Close Menu
    What's Hot

    ಚೀನಾಗೆ ಎನ್‌ವಿಡಿಯಾ ಚಿಪ್‌ಗಳ ಚೀನಾ ಕಳ್ಳಸಾಗಣೆ ಪ್ರಕರಣ; ಜಯ್ ಪುರಿ ಪತ್ನಿ ಸೆನ್ಲಿ ಚೆನ್ ಹೆಸರು ಪ್ರಸ್ತಾಪ

    November 19, 2026

    ರೈಲು ಪ್ರಯಾಣಿಕರ ಮೊಬೈಲ್ ಕದ್ದು ಹಣ ಎಗರಿಸುತ್ತಿದ್ದ ಖದೀಮ; ಆರೋಪಿ ಪೊಲೀಸರ ಬಲೆಗೆ

    November 19, 2026

    ವಂದೇ ಭಾರತ್ ರೈಲಲ್ಲಿ ಲಾಕ್ ಆದ 12 ಮಂದಿ; ಟಿಕೆಟ್ ಇಲ್ಲದೆ 140 ಕಿ.ಮೀ ಪ್ರಯಾಣಿಸಿದ 12 ಮಂದಿಗೆ ದಂಡ

    November 19, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ನಕಲಿ ನೋಟು ಮುದ್ರಣ ಕೇಸ್‌ಗೆ ಬಿಗ್ ಟ್ವಿಸ್ಟ್! ಆರೋಪಿಗಳ ಮನೆ ಶೋಧ, ಮತ್ತಷ್ಟು ಸಾಕ್ಷ್ಯ ಸಂಗ್ರಹ
    ಅಪರಾಧ

    ನಕಲಿ ನೋಟು ಮುದ್ರಣ ಕೇಸ್‌ಗೆ ಬಿಗ್ ಟ್ವಿಸ್ಟ್! ಆರೋಪಿಗಳ ಮನೆ ಶೋಧ, ಮತ್ತಷ್ಟು ಸಾಕ್ಷ್ಯ ಸಂಗ್ರಹ

    adminBy adminJuly 27, 2026No Comments2 Mins Read

    ಕಣಿಯೂರು ಗ್ರಾಮದ ಅಡೆಂಜದಲ್ಲಿ ಪತ್ತೆಯಾದ ನಕಲಿ ನೋಟು ಮುದ್ರಣ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ, ತಲೆಮರೆಸಿಕೊಂಡಿರುವ ಆರೋಪಿ ಅಬ್ದುಲ್ ಶಕೀಲ್ ಹಾಗೂ ಬಂಧಿತ ಆರೋಪಿ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಸಂದೀಪ್ ಪುಂಡಲೀಕ್ ಶೋಳಂಬಿ ವಾಸವಾಗಿದ್ದ ಪಿಲಿಚಂಡಿಕಲ್ಲಿನ ಬಾಡಿಗೆ ಮನೆಯಲ್ಲಿ ಪೊಲೀಸರು ಶೋಧ ಕಾರ್ಯ ನಡೆಸಿದ್ದು, ಪ್ರಿಂಟರ್, ರಾಸಾಯನಿಕ ದ್ರಾವಣವಿದ್ದ ಬಾಟಲಿಗಳು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

    ಜುಲೈ 16ರಂದು ಕಣಿಯೂರು ಗ್ರಾಮದ ಅಡೆಂಜದಲ್ಲಿರುವ ಇದ್ರೀಸ್ ಎಂಬುವರಿಗೆ ಸೇರಿದ ಮನೆಯಲ್ಲಿ ನಕಲಿ ನೋಟುಗಳನ್ನು ಮುದ್ರಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ನಕಲಿ ಕರೆನ್ಸಿ ನೋಟುಗಳು ಹಾಗೂ ಅವುಗಳನ್ನು ಮುದ್ರಿಸಲು ಬಳಸಲಾಗುತ್ತಿದ್ದ ಯಂತ್ರೋಪಕರಣಗಳನ್ನು ವಶಪಡಿಸಿಕೊಂಡಿದ್ದರು. ಬಳಿಕ ನಡೆದ ತನಿಖೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿ ಬೆಳಕಿಗೆ ಬಂದಿದೆ.

    ಈ ಪ್ರಕರಣದಲ್ಲಿ ಇದುವರೆಗೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಪುತ್ತೂರು ಕಸಬಾ ಗ್ರಾಮದ ಇಬ್ರಾಹಿಂ (60), ಕಾಸರಗೋಡು ಜಿಲ್ಲೆಯ ಚಂಗುಲ ಗ್ರಾಮದ ಶರೀಫ್ (51), ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಸಂದೀಪ್ ಪುಂಡಲೀಕ ಶೋಳಂಬಿ (30), ಕಾಸರಗೋಡು ಜಿಲ್ಲೆಯ ಆಮೂರು ಗ್ರಾಮದ ನಬಾಸ್ (37), ಒಳಮೊಗ್ರು ಗ್ರಾಮದ ಸಲ್ಮಾನ್ ಫಾರೀಸ್ (25), ಉರುವಾಲು ಗ್ರಾಮದ ಸಿರಾಜುದ್ದೀನ್ (34) ಹಾಗೂ ಪುತ್ತಿಲ ಗ್ರಾಮದ ಇರ್ಷಾದ್ (31) ಎಂದು ಗುರುತಿಸಲಾಗಿದೆ.

    ಬಂಧಿತ ಆರೋಪಿಗಳನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಬಪ್ಪಳಿಗೆ ನಿವಾಸಿ ಇಬ್ರಾಹಿಂ, ಸಂದೀಪ್ ಪುಂಡಲೀಕ ಶೋಳಂಬಿ, ಉರುವಾಲು ಗ್ರಾಮದ ಸಿರಾಜುದ್ದೀನ್ ಹಾಗೂ ಪುತ್ತಿಲದ ಇರ್ಷಾದ್ ಅವರನ್ನು ಆರಂಭದಲ್ಲಿ ಜುಲೈ 26ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು. ಉಳಿದ ಆರೋಪಿಗಳಾದ ಆಮೂರು ಗ್ರಾಮದ ನಬಾಸ್, ಒಳಮೊಗ್ರುವಿನ ಸಲ್ಮಾನ್ ಫಾರಿಸ್ ಹಾಗೂ ಚಂಗುಲ ಗ್ರಾಮದ ಶರೀಫ್ ಅವರನ್ನು ಆಗಸ್ಟ್ 1ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಬಳಿಕ ಜುಲೈ 26ರಂದು ಪೊಲೀಸ್ ಕಸ್ಟಡಿಯಲ್ಲಿದ್ದ ನಾಲ್ವರು ಆರೋಪಿಗಳನ್ನೂ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

    ಇದರ ಮಧ್ಯೆ, ನ್ಯಾಯಾಲಯದ ಅನುಮತಿ ಪಡೆದು ಬೆಳ್ತಂಗಡಿ ಉಪವಿಭಾಗದ ಪೊಲೀಸ್ ಅಧಿಕಾರಿಗಳ ನೇತೃತ್ವದ ತಂಡವು, ತಲೆಮರೆಸಿಕೊಂಡಿರುವ ಆರೋಪಿ ಅಬ್ದುಲ್ ಶಕೀಲ್ ಹಾಗೂ ಸಂದೀಪ್ ಪುಂಡಲೀಕ ಶೋಳಂಬಿ ವಾಸವಾಗಿದ್ದ ಕುವೆಟ್ಟು ಗ್ರಾಮದ ಬಾಡಿಗೆ ಮನೆಯಲ್ಲಿ ಶೋಧ ಕಾರ್ಯ ನಡೆಸಿತು.

    ಶೋಧ ಕಾರ್ಯದ ವೇಳೆ ಸಂದೀಪ್ ಪುಂಡಲೀಲ ಶೋಳಂಬಿ ಬಳಸುತ್ತಿದ್ದ ಕೊಠಡಿಯಿಂದ ಪ್ರಿಂಟರ್, ರಾಸಾಯನಿಕ ದ್ರಾವಣವಿದ್ದ ಬಾಟಲಿಗಳು ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.




    #crime #dakshinakannada
    Previous Articleಪಾದಚಾರಿಯನ್ನು ರಕ್ಷಿಸಲು ಹೋಗಿ ನಿಯಂತ್ರಣ ತಪ್ಪಿದ ಲಾರಿ; ಮನೆ ಅಂಗಳಕ್ಕೆ ನುಗ್ಗಿ ಅವಾಂತರ
    Next Article ಟೈಮಿಂಗ್ ಜಗಳಕ್ಕೆ ಕಾಪುವಿನಲ್ಲಿ ಎಕ್ಸ್‌ಪ್ರೆಸ್ ಬಸ್‌ಗಳ ಕದನ: ಎರಡು ವಾಹನಗಳನ್ನು ವಶಕ್ಕೆ ಪಡೆದ ಪೊಲೀಸರು

    Related Posts

    ಚೀನಾಗೆ ಎನ್‌ವಿಡಿಯಾ ಚಿಪ್‌ಗಳ ಚೀನಾ ಕಳ್ಳಸಾಗಣೆ ಪ್ರಕರಣ; ಜಯ್ ಪುರಿ ಪತ್ನಿ ಸೆನ್ಲಿ ಚೆನ್ ಹೆಸರು ಪ್ರಸ್ತಾಪ

    November 19, 2026

    ರೈಲು ಪ್ರಯಾಣಿಕರ ಮೊಬೈಲ್ ಕದ್ದು ಹಣ ಎಗರಿಸುತ್ತಿದ್ದ ಖದೀಮ; ಆರೋಪಿ ಪೊಲೀಸರ ಬಲೆಗೆ

    November 19, 2026

    ವಂದೇ ಭಾರತ್ ರೈಲಲ್ಲಿ ಲಾಕ್ ಆದ 12 ಮಂದಿ; ಟಿಕೆಟ್ ಇಲ್ಲದೆ 140 ಕಿ.ಮೀ ಪ್ರಯಾಣಿಸಿದ 12 ಮಂದಿಗೆ ದಂಡ

    November 19, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಚೀನಾಗೆ ಎನ್‌ವಿಡಿಯಾ ಚಿಪ್‌ಗಳ ಚೀನಾ ಕಳ್ಳಸಾಗಣೆ ಪ್ರಕರಣ; ಜಯ್ ಪುರಿ ಪತ್ನಿ ಸೆನ್ಲಿ ಚೆನ್ ಹೆಸರು ಪ್ರಸ್ತಾಪ

    November 19, 2026

    ರೈಲು ಪ್ರಯಾಣಿಕರ ಮೊಬೈಲ್ ಕದ್ದು ಹಣ ಎಗರಿಸುತ್ತಿದ್ದ ಖದೀಮ; ಆರೋಪಿ ಪೊಲೀಸರ ಬಲೆಗೆ

    November 19, 2026

    ವಂದೇ ಭಾರತ್ ರೈಲಲ್ಲಿ ಲಾಕ್ ಆದ 12 ಮಂದಿ; ಟಿಕೆಟ್ ಇಲ್ಲದೆ 140 ಕಿ.ಮೀ ಪ್ರಯಾಣಿಸಿದ 12 ಮಂದಿಗೆ ದಂಡ

    November 19, 2026

    ಪುತ್ತೂರು ಬೈಪಾಸ್‌ನಲ್ಲಿ ಭೀಕರ ಅಪಘಾತ; ನಿಂತಿದ್ದ ಟಿಪ್ಪರ್‌ಗೆ ಕಾರು ಡಿಕ್ಕಿ, ಓರ್ವ ಸಾವು, ಮತ್ತೊಬ್ಬ ಗಂಭೀರ

    November 19, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಬಾಡಿಗೆ ಮನೆ ಹುಡುಕುವ ಸೋಗಿನಲ್ಲಿ ಬೀಗ ಹಾಕಿದ ಮನೆಗಳೇ ಟಾರ್ಗೆಟ್; ಇಬ್ಬರು ಖತರ್ನಾಕ್ ಕಳ್ಳರು ಅಂದರ್

    November 18, 2026

    ಕಾರು–ಬೊಲೆರೊ ನಡುವೆ ಭೀಕರ ಡಿಕ್ಕಿ; ನಾಲ್ವರು ಯುವಕರು ಸ್ಥಳದಲ್ಲೇ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

    November 18, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.