Close Menu
    What's Hot

    ಸೆ.18ರಂದು ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ: ಗಣ್ಯರ ಸಂಚಾರಕ್ಕೆ ಸಿದ್ಧತೆ, ಸಾರ್ವಜನಿಕರಿಗೆ ಪರ್ಯಾಯ ಮಾರ್ಗ ಸೂಚನೆ

    September 16, 2026

    ‘ಟಾಸ್’ನ ಮಾಸ್ ಎಂಟ್ರಿ, ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್: ಗೆಲುವಿನತ್ತ ಮೊದಲ ಹೆಜ್ಜೆ

    September 16, 2026

    ಆಸ್ತಿ ಪಾಲಿಗೆ ಅರ್ಜಿ ಸಲ್ಲಿಸಲು ಬಂದ ತಂದೆ-ಮಗಳು ಗ್ರಾಮ ಪಂಚಾಯಿತಿಯಲ್ಲೇ ಬರ್ಬರ ಹತ್ಯೆ

    September 16, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಕರಾವಳಿ ಸುದ್ದಿ»ಸೆ.18ರಂದು ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ: ಗಣ್ಯರ ಸಂಚಾರಕ್ಕೆ ಸಿದ್ಧತೆ, ಸಾರ್ವಜನಿಕರಿಗೆ ಪರ್ಯಾಯ ಮಾರ್ಗ ಸೂಚನೆ
    ಕರಾವಳಿ ಸುದ್ದಿ

    ಸೆ.18ರಂದು ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ: ಗಣ್ಯರ ಸಂಚಾರಕ್ಕೆ ಸಿದ್ಧತೆ, ಸಾರ್ವಜನಿಕರಿಗೆ ಪರ್ಯಾಯ ಮಾರ್ಗ ಸೂಚನೆ

    adminBy adminSeptember 16, 2026No Comments2 Mins Read

    ಮಂಗಳೂರು: ಸೆಪ್ಟೆಂಬರ್ 18ರಂದು ಪಡೀಲ್‌ನ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಸಂಪುಟದ ಸಚಿವರು ಮಂಗಳೂರಿಗೆ ಆಗಮಿಸಲಿದ್ದಾರೆ. ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಧ್ಯಾಹ್ನ ಮೇರಿಹಿಲ್‌ನ ಹೆಲಿಪ್ಯಾಡ್ ಮೂಲಕ ಉಡುಪಿಗೆ ತೆರಳಲಿದ್ದು, ನಂತರ ಮತ್ತೆ ಮಂಗಳೂರು ನಗರಕ್ಕೆ ಮರಳಿ ವಾಸ್ತವ್ಯ ಹೂಡಲಿದ್ದಾರೆ. ಸೆಪ್ಟೆಂಬರ್ 19ರ ಬೆಳಗ್ಗೆ ಅವರು ನಗರದಿಂದ ನಿರ್ಗಮಿಸಲಿದ್ದಾರೆ. ಗಣ್ಯರ ಸಂಚಾರದ ಹಿನ್ನೆಲೆಯಲ್ಲಿ ನಗರದ ಕೆಲವು ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಗುವ ಸಾಧ್ಯತೆ ಇರುವುದರಿಂದ, ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಮಂಗಳೂರು ಪೊಲೀಸರು ಸೂಚಿಸಿದ್ದಾರೆ.

    ಗಣ್ಯರ ಸಂಚಾರ ಇರುವ ರಸ್ತೆಗಳು

    ಸೆಪ್ಟೆಂಬರ್ 17ರ ಸಂಜೆದಿಂದ ಸೆಪ್ಟೆಂಬರ್ 19ರ ಬೆಳಗ್ಗೆಯವರೆಗೆ:
    ಬಜಪೆ ವಿಮಾನ ನಿಲ್ದಾಣ → ಕಾವೂರು → ಬೊಂದೆಲ್ → ಮೇರಿಹಿಲ್ → ಕೆ.ಪಿ.ಟಿ. → ಕದ್ರಿ ಕಂಬಳ → ಬಂಟ್ಸ್ ಹಾಸ್ಟೆಲ್ → ಬಿ.ಆರ್. ಅಂಬೇಡ್ಕರ್ ಜಂಕ್ಷನ್ → ಹಂಪನಕಟ್ಟೆ → ಕ್ಲಾಕ್ ಟವರ್ → ಹ್ಯಾಮಿಲ್ಟನ್ ಜಂಕ್ಷನ್ ಮಾರ್ಗದಲ್ಲಿ ಗಣ್ಯರ ಸಂಚಾರ ಇರಲಿದೆ.

    ಸೆಪ್ಟೆಂಬರ್ 18ರಂದು ಬೆಳಗ್ಗೆ:
    ಹ್ಯಾಮಿಲ್ಟನ್ ಜಂಕ್ಷನ್ → ಕ್ಲಾಕ್ ಟವರ್ → ಹಂಪನಕಟ್ಟೆ → ಡಾ. ಬಿ.ಆರ್. ಅಂಬೇಡ್ಕರ್ ಜಂಕ್ಷನ್ → ಕೆ.ಪಿ.ಟಿ. ಜಂಕ್ಷನ್ → ನಂತೂರು ವೃತ್ತ → ಪಂಪುವೆಲ್ → ನಾಗುರಿ → ಬಜಾಲ್ ಕ್ರಾಸ್ (ಪ್ರಜಾಸೌಧ) → ಪಡೀಲ್ ಜಂಕ್ಷನ್ ಮಾರ್ಗದಲ್ಲಿ ಸಂಚಾರ ಇರಲಿದೆ.

    ಮೇಲಿನ ಮಾರ್ಗಗಳಲ್ಲಿ ರಸ್ತೆ ಬದಿಯಲ್ಲಿ ಯಾವುದೇ ವಾಹನಗಳನ್ನು ನಿಲ್ಲಿಸದಂತೆ ಸಾರ್ವಜನಿಕರಿಗೆ ಪೊಲೀಸರು ಮನವಿ ಮಾಡಿದ್ದಾರೆ. ಆಂಬ್ಯುಲೆನ್ಸ್ ಸೇರಿದಂತೆ ತುರ್ತು ಸೇವಾ ವಾಹನಗಳ ಸಂಚಾರಕ್ಕೆ ಯಾವುದೇ ಅಡ್ಡಿ ಇರುವುದಿಲ್ಲ ಎಂದು ತಿಳಿಸಲಾಗಿದ್ದು, ಸುಗಮ ಸಂಚಾರಕ್ಕಾಗಿ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಸೂಚಿಸಲಾಗಿದೆ.

    ಬದಲಿ ಮಾರ್ಗಗಳು

    • ಬದ್ರಿಯಾ ಜಂಕ್ಷನ್‌ನಿಂದ ಹ್ಯಾಮಿಲ್ಟನ್ ಜಂಕ್ಷನ್ ಕಡೆಗೆ: ಹೋಟೆಲ್ ತಾಜ್ ವಿವಾಂತ್ ಮುಂಭಾಗದ ಮಾರ್ಗ ಬಳಸುವ ಬದಲು ಬದ್ರಿಯಾ ಜಂಕ್ಷನ್ – ನೀಲೇಶ್ವರ ರಸ್ತೆ – ರೋಸಾರಿಯೋ ರಸ್ತೆ ಮೂಲಕ ಸಂಚರಿಸುವಂತೆ ಸೂಚಿಸಲಾಗಿದೆ.
    • ಹ್ಯಾಮಿಲ್ಟನ್ ಜಂಕ್ಷನ್‌ನಿಂದ ಬದ್ರಿಯಾ ಜಂಕ್ಷನ್ ಕಡೆಗೆ: ತಾಜ್ ವಿವಾಂತ್ ಮುಂಭಾಗದ ಮಾರ್ಗದ ಬದಲು ಹ್ಯಾಮಿಲ್ಟನ್ ಜಂಕ್ಷನ್ – ನೆಲ್ಲಿಕಾಯಿ ರಸ್ತೆ ಮಾರ್ಗ ಬಳಸಬಹುದು.
    • ಪಂಪುವೆಲ್ ಜಂಕ್ಷನ್–ನಾಗುರಿ–ಪಡೀಲ್ ಮಾರ್ಗ: ಪಂಪುವೆಲ್‌ನಿಂದ ನಾಗುರಿ ಮೂಲಕ ಪಡೀಲ್ ಅಥವಾ ಪಡೀಲ್‌ನಿಂದ ನಾಗುರಿ ಮೂಲಕ ಪಂಪುವೆಲ್ ಕಡೆಗೆ ಹೋಗುವ ವಾಹನಗಳು ನಂತೂರು ವೃತ್ತ – ಕೈಕಂಬ – ಮರೋಳಿ ಮಾರ್ಗವನ್ನು ಬಳಸಬಹುದು. ಮತ್ತೊಂದು ಪರ್ಯಾಯವಾಗಿ ತೊಕ್ಕೊಟ್ಟು – ದೇರಳಕಟ್ಟೆ – ಮುಡಿಪು – ಬೊಳ್ಯಾರ್ – ಮೆಲ್ಕಾರ್ ಮಾರ್ಗವನ್ನು ಬಳಸುವಂತೆ ಸೂಚಿಸಲಾಗಿದೆ.
    • ಬಜಾಲ್ ಕ್ರಾಸ್ (ಪ್ರಜಾಸೌಧ) ಭಾಗ: ಬಜಾಲ್ ಕಡೆಗೆ ಅಥವಾ ಕಂಕನಾಡಿ ಜಂಕ್ಷನ್ ರೈಲು ನಿಲ್ದಾಣದ ಕಡೆಗೆ ಸಂಚರಿಸುವ ವಾಹನಗಳು ಪಡೀಲ್–ಬಜಾಲ್ ಕ್ರಾಸ್ ಮಾರ್ಗದ ಬದಲು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮುಂದುವರಿದು ಜಪ್ಪಿನಮೊಗರು ದ್ವಾರ – ಬಜಾಲ್ ಮೂಲಕ ಸಂಚರಿಸಬಹುದು.
    • ತೊಕ್ಕೊಟ್ಟಿನಿಂದ ಪಂಪುವೆಲ್ ಕಡೆಗೆ: ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಮಹಾಕಾಳಿಪಡ್ಪು – ಮಂಗಳಾದೇವಿ ಮಾರ್ಗವಾಗಿ ನಗರಕ್ಕೆ ತೆರಳುವಂತೆ ಮಂಗಳೂರು ಪೊಲೀಸರು ತಿಳಿಸಿದ್ದಾರೆ.



    #dakshinakannada
    Previous Article‘ಟಾಸ್’ನ ಮಾಸ್ ಎಂಟ್ರಿ, ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್: ಗೆಲುವಿನತ್ತ ಮೊದಲ ಹೆಜ್ಜೆ

    Related Posts

    ‘ಟಾಸ್’ನ ಮಾಸ್ ಎಂಟ್ರಿ, ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್: ಗೆಲುವಿನತ್ತ ಮೊದಲ ಹೆಜ್ಜೆ

    September 16, 2026

    ಅಂಗನವಾಡಿ ಮಕ್ಕಳ ಆಹಾರದ ಗುಣಮಟ್ಟಕ್ಕೆ ಖಾದರ್ ಕಟ್ಟುನಿಟ್ಟಿನ ಕ್ರಮ: ಆಹಾರ ಮಾದರಿ ಲ್ಯಾಬ್‌ಗೆ ರವಾನೆ

    September 16, 2026

    14 ದಿನಗಳಲ್ಲಿ 8 ಅಪ್ರಾಪ್ತ ಮಕ್ಕಳ ರಕ್ಷಣೆ: ರೈಲು ನಿಲ್ದಾಣಗಳಲ್ಲಿ ಆರ್‌ಪಿಎಫ್ ವಿಶೇಷ ಕಾರ್ಯಾಚರಣೆ

    September 16, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಸೆ.18ರಂದು ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ: ಗಣ್ಯರ ಸಂಚಾರಕ್ಕೆ ಸಿದ್ಧತೆ, ಸಾರ್ವಜನಿಕರಿಗೆ ಪರ್ಯಾಯ ಮಾರ್ಗ ಸೂಚನೆ

    September 16, 2026

    ‘ಟಾಸ್’ನ ಮಾಸ್ ಎಂಟ್ರಿ, ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್: ಗೆಲುವಿನತ್ತ ಮೊದಲ ಹೆಜ್ಜೆ

    September 16, 2026

    ಆಸ್ತಿ ಪಾಲಿಗೆ ಅರ್ಜಿ ಸಲ್ಲಿಸಲು ಬಂದ ತಂದೆ-ಮಗಳು ಗ್ರಾಮ ಪಂಚಾಯಿತಿಯಲ್ಲೇ ಬರ್ಬರ ಹತ್ಯೆ

    September 16, 2026

    ಸಾರ್ವಜನಿಕವಾಗಿ ಯುವತಿಗೆ ಕಿರುಕುಳ ನೀಡುತ್ತಿದ್ದ ಯುವಕನ ಬಂಧನ: ಅಕ್ಕ ಪಡೆಯ ಕಾರ್ಯಾಚರಣೆ

    September 16, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ‘ಟಾಸ್’ನ ಮಾಸ್ ಎಂಟ್ರಿ, ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್: ಗೆಲುವಿನತ್ತ ಮೊದಲ ಹೆಜ್ಜೆ

    September 16, 2026

    ಆಸ್ತಿ ಪಾಲಿಗೆ ಅರ್ಜಿ ಸಲ್ಲಿಸಲು ಬಂದ ತಂದೆ-ಮಗಳು ಗ್ರಾಮ ಪಂಚಾಯಿತಿಯಲ್ಲೇ ಬರ್ಬರ ಹತ್ಯೆ

    September 16, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.