Close Menu
    What's Hot

    ರಾಜ್ಯ ಪೊಲೀಸ್ ಇಲಾಖೆಯಲ್ಲಿ 31 ಐಪಿಎಸ್ ಅಧಿಕಾರಿಗಳ ವರ್ಗಾವಣೆ; ಮಂಗಳೂರು ಪಶ್ಚಿಮ ವಲಯದ ಐಜಿಪಿಯಾಗಿ ಎನ್. ಶಶಿಕುಮಾರ್ ನೇಮಕ

    November 18, 2026

    ಬಾಡಿಗೆ ಮನೆ ಹುಡುಕುವ ಸೋಗಿನಲ್ಲಿ ಬೀಗ ಹಾಕಿದ ಮನೆಗಳೇ ಟಾರ್ಗೆಟ್; ಇಬ್ಬರು ಖತರ್ನಾಕ್ ಕಳ್ಳರು ಅಂದರ್

    November 18, 2026

    ಕಾರು–ಬೊಲೆರೊ ನಡುವೆ ಭೀಕರ ಡಿಕ್ಕಿ; ನಾಲ್ವರು ಯುವಕರು ಸ್ಥಳದಲ್ಲೇ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

    November 18, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಬಾಡಿಗೆ ಮನೆ ಹುಡುಕುವ ಸೋಗಿನಲ್ಲಿ ಬೀಗ ಹಾಕಿದ ಮನೆಗಳೇ ಟಾರ್ಗೆಟ್; ಇಬ್ಬರು ಖತರ್ನಾಕ್ ಕಳ್ಳರು ಅಂದರ್
    ಅಪರಾಧ

    ಬಾಡಿಗೆ ಮನೆ ಹುಡುಕುವ ಸೋಗಿನಲ್ಲಿ ಬೀಗ ಹಾಕಿದ ಮನೆಗಳೇ ಟಾರ್ಗೆಟ್; ಇಬ್ಬರು ಖತರ್ನಾಕ್ ಕಳ್ಳರು ಅಂದರ್

    adminBy adminNovember 18, 2026No Comments2 Mins Read

    ರಾಯಚೂರು: ಬಾಡಿಗೆ ಮನೆ ಹುಡುಕುವ ನೆಪದಲ್ಲಿ ಏರಿಯಾಗಳಲ್ಲಿ ಸುತ್ತಾಡಿ, ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದ ಇಬ್ಬರು ಖತರ್ನಾಕ್​ ಮನೆಗಳ್ಳರನ್ನು ರಾಯಚೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಜನಸಾಮಾನ್ಯರಂತೆ ಓಡಾಡುತ್ತಾ ಮನೆಗಳ್ಳತನಕ್ಕೆ ಸಂಚು ರೂಪಿಸುತ್ತಿದ್ದರು. ಇವರ ಬೆನ್ನಲ್ಲೇ ಹಲವು ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ. ಬಂಧಿತರಿಂದ ಬರೋಬ್ಬರಿ 45 ಲಕ್ಷದ 95 ಸಾವಿರ ರೂ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    45 ಲಕ್ಷದ 95 ಸಾವಿರ ರೂ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಆಭರಣ ವಶಕ್ಕೆ 

    ರಾಯಚೂರಿನಲ್ಲಿ ಮಾತ್ರವಲ್ಲದೆ ಅಕ್ಕಪಕ್ಕದ ಜಿಲ್ಲೆಗಳಲ್ಲೂ ಕೈಚಳಕ ತೋರಿಸುತ್ತಿದ್ದ ಇಬ್ಬರು ಅಂತಾರಾಜ್ಯ ಕಳ್ಳರನ್ನು ರಾಯಚೂರು ಪಶ್ಚಿಮ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಯಚೂರು ನಗರದ ನಿವಾಸಿಗಳಾದ ಅಮರ್ ಸಿಂಗ್ (29) ಹಾಗೂ ಧನರಾಜ್ ಸಿಂಗ್ (24) ಬಂಧಿತ ಆರೋಪಿಗಳು. ಬಂಧಿತರಿಂದ ಬರೋಬ್ಬರಿ 45 ಲಕ್ಷದ 95 ಸಾವಿರ ರೂ ಮೌಲ್ಯದ 300 ಗ್ರಾಂ ಚಿನ್ನಾಭರಣ ಹಾಗೂ 500 ಗ್ರಾಂ ಬೆಳ್ಳಿ ಆಭರಣಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

    ಇನ್ನು ಆರೋಪಿಗಳ ವಿಚಾರಣೆ ವೇಳೆ ಬರೋಬ್ಬರಿ ಐದು ಮನೆಗಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ. ರಾಯಚೂರು ಮಾತ್ರವಲ್ಲದೆ ಯಾದಗಿರಿ, ಬಳ್ಳಾರಿ ಹಾಗೂ ಕಲಬುರಗಿ ಜಿಲ್ಲೆಗಳಲ್ಲೂ ಈ ಖದೀಮರು ಕಳ್ಳತನ ಮಾಡಿರುವುದು ಪತ್ತೆಯಾಗಿದೆ.

    ಖದೀಮರ ಕಳ್ಳತನದ ಸ್ಟೈಲ್ ಡಿಫರೆಂಟ್

    ಪೊಲೀಸರ ತನಿಖೆ ವೇಳೆ ಆರೋಪಿ ಅಮರ್ ಸಿಂಗ್ ಹಾಗೂ ಧನರಾಜ್​ರ ಖರಾಮತ್ತು ಬಯಲಾಗಿದೆ. ಈ ಖದೀಮರ ಕಳ್ಳತನದ ಸ್ಟೈಲ್ ಡಿಫರೆಂಟ್. ಬಾಡಿಗೆ ಮನೆ ಹುಡುಕುವ ನೆಪದಲ್ಲಿ ಸ್ಥಳೀಯರಂತೆ ಓಡಾಡಿ, ಏರಿಯಾಗಳ ಮೇಲೆ ಕಣ್ಣಿಡುತ್ತಿದ್ದರು. ಬಳಿಕ ಬೈಕ್‌ನಲ್ಲಿ ಸುತ್ತಾಡಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿಕೊಳ್ಳುತ್ತಿದ್ದರು. ಸರಿಯಾದ ಸಮಯ ನೋಡಿ ಮನೆಗಳಿಗೆ ನುಗ್ಗಿ ಚಿನ್ನಾಭರಣ ಹಾಗೂ ಬೆಳ್ಳಿ ಆಭರಣಗಳನ್ನು ದೋಚುತ್ತಿದ್ದರು.

    ಅಕ್ಕಪಕ್ಕದ ಜಿಲ್ಲೆಗಳಲ್ಲೂ ಕಳ್ಳತನ

    ಇನ್ನು ಕೇವಲ ರಾತ್ರಿ ವೇಳೆಯಲ್ಲಷ್ಟೇ ಅಲ್ಲದೆ, ಹಗಲಿನಲ್ಲೂ ತಮ್ಮ ಕೈಚಳಕ ತೋರಿಸುತ್ತಿದ್ದರು. ರೈಲಿನಲ್ಲಿ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಪ್ರಯಾಣಿಸಿ, ಅಕ್ಕಪಕ್ಕದ ಜಿಲ್ಲೆಗಳಲ್ಲಿ ಕಳ್ಳತನಕ್ಕೆ ಇಳಿಯುತ್ತಿದ್ದ ಆರೋಪಿಗಳ ಜಾಲವನ್ನು ಪೊಲೀಸರು ಭೇದಿಸಿದ್ದಾರೆ.

    ಇತ್ತ ಇತ್ತೀಚೆಗೆ ವ್ಯಕ್ತಿಯೊಬ್ಬರ ಮನೆಯಲ್ಲಿ ಗಣೇಶ ಹಬ್ಬದ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಆಸಾಮಿಗಳು ಮನೆ ಗುಡಿಸಿ ಗುಂಡಾಂತರ ಮಾಡುತ್ತಿದ್ದರು. ಸದ್ಯ ಪೊಲೀಸರ ತನಿಖೆಯಲ್ಲಿ ಈ ಪ್ರಕರಣ ಕೂಡ ಪತ್ತೆಯಾಗಿದ್ದು, ಚಿನ್ನಾಭರಣ ಪತ್ತೆಯಾಗಿದೆ. ಪೊಲೀಸರ ಈ ಕಾರ್ಯಕ್ಕೆ ದೂರುದಾರರ ಕಡೆಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸದ್ಯ ಆರೋಪಿಗಳ ಬಂಧನದ ಬಳಿಕ ರಾಯಚೂರು ಗ್ರಾಮೀಣ ಠಾಣೆ, ಶಕ್ತಿನಗರ ಠಾಣೆ ಹಾಗೂ ಪಶ್ಚಿಮ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ. ಒಟ್ಟಿನಲ್ಲಿ ಜನಸಾಮಾನ್ಯರಂತೆ ಓಡಾಡುತ್ತಾ ಮನೆಗಳ್ಳತನ ಮಾಡುತ್ತಿದ್ದ ಖದೀಮರಿಗೆ ರಾಯಚೂರು ಪೊಲೀಸರ ಕಾರ್ಯಾಚರಣೆ ಬಿಸಿ ಮುಟ್ಟಿಸಿದೆ. ಈ ಆರೋಪಿಗಳು ಇನ್ನೂ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿರುವ ಸಾಧ್ಯತೆ ಹಿನ್ನೆಲೆ ತನಿಖೆ ಮುಂದುವರೆದಿದೆ.




    #crime #karnataka
    Previous Articleಕಾರು–ಬೊಲೆರೊ ನಡುವೆ ಭೀಕರ ಡಿಕ್ಕಿ; ನಾಲ್ವರು ಯುವಕರು ಸ್ಥಳದಲ್ಲೇ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ
    Next Article ರಾಜ್ಯ ಪೊಲೀಸ್ ಇಲಾಖೆಯಲ್ಲಿ 31 ಐಪಿಎಸ್ ಅಧಿಕಾರಿಗಳ ವರ್ಗಾವಣೆ; ಮಂಗಳೂರು ಪಶ್ಚಿಮ ವಲಯದ ಐಜಿಪಿಯಾಗಿ ಎನ್. ಶಶಿಕುಮಾರ್ ನೇಮಕ

    Related Posts

    ಕಾರು–ಬೊಲೆರೊ ನಡುವೆ ಭೀಕರ ಡಿಕ್ಕಿ; ನಾಲ್ವರು ಯುವಕರು ಸ್ಥಳದಲ್ಲೇ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

    November 18, 2026

    7 ಜನರ ಹತ್ಯೆ ಪ್ರಕರಣ; ಕೊಲೆಯಿಂದ ಶವ ಸಾಗಾಟದವರೆಗೆ ಆರೋಪಿ ಇಂದುಶೇಖರ್‌ನಿಂದ ಕ್ರೈಂ ಸೀನ್ ರಿಕ್ರಿಯೇಟ್

    November 18, 2026

    ಉಡುಪಿ: ಪೊಲೀಸ್, ಸಿಬಿಐ, ಆರ್‌ಬಿಐ ತನಿಖೆಯ ನಾಟಕ; ವ್ಯಕ್ತಿಯಿಂದ ₹15.98 ಲಕ್ಷ ಲಪಟಾಯಿಸಿದ ಸೈಬರ್ ವಂಚಕರು

    November 18, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ರಾಜ್ಯ ಪೊಲೀಸ್ ಇಲಾಖೆಯಲ್ಲಿ 31 ಐಪಿಎಸ್ ಅಧಿಕಾರಿಗಳ ವರ್ಗಾವಣೆ; ಮಂಗಳೂರು ಪಶ್ಚಿಮ ವಲಯದ ಐಜಿಪಿಯಾಗಿ ಎನ್. ಶಶಿಕುಮಾರ್ ನೇಮಕ

    November 18, 2026

    ಬಾಡಿಗೆ ಮನೆ ಹುಡುಕುವ ಸೋಗಿನಲ್ಲಿ ಬೀಗ ಹಾಕಿದ ಮನೆಗಳೇ ಟಾರ್ಗೆಟ್; ಇಬ್ಬರು ಖತರ್ನಾಕ್ ಕಳ್ಳರು ಅಂದರ್

    November 18, 2026

    ಕಾರು–ಬೊಲೆರೊ ನಡುವೆ ಭೀಕರ ಡಿಕ್ಕಿ; ನಾಲ್ವರು ಯುವಕರು ಸ್ಥಳದಲ್ಲೇ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

    November 18, 2026

    7 ಜನರ ಹತ್ಯೆ ಪ್ರಕರಣ; ಕೊಲೆಯಿಂದ ಶವ ಸಾಗಾಟದವರೆಗೆ ಆರೋಪಿ ಇಂದುಶೇಖರ್‌ನಿಂದ ಕ್ರೈಂ ಸೀನ್ ರಿಕ್ರಿಯೇಟ್

    November 18, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಬಾಡಿಗೆ ಮನೆ ಹುಡುಕುವ ಸೋಗಿನಲ್ಲಿ ಬೀಗ ಹಾಕಿದ ಮನೆಗಳೇ ಟಾರ್ಗೆಟ್; ಇಬ್ಬರು ಖತರ್ನಾಕ್ ಕಳ್ಳರು ಅಂದರ್

    November 18, 2026

    ಕಾರು–ಬೊಲೆರೊ ನಡುವೆ ಭೀಕರ ಡಿಕ್ಕಿ; ನಾಲ್ವರು ಯುವಕರು ಸ್ಥಳದಲ್ಲೇ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

    November 18, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.