Close Menu
    What's Hot

    ದೈವಾರಾಧನೆ ಪ್ರಚಾರದ ವಸ್ತುವಲ್ಲ; ಸಿಎಂ, ಯು.ಟಿ. ಖಾದರ್ ವಿರುದ್ಧ ಕಿಡಿ ಕಿಡಿಕಾರಿದ ಬಿಜೆಪಿ

    September 18, 2026

    ಜೈಲು ಜಾಮರ್ ಸಮಸ್ಯೆ ಸಚಿವ ಸಂಪುಟ ಸಭೆಗೆ ಮುತ್ತಿಗೆ ಹಾಕಲು ಮುಂದಾದ ವಕೀಲರು; ಕೋರ್ಟ್ ಆವರಣದಲ್ಲೇ ಪೊಲೀಸ್ ವಶಕ್ಕೆ

    September 18, 2026

    ಮಂಗಳೂರು: ಸಚಿವರಿಗೆ ಎಸ್‌ಡಿಪಿಐ ಇಂದ ಕಪ್ಪುಬಾವುಟ ಪ್ರದರ್ಶನ; ಹಲವರು ಪೊಲೀಸ್ ವಶಕ್ಕೆ

    September 18, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಕರಾವಳಿ ಸುದ್ದಿ»ಪಾದಚಾರಿಯನ್ನು ರಕ್ಷಿಸಲು ಹೋಗಿ ನಿಯಂತ್ರಣ ತಪ್ಪಿದ ಲಾರಿ; ಮನೆ ಅಂಗಳಕ್ಕೆ ನುಗ್ಗಿ ಅವಾಂತರ
    ಕರಾವಳಿ ಸುದ್ದಿ

    ಪಾದಚಾರಿಯನ್ನು ರಕ್ಷಿಸಲು ಹೋಗಿ ನಿಯಂತ್ರಣ ತಪ್ಪಿದ ಲಾರಿ; ಮನೆ ಅಂಗಳಕ್ಕೆ ನುಗ್ಗಿ ಅವಾಂತರ

    adminBy adminJuly 27, 2026Updated:July 27, 2026No Comments1 Min Read

    ಮಣಿಪಾಲ: ಪಾದಚಾರಿಯನ್ನು ರಕ್ಷಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಈಚರ್ ಲಾರಿಯೊಂದು ರಸ್ತೆ ಬದಿಯ ಟ್ರಾನ್ಸ್‌ಫಾರ್ಮರ್ ಹಾಗೂ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು, ಬಳಿಕ ಮನೆಯೊಂದರ ಅಂಗಳಕ್ಕೆ ನುಗ್ಗಿದ ಘಟನೆ ಪೆರಂಪಳ್ಳಿಯ ಮೀನು ಮಾರುಕಟ್ಟೆ ಸಮೀಪ ಜುಲೈ 25 ರ ರಾತ್ರಿ ಸಂಭವಿಸಿದೆ.

    ಕಾರ್ಕಳ ಮೂಲದ ಉಮೇಶ್ ಎಂಬುವವರು ಲಾರಿಯನ್ನು ಮಣಿಪಾಲದಿಂದ ಪೆರಂಪಳ್ಳಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ, ಅಪರಿಚಿತ ವ್ಯಕ್ತಿಯೊಬ್ಬರು ಏಕಾಏಕಿ ರಸ್ತೆ ದಾಟಿದ್ದಾರೆ. ಅವರಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ತಕ್ಷಣವೇ ಲಾರಿಯನ್ನು ಎಡಕ್ಕೆ ತಿರುಗಿಸಿದ್ದಾರೆ. ಈ ವೇಳೆ ನಿಯಂತ್ರಣ ತಪ್ಪಿದ ಲಾರಿ ರಸ್ತೆ ಬದಿಯ ವಿದ್ಯುತ್ ಕಂಬ ಹಾಗೂ ಟ್ರಾನ್ಸ್‌ಫಾರ್ಮರ್‌ಗೆ ಸೈಡ್ ಹೊಡೆದು, ಸ್ಥಳೀಯ ನಿವಾಸಿ ರವಿ ಪೂಜಾರಿ ಎಂಬವರ ಮನೆಯ ಅಂಗಳಕ್ಕೆ ನುಗ್ಗಿದೆ.

    ಅಪಘಾತದ ರಭಸಕ್ಕೆ ರವಿ ಅವರ ಮನೆಯಂಗಳದ ಸಿಮೆಂಟ್ ಶೀಟ್‌ಗೆ ಹಾನಿಯಾಗಿದ್ದು, ಲಾರಿಯ ಮುಂಭಾಗ ಸಂಪೂರ್ಣವಾಗಿ ಹಾನಿಗೊಳಗಾಗಿದೆ. ಅದೃಷ್ಟವಶಾತ್ ಅಪಘಾತ ಸಂಭವಿಸಿದ ಸಮಯದಲ್ಲಿ ರಸ್ತೆ ಬದಿಯಲ್ಲಾಗಲಿ ಅಥವಾ ಮನೆಯ ಅಂಗಳದಲ್ಲಾಗಲಿ ಯಾರೂ ಇಲ್ಲದಿದ್ದರಿಂದ ಭಾರಿ ಜೀವಅಪಾಯವೊಂದು ತಪ್ಪಿದೆ. ಲಾರಿ ಚಾಲಕ ಉಮೇಶ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಘಟನೆಯಿಂದ ವಿದ್ಯುತ್ ಕಂಬ ಹಾಗೂ ಟ್ರಾನ್ಸ್‌ಫಾರ್ಮರ್‌ಗೆ ಹಾನಿಯಾದ ಹಿನ್ನೆಲೆಯಲ್ಲಿ ಮೆಸ್ಕಾಂ (MESCOM) ಅಧಿಕಾರಿಗಳು ಚಾಲಕನಿಂದ ನಷ್ಟ ಪರಿಹಾರ/ದಂಡ ವಸೂಲಿ ಮಾಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಮಣಿಪಾಲ ಪೊಲೀಸರು ಕೂಡ ಪರಿಶೀಲಿಸಿ ದಂಡ ವಿಧಿಸಿದ್ದು, ಯಾವುದೇ ಎಫ್‌ಐಆರ್ ದಾಖಲಿಸದೆ ಚಾಲಕನನ್ನು ಬಿಟ್ಟಿದ್ದಾರೆ. ತಡರಾತ್ರಿ ಕ್ರೇನ್ ಮೂಲಕ ಲಾರಿಯನ್ನು ಮನೆಯಂಗಳದಿಂದ ಮೇಲಕ್ಕೆತ್ತಿ ಸ್ಥಳಾಂತರಿಸಲಾಯಿತು.

     




    #karnataka
    Previous Articleಸಿಯಾಟಲ್ ಫುಡ್ ಫೆಸ್ಟಿವಲ್‌ನಲ್ಲಿ ಗುಂಡಿನ ದಾಳಿ; ಇಬ್ಬರು ಬಲಿ, ಐವರಿಗೆ ಗಾಯ
    Next Article ನಕಲಿ ನೋಟು ಮುದ್ರಣ ಕೇಸ್‌ಗೆ ಬಿಗ್ ಟ್ವಿಸ್ಟ್! ಆರೋಪಿಗಳ ಮನೆ ಶೋಧ, ಮತ್ತಷ್ಟು ಸಾಕ್ಷ್ಯ ಸಂಗ್ರಹ

    Related Posts

    ದೈವಾರಾಧನೆ ಪ್ರಚಾರದ ವಸ್ತುವಲ್ಲ; ಸಿಎಂ, ಯು.ಟಿ. ಖಾದರ್ ವಿರುದ್ಧ ಕಿಡಿ ಕಿಡಿಕಾರಿದ ಬಿಜೆಪಿ

    September 18, 2026

    ಜೈಲು ಜಾಮರ್ ಸಮಸ್ಯೆ ಸಚಿವ ಸಂಪುಟ ಸಭೆಗೆ ಮುತ್ತಿಗೆ ಹಾಕಲು ಮುಂದಾದ ವಕೀಲರು; ಕೋರ್ಟ್ ಆವರಣದಲ್ಲೇ ಪೊಲೀಸ್ ವಶಕ್ಕೆ

    September 18, 2026

    ಮಂಗಳೂರು: ಸಚಿವರಿಗೆ ಎಸ್‌ಡಿಪಿಐ ಇಂದ ಕಪ್ಪುಬಾವುಟ ಪ್ರದರ್ಶನ; ಹಲವರು ಪೊಲೀಸ್ ವಶಕ್ಕೆ

    September 18, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ದೈವಾರಾಧನೆ ಪ್ರಚಾರದ ವಸ್ತುವಲ್ಲ; ಸಿಎಂ, ಯು.ಟಿ. ಖಾದರ್ ವಿರುದ್ಧ ಕಿಡಿ ಕಿಡಿಕಾರಿದ ಬಿಜೆಪಿ

    September 18, 2026

    ಜೈಲು ಜಾಮರ್ ಸಮಸ್ಯೆ ಸಚಿವ ಸಂಪುಟ ಸಭೆಗೆ ಮುತ್ತಿಗೆ ಹಾಕಲು ಮುಂದಾದ ವಕೀಲರು; ಕೋರ್ಟ್ ಆವರಣದಲ್ಲೇ ಪೊಲೀಸ್ ವಶಕ್ಕೆ

    September 18, 2026

    ಮಂಗಳೂರು: ಸಚಿವರಿಗೆ ಎಸ್‌ಡಿಪಿಐ ಇಂದ ಕಪ್ಪುಬಾವುಟ ಪ್ರದರ್ಶನ; ಹಲವರು ಪೊಲೀಸ್ ವಶಕ್ಕೆ

    September 18, 2026

    ಸಚಿವ ಸಂಪುಟ ಸಭೆಗೆ ಮಂಗಳೂರು ಸಜ್ಜು; ಕರಾವಳಿ ಸಂಸ್ಕೃತಿಯ ಚಿತ್ರಗಳಿಂದ ಕಂಗೊಳಿಸಿದ ಪ್ರಜಾ ಸೌಧ

    September 18, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಸಚಿವ ಸಂಪುಟ ಸಭೆಗೆ ಮಂಗಳೂರು ಸಜ್ಜು; ಕರಾವಳಿ ಸಂಸ್ಕೃತಿಯ ಚಿತ್ರಗಳಿಂದ ಕಂಗೊಳಿಸಿದ ಪ್ರಜಾ ಸೌಧ

    September 18, 2026

    ಸಚಿವ ಸಂಪುಟ ಸಭೆ ಹಿನ್ನೆಲೆ ಮಂಗಳೂರಿಗೆ ಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಗಣ್ಯರಗೆ ಅದ್ದೂರಿಯ ಸ್ವಾಗತ

    September 18, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.