Close Menu
    What's Hot

    ದಿಶಾ ಸಾಲಿಯಾನ್‌ ಸಾವು ಪ್ರಕರಣಕ್ಕೆ ಟ್ವಿಸ್ಟ್: ಸಿಬಿಐ ತನಿಖೆಗೆ ಹೈಕೋರ್ಟ್‌ ಆದೇಶ

    September 2, 2026

    ಕರಂಬಾರು ಬಳಿ ಸೇತುವೆ ಕುಸಿತ: ವಾಹನ ಸವಾರರಿಗೆ ಪರ್ಯಾಯ ಮಾರ್ಗ ಬಳಸುವಂತೆ ಸೂಚನೆ

    September 2, 2026

    ರಾಮಮಂದಿರ ಟ್ರಸ್ಟ್‌ನ ಸಿಇಒ ಆಗಿ ನಿವೃತ್ತ ಏರ್ ಮಾರ್ಷಲ್ ಜೀತೇಂದ್ರ ಮಿಶ್ರಾ ನೇಮಕ

    September 2, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»36 ವರ್ಷಗಳ ಬಳಿಕ ಬಯಲಾಯ್ತು ದರೋಡೆಕೋರನ ಕರಾಳ ರಹಸ್ಯ; ಕೌಟುಂಬಿಕ ಕಲಹವೇ ನೀಡಿತು ಪೊಲೀಸರಿಗೆ ಸುಳಿವು
    ಅಪರಾಧ

    36 ವರ್ಷಗಳ ಬಳಿಕ ಬಯಲಾಯ್ತು ದರೋಡೆಕೋರನ ಕರಾಳ ರಹಸ್ಯ; ಕೌಟುಂಬಿಕ ಕಲಹವೇ ನೀಡಿತು ಪೊಲೀಸರಿಗೆ ಸುಳಿವು

    adminBy adminJuly 15, 2026No Comments2 Mins Read

    ಮೈಸೂರು/ಕೋಝಿಕೋಡ್ : ಹೆಂಡತಿಯೊಂದಿಗೆ ನಡೆದ ಕೌಟುಂಬಿಕ ಕಲಹವೊಂದು ತಲೆಮರೆಸಿಕೊಂಡಿದ್ದ ದರೋಡೆಕೋರನ 36 ವರ್ಷಗಳ ಕರಾಳ ರಹಸ್ಯವನ್ನು ಬಯಲು ಮಾಡಿದೆ! 1990 ರಲ್ಲಿ ಕೇರಳದಲ್ಲಿ ನಡೆದಿದ್ದ ಗನ್ ಪಾಯಿಂಟ್ ನಲ್ಲಿ ಕೇರಳ ಸಾರಿಗೆ ಬಸ್ ನ ಕಂಡಕ್ಟರ್ ನಿಂದ 200 ರೂಪಾಯಿ ದರೋಡೆ ಮಾಡಿದ ಪ್ರಕರಣದ ಪ್ರಮುಖ ಆರೋಪಿಯನ್ನು ಮೈಸೂರಿನ ನರಸಿಂಹರಾಜ ಪೊಲೀಸ್ ಠಾಣಾ ಸಿಬ್ಬಂದಿ ಯಶಸ್ವಿಯಾಗಿ ಬಂಧಿಸಿದ್ದಾರೆ.

    ಕೋಝಿಕೋಡ್ ಮೂಲದ ವಿ.ಕೆ. ಜೋಸ್ (71) ಬಂಧಿತ ವೃದ್ಧ ಆರೋಪಿ. ಕಳೆದ 36 ವರ್ಷಗಳಿಂದ ಈತ ಮೈಸೂರಿನಲ್ಲಿ ‘ಶಿವಕುಮಾರ್’ ಎಂಬ ನಕಲಿ ಹೆಸರಿನಲ್ಲಿ ವಾಸವಾಗಿದ್ದನು. ಮೈಸೂರಿನ ಜೋಸ್ ನಿವಾಸದಲ್ಲಿ ಪತಿ-ಪತ್ನಿ ನಡುವೆ ಸಣ್ಣ ವಿಷಯಕ್ಕೆ ಗಲಾಟೆ ಆರಂಭವಾಗಿತ್ತು. ಮಾತಿಗೆ ಮಾತು ಬೆಳೆದು ದೈಹಿಕ ಹಲ್ಲೆಗೆ ಕಾರಣವಾದಾಗ, ಪ್ರಾಣಭಯದಿಂದ ಜೋಸ್ ಪತ್ನಿ ತಕ್ಷಣವೇ ಪೊಲೀಸ್ ತುರ್ತು ಸಹಾಯವಾಣಿಗೆ ಕರೆ ಮಾಡಿ ನೆರವು ಕೋರಿದ್ದರು. ಸ್ಥಳಕ್ಕೆ ಧಾವಿಸಿದ ನರಸಿಂಹರಾಜ ಠಾಣೆಯ ಪೊಲೀಸರು ಮನೆಯನ್ನು ಕೂಲಂಕಷವಾಗಿ ತಪಾಸಣೆ ನಡೆಸಿದಾಗ ಇಡೀ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.

    ಪೊಲೀಸರು ಮನೆಯನ್ನು ಶೋಧಿಸುವಾಗ ಜೋಸ್ ಮಲಗುತ್ತಿದ್ದ ಹಾಸಿಗೆಯ ಕೆಳಗೆ ಅಡಗಿಸಿಟ್ಟಿದ್ದ ಒಂದು ನಾಡಬಂದೂಕು (Country-made Gun) ಪತ್ತೆಯಾಗಿದೆ. ಜೊತೆಗೆ ಜೋಸ್ ಅವರ ಹಿಂದಿನ ಜೀವನಕ್ಕೆ ಸಂಬಂಧಿಸಿದಂತೆ ಕೇರಳದ ಕೋಝಿಕೋಡ್ ವಿಳಾಸವಿರುವ ಅಧಿಕೃತ ದಾಖಲೆಗಳೂ ಲಭ್ಯವಾಗಿವೆ. ಈ ಹಾಸಿಗೆಯ ಸುತ್ತಮುತ್ತ ಯಾರಿಗೂ ಗುಡಿಸಲು ಹಾಗೂ ಸ್ವಚ್ಛಗೊಳಿಸಲು ಜೋಸ್ ತೀವ್ರವಾಗಿ ನಿರಾಕರಿಸುತ್ತಿದ್ದನು ಎಂದು ತಿಳಿದು ಬಂದಿದೆ.. ವಶಪಡಿಸಿಕೊಂಡ ದಾಖಲೆಗಳ ಬಗ್ಗೆ ಶಂಕೆ ವ್ಯಕ್ತಪಡಿಸಿದ ಮೈಸೂರು ಪೊಲೀಸರು ತಕ್ಷಣವೇ ಕೇರಳದ ತಿರುವಾಂಬಾಡಿ ಪೊಲೀಸರನ್ನು ಸಂಪರ್ಕಿಸಿದಾಗ, ಜೋಸ್‌ನ ಅಸಲಿ ಮುಖವಾಡ ಕಳಚಿ ಬಿದ್ದಿದೆ!

    1990 ರಲ್ಲಿ ಕೋಝಿಕ್ಕೋಡ್‌ನ ತಿರುವಾಂಬಾಡಿಯಿಂದ ಕೂಂಪಾರಕ್ಕೆ ಸಂಚರಿಸುತ್ತಿದ್ದ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬಸ್‌ನಲ್ಲಿ ಈತ ದರೋಡೆ ನಡೆಸಿದ್ದನು. ಅಂದು ದೊಡ್ಡ ಮೀಸೆ ಹೊಂದಿದ್ದ ಜೋಸ್, ರಾತ್ರಿ ವೇಳೆ ಬಸ್ ಕಂಡಕ್ಟರ್‌ಗೆ ಕತ್ತಲಿನಲ್ಲಿ ಇದೇ ನಾಡಬಂದೂಕನ್ನು ತೋರಿಸಿ ಹೆದರಿಸಿ, ಕೇವಲ 200 ರೂಪಾಯಿ ನಗದು ಹಾಗೂ ಟಿಕೆಟ್ ಪುಸ್ತಕಗಳನ್ನು ದೋಚಿ ಪರಾರಿಯಾಗಿದ್ದನು. ತನಿಖೆ ಆರಂಭವಾಗುತ್ತಿದ್ದಂತೆ ಕರ್ನಾಟಕಕ್ಕೆ ಓಡಿಬಂದ ಜೋಸ್, ಮೈಸೂರಿನಲ್ಲಿ Painter ಕೆಲಸ ಮಾಡಲು ಆರಂಭಿಸಿದನು. ನಂತರ ಇಲ್ಲಿನ ಸ್ಥಳೀಯ ಮಹಿಳೆಯೊಬ್ಬರನ್ನು ಮದುವೆಯಾಗಿ, ಕಳೆದ 36 ವರ್ಷಗಳಿಂದ ಯಾರಿಗೂ ಸಂಶಯ ಬಾರದಂತೆ ಜೀವಿಸುತ್ತಿದ್ದನು.

    ಸದ್ಯ ಆರೋಪಿಯನ್ನು ಮೈಸೂರಿನಿಂದ ಕೇರಳದ ಕೋಝಿಕೋಡ್ ಸಬ್ ಜೈಲಿಗೆ ವರ್ಗಾಯಿಸಲಾಗಿದೆ. 36 ವರ್ಷಗಳ ಬಳಿಕ ದರೋಡೆಕೋರ ಸಿಕ್ಕಿಬಿದ್ದಿರುವುದರಿಂದ ಈ ಹಳೇ ಪ್ರಕರಣದ ಮರು ತನಿಖೆ ಆರಂಭಿಸುವುದಾಗಿ ತಿರುವಾಂಬಾಡಿ ಸಬ್-ಇನ್ಸ್‌ಪೆಕ್ಟರ್ ರಮ್ಯಾ ತಿಳಿಸಿದ್ದಾರೆ.




    #crime #karnataka #national
    Previous Articleಹಾರ್ಮುಝ್ ಜಲಸಂಧಿಯಲ್ಲಿ ಕ್ಷಿಪಣಿ ದಾಳಿ; ಬಂಟ್ವಾಳದ ರಚನ್ ಜೀವ ಉಳಿಸಿದ ಒಮನ್ ನೌಕಾಪಡೆ
    Next Article ಸುರತ್ಕಲ್: ಅಪಾರ್ಟ್‌ಮೆಂಟ್‌ನಿಂದ ಜಿಗಿದು ಎಂಬಿಬಿಎಸ್ ವಿದ್ಯಾರ್ಥಿನಿಯ ದುರಂತ ಅಂತ್ಯ

    Related Posts

    ದಿಶಾ ಸಾಲಿಯಾನ್‌ ಸಾವು ಪ್ರಕರಣಕ್ಕೆ ಟ್ವಿಸ್ಟ್: ಸಿಬಿಐ ತನಿಖೆಗೆ ಹೈಕೋರ್ಟ್‌ ಆದೇಶ

    September 2, 2026

    ರಾಮಮಂದಿರ ಟ್ರಸ್ಟ್‌ನ ಸಿಇಒ ಆಗಿ ನಿವೃತ್ತ ಏರ್ ಮಾರ್ಷಲ್ ಜೀತೇಂದ್ರ ಮಿಶ್ರಾ ನೇಮಕ

    September 2, 2026

    ಸಾಲ ತೀರಿಸಲು ಹಣ ನೀಡಲಿಲ್ಲವೆಂದು ತಂದೆಯನ್ನೇ ರಾಡ್‌ನಿಂದ ಹೊಡೆದು ಕೊಂದ ಮಗ

    September 2, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ದಿಶಾ ಸಾಲಿಯಾನ್‌ ಸಾವು ಪ್ರಕರಣಕ್ಕೆ ಟ್ವಿಸ್ಟ್: ಸಿಬಿಐ ತನಿಖೆಗೆ ಹೈಕೋರ್ಟ್‌ ಆದೇಶ

    September 2, 2026

    ಕರಂಬಾರು ಬಳಿ ಸೇತುವೆ ಕುಸಿತ: ವಾಹನ ಸವಾರರಿಗೆ ಪರ್ಯಾಯ ಮಾರ್ಗ ಬಳಸುವಂತೆ ಸೂಚನೆ

    September 2, 2026

    ರಾಮಮಂದಿರ ಟ್ರಸ್ಟ್‌ನ ಸಿಇಒ ಆಗಿ ನಿವೃತ್ತ ಏರ್ ಮಾರ್ಷಲ್ ಜೀತೇಂದ್ರ ಮಿಶ್ರಾ ನೇಮಕ

    September 2, 2026

    ಸಾಲ ತೀರಿಸಲು ಹಣ ನೀಡಲಿಲ್ಲವೆಂದು ತಂದೆಯನ್ನೇ ರಾಡ್‌ನಿಂದ ಹೊಡೆದು ಕೊಂದ ಮಗ

    September 2, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಸಾಲ ತೀರಿಸಲು ಹಣ ನೀಡಲಿಲ್ಲವೆಂದು ತಂದೆಯನ್ನೇ ರಾಡ್‌ನಿಂದ ಹೊಡೆದು ಕೊಂದ ಮಗ

    September 2, 2026

    ಅವಳಿ ಮಕ್ಕಳನ್ನು ಉಸಿರುಗಟ್ಟಿಸಿ ಹತ್ಯೆಗೈದು ಆತ್ಮಹತ್ಯೆಗೆ ಯತ್ನಿಸಿದ ತಾಯಿ

    September 2, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.