Close Menu
    What's Hot

    ‘ಏಕಪಕ್ಷೀಯ ನಿರ್ಧಾರ’ ಆರೋಪ; ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಸಮ್ಮತಿ

    September 29, 2026

    ಸಿನಿಮಾ ಯೋಜನೆಗಳ ಹೆಸರಿನಲ್ಲಿ ಹಣ ವರ್ಗಾವಣೆ ಆರೋಪ; ರಕುಲ್ ಪ್ರೀತ್ ಸಿಂಗ್‌ಗೆ ಸೇರಿದ ಸ್ಥಳಗಳಲ್ಲಿ ಐಟಿ ಪರಿಶೋಧನೆ

    September 29, 2026

    ಕಾರ್ಕಳದಲ್ಲಿ ಮನೆಗಾಗಿ ತಂದೆ–ಮಗನ ನಡುವೆ ಗಲಾಟೆ; ಕತ್ತಿಯಿಂದ ಕಡಿದು ಕೊಲೆಗೆ ಯತ್ನ

    September 29, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಹಾಸನ: ಅರಣ್ಯದಲ್ಲಿ ಥಾರ್ ಜೀಪ್‌ಗಳ ಆಫ್‌ರೋಡ್ ಸಾಹಸ; 7 ವಾಹನಗಳು ವಶಕ್ಕೆ
    ಅಪರಾಧ

    ಹಾಸನ: ಅರಣ್ಯದಲ್ಲಿ ಥಾರ್ ಜೀಪ್‌ಗಳ ಆಫ್‌ರೋಡ್ ಸಾಹಸ; 7 ವಾಹನಗಳು ವಶಕ್ಕೆ

    adminBy adminAugust 3, 2026No Comments1 Min Read

    ಹಾಸನ: ಬೆಂಗಳೂರಿನ ಪ್ರವಾಸಿಗರ ತಂಡದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಮಿಂಚಿನ ದಾಳಿ ನಡೆಸಿದ್ದು ಡೀಮ್ಡ್ ಫಾರೆಸ್ಟ್‌ (ಪರಿಭಾವಿತ ಅರಣ್ಯ) ಪ್ರದೇಶಕ್ಕೆ ಅಕ್ರಮವಾಗಿ ನುಗ್ಗಿ ಏಳು ಮಹೀಂದ್ರ ಥಾರ್‌ ಜೀಪ್‌ಗಳಲ್ಲಿ ಆಫ್ ರೋಡ್ ಸಾಹಸ ನಡೆಸುತ್ತಿದ್ದ ಜೀಪ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

    ಬೆಂಗಳೂರಿನಿಂದ ಆಗಮಿಸಿದ್ದ ಪ್ರವಾಸಿಗರ ತಂಡವು ಹೊಡಚಳ್ಳಿ ಗ್ರಾಮದ ಸರ್ವೆ ಸಂಖ್ಯೆ 20, 21 ಹಾಗೂ 28ರ ವ್ಯಾಪ್ತಿಯಲ್ಲಿ ಬರುವ ಪರಿಭಾವಿತ ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶ ಪಡೆದಿತ್ತು. ಅಲ್ಲಿ ಜೀಪ್‌ಗಳನ್ನು ಓಡಿಸುವ ಮೂಲಕ ಅರಣ್ಯ, ಪರಿಸರ ಹಾಗೂ ವನ್ಯಜೀವಿಗಳಿಗೆ ತೀವ್ರ ಹಾನಿ ಉಂಟುಮಾಡುತ್ತಿದ್ದರು.

    ಈ ಕುರಿತು ಖಚಿತ ಮಾಹಿತಿ ಲಭಿಸುತ್ತಿದ್ದಂತೆ ಸಕಲೇಶಪುರ ವಲಯ ಅರಣ್ಯಾಧಿಕಾರಿ ನೇತೃತ್ವದ ಅಧಿಕಾರಿಗಳಾದ ಮಂಜುನಾಥ್, ಅರ್ಜುನ್ ಹಾಗೂ ಮಹದೇವಪ್ಪ ಅವರ ತಂಡ ದಾಳಿ ನಡೆಸಿದೆ.ಅಕ್ರಮವಾಗಿ ಆಫ್ ರೋಡ್ ನಡೆಸುತ್ತಿದ್ದ ಏಳೂ ಮಹೀಂದ್ರ ಥಾರ್ ಜೀಪ್‌ಗಳನ್ನು ಜಪ್ತಿ ಮಾಡಲಾಗಿದ್ದು, ಪ್ರವಾಸಿಗರ ವಿರುದ್ಧ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

    ಏನಿದು ಡೀಮ್ಡ್‌ ಫಾರೆಸ್ಟ್‌?
    ಸರ್ಕಾರಿ ದಾಖಲೆಗಳಲ್ಲಿ ಅರಣ್ಯವೆಂದು ಅಧಿಕೃತವಾಗಿ ನಮೂದಾಗದಿದ್ದರೂ, ಕಾಡಿನ ಲಕ್ಷಣಗಳನ್ನು (ದಟ್ಟವಾದ ಮರಗಳು ಮತ್ತು ಸಸ್ಯವರ್ಗ) ಹೊಂದಿರುವ ಭೂಪ್ರದೇಶವನ್ನು ಡೀಮ್ಡ್‌ ಫಾರೆಸ್ಟ್‌ (ಪರಿಭಾವಿತ ಅರಣ್ಯ) ಎಂದು ಕರೆಯಲಾಗುತ್ತದೆ. ಭೂಮಿಯ ಮಾಲೀಕತ್ವ ಏನೇ ಇರಲಿ, ದಟ್ಟ ಮರಗಳನ್ನು ಹೊಂದಿರುವ ಪ್ರದೇಶಗಳನ್ನು ಈ ವರ್ಗಕ್ಕೆ ಸೇರಿಸಲಾಗುತ್ತದೆ.




    #crime #karnataka
    Previous Articleಪೆರುವಿನಲ್ಲಿ ಭೀಕರ ವಿಮಾನ ದುರಂತ; ಪ್ರವಾಸಿಗರು ಸೇರಿ 13 ಮಂದಿ ಸಾವು
    Next Article 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್; 30ಕ್ಕೂ ಹೆಚ್ಚು ವಾರಂಟ್ ಜಾರಿ

    Related Posts

    ‘ಏಕಪಕ್ಷೀಯ ನಿರ್ಧಾರ’ ಆರೋಪ; ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಸಮ್ಮತಿ

    September 29, 2026

    ಸಿನಿಮಾ ಯೋಜನೆಗಳ ಹೆಸರಿನಲ್ಲಿ ಹಣ ವರ್ಗಾವಣೆ ಆರೋಪ; ರಕುಲ್ ಪ್ರೀತ್ ಸಿಂಗ್‌ಗೆ ಸೇರಿದ ಸ್ಥಳಗಳಲ್ಲಿ ಐಟಿ ಪರಿಶೋಧನೆ

    September 29, 2026

    ಕಾರ್ಕಳದಲ್ಲಿ ಮನೆಗಾಗಿ ತಂದೆ–ಮಗನ ನಡುವೆ ಗಲಾಟೆ; ಕತ್ತಿಯಿಂದ ಕಡಿದು ಕೊಲೆಗೆ ಯತ್ನ

    September 29, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ‘ಏಕಪಕ್ಷೀಯ ನಿರ್ಧಾರ’ ಆರೋಪ; ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಸಮ್ಮತಿ

    September 29, 2026

    ಸಿನಿಮಾ ಯೋಜನೆಗಳ ಹೆಸರಿನಲ್ಲಿ ಹಣ ವರ್ಗಾವಣೆ ಆರೋಪ; ರಕುಲ್ ಪ್ರೀತ್ ಸಿಂಗ್‌ಗೆ ಸೇರಿದ ಸ್ಥಳಗಳಲ್ಲಿ ಐಟಿ ಪರಿಶೋಧನೆ

    September 29, 2026

    ಕಾರ್ಕಳದಲ್ಲಿ ಮನೆಗಾಗಿ ತಂದೆ–ಮಗನ ನಡುವೆ ಗಲಾಟೆ; ಕತ್ತಿಯಿಂದ ಕಡಿದು ಕೊಲೆಗೆ ಯತ್ನ

    September 29, 2026

    ಮಂಗಳೂರು ಪಾಲಿಕೆಯ ಎಡಿಬಿ ಸಾಲಕ್ಕೆ 24ಕ್ಕೂ ಹೆಚ್ಚು ನೋಟಿಸ್; ಒಂದೇ ಕಂತೂ ಪಾವತಿಸದೆ ಬಡ್ಡಿ ಸೇರಿ ₹1,375 ಕೋಟಿಗೆ ಏರಿಕೆ

    September 29, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಕುಂದಾಪುರ: “ಸ್ವಲ್ಪ ನಿಧಾನವಾಗಿ ಮಾತನಾಡಿ” ಎಂದಿದ್ದಕ್ಕೆ ಸೋಡಾ ಬಾಟಲಿಯಿಂದ ಹಲ್ಲೆ; ನಾಲ್ವರ ವಿರುದ್ಧ ಕೇಸ್

    September 29, 2026

    ಕೆಪಿಎಸ್‌ಸಿ ನೇಮಕಾತಿ ಅಕ್ರಮ; ಇಡಿ ದಾಳಿಯಲ್ಲಿ ಸಿಕ್ಕ ಡೈರಿಯಲ್ಲಿ ಲಕ್ಷಾಂತರ ಹಣದ ಲೆಕ್ಕ ಪತ್ತೆ

    September 28, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.