Close Menu
    What's Hot

    ಕುಡಿಯುವ ನೀರಿಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ: ಪಂಚಾಯಿತಿ ಅಧ್ಯಕ್ಷನ ಹತ್ಯೆ

    September 5, 2026

    ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ: 40 ಕೆಜಿ ಎಕ್ಸ್‌ಪೈರ್ಡ್ ಮೆಣಸಿನಕಾಯಿ ಪತ್ತೆ, ಕ್ಲಬ್‌ಗೆ ಬೀಗ

    September 5, 2026

    3 ತಿಂಗಳ ಹಸುಗೂಸಿನ ಮೇಲೆ ಅತ್ಯಾಚಾರ: ಪರಿಚಿತ ನೆರೆಮನೆಯ ವ್ಯಕ್ತಿ ಬಂಧನ

    September 5, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»Uncategorized»ವೆನೆಜುವೆಲಾದಲ್ಲಿ ಮೃತಪಟ್ಟ ಭಾರತೀಯ ನಾವಿಕನ ಶವದಲ್ಲಿ ಪ್ರಮುಖ ಅಂಗಾಂಗಗಳು ನಾಪತ್ತೆ!
    Uncategorized

    ವೆನೆಜುವೆಲಾದಲ್ಲಿ ಮೃತಪಟ್ಟ ಭಾರತೀಯ ನಾವಿಕನ ಶವದಲ್ಲಿ ಪ್ರಮುಖ ಅಂಗಾಂಗಗಳು ನಾಪತ್ತೆ!

    adminBy adminJuly 1, 2026No Comments1 Min Read

    ನವದೆಹಲಿ: ವೆನೆಜುವೆಲಾ ಕರಾವಳಿಯಲ್ಲಿ ನಿಗೂಢವಾಗಿ ಮೃತಪಟ್ಟ ಭಾರತೀಯ ನಾವಿಕನೊಬ್ಬನ ಮೃತದೇಹ ಭಾರತಕ್ಕೆ ಬಂದಿಳಿದಾಗ, ಅದರಲ್ಲಿದ್ದ ಪ್ರಮುಖ ಅಂಗಾಂಗಗಳೇ ನಾಪತ್ತೆಯಾಗಿರುವ ಅತ್ಯಂತ ಆಘಾತಕಾರಿ ಮತ್ತು ಭೀಕರ ಘಟನೆ ಬೆಳಕಿಗೆ ಬಂದಿದೆ. 33 ವರ್ಷದ ರಾಕೇಶ್‌ ಚೌಹಾಣ್‌ ಹೃದಯಾಘಾತದಿಂದ ಮೇ ತಿಂಗಳಲ್ಲಿ ಸಾವನ್ನಪ್ಪಿದ್ದರು. ಭಾರತೀಯ ನಾವಿಕನ ಮೃತದೇಹವನ್ನು ದಕ್ಷಿಣ ಅಮೆರಿಕದಿಂದ ಭಾರತಕ್ಕೆ ತರಲಾಯಿತು. ಆದರೀಗ, ರಾಕೇಶ್‌ ಸಾವಿನ ಸುತ್ತ ನಿಗೂಢತೆ ತೀವ್ರಗೊಂಡಿದೆ. ರಾಕೇಶ್ ಚೌಹಾಣ್ ಅವರ ಮೆದುಳು, ಹೃದಯ ಮತ್ತು ಶ್ವಾಸಕೋಶಗಳು ಸೇರಿದಂತೆ ದೇಶದ ಹಲವಾರು ಅಂಗಗಳು ಕಾಣೆಯಾಗಿವೆ ಎಂದು ಅವರ ಕುಟುಂಬ ಆರೋಪಿಸಿದೆ. ಹೀಗಾಗಿ, ನಾವಿಕನ ಸಾವಿನ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕೆಂದು ಭಾರತೀಯ ನಾವಿಕರ ಸಂಘಗಳ ಒಕ್ಕೂಟ (FSUI) ಒತ್ತಾಯಿಸಿದೆ.ಎಫ್‌ಎಸ್‌ಯುಐ ತನ್ನ ಎಕ್ಸ್‌ ಖಾತೆ, ಚೌಹಾಣ್ ಅವರ ಶವವನ್ನು ಯಾವುದೇ ಶವಪರೀಕ್ಷೆ ವರದಿ ಅಥವಾ ವೆನೆಜುವೆಲಾದ ಅಧಿಕಾರಿಗಳಿಂದ ವಿವರಗಳಿಲ್ಲದೆ ಉತ್ತರ ಪ್ರದೇಶದ ಡಿಯೋರಿಯಾದಲ್ಲಿರುವ ಅವರ ಹುಟ್ಟೂರಿಗೆ ಕಳುಹಿಸಲಾಗಿದೆ ಎಂದು ತಿಳಿಸಿದೆ. ʼಕುಟುಂಬದವರು ಮರು ಶವಪರೀಕ್ಷೆಗೆ ಒತ್ತಾಯಿಸಿದರು. ಭಾರತದಲ್ಲಿ ನಡೆಸಿದ ಅಧಿಕೃತ ಮರಣೋತ್ತರ ವರದಿಯು ಭಯಾನಕ ಸತ್ಯವನ್ನು ಬಹಿರಂಗಪಡಿಸುತ್ತದೆ.

    ಒಂದೇ ಒಂದು ಅಂಗವೂ ಕಂಡುಬಂದಿಲ್ಲ. ಮೆದುಳು, ಹೃದಯ, ಎರಡೂ ಶ್ವಾಸಕೋಶಗಳು, ಯಕೃತ್ತು, ಮೂತ್ರಪಿಂಡಗಳು, ಗುಲ್ಮ, ಮೇದೋಜೀರಕ ಗ್ರಂಥಿ, ಕರುಳುಗಳು, ಥೈರಾಯ್ಡ್, ಹಯಾಯ್ಡ್, ಲಾರಿಂಕ್ಸ್ ಮತ್ತು ಶ್ವಾಸನಾಳ ಎಲ್ಲವೂ ಕಾಣೆಯಾಗಿದೆʼ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದೆ. ದೇಹದ ಮೇಲೆ ವ್ಯಾಪಕವಾದ ಹೊಲಿಗೆ ಹಾಕಲಾಗಿತ್ತು (ಕುತ್ತಿಗೆಯಿಂದ ಪ್ಯುಬಿಕ್ ಸಿಂಫಿಸಿಸ್‌ಗೆ 22 ಹೊಲಿಗೆಗಳು ಹಾಗೂ ಒಂದು ಕಿವಿಯಿಂದ ಮತ್ತೊಂದು ಕಿವಿಗೆ 21 ಹೊಲಿಗೆಗಳು). ಮರಣೋತ್ತರ ಗಾಯಗಳು ಕಂಡುಬಂದಿಲ್ಲ. ದೇಹವನ್ನು ಸುಮಾರು ಒಂದು ತಿಂಗಳ ಕಾಲ ಫ್ರೀಜ್‌ನಲ್ಲಿ ಇಡಲಾಗಿತ್ತು. ಸಾವಿಗೆ ಕಾರಣ ನಿರ್ಧರಿಸಲಾಗಲಿಲ್ಲ ( ದೇಹದಲ್ಲಿ ಯಾವ ಅಂಗಗಳೂ ಇಲ್ಲ) ಎಂದು ಪೋಸ್ಟ್‌ನಲ್ಲಿ ತಿಳಿಸಿದೆ. ನಾವಿಕನ ಶವದ ಸ್ಥಿತಿಯು ಪಾರದರ್ಶಕತೆ, ವಿದೇಶದಲ್ಲಿರುವ ಭಾರತೀಯ ಕಾರ್ಮಿಕರನ್ನು ನಡೆಸಿಕೊಳ್ಳುವ ರೀತಿ ಮತ್ತು ವಿದೇಶಿ ಅಧಿಕಾರಿಗಳ ಜವಾಬ್ದಾರಿಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಒಕ್ಕೂಟವು ಅಸಮಾಧಾನ ಹೊರಹಾಕಿದೆ.




    #national
    Previous Articleಭಾರೀ ಮಳೆಗೆ ನಾಗುರಿಯಲ್ಲಿ ಭೀಕರ ಭೂಕುಸಿತ: ಕಳಪೆ ಕಾಮಗಾರಿ ಶಂಕೆ ನಡುವೆ ಮೂವರು ಬಲಿ, ಪರಿಹಾರ ಘೋಷಿಸಿದ ಜಿಲ್ಲಾಡಳಿತ
    Next Article ಮಂಗಳೂರು: ಗೆಸ್ಟ್ ಹೌಸ್‌ನ ಬೃಹತ್ ಆವರಣ ಗೋಡೆ ಕುಸಿದು ಮನೆ ನಾಶ; 40ಕ್ಕೂ ಹೆಚ್ಚು ಕುಟುಂಬಗಳಲ್ಲಿ ಆತಂಕ

    Related Posts

    3 ತಿಂಗಳ ಹಸುಗೂಸಿನ ಮೇಲೆ ಅತ್ಯಾಚಾರ: ಪರಿಚಿತ ನೆರೆಮನೆಯ ವ್ಯಕ್ತಿ ಬಂಧನ

    September 5, 2026

    ಅಡುಗೆ ಮಾಡದೇ ಡ್ಯಾನ್ಸ್ ಕ್ಲಾಸ್‌ಗೆ ಹೋಗಲು ಮುಂದಾದ ಪತ್ನಿಯನ್ನ ಕೊಂದ ಪತಿ

    September 5, 2026

    ರಕ್ತದ ಮಡುವಿನಲ್ಲಿ ಕಾರ್ಮಿಕನ ಮೃತದೇಹ ಪತ್ತೆ: ಕೊಲೆ ಶಂಕಿಸಿ ತನಿಖೆ, ಇಬ್ಬರು ಪರಾರಿ

    September 5, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಕುಡಿಯುವ ನೀರಿಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ: ಪಂಚಾಯಿತಿ ಅಧ್ಯಕ್ಷನ ಹತ್ಯೆ

    September 5, 2026

    ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ: 40 ಕೆಜಿ ಎಕ್ಸ್‌ಪೈರ್ಡ್ ಮೆಣಸಿನಕಾಯಿ ಪತ್ತೆ, ಕ್ಲಬ್‌ಗೆ ಬೀಗ

    September 5, 2026

    3 ತಿಂಗಳ ಹಸುಗೂಸಿನ ಮೇಲೆ ಅತ್ಯಾಚಾರ: ಪರಿಚಿತ ನೆರೆಮನೆಯ ವ್ಯಕ್ತಿ ಬಂಧನ

    September 5, 2026

    ಕಂಬಳ ಅಭಿವೃದ್ಧಿಗೆ ₹5 ಕೋಟಿ ವಿಶೇಷ ಅನುದಾನ: ಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    September 5, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ: 40 ಕೆಜಿ ಎಕ್ಸ್‌ಪೈರ್ಡ್ ಮೆಣಸಿನಕಾಯಿ ಪತ್ತೆ, ಕ್ಲಬ್‌ಗೆ ಬೀಗ

    September 5, 2026

    ಕಂಬಳ ಅಭಿವೃದ್ಧಿಗೆ ₹5 ಕೋಟಿ ವಿಶೇಷ ಅನುದಾನ: ಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    September 5, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.