Close Menu
    What's Hot

    ಪಾರ್ಕ್ ಜಾಗದಲ್ಲೇ ಅಕ್ರಮ ನಿವೇಶನ ಸೃಷ್ಟಿಸಿ ಇ-ಸ್ವತ್ತು ವಿತರಣೆ ಆರೋಪ; ಘಂಟಂವಾರಿಪಲ್ಲಿ ಪಿಡಿಒ ಅಮಾನತು

    November 29, 2026

    ಕಾರಿಗೆ ಡಿಕ್ಕಿ ಹೊಡೆದು ಗಲಾಟೆ ಸೃಷ್ಟಿಸಿ ಚಿನ್ನದ ಸರ ದೋಚಿದ ಗ್ಯಾಂಗ್; ಎಂಟು ಪ್ರಕರಣಗಳ ಆರೋಪಿಯೂ ಸೇರಿ ನಾಲ್ವರು ಅಂದರ್

    November 29, 2026

    ವಿಮಾನ ಇಳಿಯುವ ಕ್ಷಣದಲ್ಲೇ 5.2 ತೀವ್ರತೆಯ ಭೂಕಂಪ; ಲ್ಯಾಂಡಿಂಗ್‌ಗೆ ಬಂದಿದ್ದ ವಿಮಾನ ವಾಪಸ್ ಮೇಲಕ್ಕೆ

    November 29, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಕರ್ನಾಟಕ»ಮದ್ಯದ ಅಮಲಿನಲ್ಲಿ ಏರ್ ಗನ್‌ನಿಂದ ಫೈರಿಂಗ್; ಟೆಕ್ಕಿಯ ಅಟ್ಟಹಾಸಕ್ಕೆ ಬೆಚ್ಚಿಬಿದ್ದ ನಿವಾಸಿಗಳು
    ಕರ್ನಾಟಕ

    ಮದ್ಯದ ಅಮಲಿನಲ್ಲಿ ಏರ್ ಗನ್‌ನಿಂದ ಫೈರಿಂಗ್; ಟೆಕ್ಕಿಯ ಅಟ್ಟಹಾಸಕ್ಕೆ ಬೆಚ್ಚಿಬಿದ್ದ ನಿವಾಸಿಗಳು

    adminBy adminAugust 6, 2026No Comments2 Mins Read

    ಆನೇಕಲ್: ಕುಡಿದ ಅಮಲಿನಲ್ಲಿ ಓರ್ವ ಟೆಕ್ಕಿ ತನ್ನ ಪ್ಲಾಟ್‌ನ ಬಾಲ್ಕನಿಯಿಂದ ಸೆಕ್ಯುರಿಟಿ ಗಾರ್ಡ್‌ಗಳು ಹಾಗೂ ಕಾರುಗಳ ಮೇಲೆ ಏರ್ ಗನ್‌ನಿಂದ ಫೈರಿಂಗ್  ಮಾಡಿರುವ ಘಟನೆ ಆನೇಕಲ್ ತಾಲೂಕಿನ ಬಂಡಾಪುರ ಸಮೀಪದ ಸಿಪಾನಿ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಉತ್ತರ ಪ್ರದೇಶದ ಲಕ್ನೋ ಮೂಲದ ಅನುರಾಗ್ ತಿವಾರಿ (40) ಫೈರಿಂಗ್ ಮಾಡಿದ ವ್ಯಕ್ತಿ. ಅನುರಾಗ್ ತಿವಾರಿ ಐಟಿ ಉದ್ಯೋಗಿ ಆಗಿದ್ದು, ಸದ್ಯ ಪೊಲೀಸರು ಬಂಧಿಸಿದ್ದಾರೆ.

    ನಡೆದಿದ್ದೇನು?

    ಅನುರಾಗ್ ತಿವಾರಿ ವೈಟ್‌ಫೀಲ್ಡ್‌ನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಎಂಟು ತಿಂಗಳಿನಿಂದ ಸಿಪಾನಿ ಅಪಾರ್ಟ್‌ಮೆಂಟ್‌ನ ಬ್ಲಿಸ್-1 ವಿಭಾಗದ B304 ಪ್ಲಾಟ್‌ನಲ್ಲಿ ವಾಸವಿದ್ದ. ಕಳೆದ ರಾತ್ರಿ ಕಂಠಪೂರ್ತಿ ಮದ್ಯ ಸೇವಿಸಿದ್ದ ಅನುರಾಗ್, ತನ್ನ ಪ್ಲಾಟ್ ಒಳಗೆ ಫೋನ್‌ನಲ್ಲಿ ಮಾತನಾಡುತ್ತಾ ಜೋರಾಗಿ ಕೂಗಾಡುತ್ತಿದ್ದ.

    ಬಳಿಕ ಮಧ್ಯರಾತ್ರಿ ಸುಮಾರು 2:30ರ ಸುಮಾರಿಗೆ ಬಾಲ್ಕನಿಗೆ ಬಂದು ಏರ್ ಗನ್‌ನಿಂದ ಕೆಳಗಿದ್ದ ಕಾರುಗಳು ಹಾಗೂ ಪಾರ್ಕಿಂಗ್ ಶೇಡ್ ಮೇಲೆ ಶೂಟ್ ಮಾಡಲು ಪ್ರಾರಂಭಿಸಿದ್ದಾನೆ. ಫೈರಿಂಗ್ ಶಬ್ದ ಕೇಳುತ್ತಿದ್ದಂತೆ ಸ್ಥಳಕ್ಕೆ ಬಂದ ಸೆಕ್ಯುರಿಟಿ ಗಾರ್ಡ್‌ಗಳ ಮೇಲೆಯೂ ಈತ ಗನ್‌ನಿಂದ ಶೂಟ್ ಮಾಡಿದ್ದಾನೆ. ಸುಮಾರು 45 ನಿಮಿಷಗಳ ಕಾಲ ಈತ ಸತತವಾಗಿ ಫೈರಿಂಗ್ ನಡೆಸಿ ಆತಂಕ ಸೃಷ್ಟಿಸಿದ್ದ.

    ಕಾರು ಮಾಲೀಕ ಬಿದ್ಯುತ್ ಹೇಳಿದ್ದಿಷ್ಟು 

    ಇನ್ನು ಘಟನೆ ಕುರಿತಾಗಿ ಕಾರು ಮಾಲೀಕ ಬಿದ್ಯುತ್ ಎಂಬುವವರು ಪ್ರತಿಕ್ರಿಯಿಸಿದ್ದು, ‘ಕಳೆದ ರಾತ್ರಿ ಕಾರಿನ ಮೇಲೆ ಏರ್ ಫೈರಿಂಗ್ ಆಗಿದೆ. ಮಧ್ಯರಾತ್ರಿ 2.30 ರ ಸುಮಾರಿಗೆ ಈ ಘಟನೆ ನಡೆದಿದೆ. ಸೆಕ್ಯುರಿಟಿ ಮೇಲೆ ಕೂಡ ಫೈರ್ ಮಾಡಿದ್ದಾರೆ. ಯಾರಿಗೂ ಏನು ಆಗಿಲ್ಲ. ಆದರೆ ಪಾರ್ಕಿಂಗ್​​ನಲ್ಲಿದ್ದ ಕಾರಿನ ಗ್ಲಾಸ್ ಪುಡಿಯಾಗಿವೆ. ಅವರು ಏಕೆ ಈ ರೀತಿ ಮಾಡಿದ್ದಾರೆ ಗೊತ್ತಿಲ್ಲ. ಅವರಿಗೂ ನಮಗೂ ಯಾವುದೇ ಪರಿಚಯವಿಲ್ಲ. ಕುಡಿದು ಈ ರೀತಿ ಮಾಡಿರಬೇಕು. ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ’ ಎಂದರು.

    ಸ್ಥಳಕ್ಕೆ ಸೋಕೋ ತಂಡ ಭೇಟಿ

    ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸೂರ್ಯನಗರ ಠಾಣೆ ಪೊಲೀಸರು ಆರೋಪಿ ಅನುರಾಗ್ ತಿವಾರಿಯನ್ನು ವಶಕ್ಕೆ ಪಡೆದಿದ್ದಾರೆ. ಸೋಕೋ ತಂಡವು ಘಟನಾ ಸ್ಥಳ ಹಾಗೂ ಆರೋಪಿಯ ಪ್ಲಾಟ್‌ಗೆ ಭೇಟಿ ನೀಡಿ, ಕಾರಿನ ಬಳಿ ಸಿಕ್ಕ ಏರ್ ಗನ್ ಬಾಲ್ಸ್‌ಗಳನ್ನು ಒಳಗೊಂಡಂತೆ ಪ್ರಮುಖ ಸಾಕ್ಷ್ಯಾಧಾರಗಳನ್ನು ಕಲೆಹಾಕಿದೆ. ಕೃತ್ಯಕ್ಕೆ ಬಳಸಿದ್ದ ಏರ್ ಗನ್ ಹಾಗೂ ಬಾಲ್ಸ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಿದ್ದಾರೆ.




    #karnataka
    Previous Articleಸೋಶಿಯಲ್ ಮೀಡಿಯಾ ಸ್ನೇಹದ ಬಲೆ; 16 ವರ್ಷದ ಬಾಲಕಿ ಅಪಹರಣ, ಅತ್ಯಾಚಾರ ಆರೋಪ
    Next Article 2013ರ ಪ್ರಕರಣಕ್ಕೆ 13 ವರ್ಷಗಳ ಬಳಿಕ ತೀರ್ಪು; ತೇಜ್‌ಪಾಲ್ ದೋಷಿ ಎಂದು ಘೋಷಣೆ

    Related Posts

    ಪಾರ್ಕ್ ಜಾಗದಲ್ಲೇ ಅಕ್ರಮ ನಿವೇಶನ ಸೃಷ್ಟಿಸಿ ಇ-ಸ್ವತ್ತು ವಿತರಣೆ ಆರೋಪ; ಘಂಟಂವಾರಿಪಲ್ಲಿ ಪಿಡಿಒ ಅಮಾನತು

    November 29, 2026

    ಕಾರಿಗೆ ಡಿಕ್ಕಿ ಹೊಡೆದು ಗಲಾಟೆ ಸೃಷ್ಟಿಸಿ ಚಿನ್ನದ ಸರ ದೋಚಿದ ಗ್ಯಾಂಗ್; ಎಂಟು ಪ್ರಕರಣಗಳ ಆರೋಪಿಯೂ ಸೇರಿ ನಾಲ್ವರು ಅಂದರ್

    November 29, 2026

    ಮೊದಲು ₹5,146 ಕಳುಹಿಸಿ ರೈತನಿಗೆ ಲಾಭದ ಆಸೆ ತೋರಿಸಿದ ಸೈಬರ್ ವಂಚಕರು; ಕೊನೆಗೆ ₹13.78 ಲಕ್ಷ ದೋಚಿ ಎಸ್ಕೇಪ್

    November 28, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಪಾರ್ಕ್ ಜಾಗದಲ್ಲೇ ಅಕ್ರಮ ನಿವೇಶನ ಸೃಷ್ಟಿಸಿ ಇ-ಸ್ವತ್ತು ವಿತರಣೆ ಆರೋಪ; ಘಂಟಂವಾರಿಪಲ್ಲಿ ಪಿಡಿಒ ಅಮಾನತು

    November 29, 2026

    ಕಾರಿಗೆ ಡಿಕ್ಕಿ ಹೊಡೆದು ಗಲಾಟೆ ಸೃಷ್ಟಿಸಿ ಚಿನ್ನದ ಸರ ದೋಚಿದ ಗ್ಯಾಂಗ್; ಎಂಟು ಪ್ರಕರಣಗಳ ಆರೋಪಿಯೂ ಸೇರಿ ನಾಲ್ವರು ಅಂದರ್

    November 29, 2026

    ವಿಮಾನ ಇಳಿಯುವ ಕ್ಷಣದಲ್ಲೇ 5.2 ತೀವ್ರತೆಯ ಭೂಕಂಪ; ಲ್ಯಾಂಡಿಂಗ್‌ಗೆ ಬಂದಿದ್ದ ವಿಮಾನ ವಾಪಸ್ ಮೇಲಕ್ಕೆ

    November 29, 2026

    ಉಡುಪಿ: ಆಟೋಗೆ ಡಿಕ್ಕಿ ಹೊಡೆದು ಚರಂಡಿಗೆ ಉರುಳಿದ ಕಾರು; ಕ್ಷಣಾರ್ಧದಲ್ಲಿ ಬೆಂಕಿಗಾಹುತಿ, ಮೂವರಿಗೆ ಗಂಭೀರ ಗಾಯ

    November 28, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಪಾರ್ಕ್ ಜಾಗದಲ್ಲೇ ಅಕ್ರಮ ನಿವೇಶನ ಸೃಷ್ಟಿಸಿ ಇ-ಸ್ವತ್ತು ವಿತರಣೆ ಆರೋಪ; ಘಂಟಂವಾರಿಪಲ್ಲಿ ಪಿಡಿಒ ಅಮಾನತು

    November 29, 2026

    ಕಾರಿಗೆ ಡಿಕ್ಕಿ ಹೊಡೆದು ಗಲಾಟೆ ಸೃಷ್ಟಿಸಿ ಚಿನ್ನದ ಸರ ದೋಚಿದ ಗ್ಯಾಂಗ್; ಎಂಟು ಪ್ರಕರಣಗಳ ಆರೋಪಿಯೂ ಸೇರಿ ನಾಲ್ವರು ಅಂದರ್

    November 29, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.