Close Menu
    What's Hot

    ವೆಲೆನ್ಸಿಯಾ ಚರ್ಚ್ ಪಾದ್ರಿಯ ವಿರುದ್ಧ ಪೋಕ್ಸೊ ಪ್ರಕರಣ : ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

    October 18, 2026

    ಕೋಲ್ಕತ್ತಾ ದುರ್ಗಾ ಪೂಜಾ ಸಂಭ್ರಮದಲ್ಲಿ ಕಾಲ್ತುಳಿತ: 19 ಸಾವು, ಘಟನೆಗೆ ಉನ್ನತ ಮಟ್ಟದ ತನಿಖೆಗೆ ಸಿಎಂ ಆದೇಶ

    October 18, 2026

    ಕೊಳತ್ತಮಜಲು ರಹ್ಮಾನ್ ಕೊಲೆ ಪ್ರಕರಣ : ಜಾಮೀನು ಪ್ರಶ್ನಿಸಿ ಸರ್ಕಾರದ ಅರ್ಜಿ, ಹೈಕೋರ್ಟ್‌ನಿಂದ ತಡೆ

    October 18, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಂತರಾಷ್ಟ್ರೀಯ»ಹಾರ್ಮುಝ್ ಜಲಸಂಧಿಯಲ್ಲಿ ಕ್ಷಿಪಣಿ ದಾಳಿ; ಬಂಟ್ವಾಳದ ರಚನ್ ಜೀವ ಉಳಿಸಿದ ಒಮನ್ ನೌಕಾಪಡೆ
    ಅಂತರಾಷ್ಟ್ರೀಯ

    ಹಾರ್ಮುಝ್ ಜಲಸಂಧಿಯಲ್ಲಿ ಕ್ಷಿಪಣಿ ದಾಳಿ; ಬಂಟ್ವಾಳದ ರಚನ್ ಜೀವ ಉಳಿಸಿದ ಒಮನ್ ನೌಕಾಪಡೆ

    adminBy adminJuly 15, 2026No Comments2 Mins Read

    ಬಂಟ್ವಾಳ : ಜಾಗತಿಕ ಉದ್ವಿಗ್ನತೆಯ ಕೇಂದ್ರಬಿಂದುವಾಗಿರುವ ಹಾರ್ಮುಝ್ ಜಲಸಂಧಿಯ ಒಮನ್ ಕರಾವಳಿ ಸಮೀಪ ಸಂಚರಿಸುತ್ತಿದ್ದ ವಾಣಿಜ್ಯ ಹಡಗಿನ ಮೇಲೆ ಇರಾನ್ ನಡೆಸಿದ ಭೀಕರ ಕ್ಷಿಪಣಿ ದಾಳಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಳಿಯೂರು ನಿವಾಸಿ ರಚನ್ ಆರ್.ಕೆ. ಸೇರಿದಂತೆ 10 ಮಂದಿ ಭಾರತೀಯ ನಾವಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
    ದಾಳಿಗೆ ತುತ್ತಾದ ಹಡಗಿನಲ್ಲಿದ್ದ ಭಾರತೀಯ ಸಿಬ್ಬಂದಿಯನ್ನು ಒಮನ್ ನೌಕಾಪಡೆ ಯಶಸ್ವಿಯಾಗಿ ರಕ್ಷಿಸಿದ್ದು, ಸದ್ಯ ರಚನ್ ಸುರಕ್ಷಿತವಾಗಿ ದುಬೈಗೆ ಪ್ರಯಾಣ ಬೆಳೆಸಿದ್ದಾರೆ.

    ಕಾರ್ಗೋ ಶಿಪ್ಪಿಂಗ್ ಕಂಪೆನಿಯಲ್ಲಿ ಕಳೆದ ಮೂರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ರಚನ್ ಆರ್.ಕೆ. ಅವರು ಶನಿವಾರ ಕರ್ತವ್ಯದಲ್ಲಿದ್ದ ಹಡಗಿನ ಮೇಲೆ ಇರಾನ್ ಪಡೆಗಳು ಕ್ಷಿಪಣಿ ದಾಳಿ ನಡೆಸಿದ್ದವು. ಈ ಬಗ್ಗೆ ರಚನ್ ತಂದೆ ರೋಹಿತಾಕ್ಷ ಬಾಣಬೆಟ್ಟು ಅವರಿಗೆ ಆಡಿಯೋ ಸಂದೇಶದ ಮೂಲಕ ಮಾಹಿತಿ ನೀಡಿದ್ದು, ಘಟನೆಯ ಭಯಾನಕತೆಯನ್ನು ಬಿಚ್ಚಿಟ್ಟಿದ್ದಾರೆ. “ಹಡಗಿನ ಮೇಲೆ ದಾಳಿ ನಡೆಯುವ ಬಗ್ಗೆ ನಮಗೆ ಮೊದಲೇ ಮುನ್ನೆಚ್ಚರಿಕೆ ಸಂದೇಶ ಲಭಿಸಿತ್ತು. ಆದರೂ ಒಮನ್ ತೀರದಲ್ಲಿ ಹಡಗು ಮುನ್ನಡೆಯುತ್ತಿದ್ದಾಗ ಶನಿವಾರ ಮಧ್ಯರಾತ್ರಿ 2 ಗಂಟೆಗೆ ಇರಾನ್ ಕ್ಷಿಪಣಿ ನೇರವಾಗಿ ಬಂದು ಹಡಗಿಗೆ ಅಪ್ಪಳಿಸಿತು. ತಕ್ಷಣವೇ ಇಂಜಿನ್ ಕೊಠಡಿಯಲ್ಲಿ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿತು” ಎಂದು ತಿಳಿಸಿದ್ದಾರೆ.

    “ಇಂಜಿನ್ ರೂಮ್‌ನಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದ್ದಂತೆ ನಿದ್ರಿಸುತ್ತಿದ್ದ ನಾವೆಲ್ಲರೂ ತಕ್ಷಣವೇ ಎಚ್ಚೆತ್ತು ಗಾಬರಿಯಿಂದ ಓಡಿಬಂದೆವು. ಹಡಗು ಮುಳುಗುವ ಪರಿಸ್ಥಿತಿ ತಲುಪುತ್ತಿದ್ದಂತೆ ಲೈಫ್ ಬೋಟ್ ಮೂಲಕ ನಾವೆಲ್ಲರೂ ಸಮುದ್ರಕ್ಕೆ ಧುಮುಕಿದೆವು. ಈ ಭೀಕರ ಪ್ರಕ್ರಿಯೆಯ ನಡುವೆ ನಮ್ಮ ತಂಡದಲ್ಲಿದ್ದ ಪುಣೆ ನಿವಾಸಿಯಾದ ಸಹೋದ್ಯೋಗಿಯೊಬ್ಬರು ಸಮುದ್ರದಲ್ಲಿ ನಾಪತ್ತೆಯಾಗಿದ್ದಾರೆ. ಆದರೆ, ಅದೃಷ್ಟವಶಾತ್ ಒಮನ್ ನೌಕಾಪಡೆ ತಕ್ಷಣವೇ ಸ್ಥಳಕ್ಕೆ ಧಾವಿಸಿ ನಮ್ಮನ್ನು ರಕ್ಷಿಸಿ ತನ್ನ ಸೇನಾ ನೆಲೆಗೆ ಕರೆದೊಯ್ದು ಆಶ್ರಯ ನೀಡಿದೆ” ಎಂದು ರಚನ್ ಮಾಹಿತಿ ನೀಡಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ರಚನ್ ಅವರ ತಂದೆ ರೋಹಿತಾಕ್ಷ ಬಾಣಬೆಟ್ಟು, “ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಸ್ಥಿತಿ ತಾರಕಕ್ಕೇರಿರುವುದರಿಂದ ನಾವು ಮೊದಲೇ ಆತಂಕದಲ್ಲಿದ್ದೆವು. ಮಗ ಇದ್ದ ಹಡಗಿನ ಮೇಲೆ ದಾಳಿಯಾಗಿದೆ ಎಂಬ ಸುದ್ದಿ ತಿಳಿದಾಗ ನಮ್ಮ ಇಡೀ ಕುಟುಂಬ ಕಣ್ಣೀರಿನಲ್ಲಿ ಮುಳುಗಿತ್ತು. ಆದರೆ, ಒಮನ್ ಸೇನೆಯ ನೆರವಿನಿಂದ ಮಗ ಸುರಕ್ಷಿತವಾಗಿದ್ದು, ತಾನೀಗ ದುಬೈಗೆ ಹೊರಟಿರುವುದಾಗಿ ಫೋನ್ ಮಾಡಿ ತಿಳಿಸಿದಾಗ ನಿರಾಳರಾದೆವು ಎಂದು ತಿಳಿಸಿದ್ದಾರೆ.




    #dakshinakannada International
    Previous Articleಅಮೆರಿಕ-ಇರಾನ್ ನಡುವೆ ಮತ್ತೆ ಯುದ್ಧದ ಕಾರ್ಮೋಡ; ಜಾಗತಿಕ ಆತಂಕ ಹೆಚ್ಚಳ
    Next Article 36 ವರ್ಷಗಳ ಬಳಿಕ ಬಯಲಾಯ್ತು ದರೋಡೆಕೋರನ ಕರಾಳ ರಹಸ್ಯ; ಕೌಟುಂಬಿಕ ಕಲಹವೇ ನೀಡಿತು ಪೊಲೀಸರಿಗೆ ಸುಳಿವು

    Related Posts

    ವೆಲೆನ್ಸಿಯಾ ಚರ್ಚ್ ಪಾದ್ರಿಯ ವಿರುದ್ಧ ಪೋಕ್ಸೊ ಪ್ರಕರಣ : ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

    October 18, 2026

    ಕೊಳತ್ತಮಜಲು ರಹ್ಮಾನ್ ಕೊಲೆ ಪ್ರಕರಣ : ಜಾಮೀನು ಪ್ರಶ್ನಿಸಿ ಸರ್ಕಾರದ ಅರ್ಜಿ, ಹೈಕೋರ್ಟ್‌ನಿಂದ ತಡೆ

    October 18, 2026

    ಎಂಆರ್‌ಪಿಎಲ್‌ ಸ್ಫೋಟದಲ್ಲಿ ಗಾಯಗೊಂಡಿದ್ದ ಕಾರ್ಮಿಕ ಸಾವು : ₹1.2 ಕೋಟಿ ಪರಿಹಾರ ಘೋಷಣೆ

    October 17, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ವೆಲೆನ್ಸಿಯಾ ಚರ್ಚ್ ಪಾದ್ರಿಯ ವಿರುದ್ಧ ಪೋಕ್ಸೊ ಪ್ರಕರಣ : ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

    October 18, 2026

    ಕೋಲ್ಕತ್ತಾ ದುರ್ಗಾ ಪೂಜಾ ಸಂಭ್ರಮದಲ್ಲಿ ಕಾಲ್ತುಳಿತ: 19 ಸಾವು, ಘಟನೆಗೆ ಉನ್ನತ ಮಟ್ಟದ ತನಿಖೆಗೆ ಸಿಎಂ ಆದೇಶ

    October 18, 2026

    ಕೊಳತ್ತಮಜಲು ರಹ್ಮಾನ್ ಕೊಲೆ ಪ್ರಕರಣ : ಜಾಮೀನು ಪ್ರಶ್ನಿಸಿ ಸರ್ಕಾರದ ಅರ್ಜಿ, ಹೈಕೋರ್ಟ್‌ನಿಂದ ತಡೆ

    October 18, 2026

    ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸೌಮ್ಯಾ ರೆಡ್ಡಿ ರಾಜೀನಾಮೆ

    October 17, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸೌಮ್ಯಾ ರೆಡ್ಡಿ ರಾಜೀನಾಮೆ

    October 17, 2026

    ರಾಜ್ಯಾದ್ಯಂತ ಸ್ವೀಟ್ ಅಂಗಡಿಗಳ ತಪಾಸಣೆ ಚುರುಕು: 145 ಮಾದರಿ ಸಂಗ್ರಹ, 15 ಘಟಕಗಳಿಗೆ ನೋಟಿಸ್

    October 17, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.