Close Menu
    What's Hot

    ಸೆ.18ರಂದು ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ: ಗಣ್ಯರ ಸಂಚಾರಕ್ಕೆ ಸಿದ್ಧತೆ, ಸಾರ್ವಜನಿಕರಿಗೆ ಪರ್ಯಾಯ ಮಾರ್ಗ ಸೂಚನೆ

    September 16, 2026

    ‘ಟಾಸ್’ನ ಮಾಸ್ ಎಂಟ್ರಿ, ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್: ಗೆಲುವಿನತ್ತ ಮೊದಲ ಹೆಜ್ಜೆ

    September 16, 2026

    ಆಸ್ತಿ ಪಾಲಿಗೆ ಅರ್ಜಿ ಸಲ್ಲಿಸಲು ಬಂದ ತಂದೆ-ಮಗಳು ಗ್ರಾಮ ಪಂಚಾಯಿತಿಯಲ್ಲೇ ಬರ್ಬರ ಹತ್ಯೆ

    September 16, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಕರಾವಳಿ ಸುದ್ದಿ»ಮುಲ್ಕಿ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಶಶಿಪ್ರಭಾ ರಸ್ತೆ ಅಪಘಾತದಲ್ಲಿ ಸಾವು
    ಕರಾವಳಿ ಸುದ್ದಿ

    ಮುಲ್ಕಿ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಶಶಿಪ್ರಭಾ ರಸ್ತೆ ಅಪಘಾತದಲ್ಲಿ ಸಾವು

    adminBy adminJuly 28, 2026No Comments2 Mins Read

    ಮುಲ್ಕಿ: ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಚೌಡೇನಹಳ್ಳಿ ಸಮೀಪ ಸೋಮವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮುಲ್ಕಿ ಮೂಲದ ಜನತಾದಳ (ಜಾತ್ಯತೀತ) ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಶಶಿಪ್ರಭಾ (47) ಅವರು ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಕಾರಿನಲ್ಲಿದ್ದ ಮೂವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ಮೃತ ಶಶಿಪ್ರಭಾ ಅವರು ಮುಲ್ಕಿಯ ಕಾರ್ನಾಡ್ ಕೆ.ಎಸ್. ರಾವ್ ನಗರ, ಕೊರಂಟಬೆಟ್ಟು ನಿವಾಸಿಯಾಗಿದ್ದು, ಮುಲ್ಕಿ ನಗರ ಪಂಚಾಯತ್‌ನ ಮಾಜಿ ಅಧ್ಯಕ್ಷ ದಿವಂಗತ ಶಶಿಕಾಂತ್ ಶೆಟ್ಟಿ ಅವರ ಸಹೋದರಿಯಾಗಿದ್ದರು. ಅವರು ಜನತಾದಳ (ಜಾತ್ಯತೀತ) ಪಕ್ಷದ ಮುಲ್ಕಿ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದುದಲ್ಲದೆ, ಹಲವು ಸಾಮಾಜಿಕ, ಧಾರ್ಮಿಕ ಹಾಗೂ ಸೇವಾ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಜನಮೆಚ್ಚುಗೆ ಗಳಿಸಿದ್ದರು.

    ಅಪಘಾತದಲ್ಲಿ ಗಾಯಗೊಂಡಿರುವ ಕಾರ್ಕಳ ನಿವಾಸಿ ದಿನೇಶ್ (34), ಮಂಡ್ಯ ನಿವಾಸಿ ಸುಜನ್ (20) ಹಾಗೂ ಕಾರು ಚಾಲಕ ಅಖಿಲ್ (20) ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

    ಶಶಿಪ್ರಭಾ ಅವರು ಹಾಸನ ಜಿಲ್ಲೆಯ ಬೆಳ್ಳೂರು ಕ್ರಾಸ್ ಸಮೀಪ ಯಶಸ್ವಿಯಾಗಿ ಹೋಟೆಲ್ (ಡಾಬಾ) ನಡೆಸುತ್ತಿದ್ದರು. ಭಾನುವಾರ ರಾತ್ರಿ ತಮ್ಮ ಕಾರು (KA-19-MM-4066)ದಲ್ಲಿ ಸ್ವಗ್ರಾಮ ಮುಲ್ಕಿಗೆ ಪ್ರಯಾಣಿಸುತ್ತಿದ್ದ ವೇಳೆ, ಸೋಮವಾರ ಮುಂಜಾನೆ ಸುಮಾರು 1.10 ಗಂಟೆಗೆ ಚೌಡೇನಹಳ್ಳಿ ಸಮೀಪ ರಸ್ತೆಯಲ್ಲಿ ಹಂದಿಯೊಂದು ಸತ್ತು ಬಿದ್ದಿರುವುದನ್ನು ಗಮನಿಸಿದ ಚಾಲಕ ಅಖಿಲ್ ಕಾರಿನ ವೇಗವನ್ನು ಕಡಿಮೆ ಮಾಡಿ ಬದಿಗೆ ಸರಿಸಿದ್ದರು.

    ಈ ವೇಳೆ ಹಿಂಬದಿಯಿಂದ ಅತಿವೇಗದಲ್ಲಿ ಬಂದ ಫೋರ್ಡ್ ಕಾರು ರಸ್ತೆಯಲ್ಲಿದ್ದ ಹಂದಿಯ ಮೇಲೆಯೇ ಹರಿದು ನಿಯಂತ್ರಣ ತಪ್ಪಿ ಶಶಿಪ್ರಭಾ ಪ್ರಯಾಣಿಸುತ್ತಿದ್ದ ಕಾರಿಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಹಲವು ಬಾರಿ ಪಲ್ಟಿಯಾಗಿದ್ದು, ಹಿಂಬದಿ ಆಸನದಲ್ಲಿ ಕುಳಿತಿದ್ದ ಶಶಿಪ್ರಭಾ ಅವರಿಗೆ ತೀವ್ರ ಗಾಯಗಳಾಗಿವೆ. ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದರು. ಅಪಘಾತ ಎಸಗಿದ ಕಾರಿನ ಚಾಲಕ ವಾಹನ ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ.

    ಮೃತರು ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದು, ಕುಟುಂಬಸ್ಥರು, ಬಂಧು-ಬಳಗ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಈ ಕುರಿತು ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದ ವಾಹನ ಮತ್ತು ಅದರ ಚಾಲಕನ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

    ಸಾವಿಗೂ ಅರ್ಧ ಗಂಟೆ ಮೊದಲು ಪೂಜೆ ಕುರಿತು ಮಾತುಕತೆ

    ಪರಿಶ್ರಮಿ ಉದ್ಯಮಿಯಾಗಿದ್ದ ಶಶಿಪ್ರಭಾ ಅವರು ಅಪಾರ ದೈವಭಕ್ತೆಯೂ ಆಗಿದ್ದರು. ತಮ್ಮ ಸಾವಿಗೂ ಸುಮಾರು ಅರ್ಧ ಗಂಟೆ ಮೊದಲು ಮುಲ್ಕಿ ಕೊಲಕಾಡಿಯ ವೇದಮೂರ್ತಿ ವಾದಿರಾಜ ಉಪಾಧ್ಯಾಯ ಅವರಿಗೆ ದೂರವಾಣಿ ಕರೆ ಮಾಡಿ ತಮ್ಮ ಮನೆಯಲ್ಲಿ ಪೂಜೆ ನಡೆಸುವ ಕುರಿತು ಚರ್ಚಿಸಿದ್ದರು. ಕೆಲವೇ ಕ್ಷಣಗಳಲ್ಲಿ ಅವರ ಅಕಾಲಿಕ ನಿಧನದ ಸುದ್ದಿ ತಿಳಿದು ತೀವ್ರ ದಿಗ್ಭ್ರಮೆಗೊಂಡ ವಾದಿರಾಜ ಉಪಾಧ್ಯಾಯರು, “ಇದು ವಿಧಿಯ ಕ್ರೂರ ಆಟ” ಎಂದು ದುಃಖ ವ್ಯಕ್ತಪಡಿಸಿದ್ದಾರೆ.

    ಜೆಡಿಎಸ್ ನಾಯಕರಿಂದ ಸಂತಾಪ

    ಜನತಾದಳ (ಜಾತ್ಯತೀತ) ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಜಾಕೆ ಮಾಧವ ಗೌಡ ಅವರು ಶಶಿಪ್ರಭಾ ಅವರ ಅಕಾಲಿಕ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತೆ ಹಾಗೂ ಮುಲ್ಕಿ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆಯಾಗಿ ಅವರು ಸಲ್ಲಿಸಿದ ಸೇವೆ ಸದಾ ಸ್ಮರಣೀಯವಾಗಿರಲಿದೆ ಎಂದು ತಿಳಿಸಿರುವ ಅವರು, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.

    ಜಿಲ್ಲಾ ಪದಾಧಿಕಾರಿಗಳು, ತಾಲೂಕು ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಕೂಡ ಶಶಿಪ್ರಭಾ ಅವರ ಅಗಲಿಕೆಗೆ ತೀವ್ರ ಶೋಕ ವ್ಯಕ್ತಪಡಿಸಿ, ಕುಟುಂಬದ ಸದಸ್ಯರಿಗೆ ಸಂತಾಪ ಸೂಚಿಸಿದ್ದಾರೆ.




    #dakshinakannada #karnataka
    Previous Articleಲಾವಣ್ಯ ಹತ್ಯೆ ಪ್ರಕರಣ; ಆಸ್ಪತ್ರೆಯಿಂದ ಆರೋಪಿ ಚೇತನ್ ಪೊಲೀಸ್ ವಶಕ್ಕೆ
    Next Article ಮಹಿಳಾ ಸಿಬ್ಬಂದಿಗೆ ಕಿರುಕುಳ ಆರೋಪ; ಬೈಕಂಪಾಡಿ ಎಪಿಎಂಸಿ ಕಾರ್ಯದರ್ಶಿಗೆ ಮಹಿಳೆಯರ ತರಾಟೆ

    Related Posts

    ಸೆ.18ರಂದು ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ: ಗಣ್ಯರ ಸಂಚಾರಕ್ಕೆ ಸಿದ್ಧತೆ, ಸಾರ್ವಜನಿಕರಿಗೆ ಪರ್ಯಾಯ ಮಾರ್ಗ ಸೂಚನೆ

    September 16, 2026

    ‘ಟಾಸ್’ನ ಮಾಸ್ ಎಂಟ್ರಿ, ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್: ಗೆಲುವಿನತ್ತ ಮೊದಲ ಹೆಜ್ಜೆ

    September 16, 2026

    ಆಸ್ತಿ ಪಾಲಿಗೆ ಅರ್ಜಿ ಸಲ್ಲಿಸಲು ಬಂದ ತಂದೆ-ಮಗಳು ಗ್ರಾಮ ಪಂಚಾಯಿತಿಯಲ್ಲೇ ಬರ್ಬರ ಹತ್ಯೆ

    September 16, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಸೆ.18ರಂದು ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ: ಗಣ್ಯರ ಸಂಚಾರಕ್ಕೆ ಸಿದ್ಧತೆ, ಸಾರ್ವಜನಿಕರಿಗೆ ಪರ್ಯಾಯ ಮಾರ್ಗ ಸೂಚನೆ

    September 16, 2026

    ‘ಟಾಸ್’ನ ಮಾಸ್ ಎಂಟ್ರಿ, ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್: ಗೆಲುವಿನತ್ತ ಮೊದಲ ಹೆಜ್ಜೆ

    September 16, 2026

    ಆಸ್ತಿ ಪಾಲಿಗೆ ಅರ್ಜಿ ಸಲ್ಲಿಸಲು ಬಂದ ತಂದೆ-ಮಗಳು ಗ್ರಾಮ ಪಂಚಾಯಿತಿಯಲ್ಲೇ ಬರ್ಬರ ಹತ್ಯೆ

    September 16, 2026

    ಸಾರ್ವಜನಿಕವಾಗಿ ಯುವತಿಗೆ ಕಿರುಕುಳ ನೀಡುತ್ತಿದ್ದ ಯುವಕನ ಬಂಧನ: ಅಕ್ಕ ಪಡೆಯ ಕಾರ್ಯಾಚರಣೆ

    September 16, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ‘ಟಾಸ್’ನ ಮಾಸ್ ಎಂಟ್ರಿ, ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್: ಗೆಲುವಿನತ್ತ ಮೊದಲ ಹೆಜ್ಜೆ

    September 16, 2026

    ಆಸ್ತಿ ಪಾಲಿಗೆ ಅರ್ಜಿ ಸಲ್ಲಿಸಲು ಬಂದ ತಂದೆ-ಮಗಳು ಗ್ರಾಮ ಪಂಚಾಯಿತಿಯಲ್ಲೇ ಬರ್ಬರ ಹತ್ಯೆ

    September 16, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.