Close Menu
    What's Hot

    ಪುತ್ತೂರು ಬೈಪಾಸ್‌ನಲ್ಲಿ ಭೀಕರ ಅಪಘಾತ; ನಿಂತಿದ್ದ ಟಿಪ್ಪರ್‌ಗೆ ಕಾರು ಡಿಕ್ಕಿ, ಓರ್ವ ಸಾವು, ಮತ್ತೊಬ್ಬ ಗಂಭೀರ

    November 19, 2026

    ಸುಳ್ಯದಲ್ಲಿ ಜಾನುವಾರು ಕಳವಿಗೆ ಯತ್ನ; ಇಬ್ಬರು ಆರೋಪಿಗಳ ಬಂಧನ, ಜಾನುವಾರುಗಳು ವಶಕ್ಕೆ

    November 19, 2026

    ಬೆಳ್ತಂಗಡಿ: ಮಾಲೀಕರ ಗಮನ ಬೇರೆಡೆ ಸೆಳೆದು ಚಿನ್ನದ ಬ್ರೇಸ್‌ಲೆಟ್ ಕಳವು; ₹4.40 ಲಕ್ಷದ ಚಿನ್ನಾಭರಣ ಎಗರಿಸಿ ಪರಾರಿ

    November 19, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಐಷಾರಾಮಿ ಕಾರುಗಳ ನಕಲಿ ದಾಖಲೆ ಜಾಲ ಭೇದ; ₹1.74 ಕೋಟಿ ಮೌಲ್ಯದ 7 ಕಾರು ಜಪ್ತಿ
    ಅಪರಾಧ

    ಐಷಾರಾಮಿ ಕಾರುಗಳ ನಕಲಿ ದಾಖಲೆ ಜಾಲ ಭೇದ; ₹1.74 ಕೋಟಿ ಮೌಲ್ಯದ 7 ಕಾರು ಜಪ್ತಿ

    adminBy adminJuly 28, 2026No Comments1 Min Read

    ಬೆಂಗಳೂರು: ಐಷಾರಾಮಿ ಕಾರುಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರಣಿ ವಂಚನೆ ಎಸಗುತ್ತಿದ್ದ ಭಾರಿ ಜಾಲವನ್ನು ಆಡುಗೋಡಿ ಠಾಣೆ ಪೊಲೀಸರು ಭೇದಿಸಿದ್ದಾರೆ. ಕಾರ್ಯಾಚರಣೆ ನಡೆಸಿದ ಪೊಲೀಸರು ನಾಲ್ವರು ಖತರ್ನಾಕ್ ಆರೋಪಿಗಳನ್ನು ಬಂಧಿಸಿದ್ದು, ಅವರಿಂದ 1.74 ಕೋಟಿ ರೂಪಾಯಿ ಮೌಲ್ಯದ 7 ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಭಾಕರ್, ಪ್ರಶಾಂತ್, ವೇಣುಗೌಡ ಹಾಗೂ ಭಾಗೇಶ್ ಬಂಧಿತ ಆರೋಪಿಗಳು. ಇವರಿಂದ 2 ಫಾರ್ಚೂನರ್, 1 ವೋಲ್ವೋ, 1 ಇನ್ನೋವಾ, ಫೋರ್ಡ್ ಹಾಗೂ ಸ್ವಿಫ್ಟ್ ಸೇರಿದಂತೆ ಒಟ್ಟು 7 ಕಾರುಗಳನ್ನು ಜಪ್ತಿ ಮಾಡಲಾಗಿದೆ.

    ವಂಚನೆಯ ಜಾಲ ಹೇಗಿತ್ತು?

    ಬಂಧಿತ ಆರೋಪಿಗಳು ಕಾರು ಬ್ರೋಕರ್ ಕೆಲಸದ ನೆಪದಲ್ಲಿ ವಂಚನೆಗೆ ಇಳಿಯುತ್ತಿದ್ದರು. 40 ರಿಂದ 50 ಲಕ್ಷ ರೂಪಾಯಿ ಮೌಲ್ಯದ ಕಾರುಗಳನ್ನು ಅಡವಿಟ್ಟು 4-5 ಲಕ್ಷ ರೂಪಾಯಿ ಸಾಲ ಪಡೆಯುವ ಆಟೋಮೊಬೈಲ್ ಮಾಲೀಕರನ್ನು ಈ ಜಾಲ ಟಾರ್ಗೆಟ್ ಮಾಡುತ್ತಿತ್ತು. ಮಾಲೀಕರು ಕಾರು ಅಡಮಾನವಿಟ್ಟ ತಕ್ಷಣ, ಆ ಕಾರುಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದರು ಅಥವಾ ಒರಿಜಿನಲ್ ಆರ್‌ಸಿ (RC) ಕಾರ್ಡ್ ಟ್ಯಾಂಪರ್ ಮಾಡಿ ಹೆಸರು ಬದಲಾಯಿಸುತ್ತಿದ್ದರು.

    ಬಳಿಕ, ಹೆಸರು ಬದಲಾಯಿಸಿದ ನಕಲಿ ದಾಖಲೆಗಳೊಂದಿಗೆ ಮತ್ತೊಬ್ಬ ಡೀಲರ್ ಬಳಿ ಹೋಗಿ, 4-5 ಲಕ್ಷಕ್ಕೆ ಅಡಮಾನವಿದ್ದ ಕಾರನ್ನು 20 ರಿಂದ 25 ಲಕ್ಷ ರೂಪಾಯಿಗೆ ಮತ್ತೆ ಅಡ ಇಡುತ್ತಿದ್ದರು. ಬಂದ ಹಣದಲ್ಲಿ ಮೂಲ ಮಾಲೀಕರಿಗೆ 4-5 ಲಕ್ಷ ನೀಡಿ ಕಾರು ಬಿಡಿಸಿಕೊಂಡು, ಅದನ್ನು ಮತ್ತೆ ಬೇರೊಬ್ಬರಿಗೆ ಅಡಮಾನವಿಡುತ್ತಿದ್ದರು. ಹೀಗೆ ಸರಣಿಯಾಗಿ ಹಲವರಿಗೆ ಅಡಮಾನವಿಟ್ಟು ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದರು.

    ಪೊಲೀಸರಿಗೆ ಸವಾಲಾದ ‘ಮೂಲ ಮಾಲೀಕರು’

    ಆರೋಪಿಗಳು ಸೃಷ್ಟಿಸಿದ್ದ ನಕಲಿ ದಾಖಲೆಗಳು ಮತ್ತು ಸರಣಿ ಅಡಮಾನ ಪ್ರಕ್ರಿಯೆಯಿಂದಾಗಿ, ಜಪ್ತಿಯಾಗಿರುವ ಕಾರುಗಳ ನಿಜವಾದ ಮೂಲ ಮಾಲೀಕರು ಯಾರು ಎಂಬುದನ್ನು ಪತ್ತೆಹಚ್ಚುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ತಮ್ಮ ಕಾರನ್ನು ಪಡೆದು ವಾಪಸ್ ನೀಡದೆ ವಂಚಿಸಲಾಗಿದೆ ಎಂದು ಸಾರ್ವಜನಿಕರು ನೀಡಿದ ದೂರಿನನ್ವಯ ಕಾರ್ಯಪ್ರವೃತ್ತರಾದ ಆಡುಗೋಡಿ ಪೊಲೀಸರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಸದ್ಯ ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಈ ಜಾಲದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.




    #crime #karnataka
    Previous Articleಕರ್ನಾಟಕ-ತಮಿಳುನಾಡು ಕಾವೇರಿ ಸಂಘರ್ಷ ತೀವ್ರ; ನೀರು ಬಿಡುಗಡೆ ಆದೇಶಕ್ಕೆ ಆಕ್ರೋಶ
    Next Article ಮಂಗಳೂರು: ಕಾಲೇಜು ವಿದ್ಯಾರ್ಥಿಗಳಿಗೆ ಆಕಸ್ಮಿಕ ಡ್ರಗ್ ಪರೀಕ್ಷೆ –159ರಲ್ಲಿ ಒಬ್ಬ ವಿದ್ಯಾರ್ಥಿಗೆ ಪಾಸಿಟಿವ್

    Related Posts

    ಸುಳ್ಯದಲ್ಲಿ ಜಾನುವಾರು ಕಳವಿಗೆ ಯತ್ನ; ಇಬ್ಬರು ಆರೋಪಿಗಳ ಬಂಧನ, ಜಾನುವಾರುಗಳು ವಶಕ್ಕೆ

    November 19, 2026

    ಬೆಳ್ತಂಗಡಿ: ಮಾಲೀಕರ ಗಮನ ಬೇರೆಡೆ ಸೆಳೆದು ಚಿನ್ನದ ಬ್ರೇಸ್‌ಲೆಟ್ ಕಳವು; ₹4.40 ಲಕ್ಷದ ಚಿನ್ನಾಭರಣ ಎಗರಿಸಿ ಪರಾರಿ

    November 19, 2026

    ಮಂಗಳೂರು: ಬಾಲಕನಿಗೆ ಕಿರುಕುಳ ಆರೋಪ; ಜಾಮೀನಿನ ಮೇಲೆ ಹೊರಬಂದಿದ್ದ ಪಾದ್ರಿ ಮತ್ತೆ ಅರೆಸ್ಟ್

    November 19, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಪುತ್ತೂರು ಬೈಪಾಸ್‌ನಲ್ಲಿ ಭೀಕರ ಅಪಘಾತ; ನಿಂತಿದ್ದ ಟಿಪ್ಪರ್‌ಗೆ ಕಾರು ಡಿಕ್ಕಿ, ಓರ್ವ ಸಾವು, ಮತ್ತೊಬ್ಬ ಗಂಭೀರ

    November 19, 2026

    ಸುಳ್ಯದಲ್ಲಿ ಜಾನುವಾರು ಕಳವಿಗೆ ಯತ್ನ; ಇಬ್ಬರು ಆರೋಪಿಗಳ ಬಂಧನ, ಜಾನುವಾರುಗಳು ವಶಕ್ಕೆ

    November 19, 2026

    ಬೆಳ್ತಂಗಡಿ: ಮಾಲೀಕರ ಗಮನ ಬೇರೆಡೆ ಸೆಳೆದು ಚಿನ್ನದ ಬ್ರೇಸ್‌ಲೆಟ್ ಕಳವು; ₹4.40 ಲಕ್ಷದ ಚಿನ್ನಾಭರಣ ಎಗರಿಸಿ ಪರಾರಿ

    November 19, 2026

    ಮಂಗಳೂರು: ಬಾಲಕನಿಗೆ ಕಿರುಕುಳ ಆರೋಪ; ಜಾಮೀನಿನ ಮೇಲೆ ಹೊರಬಂದಿದ್ದ ಪಾದ್ರಿ ಮತ್ತೆ ಅರೆಸ್ಟ್

    November 19, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಬಾಡಿಗೆ ಮನೆ ಹುಡುಕುವ ಸೋಗಿನಲ್ಲಿ ಬೀಗ ಹಾಕಿದ ಮನೆಗಳೇ ಟಾರ್ಗೆಟ್; ಇಬ್ಬರು ಖತರ್ನಾಕ್ ಕಳ್ಳರು ಅಂದರ್

    November 18, 2026

    ಕಾರು–ಬೊಲೆರೊ ನಡುವೆ ಭೀಕರ ಡಿಕ್ಕಿ; ನಾಲ್ವರು ಯುವಕರು ಸ್ಥಳದಲ್ಲೇ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

    November 18, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.