Close Menu
    What's Hot

    ‘ಏಕಪಕ್ಷೀಯ ನಿರ್ಧಾರ’ ಆರೋಪ; ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಸಮ್ಮತಿ

    September 29, 2026

    ಸಿನಿಮಾ ಯೋಜನೆಗಳ ಹೆಸರಿನಲ್ಲಿ ಹಣ ವರ್ಗಾವಣೆ ಆರೋಪ; ರಕುಲ್ ಪ್ರೀತ್ ಸಿಂಗ್‌ಗೆ ಸೇರಿದ ಸ್ಥಳಗಳಲ್ಲಿ ಐಟಿ ಪರಿಶೋಧನೆ

    September 29, 2026

    ಕಾರ್ಕಳದಲ್ಲಿ ಮನೆಗಾಗಿ ತಂದೆ–ಮಗನ ನಡುವೆ ಗಲಾಟೆ; ಕತ್ತಿಯಿಂದ ಕಡಿದು ಕೊಲೆಗೆ ಯತ್ನ

    September 29, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ರಾಷ್ಟ್ರೀಯ»ಶ್ರೀಮಂತ ದೇಶವಾಗುವ ಮುನ್ನವೇ ಭಾರತಕ್ಕೆ ವೃದ್ಧಾಪ್ಯ: ಭಾರತದ ಜನಸಂಖ್ಯೆಯಲ್ಲಿ ಮಹತ್ವದ ಬದಲಾವಣೆ
    ರಾಷ್ಟ್ರೀಯ

    ಶ್ರೀಮಂತ ದೇಶವಾಗುವ ಮುನ್ನವೇ ಭಾರತಕ್ಕೆ ವೃದ್ಧಾಪ್ಯ: ಭಾರತದ ಜನಸಂಖ್ಯೆಯಲ್ಲಿ ಮಹತ್ವದ ಬದಲಾವಣೆ

    adminBy adminAugust 8, 2026No Comments1 Min Read

    ನವದೆಹಲಿ: ಭಾರತದ ಆರ್ಥಿಕತೆ ಸದ್ಯ ಇತರ ದೇಶಗಳಿಗಿಂತ ಹೆಚ್ಚಿನ ವೇಗದಲ್ಲಿ ಬೆಳೆಯುತ್ತಿದೆ. 2047ಕ್ಕೆ ಮುಂದುವರಿದ ದೇಶವಾಗುವ ಕನಸು ನನಸಾಗುತ್ತದೋ ಇಲ್ಲವೋ, ಆದರೆ ಭಾರತವು ಅಷ್ಟರೊಳಗೆ ವೃದ್ಧಾಪ್ಯಕ್ಕೆ ಕಾಲಿಟ್ಟಿರಬಹುದು ಎಂದು ಹೇಳಲಾಗುತ್ತಿದೆ. ಇತ್ತೀಚಿನ ಅಧ್ಯಯನವೊಂದರ ಪ್ರಕಾರ, 2050ರ ವೇಳೆಗೆ ದೇಶದ ಸುಮಾರು 70% ಹಿರಿಯ ನಾಗರಿಕರು ಗ್ರಾಮೀಣ ಭಾಗದಲ್ಲೇ ವಾಸಿಸಲಿದ್ದಾರೆ. ಪ್ರತೀ ಐವರಲ್ಲಿ ಒಬ್ಬರು ಹಿರಿಯ ನಾಗರಿಕರಿರಲಿದ್ದಾರಂತೆ.

    ಟ್ರಾನ್ಸ್​ಫಾರ್ಮ್ ರೂರಲ್ ಇಂಡಿಯಾ ಶುಕ್ರವಾರ ಬಿಡುಗಡೆ ಮಾಡಿದ ಶ್ವೇತಪತ್ರದಲ್ಲಿ ಈ ಕೆಲ ಕುತೂಹಲಕಾರಿಯಾದ ಮತ್ತು ಆಘಾತಕಾರಿ ಎನಿಸುವ ಸಂಗತಿಗಳಿವೆ. 2050ರ ವೇಳೆಗೆ ಭಾರತದಲ್ಲಿ 34.7 ಕೋಟಿ ಜನರು ವೃದ್ಧರಾಗಿರುತ್ತಾರೆ. ಅಂದರೆ, ಅವರ ವಯಸ್ಸು 60 ವರ್ಷ ದಾಟಿರುತ್ತದೆ. ಅಂದಿನ ಜನಸಂಖ್ಯೆಯ ಶೇ. 20ರಷ್ಟು ಮಂದಿ ವೃದ್ಧರಿರುತ್ತಾರೆ. ಈ ವೃದ್ಧರಲ್ಲಿ ಬಹುತೇಕ ಮುಕ್ಕಾಲು ಭಾಗದಷ್ಟು ಜನರು ಗ್ರಾಮೀಣ ಭಾಗದಲ್ಲಿರುತ್ತಾರೆ ಎಂದು ಈ ವರದಿ ಹೇಳುತ್ತದೆ.

    ಧನಿಕರಾಗುವ ಮೊದಲೇ ವೃದ್ಧಾಪ್ಯ

    ಅನೇಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತಮ್ಮ ಜನಸಂಖ್ಯೆ ವಯಸ್ಸಾಗುವ ಮುನ್ನವೇ ಆರ್ಥಿಕವಾಗಿ ಸಮೃದ್ಧಿ ಸಾಧಿಸಿದ್ದವು. ಆದರೆ ಭಾರತವು ಕಡಿಮೆ ಆದಾಯದ ಹಂತದಲ್ಲಿದ್ದಾಗಲೇ ಈ ಜನಸಂಖ್ಯಾ ಬದಲಾವಣೆಗೆ ಒಳಪಡುತ್ತಿದೆ. ಭಾರತದ ಆರ್ಥಿಕತೆ ಇಷ್ಟೇ ವೇಗದಲ್ಲಿ ಸಾಗಿದರೆ ಮುಂದಿನ ಎರಡು ದಶಕದಲ್ಲಿ ದೇಶವು ಮೇಲ್ಮಧ್ಯಮ ಹಂತಕ್ಕೆ ಏರಬಹುದು ಅಷ್ಟೇ ಹೊರತು ಶ್ರೀಮಂತ ದೇಶಗಳ ತಲಾದಾಯ ಮಟ್ಟ ತಲುಪಲು ಸಾಧ್ಯವಾಗದೇ ಹೋಗಬಹುದು.

    ಕುಟುಂಬ ವ್ಯವಸ್ಥೆ ಮತ್ತು ವಲಸೆ ಪ್ರಭಾವ

    ಗ್ರಾಮೀಣ ಭಾಗಗಳಿಂದ ಯುವಕರು ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಹೋಗುತ್ತಿರುವುದು ಮತ್ತು ಅವಿಭಕ್ತ ಕುಟುಂಬಗಳು ಸಣ್ಣ ಕುಟುಂಬಗಳಾಗಿ ಬದಲಾಗುತ್ತಿರುವುದರಿಂದ, ಹಿರಿಯರಿಗೆ ಸಾಂಪ್ರದಾಯಿಕವಾಗಿ ಸಿಗುತ್ತಿದ್ದ ಕುಟುಂಬದ ಆರೈಕೆ ಮತ್ತು ಬೆಂಬಲ ಕಡಿಮೆಯಾಗುತ್ತಿದೆ ಎಂಬ ಸಂಗತಿಯನ್ನು ಟಿಆರ್​ಐ ಅಧ್ಯಯನ ವರದಿಯಲ್ಲಿ ಗುರುತಿಸಲಾಗಿದೆ.

    ಆರೋಗ್ಯ ರಕ್ಷಣೆಯ ಅಗತ್ಯತೆ

    ಅಸಾಂಕ್ರಾಮಿಕ ರೋಗಗಳು  ಹೆಚ್ಚಾಗುತ್ತಿದ್ದು, ಗ್ರಾಮೀಣ ಮಟ್ಟದಲ್ಲಿ ಹಿರಿಯರ ಆರೋಗ್ಯ ತಪಾಸಣೆ ಮತ್ತು ದಿನನಿತ್ಯದ ಆರೈಕೆಗೆ ಅನುಕೂಲವಾಗುವಂತೆ ಗ್ರಾಮೀಣ ಸಂಸ್ಥೆಗಳನ್ನು ಒಳಗೊಂಡ ‘ಸಮುದಾಯ ಆಧಾರಿತ ಆರೈಕೆ ಮಾದರಿ’ ರೂಪಿಸುವುದು ಅಗತ್ಯವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

     




    #nation #national
    Previous Articleಡೇವಿಡ್ ಡಿಸೋಜಾ ಹತ್ಯೆ ಹಿಂದೆ ಉತ್ತರ ಭಾರತದ ಸುಪಾರಿ ಕಿಲ್ಲರ್‌ಗಳು..! ಮೂವರು ಆರೋಪಿಗಳ ಬಂಧನ
    Next Article ಭಾರತೀಯ ಮೂಲದ ಕುಚಿಪುಡಿ ನರ್ತಕಿ ಸಾಧನಾ ವಿರುದ್ಧದ ವೀಸಾ ವಂಚನೆ ಆರೋಪ ಸುಳ್ಳು..! ಅಮೆರಿಕದ ಅಧಿಕಾರಿಯಿಂದ ಸ್ಪಷ್ಟನೆ

    Related Posts

    ‘ಏಕಪಕ್ಷೀಯ ನಿರ್ಧಾರ’ ಆರೋಪ; ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಸಮ್ಮತಿ

    September 29, 2026

    ಸಿನಿಮಾ ಯೋಜನೆಗಳ ಹೆಸರಿನಲ್ಲಿ ಹಣ ವರ್ಗಾವಣೆ ಆರೋಪ; ರಕುಲ್ ಪ್ರೀತ್ ಸಿಂಗ್‌ಗೆ ಸೇರಿದ ಸ್ಥಳಗಳಲ್ಲಿ ಐಟಿ ಪರಿಶೋಧನೆ

    September 29, 2026

    ಸ್ನೇಹಿತನ ಮಾತು ನಂಬಿ ಸೌದಿ ಅರೇಬಿಯಾದಲ್ಲಿ ‘ಡೆತ್ ಟ್ರ್ಯಾಪ್’ಗೆ ಸಿಲುಕಿದ ಕೇರಳ ಮೂಲದ ವ್ಯಕ್ತಿ

    September 29, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ‘ಏಕಪಕ್ಷೀಯ ನಿರ್ಧಾರ’ ಆರೋಪ; ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಸಮ್ಮತಿ

    September 29, 2026

    ಸಿನಿಮಾ ಯೋಜನೆಗಳ ಹೆಸರಿನಲ್ಲಿ ಹಣ ವರ್ಗಾವಣೆ ಆರೋಪ; ರಕುಲ್ ಪ್ರೀತ್ ಸಿಂಗ್‌ಗೆ ಸೇರಿದ ಸ್ಥಳಗಳಲ್ಲಿ ಐಟಿ ಪರಿಶೋಧನೆ

    September 29, 2026

    ಕಾರ್ಕಳದಲ್ಲಿ ಮನೆಗಾಗಿ ತಂದೆ–ಮಗನ ನಡುವೆ ಗಲಾಟೆ; ಕತ್ತಿಯಿಂದ ಕಡಿದು ಕೊಲೆಗೆ ಯತ್ನ

    September 29, 2026

    ಮಂಗಳೂರು ಪಾಲಿಕೆಯ ಎಡಿಬಿ ಸಾಲಕ್ಕೆ 24ಕ್ಕೂ ಹೆಚ್ಚು ನೋಟಿಸ್; ಒಂದೇ ಕಂತೂ ಪಾವತಿಸದೆ ಬಡ್ಡಿ ಸೇರಿ ₹1,375 ಕೋಟಿಗೆ ಏರಿಕೆ

    September 29, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಕುಂದಾಪುರ: “ಸ್ವಲ್ಪ ನಿಧಾನವಾಗಿ ಮಾತನಾಡಿ” ಎಂದಿದ್ದಕ್ಕೆ ಸೋಡಾ ಬಾಟಲಿಯಿಂದ ಹಲ್ಲೆ; ನಾಲ್ವರ ವಿರುದ್ಧ ಕೇಸ್

    September 29, 2026

    ಕೆಪಿಎಸ್‌ಸಿ ನೇಮಕಾತಿ ಅಕ್ರಮ; ಇಡಿ ದಾಳಿಯಲ್ಲಿ ಸಿಕ್ಕ ಡೈರಿಯಲ್ಲಿ ಲಕ್ಷಾಂತರ ಹಣದ ಲೆಕ್ಕ ಪತ್ತೆ

    September 28, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.