Close Menu
    What's Hot

    ಪಾರ್ಕ್ ಜಾಗದಲ್ಲೇ ಅಕ್ರಮ ನಿವೇಶನ ಸೃಷ್ಟಿಸಿ ಇ-ಸ್ವತ್ತು ವಿತರಣೆ ಆರೋಪ; ಘಂಟಂವಾರಿಪಲ್ಲಿ ಪಿಡಿಒ ಅಮಾನತು

    November 29, 2026

    ಕಾರಿಗೆ ಡಿಕ್ಕಿ ಹೊಡೆದು ಗಲಾಟೆ ಸೃಷ್ಟಿಸಿ ಚಿನ್ನದ ಸರ ದೋಚಿದ ಗ್ಯಾಂಗ್; ಎಂಟು ಪ್ರಕರಣಗಳ ಆರೋಪಿಯೂ ಸೇರಿ ನಾಲ್ವರು ಅಂದರ್

    November 29, 2026

    ವಿಮಾನ ಇಳಿಯುವ ಕ್ಷಣದಲ್ಲೇ 5.2 ತೀವ್ರತೆಯ ಭೂಕಂಪ; ಲ್ಯಾಂಡಿಂಗ್‌ಗೆ ಬಂದಿದ್ದ ವಿಮಾನ ವಾಪಸ್ ಮೇಲಕ್ಕೆ

    November 29, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಂತರಾಷ್ಟ್ರೀಯ»ಭಾರತೀಯ ಮೂಲದ ಕುಚಿಪುಡಿ ನರ್ತಕಿ ಸಾಧನಾ ವಿರುದ್ಧದ ವೀಸಾ ವಂಚನೆ ಆರೋಪ ಸುಳ್ಳು..! ಅಮೆರಿಕದ ಅಧಿಕಾರಿಯಿಂದ ಸ್ಪಷ್ಟನೆ
    ಅಂತರಾಷ್ಟ್ರೀಯ

    ಭಾರತೀಯ ಮೂಲದ ಕುಚಿಪುಡಿ ನರ್ತಕಿ ಸಾಧನಾ ವಿರುದ್ಧದ ವೀಸಾ ವಂಚನೆ ಆರೋಪ ಸುಳ್ಳು..! ಅಮೆರಿಕದ ಅಧಿಕಾರಿಯಿಂದ ಸ್ಪಷ್ಟನೆ

    adminBy adminAugust 8, 2026No Comments2 Mins Read

    ವಾಷಿಂಗ್ಟನ್: ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ ಬಯೋಮೆಡಿಕಲ್ ಎಂಜಿನಿಯರ್ ಹಾಗೂ ಕುಚಿಪುಡಿ ನರ್ತಕಿ ಸಾಧನಾ ಗೊಲ್ಲಪೂಡಿ ಎಂಬುವರ ವಿರುದ್ಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (ಟ್ವಿಟರ್) ವೀಸಾ ವಂಚನೆ ನಡೆಸಿದ್ದಾರೆ ಎಂದು ಮಾಡಲಾಗಿದ್ದ ಆರೋಪ ಭಾರೀ ಸದ್ದು ಮಾಡಿತ್ತು. ಆದರೆ, ಇದೀಗ ಅಮೆರಿಕದ ಹೂಸ್ಟನ್ ನಗರದ ಯುಎಸ್ ಅಟಾರ್ನಿ ಏರಾನ್ ರೈಟ್ಜ್ ಸ್ವತಃ ಸ್ಪಷ್ಟನೆ ನೀಡಿದ್ದು, “ಸಾಧನಾ ಅವರು ಅಮೆರಿಕದ ಅಧಿಕೃತ ಪೌರತ್ವ ಹೊಂದಿರುವ ಪ್ರಜೆ ” ಎಂದು ತಿಳಿಸುವ ಮೂಲಕ ಸುಳ್ಳು ಆರೋಪಗಳಿಗೆ ತೆರೆ ಎಳೆದಿದ್ದಾರೆ. ಘಟನೆಯಿಂದ ತೀವ್ರ ಮನನೊಂದಿರುವ ಸಾಧನಾ ಗೊಲ್ಲಪೂಡಿ ಅವರು ತಮ್ಮ ಬಗ್ಗೆ ಸುಳ್ಳು ಮಾಹಿತಿ ಹರಡುತ್ತಿರುವ ಖಾತೆಗಳ ವಿರುದ್ಧ ದೂರು ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

    ಘಟನೆಯ ಹಿನ್ನೆಲೆ:

    ಜುಲೈ 30 ರಂದು ‘CyberGreen09’ ಎಂಬ ಎಕ್ಸ್ ಖಾತೆಯು ಸಾಧನಾ ಅವರ ಕುಚಿಪುಡಿ ನೃತ್ಯದ ವೀಡಿಯೊವನ್ನು ಹಂಚಿಕೊಂಡು, “2014 ರಿಂದ ಇವರು F-1 ವಿದ್ಯಾರ್ಥಿ ವೀಸಾ ಕಾಯ್ದುಕೊಳ್ಳಲು ಒಂದಾದ ಮೇಲೊಂದರಂತೆ ಕೋರ್ಸ್‌ಗಳಿಗೆ ಸೇರುತ್ತಿದ್ದಾರೆ. ವೀಸಾ ನಿಯಮಗಳನ್ನು ಉಲ್ಲಂಘಿಸಿ ನೃತ್ಯ ಪ್ರದರ್ಶನ ಹಾಗೂ ಟ್ಯೂಷನ್ ಮೂಲಕ ಹಣ ಗಳಿಸುತ್ತಿದ್ದಾರೆ” ಎಂದು ಆರೋಪಿಸಿ #visafraud ಹ್ಯಾಷ್‌ಟ್ಯಾಗ್ ಬಳಸಿತ್ತು. ಈ ಪೋಸ್ಟ್ ಇಂಟರ್ನೆಟ್‌ನಲ್ಲಿ ತೀವ್ರವಾಗಿ ವೈರಲ್ ಆಗಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

    ಆಗಸ್ಟ್ 4 ರಂದು ಈ ಪೋಸ್ಟ್‌ಗೆ ಅಧಿಕೃತವಾಗಿ ಪ್ರತಿಕ್ರಿಯಿಸಿದ ಹೂಸ್ಟನ್ ನಗರದ ಯುಎಸ್ ಅಟಾರ್ನಿ ಏರಾನ್ ರೈಟ್ಜ್, “ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು. ನಮ್ಮ ಕಚೇರಿ ಈ ಬಗ್ಗೆ ತನಿಖೆ ನಡೆಸಿದೆ. ಸಾಧನಾ ಅವರು ವಿದ್ಯಾರ್ಥಿ ವೀಸಾದಲ್ಲಿ ಇಲ್ಲ, ಅವರು ಅಮೆರಿಕದ ಪೌರತ್ವ ಹೊಂದಿದ ಕಾನೂನುಬದ್ಧ ಪ್ರಜೆಯಾಗಿದ್ದಾರೆ. ವೀಸಾ ವಂಚನೆಯನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ, ಆದರೆ ಈ ಪ್ರಕರಣದಲ್ಲಿ ಯಾವುದೇ ವಂಚನೆ ನಡೆದಿಲ್ಲ” ಎಂದು ಸ್ಪಷ್ಟಪಡಿಸಿದರು.

    ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಆಗಸ್ಟ್ 6 ರಂದು ಬರೆದುಕೊಂಡಿರುವ ಸಾಧನಾ, “ಕಳೆದ ಕೆಲವು ದಿನಗಳು ನನಗೂ ಮತ್ತು ನನ್ನ ಕುಟುಂಬಕ್ಕೂ ತೀವ್ರ ಕಷ್ಟಕರವಾಗಿದ್ದವು. ನನ್ನ ಅನುಮತಿಯಿಲ್ಲದೆ ನನ್ನ ನೃತ್ಯದ ವೀಡಿಯೊಗಳನ್ನು ಬಳಸಿ ನನ್ನ ಬಗ್ಗೆ ಸುಳ್ಳು ಮತ್ತು ದಾರಿತಪ್ಪಿಸುವ ಮಾಹಿತಿಯನ್ನು ಹರಡಲಾಗಿದೆ. ಇಂತಹ ಪೋಸ್ಟ್‌ಗಳು ಕಂಡುಬಂದರೆ ತಕ್ಷಣವೇ ‘ಮಿಸ್‌ಇನ್ಫರ್ಮೇಷನ್’ ಎಂದು ರಿಪೋರ್ಟ್ ಮಾಡಿ” ಎಂದು ಮನವಿ ಮಾಡಿದ್ದಾರೆ.




    #national International
    Previous Articleಶ್ರೀಮಂತ ದೇಶವಾಗುವ ಮುನ್ನವೇ ಭಾರತಕ್ಕೆ ವೃದ್ಧಾಪ್ಯ: ಭಾರತದ ಜನಸಂಖ್ಯೆಯಲ್ಲಿ ಮಹತ್ವದ ಬದಲಾವಣೆ
    Next Article ಬಾಡಿಗೆ ಮನೆ ನೋಡಲು ಬಂದವರಂತೆ ನಟನೆ; ಒಂಟಿ ಮಹಿಳೆಗೆ ಟಾರ್ಗೆಟ್-₹3 ಲಕ್ಷ ಚಿನ್ನ ದೋಚಿದ್ದ ಇಬ್ಬರು ಅರೆಸ್ಟ್

    Related Posts

    ವಿಮಾನ ಇಳಿಯುವ ಕ್ಷಣದಲ್ಲೇ 5.2 ತೀವ್ರತೆಯ ಭೂಕಂಪ; ಲ್ಯಾಂಡಿಂಗ್‌ಗೆ ಬಂದಿದ್ದ ವಿಮಾನ ವಾಪಸ್ ಮೇಲಕ್ಕೆ

    November 29, 2026

    ಸುಪ್ರೀಂ ಕೋರ್ಟ್ ಆದೇಶದಂತೆ ದೀಪ ಬೆಳಗಿಸಲು ಸಿದ್ಧತೆ; ದರ್ಗಾದಲ್ಲಿ ಮುಸ್ಲಿಂ ಭಕ್ತರಿಂದ ವಿಶೇಷ ಪ್ರಾರ್ಥನೆ, ದೇವಸ್ಥಾನ–ದರ್ಗಾಕ್ಕೆ ಸಿಆರ್‌ಪಿಎಫ್ ಬಿಗಿ ಭದ್ರತೆ

    November 28, 2026

    20 ವರ್ಷಗಳ ಹಿಂದಿನ ಮನೋಹರ್ ಶೆಟ್ಟಿ ಕೊಲೆ ಪ್ರಕರಣ; ದುಬೈನಿಂದ ಮೋಸ್ಟ್ ವಾಂಟೆಡ್ ಆರೋಪಿ ರಾಜೇಶ್ ಆಚಾರ್ಯ ಗಡಿಪಾರು

    November 28, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಪಾರ್ಕ್ ಜಾಗದಲ್ಲೇ ಅಕ್ರಮ ನಿವೇಶನ ಸೃಷ್ಟಿಸಿ ಇ-ಸ್ವತ್ತು ವಿತರಣೆ ಆರೋಪ; ಘಂಟಂವಾರಿಪಲ್ಲಿ ಪಿಡಿಒ ಅಮಾನತು

    November 29, 2026

    ಕಾರಿಗೆ ಡಿಕ್ಕಿ ಹೊಡೆದು ಗಲಾಟೆ ಸೃಷ್ಟಿಸಿ ಚಿನ್ನದ ಸರ ದೋಚಿದ ಗ್ಯಾಂಗ್; ಎಂಟು ಪ್ರಕರಣಗಳ ಆರೋಪಿಯೂ ಸೇರಿ ನಾಲ್ವರು ಅಂದರ್

    November 29, 2026

    ವಿಮಾನ ಇಳಿಯುವ ಕ್ಷಣದಲ್ಲೇ 5.2 ತೀವ್ರತೆಯ ಭೂಕಂಪ; ಲ್ಯಾಂಡಿಂಗ್‌ಗೆ ಬಂದಿದ್ದ ವಿಮಾನ ವಾಪಸ್ ಮೇಲಕ್ಕೆ

    November 29, 2026

    ಉಡುಪಿ: ಆಟೋಗೆ ಡಿಕ್ಕಿ ಹೊಡೆದು ಚರಂಡಿಗೆ ಉರುಳಿದ ಕಾರು; ಕ್ಷಣಾರ್ಧದಲ್ಲಿ ಬೆಂಕಿಗಾಹುತಿ, ಮೂವರಿಗೆ ಗಂಭೀರ ಗಾಯ

    November 28, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಪಾರ್ಕ್ ಜಾಗದಲ್ಲೇ ಅಕ್ರಮ ನಿವೇಶನ ಸೃಷ್ಟಿಸಿ ಇ-ಸ್ವತ್ತು ವಿತರಣೆ ಆರೋಪ; ಘಂಟಂವಾರಿಪಲ್ಲಿ ಪಿಡಿಒ ಅಮಾನತು

    November 29, 2026

    ಕಾರಿಗೆ ಡಿಕ್ಕಿ ಹೊಡೆದು ಗಲಾಟೆ ಸೃಷ್ಟಿಸಿ ಚಿನ್ನದ ಸರ ದೋಚಿದ ಗ್ಯಾಂಗ್; ಎಂಟು ಪ್ರಕರಣಗಳ ಆರೋಪಿಯೂ ಸೇರಿ ನಾಲ್ವರು ಅಂದರ್

    November 29, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.