ಬಿರುಕು ಕಾಣಿಸಿಕೊಂಡಿತ್ತು. ಅಪಾಯವನ್ನು ಮುಂಚಿತವಾಗಿಯೇ ಅರಿತ ಕಿಶೋರ್ ಹಾಗೂ ಅವರ ಕುಟುಂಬದ ಸದಸ್ಯರು ವಾರದ ಹಿಂದಷ್ಟೇ ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದರು. ಕಳೆದ ವರ್ಷದ ಮಳೆಗಾಲದಲ್ಲೂ ಇದೇ ರೀತಿ ಗೋಡೆ ಬಿರುಕು ಬಿಟ್ಟಾಗ ಇವರು ಬಾಡಿಗೆ ಮನೆಗೆ ತೆರಳಿದ್ದರು. ಈ ಬಾರಿಯೂ ಸಮಯಪ್ರಜ್ಞೆ ಮೆರೆದು ವಾರದ ಹಿಂದೆಯೇ ಮನೆ ಖಾಲಿ ಮಾಡಿದ್ದರಿಂದ ಇಡೀ ಕುಟುಂಬದ ಜೀವ ಉಳಿದಂತಾಗಿದೆ.

    “ನಾವು ಕಳೆದ 40 ವರ್ಷಗಳಿಂದ ಈ ಗುಡ್ಡೆ ಪ್ರದೇಶದಲ್ಲಿ ಯಾವುದೇ ಆತಂಕವಿಲ್ಲದೆ ಬದುಕುತ್ತಿದ್ದೆವು. ಆದರೆ, ಮಂಗಳೂರಿನ ಸಂಸ್ಥೆಯು ಗೆಸ್ಟ್ ಹೌಸ್ ಕಟ್ಟಿ, ಅದರ ಸುತ್ತಲೂ ಎತ್ತರದ ಆವರಣ ಗೋಡೆ ನಿರ್ಮಿಸಿದ ಬಳಿಕ ಕಳೆದ ನಾಲ್ಕೈದು ವರ್ಷಗಳಿಂದ ಈ ಮಣ್ಣು ಕುಸಿತದ ಸಮಸ್ಯೆ ಉದ್ಭವಿಸಿದೆ” ಎಂದು ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯದ ಮಳೆಗೆ ಗೆಸ್ಟ್ ಹೌಸ್‌ನ ಇನ್ನುಳಿದ ಆವರಣ ಗೋಡೆಯೂ ಕುಸಿಯುವ ಭೀತಿಯಲ್ಲಿದ್ದು, ಸುತ್ತಮುತ್ತಲಿನ 40 ಮನೆಗಳಿಗೆ ಕಂಟಕ ಎದುರಾಗಿದೆ.




    #dakshinakannada
    Previous Articleವೆನೆಜುವೆಲಾದಲ್ಲಿ ಮೃತಪಟ್ಟ ಭಾರತೀಯ ನಾವಿಕನ ಶವದಲ್ಲಿ ಪ್ರಮುಖ ಅಂಗಾಂಗಗಳು ನಾಪತ್ತೆ!
    Next Article ಟ್ರಕ್‌ಗೆ ಡಿಕ್ಕಿಯಾಗಿ ಹೊತ್ತಿ ಉರಿದ ಬಸ್‌; ರಾಜಸ್ಥಾನದಲ್ಲಿ 7 ಮಂದಿ ಸಾವು, 15 ಮಂದಿಗೆ ಗಾಯ

    Related Posts

    ಪುತ್ತೂರು:ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿ ವಿರುದ್ಧ ಗಂಭೀರ ಆರೋಪ: ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆಗೆ ಒತ್ತಾಯ

    September 7, 2026

    ಮದುವೆಯ ಭರವಸೆ ನೀಡಿ ದೈಹಿಕ ಸಂಪರ್ಕ ಆರೋಪ: ಮಹಿಳೆ ಮೇಲೆ ಹಲ್ಲೆ, ಬೆಳ್ತಂಗಡಿ ಮೂಲದ ಯುವ ವಕೀಲನ ವಿರುದ್ಧ ಪ್ರಕರಣ ದಾಖಲು

    September 7, 2026

    ನ್ಯಾಯಾಲಯಕ್ಕೆ ಹಾಜರಾಗದೆ 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

    September 7, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಹಳೇ ವೈಷಮ್ಯಕ್ಕೆ ನಡುರಸ್ತೆಯಲ್ಲೇ ತಲ್ವಾರ್ ಝಳಪಿಸಿದ ಯುವಕರು: ನಾಲ್ವರು ಗಂಭೀರ ಗಾಯ

    September 7, 2026

    ಅತ್ಯಾಚಾರಕ್ಕೆ ಯತ್ನಿಸಿ ಮಹಿಳೆ ಮೇಲೆ ಮಚ್ಚಿನಿಂದ ಹಲ್ಲೆ ಆರೋಪ: ಚಿಕಿತ್ಸೆ ಫಲಿಸದೆ ಸಾವು, ಐವರ ವಿರುದ್ಧ ಕೇಸ್

    September 7, 2026

    ಸಹೋದರನ ಬಗ್ಗೆ ವ್ಯಂಗ್ಯವಾಡಿದ್ದಕ್ಕೆ ಅತ್ತಿಗೆ ಕೊಲೆ: ಶವವನ್ನು ನೀರಿನ ಟ್ಯಾಂಕ್‌ಗೆ ಎಸೆದ ನಾದಿನಿ

    September 7, 2026

    ಅಪಾರ್ಟ್‌ಮೆಂಟ್‌ನಿಂದ ದುರ್ವಾಸನೆ: ಬೀಗ ಒಡೆದು ನೋಡಿದ ಪೊಲೀಸರಿಗೆ ಛಿದ್ರಗೊಂಡ ಮಹಿಳೆಯ ಶವ, ಫ್ರಿಜ್‌ನಲ್ಲಿ ತಲೆ ಪತ್ತೆ

    September 7, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಹಳೇ ವೈಷಮ್ಯಕ್ಕೆ ನಡುರಸ್ತೆಯಲ್ಲೇ ತಲ್ವಾರ್ ಝಳಪಿಸಿದ ಯುವಕರು: ನಾಲ್ವರು ಗಂಭೀರ ಗಾಯ

    September 7, 2026

    ಅತ್ಯಾಚಾರಕ್ಕೆ ಯತ್ನಿಸಿ ಮಹಿಳೆ ಮೇಲೆ ಮಚ್ಚಿನಿಂದ ಹಲ್ಲೆ ಆರೋಪ: ಚಿಕಿತ್ಸೆ ಫಲಿಸದೆ ಸಾವು, ಐವರ ವಿರುದ್ಧ ಕೇಸ್

    September 7, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.